Crime News: ಕ್ರೈಸ್ತ ಶಾಲೆಯಲ್ಲಿ ಮತಾಂತರಕ್ಕೆ ಒತ್ತಾಯ: ವಿದ್ಯಾರ್ಥಿನಿ ಆತ್ಮಹತ್ಯೆ

By Kannadaprabha NewsFirst Published Jan 22, 2022, 3:00 AM IST
Highlights

ಶಾಲೆಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಕ್ಕಾಗಿ 17ರ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಆರೋಪವೊಂದು ಕೇಳಿಬಂದಿದೆ. ಪ್ರಕರಣ ಸಂಬಂಧ ಶಾಲಾ ಹಾಸ್ಟೆಲ್‌ ವಾರ್ಡನ್‌ರನ್ನು ಪೊಲೀಸರು ಬಂಧಿಸಿದ್ದಾರೆ. 

ಚೆನ್ನೈ (ಜ.22): ಶಾಲೆಯಲ್ಲಿ (School) ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ (Religious Conversion) ಒತ್ತಾಯಿಸಿ ಕಿರುಕುಳ (Harassment) ನೀಡಿದ್ದಕ್ಕಾಗಿ 17ರ ಬಾಲಕಿ ಆತ್ಮಹತ್ಯೆಗೆ (Suicide) ಶರಣಾಗಿದ್ದಾಳೆ ಎಂಬ ಆರೋಪವೊಂದು ಕೇಳಿಬಂದಿದೆ. ಪ್ರಕರಣ ಸಂಬಂಧ ಶಾಲಾ ಹಾಸ್ಟೆಲ್‌ ವಾರ್ಡನ್‌ರನ್ನು ಪೊಲೀಸರು (Police) ಬಂಧಿಸಿದ್ದಾರೆ. ಮತ್ತೊಂದೆಡೆ ಘಟನೆ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತಮಿಳುನಾಡಿನ ಪೊಲೀಸ್‌ ಮಹಾ ನಿರ್ದೇಶಕರಿಗೆ ನೋಟಿಸ್ (Notice) ನೀಡಿದೆ.

ಎನ್‌ಸಿಪಿಸಿಆರ್‌ಗೆ (NCPCR) ಬಂದ ದೂರಿನ ಪ್ರಕಾರ ತಂಜಾವೂರಿನ (Thanjavur) ಬಾಲಕಿ ಸೇಕ್ರೆಡ್‌ ಹಾರ್ಟ್‌ ಶಾಲೆಯಲ್ಲಿ 12ನೇ ತರಗತಿಯಲ್ಲಿ ಓದುತ್ತಿದ್ದಳು. ಶಾಲೆಯ ಹಾಸ್ಟೆಲ್‌ನ ವಾರ್ಡನ್‌ ಹಿಂದೂ ವಿದ್ಯಾರ್ಥಿನಿಯನ್ನು ಬಲವಂತವಾಗಿ ಕ್ರೈಸ್ತಧರ್ಮಕ್ಕೆ ಮತಾಂತರವಾಗಲು ಒತ್ತಾಯಿಸುತ್ತಿದ್ದರು. ಮತಾಂತರವಾದರೆ ಆಕೆಯ ಮುಂದಿನ ಶಿಕ್ಷಣಕ್ಕೆ ನೆರವಾಗುವ ಆಫರ್‌ ನೀಡಿದ್ದರು. ಆಕೆ ಒಪ್ಪದಿದ್ದಾಗ ಆಕೆಗೆ ದೈಹಿಕ ಹಿಂಸೆ ನೀಡುತ್ತಿದ್ದರು. ಆಕೆಗೆ ಮನೆಗೆ ತೆರಳಲು ಬಿಡುತ್ತಿರಲಿಲ್ಲ. ಆಕೆಯ ಬಳಿ ಶೌಚಾಲಯ, ಪಾತ್ರೆ ತೊಳೆಸಲಾಗುತ್ತಿತ್ತು. ಇದರಿಂದ ಬೇಸತ್ತು ಆಕೆ ಜ.9 ರಂದು ಆತ್ಮಹತ್ಯೆಗೆ ಪ್ರಯತ್ನಿಸಿ, ಜ.19 ರಂದು ಸಾವನ್ನಪ್ಪಿದಳು ಎಂದು ದೂರಿನಲ್ಲಿ ಹೇಳಲಾಗಿದೆ.

ರ‍್ಯಾಗಿಂಗ್ ಮಾಡಿದ್ದ ನಾಲ್ವರು ವಿದ್ಯಾರ್ಥಿನಿಯರಿಗೆ 5 ವರ್ಷ ಶಿಕ್ಷೆ

ಈ ನಡುವೆ ಪ್ರಕರಣ ಸಂಬಂಧ ಹಾಸ್ಟೆಲ್‌ ವಾರ್ಡನ್‌ರನ್ನು ಶುಕ್ರವಾರ ಬಂಧಿಸಲಾಗಿದೆ (Arrest) ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಪೊಲೀಸರು ದಾಖಲಿಸಿಕೊಂಡಿರುವ ದೂರಿನಲ್ಲಿ ಮತಾಂತರದ ವಿಷಯ ಇಲ್ಲ. ವಾರ್ಡನ್‌ ತನ್ನ ಮನೆಯಲ್ಲಿ ಮನೆಕೆಲಸ ಮಾಡುವಂತೆ ನನಗೆ ಒತ್ತಾಯಿಸಿದ್ದರು. ಈ ಕಿರುಕುಳ ತಾಳಲಾಗದೇ ತಾನು ಅತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂಬ ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಆದರೆ ದುರಂತಕ್ಕೆ ಮತಾಂತರ ಯತ್ನವೇ ಕಾರಣ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸೇರಿದಂತೆ ಹಲವು ಬಿಜೆಪಿ ನಾಯಕರು ದೂರಿದ್ದಾರೆ. ಅಲ್ಲದೆ ಶಾಲೆಯ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಗದರಿದ್ದಕ್ಕೆ ಸ್ಟುಡೆಂಟ್ ಸುಸೈಡ್: ಮಕ್ಕಳ ಮನಸ್ಸು ಎಷ್ಟು ಸೂಕ್ಷ್ಮವಾಗಿರುತ್ತದೆ ಎನ್ನುವುದಕ್ಕೆ ಈ ಘಟನೆಯೇ ಉದಾಹರಣೆ. ಹುಡುಗಿ ದುರ್ನಡತೆ ತೋರಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಪೋಷಕರನ್ನು ಶಾಲೆಗೆ ಕರೆಸಿದ ಪ್ರಾಂಶುಪಾಲರು ಬುದ್ಧಿಮಾತು ಹೇಳಿದ್ದರು.  ಹೀಗೆ ಮುಂದುವರಿದರೆ ಟಿಸಿ ಕೊಟ್ಟುಬಿಡುತ್ತೇನೆ ಎಂದು ಹೇಳಿದ್ದರು. ಇದರಿಂದ ಬೇಸತ್ತ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಇಂಥ ನಿರ್ಧಾರ ತೆಗೆದುಕೊಂಡಿದ್ದಾಳೆ. ಉದ್ದವಾದ ಉಗುರು ಬಿಟ್ಟು, ದೊಡ್ಡ ಕಿವಿಯೋಲೆ ಹಾಕಿಕೊಂಡಿದ್ದು, ಮೊಬೈಲ್ ಪೋನ್ ಬಳಕೆ ಮಾಡಿದ್ದಕ್ಕೆ ಪ್ರಾಂಶುಪಾಲರು ಬುದ್ಧಿ ಹೇಳುವ ಕೆಲಸ  ಮಾಡಿದ್ದರು.  ಆಕೆಗೆ ಒಂದು ಏಟು ಹಾಕಿದ್ದರು.

SSLC ಪರೀಕ್ಷೆ ಬರೆದು ಬಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

ಏ. 8ರಂದು ಪೋಷಕರನ್ನು ಶಾಲೆಗೆ ಕರೆಸಿದ್ದ ಪ್ರಾಚಾರ್ಯರು ಪೋಷಕರೊಂದಿಗತೆ ಮಾತನಾಡಿದ್ದರು. ಮಾರನೇ ದಿನ ಅದೇ ಶಾಲೆಯಲ್ಲಿ ಒಂಭತ್ತನೇ ತರಗತಿ ಅಧ್ಯಯನ ಮಾಡುತ್ತಿದ್ದ ಮಗನನ್ನು ಕರೆದುಕೊಂಡು ಶಾಲೆಗೆ ಹೋದ ಪೋಷಕರು ಮಗನ ಎದುರಿನಲ್ಲಿಯೇ ಅಕ್ಕನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಇಬ್ಬರು ಮಕ್ಕಳಿಗೂ ಟಿಸಿ ಕೊಟ್ಟುಬಿಡತ್ತೇವೆ ಎಂದು ಪ್ರಾಚಾರ್ಯರು ಗದರಿದ್ದಾರೆ. ಮನೆಗೆ ಬಂದ ಪೋಷಕರು ಮಗಳಿಗೆ ವಿಚಾರ ಹೇಳಿದ್ದು ನಾಳೆ ಹೋಗಿ ಮನವಿ ಮಾಡಿಕೊ ಎಂದಿದ್ದಾರೆ. ಇದೆಲ್ಲ ಘಟನೆಗಳಿಂದ ನೊಂದ ಬಾಲಕಿ ಫ್ಯಾನ್ ಗೆ ನೇಣು ಹಾಕಿಕೊಂಡಿದ್ದಾಳೆ.   ಹರ್ಯಾಣದ ಗುರುಗ್ರಾಮದಲ್ಲಿ ನಡೆದ ಘಟನೆ ಇದೀಗ ಅನೇಕ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ. 

click me!