ಪ್ರಿಯಕರನೊಂದಿಗೆ ಓಡಿ ಹೋದ ಅಪ್ರಾಪ್ತೆ: ಕೆರೆಗೆ ಹಾರಿ ಜೀವಬಿಟ್ಟ ತಂದೆ

By Anusha Kb  |  First Published Oct 4, 2022, 11:00 AM IST

ಪ್ರಿಯಕರನೊಂದಿಗೆ ಓಡಿ ಹೋದ ಅಪ್ರಾಪ್ತ ವಯಸ್ಸಿನ ಮಗಳು ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ ಮನನೊಂದು ತಂದೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ವಿಜಯಪುರ:ಪ್ರಿಯಕರನೊಂದಿಗೆ ಓಡಿ ಹೋದ ಅಪ್ರಾಪ್ತ ವಯಸ್ಸಿನ ಮಗಳು ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ ಮನನೊಂದು ತಂದೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಭೈರವಾಡಗಿ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ನಾಪತ್ತೆಯಾದ ಮಗಳನ್ನು ಪೊಲೀಸರು ಪತ್ತೆ ಮಾಡಿಲ್ಲವೆಂದು ಮನನೊಂದು ತಂದೆ ಸಾವಿಗೆ ಶರಣಾಗಿದ್ದಾರೆ. 

44 ವರ್ಷ ಪ್ರಾಯದ ಗಂಗಾಧರ ಬಡಿಗೇರ (Gangadhara Badigera) ಆತ್ಮಹತ್ಯೆ ಮಾಡಿಕೊಂಡವರು. ಇವರು ಸಾರಿಗೆ ಇಲಾಖೆ ನೌಕರರಾಗಿದ್ದು (employee of the transport department), ಗ್ರಾಮದ ಹೊರ ಭಾಗದ ಕೆನಾಲ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಗಂಗಾಧರ ಅವರ ಅಪ್ರಾಪ್ತ ವಯಸ್ಸಿನ ಮಗಳು ಪ್ರಿಯಕರನ ಜೊತೆಗೆ ಓಡಿ ಹೋಗಿದ್ದಳು. ಅದೇ ಗ್ರಾಮದ ಸಂತೋಷ ಪಟ್ಟೇದ (24) ಎಂಬ ಯುವಕನೊಂದಿಗೆ ಆಕೆ ಮನೆ ಬಿಟ್ಟು ಹೋಗಿದ್ದಳು.

ಛೇ ಎಂಥಾ ದುರಂತ... ಮಗಳು ಪ್ರಿಯಕರನೊಂದಿಗೆ ಪರಾರಿ: ಸಾವಿನ ದಾರಿ ಹಿಡಿದ ...

Tap to resize

Latest Videos

ಮಗಳು ಹೋದ ಬಳಿಕ ಎಷ್ಟೇ ಹುಡುಕಾಡಿದರೂ ಆಕೆ ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ (Bagewadi Police Station) ತಂದೆ ದೂರು ದಾಖಲಿಸಿದ್ದರು. ದೂರು ನೀಡಿದ್ದರೂ ಇಲ್ಲಿಯವರೆಗೆ ಗಂಗಾಧರ ಬಡಿಗೇರ ಅವರ ಅಪ್ರಾಪ್ತ ವಯಸ್ಸಿನ ಮಗಳ ಪತ್ತೆಯಾಗಿರಲಿಲ್ಲ. ಹಲವಾರು ಬಾರಿ ಠಾಣೆಗೆ ಅಲೆದಾಡಿದ್ದರೂ ಉಪಯೋಗವಾಗಿರಲಿಲ್ಲ ಮಗಳು ಓಡಿ ಹೋದ ಅವಮಾನದ ಜೊತೆ ಪೊಲೀಸರು ಆಕೆಯನ್ನು ಪತ್ತೆ ಮಾಡಲಿಲ್ಲ ಎಂದು ಮನನೊಂದಿದ್ದ ಗಂಗಾಧರ‌ ಬಡಿಗೇರ ಇಂದು ಕೆರೆಗೆ ಹಾರಿ ಆತ್ಮಹತ್ಯೆ (committed suicide) ಮಾಡಿಕೊಂಡಿದ್ದು, 

ಅಣ್ಣನ ಕೊಲೆಗೆ ರಿವೇಂಜ್ ತೀರಿಸಿಕೊಂಡ ತಮ್ಮ: ಕೋರ್ಟ್ ಕಲಾಪ ಮುಗಿಸಿಕೊಂಡು ಬರುತ್ತಿದ್ದಾಗ ಮರ್ಡರ್!

ಗಂಗಾಧರ ಸಾವಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸ್ಥಳಕ್ಕೆ ಬಸವನಬಾಗೇವಾಡಿ ಪೊಲೀಸರು ಭೇಟಿ ನೀಡಿದ ವೇಳೆ ಪೊಲೀಸರ ಜೊತೆಗೆ ಗ್ರಾಮಸ್ಥರು ವಾಗ್ವಾದ ನಡೆಸಿದ್ದು, ಸ್ಥಳಕ್ಕೆ ಎಸ್ಪಿ ಆಗಮಿಸಬೇಕೆಂದು ಆಗ್ರಹಿಸಿದರು.

click me!