ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ರೀತಿಯಲ್ಲಿ ನಿಮ್ಮ ಮಕ್ಕಳಿಗೂ ಟಿವಿ ಶೋಗಳಲ್ಲಿ ಟ್ಯಾಲೆಂಟ್ ಪ್ರದರ್ಶನಕ್ಕೆ ಚಾನ್ಸ್ ಕೊಡಿಸೋದಾಗಿ ಮಹಿಳೆಯೊಬ್ಬರು ಲಕ್ಷಾಂತರ ಹಣ ಪಡೆದು ವಂಚನೆ ಮಾಡಿದ್ದಾರೆ.
ಬೆಂಗಳೂರು (ಜು.13): ಸಾಮಾನ್ಯವಾಗಿ ಟಿವಿಯ ಹಲವು ಶೋಗಳನ್ನು ಮಕ್ಕಳು ಡ್ಯಾನ್ಸ್, ಹಾಡು ಹಾಗೂ ಇತರೆ ಚಟಿವಟಿಕೆಗಳನ್ನು ನೋಡಿ ನಮ್ಮ ಮಕ್ಕಳೂ ಕೂಡ ಟಿವಿಯಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ತಂದೆ ತಾಯಿಯರೇ ಎಚ್ಚರ.. ಇಲ್ಲಿ ಮಾಸ್ಟರ್ ಆನಂದ್ ಪುತ್ರಿ ವಂಶಿಕಾಗೆ ಚಾನ್ಸ್ ಕೊಡಿಸಿದ ರೀತಿಯಲ್ಲಿಯೇ ನಿಮ್ಮ ಮಕ್ಕಳಿಗೂ ಟಿವಿ ಕಾರ್ಯಕ್ರಮಗಳನ್ನು ಟ್ಯಾಲೆಂಟ್ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡುವುದಾಗಿ ವಂಚನೆ ಮಾಡುತ್ತಿದ್ದ ನಕಲಿ ಗ್ಯಾಂಗ್ ಪತ್ತೆಯಾಗಿದೆ. ಇನ್ನು ಮಾಡೆಲಿಂಗ್ ನಿಶಾ ಖಾಸಗಿ ಚಾನೆಲ್ ನೆಪದಲ್ಲಿ ಪೋಷಕರ ಬಳಿ ಲಕ್ಷಾಂತರ ರೂ. ಪಡೆದು ವಂಚನೆ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ.
ಬೆಂಗಳೂರಿನಲ್ಲಿ ಆಕ್ಟಿಂಗ್ ಹಾಗೂ ಮಕ್ಕಳ ಪೋಟೋ ಶೂಟ್ ಹೆಸರಲ್ಲಿ ವಂಚನೆ ಮಾಡುತ್ತಿದ್ದ ಮಹಿಳೆಯನ್ನು ನಿಶಾ ನರಸಪ್ಪ ಎಂದು ಗುರುತಿಸಲಾಗಿದೆ. ಮಾಸ್ಟರ್ ಆನಂದ್ ಮಗಳು ವಂಶಿಕ ಹೆಸರು ಬಳಸಿ ವಂಚನೆ ಮಾಡುತ್ತಿದ್ದಳು. ಈ ಬಗ್ಗೆ ಸದಾಶಿವನಗರ ಠಾಣೆಯಲ್ಲಿ ವಂಶಿಕ ತಾಯಿ ಯಶಸ್ವಿನಿ ಆನಂದ್ ದೂರು ದಾಖಲಿಸಿದ್ದಾರೆ. ಮೋಸ ಹೋದ ಪೋಷಕರಿಂದಲೂ ವಂಚನೆ ಮಾಡುತ್ತಿದ್ದ ಮಹಿಳೆ ನಿಶಾ ವಿರುದ್ಧ ಸದಾಶಿವನಗರ ಠಾಣೆಗೆ ದೂರು ದಾಖಲು ಮಾಡಲಾಗಿದೆ.
undefined
ಟೊಮ್ಯಾಟೊ ಬೆಲೆ 100 ರೂ. ಗಡಿ ದಾಟಲು ಕಾರಣ ಬಹಿರಂಗ: ಇನ್ನೂ 2 ತಿಂಗಳು ಕಡಿಮೆಯಾಗೋಲ್ಲ
ಮಕ್ಕಳಿಗೆ ಚಾನ್ಸ್ ಕೊಡಿಸೋದಾಗಿ ವಂಚನೆ: ಕಿರುತೆರೆ ನಟ ಮಾಸ್ಟರ್ ಆನಂದ್ ಪುತ್ರಿ ಹಾಗೂ ಬಾಲ ನಟಿ ವಂಶಿಕಾ ಹೆಸರು ದುರುಪಯೋಗ ಆರೋಪ ಮಾಡಲಾಗಿದೆ. ಜಾಹೀರಾತು (ಆ್ಯಡ್) ಶೂಟ್, ಟಿವಿ ಕಾರ್ಯಕ್ರಮಗಳು, ಮಕ್ಕಳ ಟ್ಯಾಲೆಂಟ್ ಶೋ ಹಾಗೂ ಖಾಸಗಿ ಚಾನಲ್ ನಲ್ಲಿ ಟ್ಯಾಲೆಂಟ್ ಶೋ ನೆಪದಲ್ಲಿ ವಂಚನೆ ಮಾಡಲಾಗುತ್ತಿತ್ತು. ನಿಮ್ಮ ಮಕ್ಕಳಿಗೂ ಚಾನ್ಸ್ ಕೊಡಿಸುವುದಾಗಿ ನೂರಾರು ಪೋಷಕರಿಗೆ ಈ ಮಹಿಳೆ ಲಕ್ಷಾಂತರ ರೂಪಾಯಿ ಹಣವನ್ನು ಪಡೆದು ವಂಚನೆ ಮಾಡಿದ್ದಾಳೆ. ಪೋಷಕರಿಂದ ಲಕ್ಷ ಲಕ್ಷ ಪಡೆದು ವಂಚನೆ ಆರೋಪದಿಂದ ಈಗ ಜೈಲು ಪಾಲಾಗುವ ಭೀತಿಯಲ್ಲಿದ್ದಾಳೆ.
ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಮಾಸ್ಟರ್ ಆನಂದ್ ಪತ್ನಿಯಿಂದ ದೂರು: ಇನ್ನು ಸದಾಶಿವ ಪೊಲೀಸ್ ಠಾಣೆಯ ಪೊಲೀಸರಿಗೆ ಲಕ್ಷಾಂತರ ರೂಪಾಯಿ ಹಣ ಕೊಟ್ಟು ವಂಚನೆಗೆ ಒಳಗಾದ ಪೋಷಕರು ನಿಶಾಳನ್ನು ಹಿಡಿದುಕೊಟ್ಟಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಮಾತ್ರವಲ್ಲದೇ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿಯಿಂದಲೂ ದೂರು ದಾಖಲಾಗಿದ್ದರಿಂದ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ನನ್ನ ಮಗಳು ವಂಶಿಕಾ ಹೆಸರು ದೂರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಯಶಸ್ವಿನಿ ಆನಂದ್ ದೂರು ನೀಡಿದ್ದಾರೆ. ಮತ್ತೊಂದೆಡೆ ವಂಚನೆಗೊಳಗದ ಮತ್ತೊಂದು ಮಗುವಿನ ತಾಯಿ ಗೀತಾ ಕೂಡ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿತೆ ನಿಶಾಳನ್ನು ಸದಾಶಿವನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.