Fraud: ಕಡಿಮೆ ಬಡ್ಡಿ ಸಾಲದ ಆಮಿಷ 2 ಕೋಟಿ ರೂ. ವಂಚನೆ

By Kannadaprabha News  |  First Published Nov 28, 2021, 7:54 AM IST

*  150 ಕೋಟಿ ರು. ಸಾಲ ಕೊಡಿಸುವುದಾಗಿ ರಿಯಲ್‌ ಎಸ್ಟೇಟ್‌ ಡೀಲರ್‌ಗೆ ವಂಚನೆ
*  ತೆಲುಗು ಗಾಯಕಿ ಹರಿಣಿ ತಂದೆಗೆ ವಂಚಕರ ನಂಟು
*  ಡಾ.ಎ.ಕೆ.ರಾವ್‌ ಸಾವಿನ ಪ್ರಕರಣಕ್ಕೆ ಹೊಸ ತಿರುವು
 


ಬೆಂಗಳೂರು(ನ.28):  ರಿಯಲ್‌ ಎಸ್ಟೇಟ್‌(Real Estate) ಯೋಜನೆಯೊಂದಕ್ಕೆ ಕಡಿಮೆ ಬಡ್ಡಿ ದರದಲ್ಲಿ 150 ಕೋಟಿ ರು. ಸಾಲ(Loan) ಕೊಡಿಸುವುದಾಗಿ ರಿಯಲ್‌ ಎಸ್ಟೇಟ್‌ ಡೀಲರ್‌ನಿಂದ 2.25 ಕೋಟಿ ರು. ಪಡೆದು ವಂಚಿಸಿರುವ ಆರೋಪದಡಿ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ನಗರದ ರೆಸ್ಟ್‌ ಹೌಸ್‌ ರಸ್ತೆಯ ನಿವಾಸಿ ರಿಯಲ್‌ ಎಸ್ಟೇಟ್‌ ಡೀಲರ್‌ ಪಿ.ಗಿರೀಶ್‌ ಎಂಬುವವರು ನೀಡಿದ ದೂರಿನ ಮೇರೆಗೆ ಡ್ಯಾನಿಯಲ್‌ ಆಮ್‌ರ್‍ಸ್ಟ್ರಾಂಗ್‌, ವಿವೇಕಾನಂದ, ರಾಘವನ್‌ ಹಾಗೂ ಇತರರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ತನಿಖೆ(FIR) ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos

undefined

ದೂರುದಾರ ಗಿರೀಶ್‌ ರಿಯಲ್‌ ಎಸ್ಟೇಟ್‌ ಪ್ರಾಜೆಕ್ಟ್‌ವೊಂದಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ಮುಂದಾಗಿದ್ದರು. ಈ ವೇಳೆ ಆಂಧ್ರಪ್ರದೇಶ(Andhra Pradesh) ಮೂಲದ ಮುರಳಿ ಮತ್ತು ತೆಲುಗು(Telugu) ಹಿನ್ನೆಲೆ ಗಾಯಕಿ(Singer) ಹರಿಣಿ(Harini) ಅವರ ತಂದೆ ಎ.ಕೆ.ರಾವ್‌ರನ್ನು ಸಂಪರ್ಕಿಸಿದ್ದರು. ಆಗ ಜಾಗ ಪರಿಶೀಲನೆ ಇಲ್ಲದೆ ಸಾಲ ನೀಡುವ ಏಸ್‌ ವೆಂಚರ್‌ ಕ್ಯಾಪಿಟಲ್‌ ಫೈನಾನ್ಸ್‌ ಎಂಬ ಕಂಪನಿ ಬೆಂಗಳೂರಿನಲ್ಲಿದೆ(Bengaluru) ಎಂದು ಈ ಇಬ್ಬರು ಹೇಳಿದ್ದಾರೆ. ಬಳಿಕ ಆ ಫೈನಾನ್ಸ್‌ ಕಂಪನಿಯ(Finance Company) ಮಾಲೀಕ ಡ್ಯಾನಿಯಲ್‌ ಆಮ್‌ರ್‍ಸ್ಟ್ರಾಂಗ್‌ ಅವರು ನಿಮಗೆ ಸಾಲ ನೀಡಲು ಒಪ್ಪಿದ್ದಾರೆ ಎಂದಿದ್ದಾರೆ. ಅಲ್ಲದೆ, ಈ ವೇಳೆ ಸುಧಾಕರ್‌ ಸ್ಟೀಫನ್‌ ಎಂಬಾತನನ್ನು ದೂರುದಾರ ಗಿರೀಶ್‌ಗೆ ಪರಿಚಯಿಸಿದ್ದಾರೆ.

ಕೆಲಸದ ಆಮಿಷ: Amazon ಹೆಸರಲ್ಲಿ 12 ಲಕ್ಷ ರು. ವಂಚನೆ

ಬಳಿಕ ಈ ಸುಧಾಕರ್‌, ಏಸ್‌ ವೆಂಚರ್‌ ಕ್ಯಾಪಿಟಲ್‌ ಫೈನಾನ್ಸ್‌ನ ಕಡೆಯವರು ಎಂದು ವಿವೇಕಾನಂದ ಮತ್ತು ರಾಘವನ್‌ ಅವರನ್ನು ಕರೆತಂದು ಸಾಲ ಕೊಡಬಹುದು ಎಂದು ಹೇಳಿಸಿದ್ದಾನೆ. ಫೈನಾನ್ಸ್‌ ಕಂಪನಿ ಇ-ಮೇಲ್‌ ಮುಖಾಂತರ ಗಿರೀಶ್‌ಗೆ 150 ಕೋಟಿ ರು. ಸಾಲ ಕೊಡುವುದಾಗಿ ತಿಳಿಸಿದೆ. ತದನಂತರ ಗಿರೀಶ್‌ ಫೈನಾನ್ಸ್‌ ಕಂಪನಿ ಮಾಲೀಕ ಡ್ಯಾನಿಯಲ್‌ನನ್ನು ಭೇಟಿಯಾದಾಗ 150 ಕೋಟಿ ರು. ಸಾಲಕ್ಕೆ ಮೂರು ತಿಂಗಳ ಬಡ್ಡಿ(Interest) 3.03 ಕೋಟಿ ರು. ಹಾಗೂ ಕಮಿಟ್‌ಮೆಂಟ್‌ಗಾಗಿ 2.25 ಕೋಟಿ ರು. ಹಣ ನೀಡಿದ ಬಳಿಕ ಸಾಲ ಮಂಜೂರಾಗಲಿದೆ ಎಂದು ನಂಬಿಸಿದ್ದಾರೆ.

ಅದರಂತೆ ಕೆಲ ದಿನಗಳ ಹಿಂದೆ ಗಿರೀಶ್‌ ಅವರು ಫೈನಾನ್ಸ್‌ ಕಂಪನಿ ವಿವಿಧ ಖಾತೆಗಳಿಗೆ 2.25 ಕೋಟಿ ರು. ವರ್ಗಾವಣೆ ಮಾಡಿದ್ದಾರೆ. ಆದರೆ, ಸಾಲ ಮಾತ್ರ ಮಂಜೂರಾಗಿಲ್ಲ. ಸುಧಾಕರ್‌, ರಾಘವನ್‌, ವಿವೇಕಾನಂದ, ಆಮ್‌ರ್‍ ಸ್ಟ್ರಾಂಗ್‌ ಎಲ್ಲರಿಗೂ ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಚೇರಿ ಬಳಿ ತೆರಳಿ ವಿಚಾರಿಸಿದರೂ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಗಿರೀಶ್‌ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತೆಲುಗು ಗಾಯಕಿ ಹರಿಣಿ ತಂದೆಗೆ ವಂಚಕರ ನಂಟು

ರೈಲ್ವೆ ಹಳಿ ಮೇಲೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ತೆಲುಗು ಹಿನ್ನೆಲೆ ಗಾಯಕಿ ಹರಿಣಿ ಅವರ ತಂದೆ ಡಾ.ಎ.ಕೆ.ರಾವ್‌ ಅವರ ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

Fraud; ವರ್ಕ್ ಫ್ರಾಂ ಹೋಂ ಕೊಡಿಸುತ್ತೇನೆ ಎಂದು ಲಕ್ಷ ಲಕ್ಷ ವಂಚಿಸ್ತಾರೆ.. ಹುಷಾರ್!

ರಾವ್‌ ಅವರು ಶವವಾಗಿ ಪತ್ತೆಯಾಗುವ ಮುನ್ನ ಎರಡು ವಂಚನೆ ಪ್ರಕರಣ ಸಂಬಂಧ ಸುದ್ದಗುಂಟೆಪಾಳ್ಯ ಪೊಲೀಸರ ವಿಚಾರಣೆ ಎದುರಿಸಿದ್ದರು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಎ.ಕೆ.ರಾವ್‌ ಅವರು ಏಸ್‌ ವೆಂಚರ್ಸ್‌ ಕ್ಯಾಪಿಟಲ್‌ ಫೈನಾನ್ಸ್‌ ಕಂಪನಿಯಿಂದ ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ಸಾಲ ಕೊಡಿಸಲು ಮುಂದಾಗಿದ್ದರು. ಫೈನಾನ್ಸ್‌ ಕಂಪನಿಯವರು ಸಾಲ ನೀಡಲು ಒಪ್ಪಿ ರಿಯಲ್‌ ಎಸ್ಟೇಟ್‌ ಉದ್ಯಮಿಗಳಾದ ಅರುಣಾಚಲ ಪ್ರದೇಶ ಮೂಲದ ಪನಿ ತರಮ್‌ ಹಾಗೂ ಬೆಂಗಳೂರು ಮೂಲದ ಗಿರೀಶ್‌ ಅವರಿಂದ ಕ್ರಮವಾಗಿ 3.60 ಕೋಟಿ ರು. ಹಾಗೂ 2.25 ಕೋಟಿ ರು. ಹಣ ಪಡೆದು ಬಳಿಕ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ನಾಪತ್ತೆಯಾಗಿದ್ದರು.

ಈ ಸಂಬಂಧ ಪನಿ ತರಮ್‌ ಹಾಗೂ ಗಿರೀಶ್‌ ಅವರು ಪೊಲೀಸ್‌ ಠಾಣೆಗೆ ಪ್ರತ್ಯೇಕವಾಗಿ ವಂಚನೆ ದೂರು ನೀಡಿದ್ದರು. ಈ ದೂರುಗಳ ಮೇಲೆ ಪೊಲೀಸರು ಎ.ಕೆ.ರಾವ್‌ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಕಳುಹಿಸಿದ್ದರು. ಇದಾದ ನಂತರ ನ.23ರಂದು ರೈಲು ಹಳಿ ಮೇಲೆ ರಾವ್‌ ಮೃತದೇಹ ಪತ್ತೆಯಾಗಿತ್ತು.
 

click me!