Crime News: ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ: ಖಾಸಗಿ ಅಂಗ ಕಚ್ಚಿ ವಿಕೃತಿ

Published : Sep 17, 2022, 05:36 PM ISTUpdated : Sep 17, 2022, 05:47 PM IST
Crime News: ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ: ಖಾಸಗಿ ಅಂಗ ಕಚ್ಚಿ ವಿಕೃತಿ

ಸಾರಾಂಶ

Crime News: 28 ವರ್ಷದ ವಿವಾಹಿತ ಮಹಿಳೆಯ ಮೇಲೆ ಇಬ್ಬರು ಯುವಕರು ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ

ರಾಜಸ್ಥಾನ (ಸೆ. 17):  28 ವರ್ಷದ ವಿವಾಹಿತ ಮಹಿಳೆಯ ಮೇಲೆ ಇಬ್ಬರು ಯುವಕರು ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಚುರು ಜಿಲ್ಲೆಯ ಸರ್ದಾರ್‌ಶಹರ್ ತಹಸಿಲ್‌ನಲ್ಲಿ ನಡೆದಿದೆ. ಆರೋಪಿಗಳು ಸಂತ್ರಸ್ಥೆ ಖಾಸಗಿ ಅಂಗಗಳನ್ನು ಹಲ್ಲುಗಳಿಂದ ಕಚ್ಚಿ ವಿಕೃತಿ ಮೆರೆದಿದ್ದಾರೆ. ಸಂತ್ರಸ್ತ ಮಹಿಳೆ ಶುಕ್ರವಾರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ. ಜಮೀನಿನಲ್ಲಿ ಒಬ್ಬಂಟಿಯಾಗಿದ್ದಾಗ ಈ ಘಟನೆ ನಡೆದಿರುವುದಾಗಿ ಮಹಿಳೆ ತಿಳಿಸಿದ್ದಾರೆ. 

ಗುರುವಾರ ಸಂಜೆ ಗ್ರಾಮದ ಯುವಕ ಹಾಗೂ ಆತನ ಮತ್ತೊಬ್ಬ ಸ್ನೇಹಿತ ಕೂಡ ಬಂದಿದ್ದ. ಸಂಜೆ ಹೊಲದಲ್ಲಿ ಒಬ್ಬಳೇ ಇದ್ದೆ. ನನ್ನ ಗಂಡ ಯಾವುದೋ ಹಳ್ಳಿಗೆ ಹೋಗಿದ್ದರು. ಎಂಟು ಗಂಟೆ ಸುಮಾರಿಗೆ ಗದ್ದೆಯಲ್ಲಿ ಕಟ್ಟಿದ ಕೊಳವೆಬಾವಿಯ ಕಡೆಗೆ ಹೋಗುತ್ತಿದ್ದೆ. ಅದೇ ಸಮಯದಲ್ಲಿ ಜೀತು ಸಿಂಗ್ ಮತ್ತು ಆತನ ಸ್ನೇಹಿತ ಬಂದು ನನ್ನನ್ನು ಒಬ್ಬಂಟಿಯಾಗಿ ನೋಡಿ ಅತ್ಯಾಚಾರವೆಸಗಿದ್ದಾರೆ. ಆರೋಪಿಗಳು ನನ್ನ ದೇಹದ ಖಾಸಗಿ ಭಾಗವನ್ನು ಹಲ್ಲುಗಳಿಂದ ಕಚ್ಚಿ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತ ಮಹಿಳೆ ತಿಳಿಸಿದ್ದಾರೆ. 

ಸಂತ್ರಸ್ಯ ಮಹಿಳೆ ಕೂಗಾಡಿದಾಗ ಆರೋಪಿಗಳು ಜಾತಿ ಹೆಸರಲ್ಲಿ ನಿಂದಿಸಿದ್ದಾರೆ ಎಂದು ಸಂತ್ರಸ್ತೆ ಹೇಳಿದ್ದಾಳೆ. ನನ್ನ ಕೂಗು ಕೇಳಿ ಅಕ್ಕಪಕ್ಕದವರು ನಮ್ಮ ಜಮೀನಿಗೆ ಧಾವಿಸಿದ್ದಾರೆ. ಜನರು ಬರುವುದನ್ನು ಕಂಡು ಆರೋಪಿಗಳಿಬ್ಬರೂ ದ್ವಿಚಕ್ರವಾಹನ ಸಮೇತ ಪರಾರಿಯಾಗಿದ್ದಾರೆ ಎಂದು ಮಹಿಳೆ ತಿಳಿಸಿದ್ದಾರೆ. 

Bengaluru Crime News: ನಿವೃತ್ತ ಶಿಕ್ಷಕಿಯ ಉಸಿರುಗಟ್ಟಿಸಿ ಹತ್ಯೆ: ಇಬ್ಬರ ಬಂಧನ

ನನ್ನ ಪತಿ ಕೃಷಿ ಕೆಲಸ ಮಾಡಿಕೊಂಡು ಇದ್ದಾರೆ, ಅದೇ ಜಮೀನಿನಲ್ಲಿ ವಾಸಿಸುತ್ತಿದ್ದೇವೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ. ವಿವಾಹಿತ ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ಅಮರ್‌ ಉಜಾಲಾ ವರದಿ ಮಾಡಿದೆ

ಮದ್ದೂರು: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯುವಕನ ಬಂಧನ: ಶಾಲಾ ವಿದ್ಯಾರ್ಥಿನಿಯನ್ನು ಕರೆದೊಯ್ದು ಅತ್ಯಾಚಾರ ಮಾಡಿದ್ದ ಯುವಕನನ್ನು ಮದ್ದೂರು ಪೋಲೀಸರು ಬಂಧಿಸಿದ್ದಾರೆ. ಪಟ್ಟಣದ ಸೋಮೆಗೌಡರ ಬೀದಿಯ ನಿವಾಸಿ ಬಸಪ್ಪನ ಪುತ್ರ ಎಚ್‌.ಬಿ.ಸುನೀಲ್‌ ಕುಮಾರ್‌(28) ಬಂಧಿತ ಆರೋಪಿ. ಮೂಲತಃ ತಾಲೂಕಿನ ಹುಲಿಕೆರೆ ಗ್ರಾಮದ ಸುನೀಲ್ ಕುಮಾರ್‌ ಮದ್ದೂರಿನಲ್ಲಿ ಹೋಟೆಲ್‌ ನಡೆಸುತ್ತಾ ಸೋಮೇಗೌಡರ ಬೀದಿಯ ರಾಮಣ್ಣರ ಮನೆಯನ್ನು ಬಾಡಿಗೆ ಪಡೆದು ವಾಸವಾಗಿದ್ದನು.

ತನ್ನ ಮನೆ ಎದುರಿನ ಅತ್ತೆ ಮನೆಯಲ್ಲಿ ವಾಸವಾಗಿದ್ದ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 14 ವರ್ಷದ ಬಾಲಕಿಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದು 3 ರಿಂದ 4 ಬಾರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.

ಈ ಮಧ್ಯೆ ಬಾಲಕಿ ಮೂರ್ನಾಲ್ಕು ತಿಂಗಳಾದರೂ ಋುತುಮತಿ ಆಗದ ಕಾರಣ ಆತಂಕಗೊಂಡ ಆಕೆಯ ತಾಯಿ ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಬಾಲಕಿ ಗರ್ಭಿಣಿ ಆಗಿರುವ ವಿಷಯ ಬಹಿರಂಗಗೊಂಡಿದೆ. ನಂತರ ಬಾಲಕಿಯ ತಾಯಿ ಪೊಲೀಸರಿಗೆ ಅತ್ಯಾಚಾರ ಸಂಬಂಧ ದೂರು ನೀಡಿದ್ದಾರೆ. 

ಚರ್ಚ್‌ನಲ್ಲಿ ಚಾಕು ತೋರಿಸಿ ಮಹಿಳೆಗೆ ಲೈಂಗಿಕ ದೌರ್ಜನ್ಯ

ವೃತ್ತ ನಿರೀಕ್ಷಕ ಸಂತೋಷ್‌ ಆರೋಪಿ ಸುನೀಲ್ ಕುಮಾರ್‌ ವಿರುದ್ಧ ಐಪಿಸಿ 376 ಅನ್ವಯ ಪೋಕ್ಸೋ ಕಾಯ್ದೆ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ ನಂತರ ಮಂಡ್ಯದ ಒಂದನೇ ತ್ವರಿತ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ