ಹಾಸನ(ನ.28): ಕಾಲೇಜಿನಲ್ಲಿ ಪ್ರೀತಿಯಾಗೋದು(Love) ಸಹಜ. ಆದರೆ ಆ ಪ್ರೀತಿ ಮದುವೆವರೆಗೆ ತಲುಪುವುದೇ ಅಪರೂಪ. ಹಾಗೆ ಮದುವೆಯಾದರೂ ದಾಂಪತ್ಯ ಚೆನ್ನಾಗಿರುವುದು ಮತ್ತಷ್ಟು ಅಪರೂಪ. ಹಾಸನದ ಜೋಡಿಯ ಪ್ರೀತಿ ಮದುವೆಗೆ ತಲುಪಿ 9 ವರ್ಷಗಳ ಕಾಲ ಸುಖವಾಗಿ ಸಂಸಾರ ಮಾಡಿ ಆದರೆ ನಂತರದಲ್ಲಿ ತೊಂದರೆ ಅನುಭವಿಸಿದೆ. ತಾನೇ ಪ್ರೀತಿಸಿ ಮದುವೆಯಾದ ಹುಡುಗಿಗೇ ಮೋಸ ಮಾಡಿ ಬೇರೊಬ್ಬಳ ಕೈಹಿಡಿಯಲು ಸಿದ್ಧನಾಗಿದ್ದ ವರನ ಮೋಸದ ಕಥೆ ರಿವೀಲ್ ಆಗಿದೆ. ಪ್ರೀತಿಸಿ ಮದುವೆಯಾಗಿ 9 ವರ್ಷ ಜೊತೆಯಾಗಿ ಸಂಸಾರ ಮಾಡಿ ಪತ್ನಿಗೆ ಕೈಕೊಟ್ಟ ವಂಚಕ ಪತಿಯ ಮೋಸದಾಟ ಬಯಲಾಗಿದೆ. ಮೊದಲ ಮದುವೆಯ ವಿಚಾರವನ್ನೇ ಮುಚ್ಚಿಟ್ಟು ಮತ್ತೊಂದು ಮದುವೆ ಆಗಲು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾನೆ ಈ ನಯವಂಚಕ.
ಹಾಸನ(Hassan) ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ಘಟನೆ ನಡೆದಿದ್ದು ಪತಿಯ ಎಂಗೇಜ್ಮೆಂಟ್ ವಿಚಾರ ತಿಳಿದ ಪತ್ನಿ ಗಂಡ ಹಾಗೂ ಗಂಡನ ಕುಟುಂಬದ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾಲೇಜಿನಲ್ಲಿ(College) ಪರಿಚಯವಾಗಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಅಕ್ಷತಾ ಹಾಗು ಲೋಹಿತ್ ದಾಂಪತ್ಯದಲ್ಲಿ ಈಗ ಬಿರುಕು ಕಾಣಿಸಿಕೊಂಡಿದೆ. ಲೋಹಿತ್‌ನ ಮೋಸದ ರೂಪ ಈಗ ಬಯಲಾಗಿದ್ದು ಪತ್ನಿ ಠಾಣೆ ಮೆಟ್ಟಿಲೇರಿದ್ದಾಳೆ.
Love Failure: ಪ್ರೀತಿಸಿ ಕೈಕೊಟ್ಟ ಯುವತಿ: ಮನನೊಂದು ಪ್ರಿಯಕರ ಆತ್ಮಹತ್ಯೆಗೆ ಯತ್ನ
ಅನ್ಯ ಜಾತಿಯ ಹುಡುಗಿ ಎನ್ನೋ ಕಾರಣಕ್ಕೆ ಲೋಹಿತ್ ತಂದೆ ಮಲ್ಲಿಕಾರ್ಜುನ ಹಾಗೂ ತಾಯಿ ಜಯಶೀಲಾ ಅವರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಈಗ ತನ್ನಿಂದ ಗಂಡನ ದೂರಮಾಡಿ ಮದುವೆ ವಿಚಾರವನ್ನೇ ಮುಚ್ಚಿಟ್ಟು ಮತ್ತೊಂದು ಮದುವೆಗೆ ಪ್ಲಾನ್ ಮಾಡಿರುವುದಾಗಿ ಯುವತಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಮೂಲದ ಯುವತಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿರೋ ವಂಚಕ ಪತಿಯ ವಿರುದ್ಧ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮದುವೆಯಾಗಿ 8 ವರ್ಷದ ಮಗನಿದ್ದರೂ ಬೇರೆ ಮದುವೆಯಾಗಲು ಲೋಹಿತ್ ಕುಟುಂಬ ಪ್ಲಾನ್ ಮಾಡಿದ್ದು ಹುಡುಗಿಗೆ ಮದುವೆ(Marriage) ವಿಚಾರವನ್ನು ತಿಳಿಸದೆ ಎಲ್ಲವನ್ನೂ ಮುಚ್ಚಿಟ್ಟು ಎಂಗೇಜ್ಮೆಂಟ್ ಮಾಡಿಸಲಾಗಿದೆ.
ಸುಳ್ಳು ಹೇಳಿ ಹುಡುಗಿಯನ್ನ ನಂಬಿಸಿರೊ ಬಗ್ಗೆ ಆಡಿಯೋ ಸಾಕ್ಷಿ ಇಟ್ಟು ಕೊಂಡು ಕಾನೂನು ಹೋರಾಟಕ್ಕೆ ಸಜ್ಜಾದ ಪತ್ನಿ ವಂಚಕ ವತಿಯಿಂದ ನ್ಯಾಯಕೊಡಿಸಿ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಮಾವ ಮಲ್ಲಿಕಾರ್ಜುನ , ಅತ್ತೆ ಜಯಶೀಲ,ಮೈದುನ ದರ್ಶನ್ ಹಾಗೂ ಪತಿ ವಿರುದ್ದ ಕ್ರಮಕ್ಕೆ ಮಹಿಳೆ ದೂಡಿನಲ್ಲಿ ಒತ್ತಾಯಿಸಿದ್ದಾರೆ.