ಗರ್ಭಿಣಿಗೆ ಟ್ರ್ಯಾಕ್ಟರ್‌ ಗುದ್ದಿ ಸಾಯಿಸಿದ ಲೋನ್‌ ರಿಕವರಿ ಅಧಿಕಾರಿಗಳು, ಮಹೀಂದ್ರಾ ಫೈನಾನ್ಸ್‌ನಿಂದ ಕ್ಷಮೆ!

Published : Sep 17, 2022, 05:24 PM ISTUpdated : Sep 17, 2022, 05:31 PM IST
ಗರ್ಭಿಣಿಗೆ ಟ್ರ್ಯಾಕ್ಟರ್‌ ಗುದ್ದಿ ಸಾಯಿಸಿದ ಲೋನ್‌ ರಿಕವರಿ ಅಧಿಕಾರಿಗಳು, ಮಹೀಂದ್ರಾ ಫೈನಾನ್ಸ್‌ನಿಂದ ಕ್ಷಮೆ!

ಸಾರಾಂಶ

ಟ್ರ್ಯಾಕ್ಟರ್ ಹಿಂಪಡೆಯಲು ರೈತನ ಮನೆಗೆ ತೆರಳಿದ ಫೈನಾನ್ಸ್ ಕಂಪನಿ ಅಧಿಕಾರಿಗಳು ರೈತನ ಗರ್ಭಿಣಿ ಮಗಳನ್ನು ಟ್ರ್ಯಾಕ್ಟರ್ ಮೂಲಕ ಗುದ್ದಿ ಸಾಯಿಸಿದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹೀಂದ್ರಾ ಫೈನಾನ್ಸ್‌ ತನಿಖೆ ನಡೆಸುವುದಾಗಿ ಹೇಳಿದ್ದು, ಥರ್ಡ್‌ ಪಾರ್ಟಿ ಲೋನ್‌ ರಿಕವರಿ ಅಭ್ಯಾಸದ ಬಗ್ಗೆ ಗಮನ ನೀಡುವುದಾಗಿ ಹೇಳಿದೆ.

ರಾಂಚಿ (ಸೆ. 17): ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲಾ ಕೇಂದ್ರದಿಂದ ಸುಮಾರು 100 ಕಿಮೀ ದೂರದಲ್ಲಿರುವ ಸಿಜುವಾ ಗ್ರಾಮದಲ್ಲಿ ಸಾಲ ವಸೂಲಿ ಮಾಡಲು ಹೋದ ಏಜೆಂಟ್‌ಗಳು ರೈತನ ಗರ್ಭಿಣಿ ಮಗಳನ್ನು ಟ್ರ್ಯಾಕ್ಟರ್‌ನಿಂದ ಗುದ್ದಿ ಸಾಯಿಸಿದ ದಾರುಣ ಘಟನೆ ನಡೆದಿದೆ. ಟ್ರ್ಯಾಕ್ಟರ್‌ ಗುದ್ದಿದ ರಭಸಕ್ಕೆ ಗರ್ಭಿಣಿ ಸ್ಥಳದಲ್ಲೇ ಸಾವು ಕಂಡಿದ್ದಾಳೆ. ಮೂರು ತಿಂಗಳ ಗರ್ಭಿಣಿ ನಾಲ್ಕು ದಿನಗಳ ಹಿಂದೆಯಷ್ಟೇ ತಾಯಿ ಮನೆಗೆ ಬಂದಿದ್ದಳು. ಈ ವೇಳೆ ಇಂಥ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು, ಮಹೀಂದ್ರಾ ಫೈನಾನ್ಸ್ ಕಂಪನಿಯ 4 ಜನರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಗುರುವಾರ ಈ ಘಟನೆ ನಡೆದಿದೆ. ಫೈನಾನ್ಸ್ ಕಂಪನಿ ಕಚೇರಿಗೆ ಮುತ್ತಿಗೆ ಹಾಕಿದ ಜನರು ಕಠಿಣ ಕ್ರಮಕ್ಕೆ ಆಗ್ರಹ ಮಾಡಿದ್ದಾರೆ. ನಾಲ್ವರು ಆರೋಪಿಗಳು ಸದ್ಯ ಪೊಲೀಸ್ ಕಸ್ಟಡಿಯಿಂದ ಹೊರಗಿದ್ದಾರೆ. ಹಜಾರಿಬಾಗ್‌ನ ಸಿಜುವಾ ಗ್ರಾಮದ ನಿವಾಸಿಯಾಗಿರುವ ವಿಕಲಚೇತನ ರೈತ ಮಿಥಿಲೇಶ್ ಪ್ರಸಾದ್ ಮೆಹ್ತಾ ಅವರು 2018 ರಲ್ಲಿ ಮಹೀಂದ್ರಾ ಫೈನಾನ್ಸ್‌ನಿಂದ ಟ್ರ್ಯಾಕ್ಟರ್‌ ಖರೀದಿಸಲು ಸಾಲ ಪಡೆದುಕೊಂಡಿದ್ದರು. ಅವರು ಸುಮಾರು ಐದೂವರೆ ಲಕ್ಷ ಮೌಲ್ಯದ ಟ್ರ್ಯಾಕ್ಟರ್‌ಗಳ ಕಂತುಗಳನ್ನು ನಿರಂತರವಾಗಿ ಪಾವತಿ ಮಾಡುತ್ತಿದ್ದರು. ಹಾಗಿದ್ದರೂ 1 ಲಕ್ಷದ 20 ಸಾವಿರ ರೂ.ಗಳ 6 ಕಂತು ಮಾತ್ರ ಬಾಕಿ ಉಳಿದಿತ್ತು. ಹಣದ ಕೊರತೆಯಿಂದಾಗಿ ಈ ಕಂತುಗಳನ್ನು ಪಾವತಿಸಲು ವಿಳಂಬವಾಗಿದೆ. ಸಾಲ 1 ಲಕ್ಷದ 30 ಸಾವಿರಕ್ಕೆ ಏರಿಕೆಯಾಗಿದೆ ಎಂದು ಫೈನಾನ್ಸ್ ಕಂಪನಿ ತಿಳಿಸಿದೆ.

ಕೆಲ ದಿನಗಳ ಹಿಂದೆ ಫೈನಾನ್ಸ್ ಕಂಪನಿಯ (Mahindra Finance) ಉದ್ಯೋಗಿಗಳು ಬಂದಾಗ ಬಾಕಿ ಹಣದ ಜತೆಗೆ ಹೆಚ್ಚುವರಿಯಾಗಿ 12 ಸಾವಿರ ರೂಪಾಯಿ ನೀಡಬೇಕು ಎಂದು ಹೇಳಿದ್ದರು. ಆದರೆ ಹಣ ನೀಡದ ಹಿನ್ನೆಲೆಯಲ್ಲಿ ವಾಪಸ್ ತೆರಳಿದ್ದರು. ಗುರುವಾರ ರಾತ್ರಿ 11:30ರ ಸುಮಾರಿಗೆ ಟ್ರ್ಯಾಕ್ಟರ್‌ಅನ್ನು (Tractor) ಬಲವಂತವಾಗಿ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಇಚ್ಚಾಕ್ ಪೊಲೀಸ್ ಠಾಣಾ ವ್ಯಾಪ್ತಿಯ (Bariath village of Ichak police station) ಬರಿಯಾತ್ ಗ್ರಾಮದ ಬಳಿ ಟ್ರ್ಯಾಕ್ಟರ್ ಎದುರು ಕುಟುಂಬಸ್ಥರು ಎದುರು ನಿಂತಿದ್ದರು. ಈ ವೇಳೆ ಅಧಿಕಾರಿಗಳು 1.20 ಲಕ್ಷ ರೂಪಾಯಿ ಸಾಲದೊಂದಿಗೆ ಹೆಚ್ಚುವರಿ 12 ಸಾವಿರ ಮೊತ್ತವನ್ನು ತಕ್ಷಣ ಪಾವತಿ ಮಾಡುವಂತೆ (Mithilesh Prasad Mehta) ಹೇಳಿದ್ದಾರೆ.

ಆದರೆ, ಇದಕ್ಕೆ ಕುಟುಂಬ ಒಪ್ಪಿರಲಿಲ್ಲ. ಫೈನಾನ್ಸ್ ಕಂಪನಿಯ ಉದ್ಯೋಗಿಗಳು ಟ್ರ್ಯಾಕ್ಟರ್‌ನಿಂದ ಪಕ್ಕ ಸರಿಯಿರಿ ಇಲ್ಲದೇ ಇದ್ದಲ್ಲಿ ಟ್ರ್ಯಾಕ್ಟರ್ ಹತ್ತಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಕುಟುಂಬಸ್ಥರು (Family) ದಾರಿ ಬಿಡದಿದ್ದಾಗ ರಿಕವರಿ ಏಜೆಂಟ್ ಟ್ರ್ಯಾಕ್ಟರ್ ಹತ್ತಿಸುವಂತೆ ಚಾಲಕನಿಗೆ ಆದೇಶ ನೀಡಿದ್ದಾರೆ. ಈ ವೇಳೆ ಟ್ರ್ಯಾಕ್ಟರ್‌ ಮೂರು ತಿಂಗಳ ಗರ್ಭಿಣಿ ಮೋನಿಕಾ (Monica) ಮೇಲೆ ಹರಿದಿದ್ದು, ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಬಳಿಕ ಆರೋಪಿ ಟ್ರ್ಯಾಕ್ಟರ್‌ನೊಂದಿಗೆ ಪರಾರಿಯಾಗಿದ್ದಾರೆ.

ಮಹೀಂದ್ರಾ ಫೈನಾನ್ಸ್‌ನ ರೋಷನ್ ಸಿಂಗ್ (Roshan Singh) ಸೇರಿದಂತೆ ನಾಲ್ವರು ಉದ್ಯೋಗಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಮನೋಜ್ ರತನ್ ಚೌತ್ ತಿಳಿಸಿದ್ದಾರೆ. ಎಲ್ಲರನ್ನೂ ಶೀಘ್ರವೇ ಬಂಧಿಸಲಾಗುವುದು. ಹಣಕಾಸು ಕಂಪನಿಗಳ ಏಜೆಂಟರು ಹಣವನ್ನು ವಸೂಲಿ ಮಾಡಲು ಅಕ್ರಮ ಮತ್ತು ಬಲವಂತದ ಕ್ರಮಗಳನ್ನು ಜಾರಿ ಮಾಡುತ್ತಿದ್ದಾರೆ ಎಂದು ನಿರಂತರವಾಗಿ ವರದಿಯಾಗುತ್ತಿದೆ. ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಹಣಕಾಸು ಕಂಪನಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ನಿಯಮ ಉಲ್ಲಂಘಿಸಿ ಕ್ರಮ ಕೈಗೊಂಡರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

BELAGAVI NEWS: ರಿಯಲ್ ಎಸ್ಟೇಟ್ ಏಜೆಂಟ್ ಬರ್ಬರ ಹತ್ಯೆ

ಘಟನೆಗೆ ಸಂಬಂಧಪಟ್ಟಂತೆ ಇಂದ್ರಪುರಿ ಚೌಕ್ ಪೊಲೀಸ್ ಲೈನ್‌ನಲ್ಲಿರುವ ಮಹೀಂದ್ರಾ ಕಚೇರಿಗೆ ಸ್ಥಳೀಯ ಗ್ರಾಮಸ್ಥರು ಮುತ್ತಿಗೆ ಹಾಕಿದ್ದು, ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸುಮಾರು 4 ಗಂಟೆಗಳ ಕಾಲ ನಡೆದ ಗಲಾಟೆ ಬಳಿಕ ಕ್ರಮ ಕೈಗೊಳ್ಳುವ ಭರವಸೆ ದೊರೆತಾಗ ಜನರು ಶಾಂತರಾದರು. ಈ ವೇಳೆ ಸಾವಿಗೀಡಾಗಿರುವ ಗರ್ಭಿಣಿ ಮೋನಿಕಾಗೆ ಮೂರು ತಿಂಗಳಾಗಿತ್ತು. ಆಕೆಯನ್ನು ಹಾಗೂ ಆಕೆಯ ಮಗುವನ್ನು ಫೈನಾನ್ಸ್‌ನವರು ಕೊಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ, ಕುಟುಂಬ ಸದಸ್ಯರು ಮೃತ ಮೋನಿಕಾ ಕುಮಾರಿ ಅವರ ಶವದೊಂದಿಗೆ ಇಂದ್ರಪುರಿ ಚೌಕ್‌ನಲ್ಲಿರುವ ಮಹೀಂದ್ರಾ ಫೈನಾನ್ಸ್ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಾರೆ.
ಡುಮ್ರೌನ್ ನಿವಾಸಿ ಮೋನಿಕಾ ಅವರ ಪತಿ ಕುಲದೀಪ್ ಅವರು 1 ವರ್ಷದ ಹಿಂದೆ ಮದುವೆಯಾಗಿದ್ದರು. ಮೋನಿಕಾ ತನ್ನ ಪಿಜಿ ಪೂರ್ಣಗೊಳಿಸಲು ಬಯಸಿದ್ದಳು. ತನ್ನ ಆಸೆಯನ್ನು ಪೂರೈಸಲು, ಅವರು ಅಸ್ಸಾಂನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಮೂರು ತಿಂಗಳ ಗರ್ಭಿಣಿಯಾಗಿದ್ದ ಕಾರಣಕ್ಕೆ ನಾಲ್ಕು ದಿನಗಳ ಹಿಂದೆ ತಾಯಿಯ ಮನೆಗೆ ಬಂದಿದ್ದರು.

ಪ್ರಭಾವಿ ರಾಜಕಾರಣಿಯ ಆಪ್ತನನ್ನೇ ಮುಗಿಸಲು ಹೋದವನು ತಾನೇ ಹೆಣವಾದ!

ಮಹೀಂದ್ರಾ ಫೈನಾನ್ಸ್‌ ಕ್ಷಮೆ: ಈ ದುಃಖದ ಘಳಿಗೆಯಲ್ಲಿ ಸಂತ್ರಸ್ತ ಕುಟುಂಬದೊಂದಿಗೆ ನಾನಿದ್ದೇನೆ ಎಂದು ಮಹೀಂದ್ರಾ ಫೈನಾನ್ಸ್ ಕಂಪನಿಯ ಎಂಡಿ ಡಾ.ಅನಿಶ್ ಶಾ (Anish Shah) ಹೇಳಿದ್ದಾರೆ. ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ನಡೆಸಲಾಗುವುದು. ಮೂರನೇ ವ್ಯಕ್ತಿಯ ಮೂಲಕ ಸಾಲ ವಸೂಲಾತಿಯನ್ನು ಸಹ ಪರಿಗಣಿಸಲಾಗುವುದು. ಕಂಪನಿಯು ತನಿಖೆಯಲ್ಲಿ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತದೆ ಎಂದು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ