Belagavi Crime News: ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾಗಿದೆ
ಬೆಳಗಾವಿ (ಸೆ. 17): ಬೆಳಗಾವಿಯ (Belagavi) ಕ್ಯಾಂಪ್ ಪ್ರದೇಶದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾಗಿದೆ. ಹೆಂಡತಿ, ಮಕ್ಕಳು ಪಕ್ಕದ ರೂಮಿನಲ್ಲಿ ಮಲಗಿದ್ದಾಗ ಹಂತಕರು ಹತ್ಯೆಗೈದು ಪರಾರಿಯಾಗಿದ್ದಾರೆ. ಯಾರಿಗೂ ಗೊತ್ತಾಗದಂತೆ ಶುಕ್ರವಾರ ರಾತ್ರಿ (ಸೆ. 17) ಮನೆಗೆ ನುಗ್ಗಿ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ರಿಯಲ್ ಎಸ್ಟೇಟ್ ಏಜೆಂಟ್ (Real Estate Agent) ಆಗಿ ಕೆಲಸ ಮಾಡುತ್ತಿದ್ದ ಸುಧೀರ್ ಕಾಂಬಳೆ(57) ಕೊಲೆಯಾದ ದುರ್ದೈವಿ. ಸುಧೀರ್ ಕೊವಿಡ್ ಹಿನ್ನೆಲೆ ಎರಡು ವರ್ಷದ ಹಿಂದೆ ದುಬೈಯಿಂದ (Dubai) ಬೆಳಗಾವಿಗೆ ಬಂದಿದ್ದರು.
ದುಷ್ಕರ್ಮಿಗಳು ಹೊಟ್ಟೆ, ಕತ್ತು, ಕೈ, ಮುಖಕ್ಕೆ ಇರಿದು ಹತ್ಯೆ ಮಾಡಿದ್ದಾರೆ. ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಕ್ಯಾಂಪ್ ಠಾಣೆ ಪೊಲೀಸ್, ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
BENGALURU CRIME NEWS: ನಿವೃತ್ತ ಶಿಕ್ಷಕಿಯ ಉಸಿರುಗಟ್ಟಿಸಿ ಹತ್ಯೆ: ಇಬ್ಬರ ಬಂಧನ
ಸೋಮವಾರಪೇಟೆ: ಚೂರಿಯಿಂದ ಇರಿದು ಮಹಿಳೆಯ ಕೊಲೆ: ಮಹಿಳೆಯನ್ನು ಚೂರಿಯಿಂದ ಇರಿದು ಕೊಂದ ಘಟನೆ ಮಾದಾಪುರ ಸಮೀಪದ ಜಂಬೂರು ಬಾಣೆಯಲ್ಲಿನಡೆದಿದೆ. ಜಂಬೂರು ನಿವಾಸಿ ಹಂಸ ಎಂಬವರ ಪತ್ನಿ ಸಾಹಿರಾ (35) ಮೃತರು. ಅದೇ ಗ್ರಾಮದ ನಿವಾಸಿ ಪೂವಯ್ಯ(ಬೊಳ್ಳು) ಕೊಲೆ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಕಳೆದ 5 ವರ್ಷದ ಹಿಂದೆ ಹಂಸ ಪತ್ನಿಯನ್ನು ತ್ಯಜಿಸಿ ಹೋಗಿದ್ದ. ನಂತರ ಪೂವಯ್ಯ ಹಾಗೂ ಸಾಹಿರಾ ಅನೋನ್ಯವಾಗಿದ್ದರು ಎನ್ನಲಾಗಿದೆ. ಕಳೆದ ಎರಡು ದಿನದಿಂದ ಸಾಹಿರಾ ದೂರವಾಣಿ ಸಂಪರ್ಕಕ್ಕೆ ಸಿಗದ ಹಿನ್ನಲೆಯಲ್ಲಿ ಪೂವಯ್ಯ ವಿಚಲಿತನಾಗಿದ್ದ.
Mysuru Crime: ಒಂಟಿ ಮಹಿಳೆ ಮನೆಗೆ ನುಗ್ಗಿದ ಕಳ್ಳರು; ಕೈಕಾಲು ಕಟ್ಟಿ ಚಿನ್ನಾಭರಣ ದೋಚಿ ಎಸ್ಕೆಪ್
ಹೀಗಾಗಿ ಸಾಹಿರಾ ಮನೆಗೆ ತೆರಳಿ ವಿಚಾರಿಸಿದ್ದಾನೆ. ಮನೆಯಲ್ಲಿ ಇನ್ನೊಬ್ಬ ಗಂಡಸು ಇದ್ದ ಹಿನ್ನೆಲೆಯಲ್ಲಿ ರೋಷಗೊಂಡು ಮನೆಗೆ ಬಂದು ಚಾಕು ಹಿಡಿದು ತೆರಳಿದ್ದಾನೆ. ಅಷ್ಟೊತ್ತಿಗಾಗಲೆ ಮನೆಯಲ್ಲಿದ್ದ ವ್ಯಕ್ತಿ ಹೊರ ಹೋಗಿದ್ದಾನೆ. ಈ ಬಗ್ಗೆ ಸಾಹಿರಾಳೊಂದಿಗೆ ಜಗಳ ಮಾಡಿದ ಆರೋಪಿ ಪೂವಯ್ಯ ಕುತ್ತಿಗೆ ಮತ್ತು ಕಂಕುಳ ಭಾಗಕ್ಕೆ ಚಾಕುವಿನಿಂದ ತಿವಿದು ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯನ್ನು ಮಕ್ಕಳು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಸಾಹಿರಾ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಅಯ್ಯಪ್ಪ, ಡಿವೈಎಸ್‌ಪಿ ಗಂಗಾಧರಪ್ಪ, ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಪೂವಯ್ಯ ವಿವಾಹಿತನಾಗಿದ್ದು, ಈತನಿಗೆ ಎರಡು ಗಂಡು ಮಕ್ಕಳಿದ್ದಾರೆ.