ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪ: ಬಿಜೆಪಿ ನಾಯಕ ಅರೆಸ್ಟ್‌..!

By BK AshwinFirst Published Jul 27, 2022, 12:12 PM IST
Highlights

ಮೇಘಾಲಯದ ಬಿಜೆಪಿ ಉಪಾಧ್ಯಕ್ಷರಾಗಿರುವ ಬರ್ನಾಡ್‌ ಆರ್‌. ಮರಾಕ್‌ರನ್ನು ಉತ್ತರ ಪ್ರದೇಶದಲ್ಲಿ ಮಂಗಳವಾರ ಬಂಧಿಸಲಾಗಿದೆ. ಮೇಘಾಲಯದ ಪಶ್ಚಿಮ ಗ್ಯಾರೋ ಜಿಲ್ಲೆಯ ಟುರಾದಲ್ಲಿ ಫಾರ್ಮ್‌ಹೌಸ್‌ ದಾಳಿ ನಡೆಸಿದ ಬಳಿಕ ಬಿಜೆಪಿ ನಾಯಕ ನಾಪತ್ತೆಯಾಗಿದ್ದರು.

ದೇಶದಲ್ಲಿ ವೇಶ್ಯಾವಾಟಿಕೆಗೆ ಕಾನೂನುಬದ್ಧವಾಗಿ ಅವಕಾಶವಿಲ್ಲವಾದರೂ, ಇಂತಹ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಇಂತಹ ಹಲವು ಪ್ರಕರಣಗಳನ್ನು ಪೊಲೀಸರು ಭೇದಿಸುತ್ತಲೇ ಇರುತ್ತಾರೆ, ಹಾಗೂ ಹಲವರನ್ನು ಈ ಕೇಸ್‌ಗಳಲ್ಲಿ ವಶಪಡಿಸಿಕೊಳ್ಳಲಾಗುತ್ತಲೇ ಇರುತ್ತದೆ. ಆದರೆ, ಈ ಪ್ರಕರಣದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಸ್ವತ: ಬಿಜೆಪಿ ನಾಯಕ ಬಂಧನಕ್ಕೀಡಾಗಿದ್ದಾರೆ.

ಹೌದು, ಮೇಘಾಲಯದ ಬಿಜೆಪಿ ಉಪಾಧ್ಯಕ್ಷರಾಗಿರುವ ಬರ್ನಾಡ್‌ ಆರ್‌. ಮರಾಕ್‌ರನ್ನು ಉತ್ತರ ಪ್ರದೇಶದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೇಘಾಲಯದ ಪಶ್ಚಿಮ ಗ್ಯಾರೋ ಜಿಲ್ಲೆಯ ಟುರಾದಲ್ಲಿ ಫಾರ್ಮ್‌ಹೌಸ್‌ ಅನ್ನು ಪೊಲೀಸರು ಇತ್ತೇಚೆಗೆ ರೇಡ್‌ ಮಾಡಿದ್ದರು. ಆದರೆ, 30 ಕೊಠಡಿಗಳ ಈ ಫಾರ್ಮ್‌ಹೌಸ್‌ ಮೇಲೆ ಪೊಲೀಸರು ದಾಳಿ ನಡೆಸಿದ ಬಳಿಕ ಬಿಜೆಪಿ ನಾಯಕ ನಾಪತ್ತೆಯಾಗಿದ್ದರು. ಜುಲೈ 22 ರಂದು ನಡೆದ ಈ ದಾಳಿ ವೇಳೆ ಐವರು ಅಪ್ರಾಪ್ತರನ್ನು ರಕ್ಷಿಸಲಾಗಿತ್ತು. ಹಾಘೂ, 23 ಮಹಿಳೆಯರು ಸೇರಿ 73 ಮಂದಿಯನ್ನು ಆ ಸ್ಥಳದಲ್ಲೇ ಬಂಧಿಸಲಾಗಿತ್ತು ಎಂದು ತಿಳಿದುಬಂದಿದೆ.

SriLankan Crisis: ತುತ್ತು ಅನ್ನಕ್ಕಾಗಿ ಮೈ ಮಾರಿಕೊಳ್ಳುತ್ತಿದ್ದಾರೆ ಮಹಿಳೆಯರು!

ಇನ್ನು, ಈ ಸಂಬಂಧ ಮಾಧ್ಯಮಕ್ಕೆ ಮಾಹಿತಿ ನೀಡಿದ ಮೇಘಾಲಯದ ಡಿಜಿಪಿ ಎಲ್‌. ಆರ್‌. ಬಿಷ್ಣೋಯಿ , ನಮ್ಮ ಮಾಹಿತಿ ಆಧಾರದ ಮೇಲೆ ಬರ್ನಾಡ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ಹಾಪುರ್‌ ಜಿಲ್ಲಾ ಪೊಲೀಸರು ಅವರನ್ನು ಬಂಧಿಸಿದ್ದಾರೆ. ನಮ್ಮ ಪೊಲೀಸ್‌ ತಂಡ ಬುಧವಾರ ಉತ್ತರ ಪ್ರದೇಶವನ್ನು ತಲುಪಲಿದ್ದು, ಆರೋಪಿಯನ್ನು ವಿಚಾರಣೆಗಾಗಿ ಟುರಾಗೆ ವಾಪಸ್‌ ಕರೆತರಲಿದೆ ಎಂದು ತಿಳಿಸಿದ್ದಾರೆ. 

ಮಾಜಿ ತೀವ್ರವಾದಿ ನಾಯಕರೂ ಆಗಿದ್ದ ಬರ್ನಾಡ್‌ ಮರಾಕ್‌ ವಿರುದ್ಧ ಟುರಾದ ಮುಖ್ಯ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಜಾಮೀನು ರಹಿತ ವಾರೆಂಟ್‌ ಜಾರಿಗೊಳಿಸಿದ ಮರುದಿನ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. 

ಬೆಂಗ್ಳೂರು: ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ, 8 ಮಂದಿ ನೊಂದ ಯುವತಿಯರ ರಕ್ಷಣೆ

ರಾಜಕೀಯ ಪ್ರೇರಿತ ಆರೋಪಗಳನ್ನು ಕೈಬಿಡಿ ಎಂದಿದ್ದ ಮೇಘಾಲಯ ಬಿಜೆಪಿ ಅಧ್ಯಕ್ಷ 
ಮೇಘಾಲಯದ ಎನ್‌ಪಿಪಿ ಹಾಗೂ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕೇಸರಿ ಪಕ್ಷದ ನಾಯಕ ಬರ್ನಾಡ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶನಗಳನ್ನು ನೀಡಿದ ಬಳಿಕ ಕೋರ್ಟ್‌ ಅವರ ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿಗೊಳಿಸಿತ್ತು ಎಂದು ತಿಳಿದುಬಂದಿದೆ. ಇನ್ನೊಂದೆಡೆ, ಬಂಧಿತ ಬಿಜೆಪಿ ನಾಯಕನನ್ನು ಸಮರ್ಥಿಸಿಕೊಂಡ ಮೇಘಾಲಯ ಬಿಜೆಪಿ ರಾಜ್ಯಾಧ್ಯಕ್ಷ ಎರ್ನೆಸ್ಟ್‌ ಮಾವ್ರಿ, ಬರ್ನಾಡ್‌ ವಿರುದ್ಧದ ರಾಜಕೀಯ ಪ್ರೇರಿತ ಪ್ರಕರಣಗಳನ್ನು ಕೈಬಿಡಿ ಎಂದು ಹೇಳಿದ್ದರು.

ಮೇಘಾಲಯ ಸಿಎಂ ಕಾನ್ರಾಡ್‌ ಕೆ. ಸಂಗ್ಮಾ, ತನ್ನ ರಾಜಕೀಯ ಭವಿಷ್ಯವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆ ಫಾರ್ಮ್‌ಹೌಸ್‌ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಫೆಬ್ರವರಿಯಲ್ಲಿ ನಡೆದಿದ್ದ ಪ್ರಕರಣವೊಂದಕ್ಕೆ ತಳುಕು ಹಾಕುವ ಯತ್ನದಲ್ಲಿದ್ದಾರೆ ಎಂದು ಆರೋಪಿಸಿದ್ದರು. ರಾಜ್ಯಾಧ್ಯಕ್ಷ ಎರ್ನೆಸ್ಟ್‌ ಮಾವ್ರಿ ಸಹ ಬರ್ನಾಡ್‌ ಅವರ ಹೇಳಿಕೆಗೆ ಸಹಮತ ಸೂಚಿಸಿದ್ದರು.
 
ಅದರೆ, ಅವರ ವಿರುದ್ಧದ ಘಟನೆಯನ್ನು ಸಮರ್ಥಿಸಿಕೊಂಡ ಮೇಘಾಲಯದ ಉಪ ಮುಖ್ಯಮಂತ್ರಿ ಹಾಗೂ ಹಿರಿಯ ಎನ್‌ಪಿಪಿ ನಾಯಕ ಪ್ರೆಸ್ಟೋನ್‌ ಟಿನ್ಸಂಗ್‌, ಕಾನೂನು ಎಲ್ಲರಿಗೂ ಒಂದೇ. ಆರೋಪಿ ಬಿಜೆಪಿ ಉಪಾಧ್ಯಕ್ಷ ಎಂಬ ಕಾರಣಕ್ಕೆ ಅವರ ವಿರುದ್ಧದ ಪ್ರಕರಣಗಳನ್ನು ಕೈಬಿಡಲು ಸಾಧ್ಯವಿಲ್ಲ ಎಂದು ಮೇಘಾಲಯ ರಾಜಧಾನಿ ಶಿಲ್ಲಾಂಗ್‌ನಲ್ಲಿ ಮಾಧ್ಯಮದವರಿಗೆ ಹೇಳಿದ್ದಾರೆ. 
ಅಲ್ಲದೆ, ಈ ಕೇಸ್‌ ಹಲವು ವಾರಗಳಿಮದ ನಡೆಯುತ್ತಿತ್ತು, ಸಾಕ್ಷಿ ಸಿಕ್ಕ ಬಳಿಕವೇ ಅವರ ಫಾರ್ಮ್‌ಹೌಸ್‌ ವಿರುದ್ಧ ರೇಡ್‌ ಮಾಡಲಾಗಿತ್ತು ಎಂದಿದ್ದಾರೆ. ಹಾಗೂ ಬಿಜೆಪಿ ನಾಯಕನ ವಿರುದ್ಧ ಕೇಸ್‌ ದಾಖಲಿಸಿರುವುದು ರಾಜಕೀಯ ಪ್ರೇರಿತವಲ್ಲ. ಅವರ ವಿರುದ್ಧದ ಪ್ರಕರಣ ಗಂಭೀರವಾದದ್ದು. ಪೊಲೀಸರಿಗೆ ಅವರ ಕೆಲಸ ಮಾಡಲು ಬಿಡಬೇಕು ಎಂದೂ ಹೇಳಿದ್ದಾರೆ.

click me!