ಪದೇ ಪದೇ ಮೂಗು ತೂರಿಸುತ್ತಿದ್ದ ಅತ್ತೆಯ ಮೂಗನ್ನೇ ಕತ್ತರಿಸಿ ಪರಾರಿಯಾದ ಅಳಿಯ, ಹುಡುಕಾಟ ಶುರು

Published : Mar 08, 2026, 07:50 PM IST
shocking crime stories Rajasthan

ಸಾರಾಂಶ

ಪದೇ ಪದೇ ಮೂಗು ತೂರಿಸುತ್ತಿದ್ದ ಅತ್ತೆಯ ಮೂಗನ್ನೇ ಕತ್ತರಿಸಿ ಪರಾರಿಯಾದ ಅಳಿಯ, ಹುಡುಕಾಟ ಶುರುವಾಗಿದೆ. ಅತ್ತೆಯ ಮಧ್ಯಪ್ರವೇಶದಿಂದ ಗಂಡ ಹೆಂಡತಿ ದೂರವಾಗಿದ್ದರು. ಅತ್ತೆಯನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಜಾಲೋರ್ (ಮಾ.08) ಗಂಡ ಹೆಂಡತಿ ನಡುವೆ ಅತ್ತೆಯರು ಮಧ್ಯಪ್ರವೇಶಿಸ ಸಂಸಾರದಲ್ಲಿ ಕೋಲಾಹಲ ಎದ್ದ ಹಲವು ಘಟನೆಗಳಿವೆ. ಹಲವು ಬಾರಿ ಹೊಡೆದಾಟ, ಬಡಿದಾಟವು ನಡೆದಿದೆ. ಇದೀಗ ಹೆಂಡತಿಯ ಅತ್ತೆಯ ವಿಪರೀತ ಮಧ್ಯಪ್ರವೇಶದಿಂದ ಸಂಸಾರ ಮುರಿದು ಬಿದ್ದಿದೆ. ಗಂಡ ಹಾಗೂ ಹೆಂಡತಿ ಬೇರೆ ಬೇರೆಯಾಗಿದ್ದಾರೆ. ಆದರೆ ಪ್ರತಿ ವಿಷಯಕ್ಕೆ ಮೂಗು ತೂರಿಸುತ್ತಿದ್ದ ಪತ್ನಿಯ ತಾಯಿ ವಿರುದ್ದ ಆಕ್ರೋಶ ಹೆಚ್ಚಾಗಿತ್ತು. ಪರಿಣಾಮ ಮೂಗು ತೂರಿಸುತ್ತಿದ್ದ ಅತ್ತೆಯ ಮೂಗನ್ನೇ ಕತ್ತರಿಸಿ ಪರಾರಿಯಾದ ಘಟನೆ ರಾಜಸ್ಥಾನದ ಜಾಲೋರ್‌ನಲ್ಲಿ ನಡೆದಿದೆ. ಈತ ಅತ್ತೆ ಮೇಲೆ ದಾಳಿ ಮಾಡಿ ಮೂಗು ಕತ್ತರಿಸಿದ್ದುಮಾತ್ರವಲ್ಲ, ಮೂಗಿನ ತುಂಡಿನ ಜೊತೆ ಪರಾರಿಯಾಗಿದ್ದಾನೆ. ಇದೀಗ ಪೊಲೀಸರು ಈತನಿಗೆ ಹುಡುಕಾಟ ನಡೆಸುತ್ತಿದ್ದರೆ, ಅತ್ತೆಯನ್ನು ಆಸ್ಪತ್ಪೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅತ್ತೆಯಿಂದ ಸಂಸಾರದಲ್ಲಿ ಬಿರುಕು

ದುಂಗರಿಕಿ ಬಂದಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸೋಹನ್‌ಲಾಲ್ ಅನ್ನೋ ವ್ಯಕ್ತಿ 6 ವರ್ಷದ ಹಿಂದೆ ಮದುವೆಯಾಗಿದ್ದಾನೆ. ಮದುವೆಯಾದ ಬಳಿಕ ಪತ್ನಿಯ ತಾಯಿ ತನ್ನ ಸಂಸಾರದ ಮಧ್ಯಪ್ರವೇಶಿಸುತ್ತಿದ್ದಾರೆ ಅನ್ನೋ ಅಸಮಾಧಾನ, ಆಕ್ರೋಶ ಸೋಹನ್‌ಲಾಲ್‌ಗೆ ಕಾಡಿತ್ತು. ಪ್ರತಿ ವಿಚಾರವನ್ನು ಪತ್ನಿ ತನ್ನ ತಾಯಿ ಬಳಿ ಹೇಳುತ್ತಿದ್ದರೆ, ಅತ್ತೆ ನೇರವಾಗಿ ಇವರ ಸಂಸಾರದ ನಡುವೆ ಮೂಗು ತೂರಿಸುತ್ತಿದ್ದರು. ಇದು ಸೋಹನ್‌ಲಾಲ್ ಆಕ್ರೋಶಕ್ಕೆ ಕಾರಣವಾಗಿತ್ತು. ಕೊನೆಗೆ ಅತ್ತೆಯಿಂದಲೇ ಗಂಡ ಹೆಂಡತಿ ಇಬ್ಬರು ಬೇರೆಯಾಗಿದ್ದಾರೆ. ಕಳೆದ ಒಂದು ವರ್ಷದಿಂದ ಸೋಹನ್‌ಲಾಲ್ ಹಾಗೂ ಆತನ ಪತ್ನಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ಇದಕ್ಕೆ ಕಾರಣ ಪತ್ನಿಯ ಅತ್ತೆ ಅನ್ನೋದು ಸೋಹನ್‌ಲಾಲ್ ಆರೋಪವಾಗಿತ್ತು.

ಇನ್ನು ಕುಟುಂಬದ ಹಿರಿಯರು, ಸಮುದಾಯದ ಹಿರಿಯರ ನಡುವೆ ಪಂಚಾಯಿತಿ ನಡೆದರೂ ಪತ್ನಿ ಮರಳಿ ಬರಲಿಲ್ಲ. ಇದಕ್ಕೆ ಅತ್ತೆ ಒಪ್ಪಲಿಲ್ಲ ಅನ್ನೋದು ಸೋಹನ್‌ಲಾಲ್ ಮತ್ತೊಂದು ಆರೋಪ. ಮಗಳ ತೆಲೆಗೆ ಬೇಡದ್ದು ತುಂಬಿ ಸಂಸಾರ ನಡೆಸಲು ಅಡ್ಡಿಯಾಗಿದ್ದಾರೆ ಎಂಬ ಆಕ್ರೋಶ ಸೋಹನ್‌ಲಾಲ್‌ಗೆ ಹೆಚ್ಚಾಗಿತ್ತು. ತನ್ನ ಸಂಸಾರದಲ್ಲಿ ಮೂಗು ತೂರಿಸಿ ಸಂಸಾರವನ್ನೇ ಬೀದಿಗೆ ತಂದ ಅತ್ತೆಗೆ ಒಂದು ಗತಿ ಕಾಣಿಸಲು ಸೋಹನ್‌ಲಾಲ್ ಮುಂದಾಗಿದ್ದಾರೆ.

ಅತ್ತೆ ಮೂಗನ್ನೇ ಕತ್ತರಿಸಿದ ಅಳಿಯ

ಕಾದು ಕುಳಿತ ಸೋಹನ್‌ಲಾಲ್ ಅತ್ತೆ ಮನೆಗೆ ತೆರಳಿ ನೇರವಾಗಿ ಅತ್ತೆ ಮೇಲೆ ದಾಳಿ ಮಾಡಿದ್ದಾನೆ. ಹರಿತವಾಗ ಆಯುದ್ಧದಿಂದ ಸಂಸಾರದಲ್ಲಿ ಮೂಗು ತೂರಿಸಿದ ಮೂಗನ್ನೇ ಕತ್ತರಿಸಿದ್ದಾನೆ. ಕಿರುಚಾಡುತ್ತಿದ್ದಂತೆ ಅತ್ತೆಯ ಕತ್ತರಿಸಿದ ಮೂಗು ಹಿಡಿದು ಪರಾರಿಯಾಗಿದ್ದಾನೆ. ಬೇರೊಬ್ಬರ ಸಂಸಾರದಲ್ಲಿ ಮೂಗು ತೂರಿಸಿದರೆ ಇದೇ ಶಿಕ್ಷೆ ಎಂದು ಕೂಗಿಕೊಂಡು ಪರಾರಿಯಾಗಿದ್ದಾನೆ.

ಪ್ರರಕರಣದ ದಾಖಲಿಸಿಕೊಂಡ ಪೊಲೀಸರು ಸೋಹನ್‌ಲಾಲ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇತ್ತ ಅತ್ತೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ವಾಮಿ ಅವಿಮುಕ್ತೇಶ್ವರಾನಂದ ವಿರುದ್ಧ ಕೇಸ್ ದಾಖಲಿಸಿದ ಅಶುತೋಷ್ ವಿರುದ್ಧ ಚಲಿಸುವ ರೈಲಿನಲ್ಲಿ ಹಲ್ಲೆ
Bengaluru: ಇನ್‌ಸ್ಟಾಗ್ರಾಂ ಪ್ರೀತಿ, ಆಮೇಲೆ ವಿಕೃತಿ: ಪ್ರೇಯಸಿ, ಆಕೆಯ ಪೋಷಕರಿಗೂ ಬೆಂಕಿ ಹಚ್ಚಿದ ಪಾಪಿ!