
ಭೋಪಾಲ್(ಡಿ . 21) ಇದಕ್ಕಿಂತ ಕ್ರೌರ್ಯದ ಪ್ರಕರಣ ಇನ್ನೊಂದು ಇರಲಿಕ್ಕೆ ಅಸಾಧ್ಯ. ಹಿರಿಯ ಅಕ್ಕನೇ ಸ್ವಂತ ತಂಗಿಯನ್ನು ಡ್ರಗ್ಸ್ ದಾಸಿಯನ್ನಾಗಿ ಮಾಡಿದ್ದು ಅಲ್ಲದೇ ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಿದ್ದಾಳೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ. ಸಂತ್ರಸ್ತೆಯ ಇಪ್ಪತ್ತು ವರ್ಷದ ಅಕ್ಕನನ್ನು ಬಂಧಿಸಲಾಗಿದೆ. ಇಬ್ಬರು ಮಕ್ಕಳಿರುವ ಒಬ್ಬ ವ್ಯಕ್ತಿ ಸೇರಿ ಐವರನ್ನು ಬಂಧಿಸಲಾಗಿದೆ.
ಸೆಕ್ಸ್ ವರ್ಕರ್ ಇಲ್ಲ ಎಂದಿದ್ದಕ್ಕೆ ಹೋಟೆಲ್ ಸಿಬ್ಬಂದಿಯನ್ನೇ ಹುರಿದು ಮುಕ್ಕಿದರು
ಭೋಪಾಲ್‌ನ (ಉತ್ತರ)ಪೊಲೀಸ್ ವರಿಷ್ಠಾಧಿಕಾರಿ ಮುಖೇಶ್ ಶ್ರೀವಾಸ್ತವ ಮಾಹಿತಿ ನೀಡಿದ್ದು 10 ನೇ ತರಗತಿಯ ವಿದ್ಯಾರ್ಥಿನಿಯ ಡ್ರಗ್ಸ್ ಸೇವನೆ ಕಂಡು ಬೇಸತ್ತ ತಾಯಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಮಕ್ಕಳ ಸಾಂತ್ವನ ಕೇಂದ್ರದಲ್ಲಿ ಒಂದು ತಿಂಗಳು ಕಳೆದ ನಂತರ ಬಾಲಕಿ ಬಳಿ ಹೇಳಿಕೆ ಪಡೆದುಕೊಂಡಾಗ ಆತಂಕಕಾರಿ ವಿಚಾರ ಬಯಲಾಗಿದೆ. ತನ್ನ ಅಕ್ಕನೆ ಡ್ರಗ್ಸ್ ನೀಡಿದ್ದು ಅಲ್ಲದೇ ವೇಶ್ಯಾವಾಟಿಕೆಗೆ ದೂಡಿದ ಸಂಗತಿಯನ್ನು ಹೇಳಿದ್ದಾಳೆ. ತಾಯಿ ಗಾಂಧಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಾಲಕಿ 13 ವರ್ಷದವಳಿದ್ದಾಗ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ. ಇಂದೋರ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ಸಹೋದರಿ ಭೋಪಾಲ್‌ನ ಪ್ರದೇಶವೊಂದಕ್ಕೆ ಕರೆದುಕೊಂಡು ಹೋಗಿ ಮೊದಲು ಸ್ವಲ್ಪ ಗಾಂಜಾ ನೀಡಿದ್ದಾಳೆ. ನಂತರ ಸಮೀರ್ ಎಂಬ ವ್ಯಕ್ತಿಯೊಂದಿಗೆ ತಂಗಿಯನ್ನು ಬಿಟ್ಟಿದ್ದಾಳೆ. ಸಮೀರ್ ಅಕ್ಕನಿಗೆ ಇದಕ್ಕೆ ಬದಲಾಗಿ 2,000 ರೂ. ನೀಡಿದ್ದಾನೆ. ಇದಾದ ಮೇಲೆ ಅಕ್ಕ ತಂಗಿಯನ್ನು ಹಲವು ಪ್ರದೇಶಗಳಿಗೆ ಕರೆದುಕೊಂಡು ಹೋಗಿದ್ದಾಳೆ. ಹುಡುಗಿಯ ಸೋದರಸಂಬಂಧಿ ಕೂಡ ಅವಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಳಿಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ