ಇಂಟರ್ನೆಟ್‌ನಲ್ಲಿ ಮೂರು ನಾಲ್ಕು ಕರೆ ಬಂದಿರೋದು ನಿಜ, ಈ ಬಗ್ಗೆ ನಾವು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ: ಮಂಗಳೂರು ಎಸ್‌ಪಿ ಶಶಿಕುಮಾರ್
ಮಂಗಳೂರು(ಆ.09): ವಿಎಚ್ ಪಿ ಕಾರ್ಯಕರ್ತನ ಕೊಲೆಗೆ ಸಂಚು ರೂಪಿಸಿ ಅಪರಿಚಿತರು ಬೈಕ್ ನಲ್ಲಿ ಹಿಂಬಾಲಿಸಿದ್ದಾರೆ ಎಂಬ ದೂರಿನ ಬಗ್ಗೆ ಮಂಗಳೂರು ಕಮಿಷನರ್ ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ದೂರುದಾರರಿಗೆ ಇಂಟರ್ನೆಟ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೆದರಿಕೆ ಒಡ್ಡಲಾಗಿದೆ ಎಂದು ಹೇಳಿದ್ದಾರೆ.
ಇಂದು(ಮಂಗಳವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು, ಕಂಕನಾಡಿ ಠಾಣೆಯಲ್ಲಿ ನಿನ್ನೆ(ಸೋಮವಾರ) ಬೆಳಿಗ್ಗೆ ಪ್ರಕರಣ ದಾಖಲಾಗಿದೆ. 28 ವರ್ಷದ ವ್ಯಕ್ತಿ ಇಂಟರ್ ನೆಟ್ ಕರೆ ಮತ್ತು ಬೈಕ್ ನಲ್ಲಿ ಫಾಲೋ ಮಾಡಿದ ಬಗ್ಗೆ ದೂರು ಕೊಟ್ಟಿದ್ದಾರೆ. ಇಂಟರ್ನೆಟ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೆದರಿಕೆ ಒಡ್ಡಲಾಗಿದೆ. ಇಂಟರ್ನೆಟ್ ಕಾಲ್ ಬಂದಿರೋದು ನಿಜ, ಅದರಲ್ಲಿ ಬೈದಿದ್ದಾರೆ. ಆದರೆ ಫಾಲೋ ಮಾಡಿದವರು ಝೊಮೋಟೋ ಡೆಲಿವರಿ ಬಾಯ್. ಈ ಬಗ್ಗೆ ಸಿಸಿ ಕ್ಯಾಮರಾ ಕೂಡ ಪರಿಶೀಲಿಸಿ ದೂರು ಕೊಟ್ಟವರಿಗೆ ಮಾಹಿತಿ ಕೊಡಲಾಗಿದೆ. ಸದ್ಯದ ಅಹಿತಕರ ಪರಿಸ್ಥಿತಿ ನೋಡಿ ಅವರು ಆತಂಕಕ್ಕೆ ಒಳಗಾಗಿದ್ದಾರೆ. ಅವರಿಗೆ ಇಂಟರ್ನೆಟ್ ನಲ್ಲಿ ಮೂರು ನಾಲ್ಕು ಕರೆ ಬಂದಿರೋದು ಹೌದು. ಹಾಗಾಗಿ ಈ ಬಗ್ಗೆ ನಾವು ಪ್ರಕರಣ ದಾಖಲಿಸಿ ತನಿಖೆ ನಡೆಸ್ತಾ ಇದೀವಿ. ಪಂಪ್ ವೆಲ್ ನಿಂದ ಹೋಗುವ ವೇಳೆ ಫಾಲೋ ಮಾಡಿದಂತೆ ಅನಿಸ್ತು ಅಂದಿದ್ದಾರೆ. ಅವರಿಗೆ ಇಂಟರ್ನೆಟ್ ಕರೆ ಕೂಡ ಬಂದಿದ್ದ ಕಾರಣ ಸಾಮಾನ್ಯವಾಗಿ ಅವರಿಗೆ ಆತಂಕ ಇತ್ತು. ಆದರೆ ಅವರನ್ನು ಯಾರೂ ಫಾಲೋ ಮಾಡಿಲ್ಲ, ಅವರಿಗೆ ಈ ಬಗ್ಗೆ ತಿಳಿಸಲಾಗಿದೆ. ಅವಾಚ್ಯ ಶಬ್ದಗಳಲ್ಲಿ ನಿಂದಿಸಿ ಬೆದರಿಕೆ ಹಾಕಿದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಇಂಟರ್ ನೆಟ್ ಕಾಲ್ ಆದ ಕಾರಣ ನಾವು ಪ್ರಕರಣ ದಾಖಲಿಸಿ ತನಿಖೆ ಮಾಡ್ತಾ ಇದೀವಿ. ನಮಗೆ ನೊಂದವರು ಮತ್ತು ಆರೋಪಿಗಳ ಸಂಬಂಧ ಅಷ್ಟೇ ಮುಖ್ಯ. ಇದರಲ್ಲಿ ಸಂಘಟನೆ ಮತ್ತೊಂದು ಅನ್ನೋ ಬಗ್ಗೆ ನಮಗೆ ಅವಶ್ಯಕತೆ ಇಲ್ಲ. ಉಳ್ಳಾಲದಲ್ಲಿ ಮೊನ್ನೆ ನಡೆದ ಹಲ್ಲೆ ಯತ್ನ ಸುಳ್ಳು ಮಾಹಿತಿ. ಈ ಬಗ್ಗೆ ಸುದ್ದಿ ಹಬ್ಬಿಸಿದ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಯಾವುದೇ ಸುಳ್ಳು ಸುದ್ದಿ ಹಬ್ಬಿಸಬೇಡಿ, ಏನೇ ಇದ್ದರೂ ಪೊಲೀಸ್ ಇಲಾಖೆ ಬಳಿ ಸ್ಪಷ್ಟನೆ ಕೇಳಿ ಅಂತ ಹೇಳಿದ್ದಾರೆ.
ಮಂಗಳೂರು: 5 ದಶಕದಲ್ಲಿ ದಕ್ಷಿಣ ಕನ್ನಡದಲ್ಲಿ 40ಕ್ಕೂ ಹೆಚ್ಚು ಕೋಮು ಹತ್ಯೆ
ಪಂಪ್ ವೆಲ್ ನಿಂದ ಹೋಗುವ ವೇಳೆ ಫಾಲೋ ಮಾಡಿದಂತೆ ಅನಿಸ್ತು ಅಂದಿದ್ದಾರೆ. ಅವರಿಗೆ ಇಂಟರ್ನೆಟ್ ಕರೆ ಕೂಡ ಬಂದಿದ್ದ ಕಾರಣ ಸಾಮಾನ್ಯವಾಗಿ ಅವರಿಗೆ ಆತಂಕ ಇತ್ತು. ಆದರೆ ಅವರನ್ನು ಯಾರೂ ಫಾಲೋ ಮಾಡಿಲ್ಲ, ಅವರಿಗೆ ಈ ಬಗ್ಗೆ ತಿಳಿಸಲಾಗಿದೆ. ಅವಾಚ್ಯ ಶಬ್ದಗಳಲ್ಲಿ ನಿಂದಿಸಿ ಬೆದರಿಕೆ ಹಾಕಿದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಇಂಟರ್ ನೆಟ್ ಕಾಲ್ ಆದ ಕಾರಣ ನಾವು ಪ್ರಕರಣ ದಾಖಲಿಸಿ ತನಿಖೆಯನ್ನ ನಡೆಸುತ್ತಿದ್ದೇವೆ. ನಮಗೆ ನೊಂದವರು ಮತ್ತು ಆರೋಪಿಗಳ ಸಂಬಂಧ ಅಷ್ಟೇ ಮುಖ್ಯ. ಇದರಲ್ಲಿ ಸಂಘಟನೆ ಮತ್ತೊಂದು ಅನ್ನೋ ಬಗ್ಗೆ ನಮಗೆ ಅವಶ್ಯಕತೆ ಇಲ್ಲ. ಉಳ್ಳಾಲದಲ್ಲಿ ಮೊನ್ನೆ ನಡೆದ ಹಲ್ಲೆ ಯತ್ನ ಸುಳ್ಳು ಮಾಹಿತಿಯಾಗಿದೆ. ಈ ಬಗ್ಗೆ ಸುದ್ದಿ ಹಬ್ಬಿಸಿದ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಯಾವುದೇ ಸುಳ್ಳು ಸುದ್ದಿ ಹಬ್ಬಿಸಬೇಡಿ, ಏನೇ ಇದ್ದರೂ ಪೊಲೀಸ್ ಇಲಾಖೆ ಬಳಿ ಸ್ಪಷ್ಟನೆ ಕೇಳಿ ಅಂತ ಮನವಿ ಮಾಡಿದ್ದಾರೆ.
ಪ್ರಕರಣ ಏನು?
ದೂರು ನೀಡಿದ ವ್ಯಕ್ತಿ ವಿಶ್ವ ಹಿಂದೂ ಪರಿಷತ್ ನಲ್ಲಿ ಸಕ್ರೀಯ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡಿದ್ದು, ಅಗಸ್ಟ್ 2 ರಂದು ಮತ್ತು ಅಗಸ್ಟ್ 5 ರಂದು ರಾತ್ರಿ ಮನೆಗೆ ಬರುವ ಸಮಯ ಬಜ್ಜೋಡಿ-ಬಿಕರ್ನಕಟ್ಟೆ ರಸ್ತೆಯಲ್ಲಿ ನನ್ನ ಕಾರನ್ನು ದ್ವಿಚಕ್ರ ವಾಹನಗಳಲ್ಲಿ ಅಪರಿಚಿತರು ಹಿಂಬಾಲಿಸುತ್ತಿದ್ದರು. ಅಗಸ್ಟ್ 7 ರಂದು ರಾತ್ರಿ ಸುಮಾರು 10.30 ಗಂಟೆಗೆ ಪಂಪ್‌ವೆಲ್ ನಿಂದ ಮನೆಗೆ ಹೊರಟಿದ್ದು, ಬಜ್ಜೋಡಿ ಬಿಕರ್ನಕಟ್ಟೆ ರಸ್ತೆಯಲ್ಲಿ ಅಪಾರ್ಟ್ ಮೆಂಟ್ ಕಡೆಗೆ ತಿರುಗಿಸುವಷ್ಟರಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿಕೊಂಡು ಬಂದ ಬೈಕ್ ಸವಾರರ ಬೈಕ್ ನನ್ನ ಕಾರಿಗೆ ಸ್ವಲ್ಪ ತಾಗಿದ್ದು, ಬಳಿಕ ಬೈಕ್ ಸವಾರರು ಅಲ್ಲಿಂದ ಹೋಗಿರುತ್ತಾರೆ. ಬಳಿಕ ಕಾರನ್ನು ಅಪಾರ್ಟ್ ಮೆಂಟ್ ಪಾರ್ಕಿಂಗ್ ನಲ್ಲಿ ನಿಲ್ಲಿಸಿ ಮನೆಗೆ ತಲುಪಿ ಗೆಳೆಯನಿಗೆ ಕರೆ ಮಾಡಿ ವಿಷಯ ತಿಳಿಸಿದ್ದೇನೆ. ಬಳಿಕ ರಾತ್ರಿ ಸುಮಾರು 11.43 ಗಂಟೆಗೆ ನನ್ನ ಮೊಬೈಲ್ ಗೆ +1 (661)748-0242 ನಂರ್‌ನಿಂದ ಕರೆ ಬಂದಿದೆ. ಕರೆಯಲ್ಲಿ ತುಳು ಮಿಶ್ರಿತ ಮುಸ್ಲಿಂ ಭಾಷೆಯಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿ ಇನಿ ತಪ್ಪಯ ಪಂಡ್ ದ್ ಖುಷಿ ಮಲ್ಪೋಡ್ಚಿ, ಗೊತ್ತುಂಡು, ನನ್ನ ಮೂಜಿ ಜನ ಪಂಪುವೆಲ್ ಡ್ ಉಲ್ಲೆರತ್ತಾ, ಬುಡ್ಪುಜಿ ಯಾನ್, ಕರ್ತಿನ ಬೇನೆ ಉಂಡು” ( ಈ ದಿನ ತಪ್ಪಿಸಿದ್ದಿ ಎಂದು ಖುಷಿ ಪಡಬೇಡ, ಗೊತ್ತಿದೆ, ಇನ್ನೂ ಮೂರು ಜನ ಪಂಪ್‌ವೆಲ್ ನಲ್ಲಿ ಇದ್ದಾರೆ, ನಾನು ಬಿಡುವುದಿಲ್ಲ, ಕೊಂದ ನೋವು ಇದೆ) ಎಂಬುದಾಗಿ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ 506, 507ನಡಿ ಎಫ್ ಐಆರ್ ದಾಖಲಾಗಿದೆ.