ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗುಂಡೇನಟ್ಟಿ ಗ್ರಾಮದಲ್ಲಿ ನಡೆದ ಘಟನೆ, ಗ್ರಾಮದ ನಿವಾಸಿ ಸಬಾ ಮುಜಾವುದ್ದೀನ ಮುಜಾವರ ಮೃತ ಮಹಿಳೆ.
ಖಾನಾಪುರ(ಜು.13): ಪತಿ ಹಾಗೂ ಅತ್ತೆಯ ಮನೆಯವರ ಕಿರುಕುಳದಿಂದ ಮನನೊಂದ ವಿವಾಹಿತೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗುಂಡೇನಟ್ಟಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ರಾಮದ ನಿವಾಸಿ ಸಬಾ ಮುಜಾವುದ್ದೀನ ಮುಜಾವರ (26) ಮೃತ ಮಹಿಳೆ.
ಮೃತ ಸಬಾಳ ಪತಿ ಹಾಗೂ ಅತ್ತೆಯ ಮನೆಯವರು ಆಕೆಗೆ ನಿರಂತರವಾಗಿ ಕಿರುಕಳ ನೀಡುತ್ತಿದ್ದ ಕಾರಣ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಪತಿ ಮುಜಾವುದ್ದೀನ್, ಅತ್ತೆ ದಿಲಶಾದ್, ಮಾವ ಶಬ್ಬೀರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಬಾ ಅವರ ತಾಯಿ ಬಸೇರಾ ಸಾಹೇಬಖಾನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಡಿದ ಮತ್ತಿನಲ್ಲಿ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ
ಶಿಂಬೋಲಿ ಜಲಪಾತದಲ್ಲಿ ಇಳಿದಿದ್ದ ಯುವಕ ನಾಪತ್ತೆ
ಖಾನಾಪುರ: ತನ್ನ ಐದಾರು ಸ್ನೇಹಿತರೊಂದಿಗೆ ತಾಲೂಕಿನ ಚೋರ್ಲಾ ಗ್ರಾಮದ ಬಳಿಯ ಶಿಂಬೋಲಿ ಜಲಪಾತ ವೀಕ್ಷಣೆಗೆ ತೆರಳಿದ್ದ ಬೆಳಗಾವಿಯ ಪೀರನವಾಡಿ ಮೂಲದ ಯುವಕನೋರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಬುಧವಾರ ಸಂಭವಿಸಿದೆ.
ಪೀರನವಾಡಿ ಬಳಿಯ ಹುಂಚೇನಟ್ಟಿನಿ ವಾಸಿ ಹಯಾಜ್ ಪಠಾಣ (19) ನಾಪತ್ತೆಯಾದ ಯುವಕ. ಜಲಪಾತ ವೀಕ್ಷಣೆಗೆ ಬಂದಿದ್ದ ಮತ್ತೋರ್ವ ಯುವಕನೂ ನೀರು ಪಾಲಾಗಿರುವ ಶಂಕೆಯಿದ್ದು, ಪರಿಣಿತರ ತಂಡ ಜಲಪಾತ ಹಾಗೂ ಅಕ್ಕಪಕ್ಕದ ಪ್ರದೇಶದಲ್ಲಿ ಶೋಧಕಾರ್ಯ ಕೈಗೊಂಡಿದೆ. ಖಾನಾಪುರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ.