* ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ನಡೆದ ಘಟನೆ
* ಅಪ್ರಾಪ್ತೆ ಬಾಣಂತಿ ಪೊಲೀಸರಿಗೆ ಪಜೀತಿ
* ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು
ಕಾರಟಗಿ(ನ.28): ಅಪ್ರಾಪ್ತೆ(Minor) ಪುತ್ರಿ ಗರ್ಭಿಣಿಯಾಗಿದ್ದು ಇದಕ್ಕೆ ಕಾರಣವಾದವರನ್ನು ಹುಡುಕಿ ಕಾನೂನು ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಿ ಎಂದು ಪಾಲಕರೊಬ್ಬರು ಇಲ್ಲಿನ ಪೊಲೀಸರಿಗೆ(Police) ವಿಚಿತ್ರ ದೂರನ್ನು ಕೊಟ್ಟಿದ್ದಾರೆ. ಈ ಪ್ರಕರಣದಿಂದ ಇದೀಗ ಕೊಪ್ಪಳ(Koppal) ಜಿಲ್ಲೆಯ ಕಾರಟಗಿ(Karatagi) ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಪಟ್ಟಣದ ವಾರ್ಡ್ 22ರಲ್ಲಿ ವಾಸಿಸುವ ಪಾಲಕರೊಬ್ಬರು ತಮ್ಮ 17 ವರ್ಷದ ಬಾಲಕಿ ಕಾಲೇಜಿಗೆ ತೆರಳುತ್ತಿದ್ದಳು. ನ.23ರಂದು ದಿಢೀರ್ ಹೊಟ್ಟೆ ನೋವಿನಿಂದ ನರಳುತ್ತಿದ್ದ ಬಾಲಕಿಯನ್ನ ತಕ್ಷಣವೇ ಚಿಕಿತ್ಸೆಗಾಗಿ(Treatment) ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿತ್ತು. ಅಲ್ಲಿ ತಮ್ಮ ಮಗಳು 7 ತಿಂಗಳ ಗರ್ಭಿಣಿಯೆಂದು(Pregnant) ಬೆಳಕಿಗೆ ಬಂದಿದೆ. ನಂತರ ನ.25ರ ಮಧ್ಯಾಹ್ನ ಬಾಲಕಿಗೆ ಹೆರಿಗೆಯಾಗ(Delivery) ಹೆಣ್ಣು ಮಗು ಜನನವಾಗಿ ಮೃತಪಟ್ಟಿದೆ(Death).
Rape Case: 4ರ ಕಂದನ ರೇಪ್, ಒಂದೇ ದಿನದಲ್ಲಿ ತೀರ್ಪು ಪ್ರಕಟಿಸಿದ ಕೋರ್ಟ್, ಬಾಲಾಪರಾಧಿಗೆ ಜೈಲು!
ಇಡೀ ಘಟನೆಯಿಂದ ಕಂಗಾಲದ ಅಪ್ರಾಪ್ತೆಯ ಪಾಲಕರು ಗರ್ಭಕ್ಕೆ ಕಾರಣ ಕೇಳಿದರೆ, ಆದರೆ, ಆಕೆ ಮೌನಕ್ಕೆ ಶರಣಾಗಿದ್ದಾಳೆ. ಇದರಿಂದ ಪಾಲಕರು ದಿಕ್ಕು ತೋಚದೆ ಇಲ್ಲಿನ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತಮ್ಮ ಅಪ್ರಾಪ್ತೆ ಬಾಲಕಿಯ ಗರ್ಭದಾರಣೆಗೆ ಕಾರಣವಾದವರನ್ನು ಪತ್ತೆ ಮಾಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಬಾಲಕಿಯ ತಂದೆ ಮತ್ತು ತಾಯಿ ದೂರು(Complaint) ನೀಡಿದ್ದಾರೆ. ಈ ಸಂಬಂಧ ಕಾರಟಗಿ ಪೊಲೀಸರು ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಗರ್ಭಧಾರಣೆ ಮಾಡಿದವರ ಪತ್ತೆ ಹಚ್ಚುವ ಕಾರ್ಯ ಪಜೀತಿಗೀಡುಮಾಡಿದೆ.
ತಿನಿಸುವ ನಾಟಕವಾಡಿ ವಂಚನೆ: ಅಪ್ರಾಪ್ತೆ ಗರ್ಭಿಣಿ- ಆರೋಪಿ ಬಂಧನ
ಭದ್ರಾವತಿ: ಪ್ರೀತಿಸಿ(Love) ಮದುವೆ(Marriage) ಆಗುವುದಾಗಿ ಅಪ್ರಾಪ್ತೆಯೊಬ್ಬಳ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ(Sexual Harassment) ನಡೆಸಿದ್ದು, ಆಕೆ ಗರ್ಭಿಣಿ ಆಗಿರುವ ಘಟನೆ ಬೆಳಕಿಗೆ ಬಂದಿದೆ. ದೂರಿನ ಮೇರೆಗೆ ಆರೋಪಿಯನ್ನು(Accused) ಬಂಧಿಸಲಾಗಿದೆ(Arrest).
ನಗರಸಭೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ಥೆ(Victim) 9ನೇ ತರಗತಿ ಓದುತ್ತಿದ್ದಾಗ ತಾಂಡದ ವ್ಯಕ್ತಿಯು ಪ್ರೀತಿಸುವುದಾಗಿ ಆಕೆಗೆ ಪದೇಪದೇ ಹೇಳುತ್ತಿದ್ದ. ಒಂದುವೇಳೆ ಪ್ರೀತಿಸದಿದ್ದರೆ ಕೊಲೆಗೈಯ್ಯುವುದಾಗಿಯೂ(Murder) ಬೆದರಿಕೆ ಹಾಕುತ್ತಿದ್ದ. ಅಪ್ರಾಪ್ತೆಗೆ ಮೊಬೈಲ್ ಸಹ ತಂದು ಕೊಟ್ಟಿದ್ದು, ಆಕೆಯೊಂದಿಗೆ ನಿರಂತರ ಸಂಪರ್ಕ ಹೊಂದಿದ್ದನು. ಈ ವ್ಯಕ್ತಿ ಅಪ್ರಾಪ್ತೆಯನ್ನು ತನ್ನ ಮನೆಗೆ ಕರೆತಂದು ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಬಳಿಕ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬೆದರಿಸಿ, 5-6 ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎನ್ನಲಾಗಿದೆ.
ಸಂತ್ರಸ್ಥ ಅಪ್ರಾಪ್ತೆಯು ನಡೆದಿರುವ ಘಟನೆಯನ್ನು ತನ್ನ ತಾಯಿ ಬಳಿ ಹೇಳಿಕೊಂಡಿದ್ದಾಳೆ. ಅನಂತರ ಅಪ್ರಾಪ್ತೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗರ್ಭಿಣಿ ಆಗಿರುವುದು ತಿಳಿದುಬಂದಿದೆ. ನ್ಯೂಟೌನ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಲಾಗಿದೆ. ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
Sexual Assault: ಅಪ್ರಾಪ್ತ ಮಗಳ ರೇಪ್, ಪ್ರೇಮಿಗೆ ಸಹಾಯ ಮಾಡಿದ ಅಮ್ಮ, ತಪ್ಪು ಮುಚ್ಚಿಡಲು ಮದುವೆಯಾಟ!
ಅಪ್ರಾಪ್ತೆ ಅತ್ಯಾಚಾರ-ದೂರು ದಾಖಲು
ಮುಂಡಗೋಡ: ಲೂಕಿನ ಪಾಳಾ ಗ್ರಾಮದಲ್ಲಿ ಅಪ್ರಾಪ್ತೆ ಮೇಲೆ ವ್ಯಕ್ತಿಯೋರ್ವ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಸೋಮವಾರ ರಾತ್ರಿ ಮುಂಡಗೋಡ(Mundgod) ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪಾಳಾ ಗ್ರಾಮದ ದೇವರಾಜ ಶಿವಪುರ ಆರೋಪಿ. ಕೆಲವು ದಿನಗಳ ಹಿಂದೆ ಚಂದ್ರಗುತ್ತಿಗೆ ಹೋಗಿ ಬರೋಣ ಎಂದು ಹೇಳಿ ಅಪ್ರಾಪ್ತೆಯನ್ನು ತನ್ನ ಬೈಕ್ ಮೇಲೆ ಹತ್ತಿಸಿಕೊಂಡು ಹೋಗಿದ್ದು, ವಾಪಸ್ ಬರುವಾಗ ಬನವಾಸಿ ಬಳಿ ರಸ್ತೆ ಅಂಚಿನ ಅರಣ್ಯ ಪ್ರದೇಶದೊಳಗೆ ಕರೆದೊಯ್ದು ಬಲವಂತವಾಗಿ ಅತ್ಯಾಚಾರವೆಸಗಿದ್ದಾನೆ(Rape). ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದ್ದು, ವಿಷಯ ತಿಳಿದ ಕುಟುಂಬಸ್ಥರು, ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಂಡಗೋಡ ಠಾಣೆ ಪಿಎಸ್‌ಐ ಬಸವರಾಜ ಮಬನೂರ ಪ್ರಕರಣ ದಾಖಲಿಸಿಕೊಂಡಿದ್ದಾರೆ.