Match Fixing Fraud: ಇನ್‌ಸ್ಟಾಗ್ರಾಮ್‌ನಲ್ಲಿ ಕ್ರಿಕೆಟಿಗರಿಗೆ ಮ್ಯಾಚ್‌ ಫಿಕ್ಸಿಂಗ್‌ ಆಫರ್‌..!

Kannadaprabha News   | Asianet News
Published : Jan 22, 2022, 06:44 AM ISTUpdated : Jan 22, 2022, 08:02 AM IST
Match Fixing Fraud: ಇನ್‌ಸ್ಟಾಗ್ರಾಮ್‌ನಲ್ಲಿ ಕ್ರಿಕೆಟಿಗರಿಗೆ ಮ್ಯಾಚ್‌ ಫಿಕ್ಸಿಂಗ್‌ ಆಫರ್‌..!

ಸಾರಾಂಶ

*  ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ *  ತಮಿಳುನಾಡು ಕ್ರಿಕೆಟಿಗರಿಗೆ ಗಾಳ ಹಾಕಿದ್ದ ಕೊರಿಯರ್‌ ಕಂಪನಿ ಉದ್ಯೋಗಿ *  ಆ್ಯಪ್‌ನಲ್ಲಿ ನೋಡಿ ಕಲಿತ

ಬೆಂಗಳೂರು(ಜ.22):  ತಮಿಳುನಾಡಿನ(Tamil Nadu) ಖ್ಯಾತ ಕ್ರಿಕೆಟಿಗ ರಾಜಗೋಪಾಲ ಸತೀಶ್‌(Rajagopal Sathish) ಸೇರಿದಂತೆ ಐವರು ಆಟಗಾರರಿಗೆ ಸ್ಪಾಟ್‌ ಫಿಕ್ಸಿಂಗ್‌ಗೆ(Spot Fixing) ಇನ್‌ಸ್ಟಾಗ್ರಾಮ್‌ ಮೂಲಕ ಆಫರ್‌ ಕೊಟ್ಟಿದ್ದ ಕೊರಿಯರ್‌ ಕಂಪನಿಯೊಂದರ ಉದ್ಯೋಗಿ ಜಯನಗರ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಉತ್ತರಹಳ್ಳಿಯ ನಿವಾಸಿ ಆನಂದ್‌ ಕುಮಾರ್‌ ಅಲಿಯಾಸ್‌ ಬಿನ್ನಿ ಆನಂದ್‌ ಬಂಧಿತನಾಗಿದ್ದು, ಎರಡು ದಿನಗಳ ಹಿಂದೆ ಸತೀಶ್‌ರನ್ನು ಇನ್‌ಸ್ಟಾಗ್ರಾಮ್‌(Instagram) ಮೂಲಕ ಮ್ಯಾಚ್‌ ಫಿಕ್ಸಿಂಗ್‌ಗೆ ಸೆಳೆಯಲು ಆರೋಪಿ ಯತ್ನಿಸಿದ್ದ. ಈ ಬಗ್ಗೆ ಬಿಸಿಸಿಐ(BCCI) ಭ್ರಷ್ಟಾಚಾರ ನಿಯಂತ್ರಣ ವಿಭಾಗದ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು(Police), ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು(Accused) ಗುರುವಾರ ಬಂಧಿಸಿದ್ದಾರೆ(Arrest).

Woman Murder: ಬಡ್ಡಿಗೆ ದುಡ್ಡು ಕೊಟ್ಟಿದ್ದಾಕೆಯ ಕೊಂದು ಒಡವೆ ಲೂಟಿ

40 ಲಕ್ಷ ಆಫರ್‌:

ಬಾಗೇಪಲ್ಲಿ ತಾಲೂಕಿನ ಆನಂದ್‌, ತನ್ನ ಕುಟುಂಬದ ಜತೆ ಉತ್ತರಹಳ್ಳಿಯಲ್ಲಿ ನೆಲೆಸಿದ್ದಾನೆ. ಕೊರಿಯರ್‌ ಸಂಸ್ಥೆಯ ಶಾಖೆಯಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ ಆತ, ಸುಲಭವಾಗಿ ಹಣ ಸಂಪಾದನೆಗೆ ಆನ್‌ಲೈನ್‌ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ(Online Cricket Betting) ತೊಡಗಿದ್ದ. ಸಾಮಾಜಿಕ ಜಾಲತಾಣಗಳಲ್ಲಿ(Social Media) ರಾಜ್ಯ ಮಟ್ಟದ ಖ್ಯಾತ ಕ್ರಿಕೆಟಿಗರಿಗೆ ಗಾಳ ಹಾಕಿ ಸ್ನೇಹ ಮಾಡಿ ಬಳಿಕ ಬ್ಲ್ಯಾಕ್‌ಮೇಲ್‌ ಮೂಲಕ ಹಣ ಸಂಪಾದಿಸಲು ಆತ ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ.

ಇತ್ತೀಚಿಗೆ ಆನ್‌ಲೈನ್‌ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ 5 ಲಕ್ಷ ರು. ಕಳೆದುಕೊಂಡು ಸಾಲದ ಸುಳಿಗೆ ಸಿಲುಕಿದ ಆರೋಪಿ, ಆಗ ಹಣಕ್ಕಾಗಿ ಕ್ರಿಕೆಟಿಗರಿಗೆ ಬ್ಲ್ಯಾಕ್‌ಮೇಲ್‌(Blackmail) ಮಾಡಲು ಯೋಜನೆ ರೂಪಿಸಿದ್ದ. ಇದಕ್ಕಾಗಿ ಟಿಎನ್‌ಪಿಎಲ್‌(ತಮಿಳುನಾಡು ಪ್ರೀಮಿಯರ್‌ ಲೀಗ್‌)ನಲ್ಲಿ ಗುರುತಿಸಿಕೊಂಡಿದ್ದ ಆಟಗಾರರನ್ನು ಗುರಿಯಾಗಿಸಿ ಕಾರ್ಯಾಚರಣೆಗಿಳಿದ ಆನಂದ್‌, ಇನ್‌ಸ್ಟಾಗ್ರಾಮ್‌ನಲ್ಲಿ ಆಟಗಾರರಿಗೆ ಸ್ನೇಹದ ಬಲೆ ಬೀಸಿದ್ದ. ಅಂತೆಯೇ ಜ.3ರಂದು ತಮಿಳುನಾಡಿನ ಖ್ಯಾತ ಆಲ್‌ರೌಂಡರ್‌ ಸತೀಶ್‌ ರಾಜಗೋಪಾಲ್‌ ಅವರಿಗೆ ಇನ್‌ಸ್ಟಾಗ್ರಾಮ್‌ಗೆ ಮೂಲಕ ಆರೋಪಿ, ನೀನು ಮುಂಬರುವ ಟಿಎನ್‌ಪಿಎಲ್‌ನಲ್ಲಿ(TNPL) ಫಿಕ್ಸಿಂಗ್‌ನಲ್ಲಿ ಭಾಗಿಯಾಗಬೇಕು. ಈಗಾಗಲೇ ಇಬ್ಬರು ಆಟಗಾರರು ಫಿಕ್ಸಿಂಗ್‌ಗೆ ಒಪ್ಪಿದ್ದಾರೆ. ನೀನು ಒಪ್ಪಿದರೆ ಪ್ರತಿ ಪಂದ್ಯಕ್ಕೆ 40 ಲಕ್ಷ ರು. ನೀಡುವುದಾಗಿ ಆಮಿಷವೊಡ್ಡಿದ್ದ. ಇದೇ ರೀತಿ ಮೇಸೆಜ್‌ ಅನ್ನು ತಮಿಳುನಾಡು ಆಟಗಾರರಾದ ಆ್ಯಂಟೋನಿ ದಾಸ್‌, ಸಂಜಯ ಯಾದವ್‌, ಅಶ್ವಿನ್‌ ಕ್ರಿಸ್ವ್‌, ಎಂ. ಸಿದ್ಧಾರ್ಥ ಅವರಿಗೂ ಆರೋಪಿ ಕಳುಹಿಸಿ ಪ್ರಚೋದಿಸಿದ್ದ. ಈ ಐವರು ಆಟಗಾರರು ಪೈಕಿ ಸತೀಶ ಮಾತ್ರ ಆರೋಪಿ ಮೆಸೇಜ್‌ಗೆ ಪ್ರತಿಕ್ರಿಯಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಯಾರು ನೀನು, ಯಾವ ಪಂದ್ಯದ ಬಗ್ಗೆ ಹೇಳುತ್ತಿದ್ದೀಯಾ ಎಂದು ಸತೀಶ್‌ ಕೇಳಿದ್ದಾರೆ. ಇದಾದ ನಂತರ ಈ ಮ್ಯಾಚ್‌ ಫಿಕ್ಸಿಂಗ್‌(Match Fixing) ವಿಚಾರವನ್ನು ಕೂಡಲೇ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ(ಬಿಸಿಸಿಐ) ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಸತೀಶ್‌ ದೂರು ನೀಡಿದ್ದಾರೆ. ಈ ದೂರು ಪರಿಶೀಲಿಸಿದ ಬಿಸಿಸಿಐ ಅಧಿಕಾರಿಗಳು, ಆರೋಪಿ ಬೆಂಗಳೂರಿನ ವ್ಯಕ್ತಿ ಎಂಬೂದು ಖಚಿತಪಡಿಸಿಕೊಂಡು ಸ್ಥಳೀಯ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಅದರನ್ವಯ ತನಿಖೆ ನಡೆಸಿದ ಜಯನಗರ ಠಾಣೆ ಪೊಲೀಸರು, ಇನ್‌ಸ್ಟಾಗ್ರಾಮ್‌ನ ಐಪಿ ಆಧರಿಸಿ ಆರೋಪಿಯನ್ನು ತ್ವರಿತವಾಗಿ ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Bagalkot: ತೋಟದ ಮನೆಯಲ್ಲಿ 500 ಕೆಜಿ ಸ್ಫೋಟಕ ವಸ್ತುಗಳು ಪತ್ತೆ..!

ಆ್ಯಪ್‌ನಲ್ಲಿ ನೋಡಿ ಕಲಿತ

ಆನ್‌ಲೈನ್‌ನಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ಆಡುತ್ತಿದ್ದ ಆರೋಪಿ, ಆ್ಯಪ್‌ವೊಂದರ ಮೂಲಕ ಸ್ಪಾಟ್‌ ಫಿಕ್ಸಿಂಗ್‌ ಅನ್ನು ಕಲಿತ್ತಿದ್ದ. ಈ ಮೂಲಕ ತಮಿಳುನಾಡು ಆಟಗಾರರನ್ನು ತನ್ನ ವಂಚನೆ ಜಾಲಕ್ಕೆ ಸೆಳೆಯಲು ಯತ್ನಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಯಾರಿದು ಸತೀಶ್‌ ರಾಜಗೋಪಾಲ್‌

ತಮಿಳುನಾಡು ರಾಜ್ಯದ ಉದಯೋನ್ಮುಖ ಆಲ್ರೌಂಡರ್‌ ಆಟಗಾರನಾಗಿರುವ ಸತೀಶ್‌ ರಾಜಗೋಪಾಲ್‌, ಐಪಿಎಲ್‌ಎಲ್‌ನಲ್ಲಿ(IPL) ಮುಂಬೈ ಇಂಡಿಯನ್ಸ್‌, ಪಂಜಾಬ್‌ ಇಲೆವೆನ್ಸ್‌ ಹಾಗೂ ಕೊಲ್ಕತ್ತಾ ನೈಟ್‌ ರೈಡ​ರ್‍ಸ್ ತಂಡಗಳ ಪರ ಆಡಿದ್ದಾರೆ. ತಮಿಳುನಾಡು ರಣಜಿ ತಂಡದ ಪ್ರಮುಖ ಆಟಗಾರನಾಗಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ