ಇವ್ರು ಏನು ಕುಡಿದಿದ್ರೋ ಏನೋ! ಸ್ಮಶಾನಕ್ಕೆ ಹೋಗಿ ಮೃತ ಯುವತಿಯ ಮಾಂಸವನ್ನೇ ತಿಂದ ಕುಡುಕರು

By BK Ashwin  |  First Published Jul 13, 2023, 6:55 PM IST

ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಬಡಸಾಹಿ ಬ್ಲಾಕ್‌ನ ದಂಟುನಿಬಿಂಧಾ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗಿ ಯುವತಿಯ ಮಾಂಸವನ್ನು ಇಬ್ಬರು ಪುರುಷರು ಸೇವಿಸಿದ್ದಾರೆ.


ಮಯೂರ್‌ಭಂಜ್‌ (ಜುಲೈ 13, 2023): ಮದ್ಯವು ಹಲವಾರು ಸಮಸ್ಯೆಗಳಿಗೆ ಮೂಲ ಕಾರಣ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ ಏಕೆಂದರೆ ಇದು ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಗುರುತು ಹಿಡಿಯುವ ಜನರ ಸಾಮರ್ಥ್ಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಆದರೂ, ಒಡಿಶಾದಲ್ಲಿ ನಾವು ಹೇಳಲು ಹೊರಟಿರುವ ಘಟನೆ ಮಾತ್ರ ತೀರಾ ವಿಚಿತ್ರವಾದದ್ದು. ಅವರು ಎಷ್ಟರ ಮಟ್ಟಿಗೆ ಕುಡಿದ ಮತ್ತಲ್ಲಿದ್ರೋ ಏನೋ? ಸ್ಮಶಾನದಿಂದ ಸಂಗ್ರಹಿಸಲಾದ ಮೃತ ಯುವತಿಯ ಮಾಂಸವನ್ನು ಇಬ್ಬರು ಪುರುಷರು ಸೇವಿಸಿದ್ದಾರೆ ಎನ್ನಲಾದ ಘಟನೆ ಒಡಿಶಾದಲ್ಲಿ ವರದಿಯಾಗಿದೆ. 

ಹೌದು, ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಬಡಸಾಹಿ ಬ್ಲಾಕ್‌ನ ದಂಟುನಿಬಿಂಧಾ ಗ್ರಾಮದಲ್ಲಿ ಆಘಾತಕಾರಿ ಘಟನೆ ವರದಿಯಾಗಿದೆ. ಬಡಸಾಹಿ ಪೊಲೀಸ್ ಠಾಣಾ ವ್ಯಾಪ್ತಿಯ ಬಂಧಸಾಹಿ ಗ್ರಾಮದ ಬಳಿ ಮಂಗಳವಾರ ಈ ಘಟನೆ ನಡೆದಿದ್ದು, ಈ ಪ್ರದೇಶದ ಜನರನ್ನು ಬೆಚ್ಚಿ ಬೀಳಿಸಿದೆ. ದಂಟುನಿ ಗ್ರಾಮದ ಸುಂದರ್ ಮೋಹನ್ ಸಿಂಗ್ (58) ಮತ್ತು ನರೇಂದ್ರ ಸಿಂಗ್ (25) ಎಂದು ಗುರುತಿಸಲಾಗಿರುವ ಇಬ್ಬರನ್ನು ಪೊಲೀಸರು ಈ ಸಂಬಂಧ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

Tap to resize

Latest Videos

ಇದನ್ನು ಓದಿ: ಬಾಯ್‌ಫ್ರೆಂಡ್‌ ಜತೆಗಿದ್ದ ಯುವತಿಯ ವಿಡಿಯೋ ರೆಕಾರ್ಡ್‌: ಪೊಲೀಸ್‌ ಎಂದು ಬ್ಲ್ಯಾಕ್‌ಮೇಲ್‌ ಮಾಡಿ, ರೇಪ್‌ ಮಾಡಿದ ಪಾಪಿ!

ಅನಾರೋಗ್ಯದಿಂದ ಮೃತಪಟ್ಟ 25 ವರ್ಷದ ಯುವತಿಯ ಶವವನ್ನು ಗ್ರಾಮಸ್ಥರು ಅಂತ್ಯಕ್ರಿಯೆ ನಡೆಸಲು ಸ್ಮಶಾನಕ್ಕೆ ಕೊಂಡೊಯ್ದಿದ್ದಾರೆ. ಅರ್ಧ ಸುಟ್ಟ ದೇಹದ ದೊಡ್ಡ ತುಂಡನ್ನು ಇಬ್ಬರು ವ್ಯಕ್ತಿಗಳು ತೆಗೆದುಕೊಂಡು ಹೋಗಿ ಸೇವಿಸಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆ. ಈ ಘಟನೆಯ ಬಗ್ಗೆ ಗ್ರಾಮಸ್ಥರಿಗೆ ತಿಳಿದ ನಂತರ ಅವರು ಇಬ್ಬರೂ ಆರೋಪಿಗಳನ್ನು ಬರ್ಬರವಾಗಿ ಥಳಿಸಿದ್ದಾರೆ. ನಂತರ ಗ್ರಾಮಸ್ಥರು ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದೂ ತಿಳಿದುಬಂದಿದೆ.

ಈ ಸಂಬಂಧ ಈ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಘಟನೆಯ ಕುರಿತು ಪೊಲೀಸ್ ಸಿಬ್ಬಂದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು, ಈ ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿ ಲಾಬಾ ಸಿಂಗ್, "ದೇಹದ ಕೆಲವು ಭಾಗವು ಸಂಪೂರ್ಣವಾಗಿ ಸುಟ್ಟುಹೋಗಿಲ್ಲ ಎಂದು ಇಬ್ಬರೂ ಗಮನಿಸಿದರು. ನಂತರ, ಅವರು ಮಾಂಸವನ್ನು ಕೆಲವು ತುಂಡುಗಳಾಗಿ ಕತ್ತರಿಸಿ, ಅದನ್ನು ಮತ್ತೆ ಚಿತೆಗೆ ಎಸೆಯಲು ತಿಳಿಸಲಾಯಿತು ಮತ್ತು ಅವರು ಕೆಲವು ತುಂಡುಗಳನ್ನು ತೆಗೆದುಕೊಂಡು ಅದನ್ನು ಸೇವಿಸಿದರು’’ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಬರೋಬ್ಬರಿ 17 ವರ್ಷಗಳ ಬಳಿಕ ಮಹಿಳೆಯ ಕೊಲೆ ಪ್ರಕರಣದ ಹಂತಕನ ಪತ್ತೆ ಹಚ್ಚಿದ ಪೊಲೀಸರು!

ಕುಡಿದ ಅಮಲಿನಲ್ಲಿ ಕೃತ್ಯ ಎಸಗಿದವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಹಾಗೂ, ಆರೋಪಿಗಳಲ್ಲಿ ಒಬ್ಬನನ್ನು ಮಾಂತ್ರಿಕ ಎಂದು ಹೇಳಲಾಗಿದ್ದು, ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ ಎಂದೂ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಮಹಿಳೆಯ ಬರ್ಬರ ಕೊಲೆ: ದೇಹ ಪೀಸ್‌ ಪೀಸ್‌ ಮಾಡಿ ಫ್ಲೈಓವರ್‌ ಬಳಿ ಎಸೆದ ಪಾಪಿ!

click me!