ಬೆಳಗಾವಿ: ಇಂದು ರಾಜಕುಮಾರ ಟಾಕಳೆ ಮನೆಗೆ ನವ್ಯಶ್ರೀಯನ್ನು ಕರೆದೊಯ್ತಾರಾ ಪೊಲೀಸರು?

ತನ್ನ ವಿರುದ್ಧ ರಾಜಕುಮಾರ ಟಾಕಳೆ ನೀಡಿರುವ ದೂರಿನ ಸಂಬಂಧ ದಾಖಲಾಗಿರುವ FIR ರದ್ದು ಕೋರಿ ಹೈಕೋರ್ಟ್ ಪೀಠ ಧಾರವಾಡಕ್ಕೆ ಅರ್ಜಿ ಸಲ್ಲಿಸಿದ ನವ್ಯಶ್ರೀ


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ(ಜು.27):  ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ರಾವ್ ಅಶ್ಲೀಲ ವಿಡಿಯೋ ವೈರಲ್ ಬೆನ್ನಲ್ಲೇ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು ನವ್ಯಶ್ರೀ ವೈದ್ಯಕೀಯ ತಪಾಸಣೆ ಮುಗಿಸಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾಳೆ.‌ ಚನ್ನಪಟ್ಟಣದ ನವ್ಯಶ್ರೀ ರಾವ್ ಅಶ್ಲೀಲ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸುಳ್ಳು ಅತ್ಯಾಚಾರ ಕೇಸ್ ದಾಖಲಿಸುವುದಾಗಿ ಬೆದರಿಸಿ ಸುಲಿಗೆ ಮಾಡಲಾಗುತ್ತಿದೆ ಎಂದು ಬೆಳಗಾವಿಯ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಬೆಳಗಾವಿಯ ಎಪಿಎಂಸಿ ಠಾಣೆಗೆ ದೂರು ನೀಡಿದ್ದರು‌‌. 

Latest Videos

ತನ್ನ ವಿರುದ್ಧ FIR ದಾಖಲಾಗುತ್ತಿದ್ದಂತೆ ನವ್ಯಶ್ರೀ ರಾವ್, ರಾಜಕುಮಾರ ಟಾಕಳೆ ನನ್ನ ಗಂಡ, ಆತನೇ ನನ್ನ ಹನಿಟ್ರ್ಯಾಪ್ ಮಾಡಿದ್ದು ನನ್ನ ಅಶ್ಲೀಲ ವಿಡಿಯೋ ವೈರಲ್ ಮಾಡಿದ್ದಾನೆ ಅಂತಾ ಆರೋಪಿಸಿದ್ದಳು. ಅಷ್ಟೇ ಅಲ್ಲದೇ ಮೋಸ ಮಾಡಿ ಮದುವೆ, ಅತ್ಯಾಚಾರ, ಗರ್ಭಪಾತ, ದೈಹಿಕ ಹಲ್ಲೆ ಸೇರಿ ವಿವಿಧ ಆರೋಪ ಮಾಡಿ ರಾಜಕುಮಾರ್ ಟಾಕಳೆ ವಿರುದ್ಧ ಎಪಿಎಂಸಿ ಠಾಣೆಯಲ್ಲಿ ಪ್ರತಿದೂರು ನೀಡಿದ್ದರು‌.‌ 

ನವ್ಯಶ್ರೀ ಜತೆ ಮದುವೆ ಆದ ಫೋಟೋ ಡಿಲಿಟ್ ಮಾಡಿದ್ನಾ ರಾಜಕುಮಾರ?: ಕಾಂಗ್ರೆಸ್ ಕಾರ್ಯಕರ್ತೆ ನೀಡಿದ ದೂರಿನಲ್ಲೇನಿದೆ?

ರಾಜಕುಮಾರ ಟಾಕಳೆ ವಿರುದ್ಧ ಅತ್ಯಾಚಾರ, ಗರ್ಭಪಾತ, ದೈಹಿಕ ಹಲ್ಲೆ ಆರೋಪ ಹಿನ್ನೆಲೆ ಬೆಳಗಾವಿಯ ಎಪಿಎಂಸಿ ಪೊಲೀಸರು ನವ್ಯಶ್ರೀಯನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕಳಿಸಲಾಗಿತ್ತು. ಈ ವೇಳೆ ತನಗೆ ಹೋಟೆಲ್ ಊಟ ಬೇಕು, ಫ್ರೆಶಪ್ ಆಗಲು ಹೋಟೆಲ್ ರೂಮ್‌ಗೆ ಹೋಗಬೇಕು ಅಂತಾ ಆಸ್ಪತ್ರೆ ವೈದ್ಯರು ಹಾಗೂ ಪೊಲೀಸರ ಜೊತೆ ಕಿರಿಕ್ ಮಾಡಿದ ಆರೋಪ ಕೇಳಿ ಬಂದಿತ್ತು. ಸದ್ಯ ವೈದ್ಯಕೀಯ ತಪಾಸಣೆ ಮುಗಿಸಿ ಬಿಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ನವ್ಯಶ್ರೀ ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ವೈದ್ಯರು ಹಾಗೂ‌ ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡ ಆರೋಪ ಅಲ್ಲಗಳೆದಿರುವ ನವ್ಯಶ್ರೀ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾನೆ ಎಂದಿದ್ದಾರೆ. 

ಇಂದು(ಬುಧವಾರ) ಬೆಳಗ್ಗೆ 11 ಗಂಟೆಗೆ ಬೆಳಗಾವಿ ಎಪಿಎಂಸಿ ಠಾಣೆಗೆ ಹಾಜರಾಗಲು ಸೂಚಿಸಿರುವ ಪೊಲೀಸರು ಸ್ಥಳ ಮಹಜರಿಗೆ ಕರೆದೊಯ್ಯುವ ಸಾಧ್ಯತೆ ಇದೆ. ರಾಜಕುಮಾರ ಟಾಕಳೆ ತನ್ನ ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದ ಎಂದು ಆರೋಪ ಮಾಡಿದ್ದಷ್ಟೇ ಅಲ್ಲದೇ ಕಿಡ್ನಾಪ್ ಮಾಡಿ ಗಣೇಶಪುರ ಬಳಿ ಮಾವಿನ ತೋಪಿಗೆ ಕರೆದೊಯ್ದು ಧಮ್ಕಿ ಹಾಕಿ ವಿಡಿಯೋ ಹೇಳಿಕೆ ಚಿತ್ರೀಕರಿಸಿಕೊಂಡಿದ್ದು ಖಾಲಿ ಪೇಪರ್ ಮೇಲೆ ಸಹಿ ಹಾಗೂ ಬೆರಳಚ್ಚು ಪಡೆದಿದ್ದಾರೆ‌ ಎಂದು ಆರೋಪಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಈ ಎಲ್ಲಾ ಸ್ಥಳಗಳಿಗೆ ಸ್ಥಳ ಮಹಜರು ಸಂಬಂಧ ಪೊಲೀಸರು ಕರೆದೊಯ್ಯುವ ಸಾಧ್ಯತೆ ಇದೆ. ಈ ವೇಳೆ ರಾಜಕುಮಾರ ಟಾಕಳೆ ಹಾಗೂ ನವ್ಯಶ್ರೀ ಪರಸ್ಪರ ಮುಖಾಮುಖಿ ಆಗ್ತಾರಾ ಕಾದು ನೋಡಬೇಕು.

ಇಂದು ನವ್ಯಶ್ರೀ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ

ಇನ್ನು ತನ್ನ ವಿರುದ್ಧ ರಾಜಕುಮಾರ ಟಾಕಳೆ ನೀಡಿರುವ ದೂರಿನ ಸಂಬಂಧ ದಾಖಲಾಗಿರುವ FIR ರದ್ದು ಕೋರಿ ಹೈಕೋರ್ಟ್ ಪೀಠ ಧಾರವಾಡಕ್ಕೆ ನವ್ಯಶ್ರೀ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದೆಡೆ ನಿರೀಕ್ಷಣಾ ಜಾಮೀನು‌ ಕೋರಿ ಬೆಳಗಾವಿ ಜಿಲ್ಲಾ ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸಿದ್ದು ಇಂದು ಮಧ್ಯಾಹ್ನ ಈ ಸಂಬಂಧ ವಿಚಾರಣೆ ನಡೆಯಲಿದೆ ಎಂದು ನವ್ಯಶ್ರೀ ತಿಳಿಸಿದ್ದಾಳೆ.
 

click me!