ಮಹಿಳೆ ಮೇಲೆ ಹಲ್ಲೆ ಪ್ರಕರಣ: ಬಿಜೆಪಿಯ ಶ್ರೀಕಾಂತ್‌ ತ್ಯಾಗಿ ಬಂಧಿಸಿದ ಪೊಲೀಸರು

By BK Ashwin  |  First Published Aug 9, 2022, 1:03 PM IST

ಉತ್ತರ ಪ್ರದೇಶದ ಶ್ರೀಕಾಂತ್‌ ತ್ಯಾಗಿಯನ್ನು ಉತ್ತರ ಪ್ರದೇಶ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಆರೋಪಯ ಜತೆಗೆ ಆತನ 3 ಸಹಚರರನ್ನು ಸಹ ಬಂಧಿಸಲಾಗಿದೆ. 


ಉತ್ತರ ಪ್ರದೇಶದ ಸ್ವಯಂಘೋಷಿತ ಬಿಜೆಪಿ ನಾಯಕ ಶ್ರೀಕಾಂತ್‌ ತ್ಯಾಗಿಯನ್ನು ಮೀರತ್‌ನಲ್ಲಿ ಬಂಧಿಸಲಾಗಿದೆ. ನೋಯ್ಡಾದ ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆಯೊಬ್ಬರನ್ನು ನಿಂದಿಸಿ, ಹಲ್ಲೆ ನಡೆಸಿದ್ದ ಆರೋಪ ಸಂಬಂಧ ಮಂಗಳವಾರ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಹಲ್ಲೆ ಮಾಡಿದ್ದ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಅವರು ತಲೆ ಮರೆಸಿಕೊಂಡಿದ್ದರು. ಇನ್ನು, ನಿನ್ನೆ ಅವರ ಮನೆಯ ಮೇಲೆ ಯುಪಿ ಸರ್ಕಾರ ಅವರ ಮನೆಯನ್ನು ಧ್ವಂಸಗೊಳಿಸಿತ್ತು. 

ಶ್ರೀಕಾಂತ್ ತ್ಯಾಗಿಯನ್ನು ಮೀರತ್‌ನಲ್ಲಿ ಬಂಧಿಸಿದ್ದರೆ, ತ್ಯಾಗಿ ಅವರ ಮೂವರು ಸಹಚರರನ್ನು ಕೂಡ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ಸಂಜೆಯಿಂದ ತಲೆಮರೆಸಿಕೊಂಡಿದ್ದ ತ್ಯಾಗಿ, ಶರಣಾಗತಿ ಸಂಬಂಧಿತ ಕಾರ್ಯವಿಧಾನಗಳ ಮನವಿಯೊಂದಿಗೆ ಗೌತಮ್ ಬುದ್ಧ ನಗರ ಜಿಲ್ಲೆಯ ನ್ಯಾಯಾಲಯದ ಮೊರೆ ಹೋಗಿದ್ದರು. ಇನ್ನು, ಈ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 10ಕ್ಕೆ ಪಟ್ಟಿ ಮಾಡಲಾಗಿದೆ.

Tap to resize

Latest Videos

ಸ್ವಯಂ ಘೋಷಿತ ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ ಅಕ್ರಮ ಕಟ್ಟಡ ನೆಲಸಮ, ವಿಡಿಯೋ ವೈರಲ್!

ಶುಕ್ರವಾರ ರಾತ್ರಿ ಶ್ರಿಕಾಂತ್‌ ತ್ಯಾಗಿ ಭೂಗತರಾಗುವವರೆಗೂ, ಅವರು ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದರು ಎಂದು ಹೇಳಿಕೊಂಡರು. ಆದರೆ, ಕೇಸರಿ ಪಕ್ಷವು ಅವರೊಂದಿಗೆ ಯಾವುದೇ ಸಂಬಂಧ ಹೊಂದಿರುವುದನ್ನು ನಿರಾಕರಿಸಿದ್ದಾರೆ. ಈ ವಿಚಾರವಾಗಿ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿವೆ. ನೋಯ್ಡಾದ ಹೌಸಿಂಗ್ ಸೊಸೈಟಿಯ ಕಾಮನ್‌ ಏರಿಯಾದಲ್ಲಿ ಗಿಡಗಳನ್ನು ನೆಡುವುದನ್ನು ಮಹಿಳೆ ವಿರೋಧಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಶ್ರಿಕಾಂತ್‌ ತ್ಯಾಗಿ ಆ ಮಹಿಳೆಯನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದರು. ನಂತರ ಮಹಿಳೆ ಮೇಲೆ ಹಲ್ಲೆ ಮಾಡಿದ್ದನ್ನು ಸಹ ಬಿಜೆಪಿ ನಾಯಕ ಸಮರ್ಥಿಸಿಕೊಂಡಿದ್ದರು. 

ಬುಲ್ಡೋಜರ್‌ ಬಳಸಿ ತೆರವು ಕಾರ್ಯ ನಡೆಸಿದ್ದ ಅಧಿಕಾರಿಗಳು..!
ಮಹಿಳೆಗೆ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಶ್ರೀಕಾಂತ್ ತ್ಯಾಗಿಗೆ ನೋಯ್ಡಾ ಅಧಿಕಾರಿಗಳು ಮಂಗಳವಾರ ಶಾಕ್ ನೀಡಿದ್ದರು. ಶ್ರೀಕಾಂತ್ ತ್ಯಾಗಿ ಮಾಲೀಕತ್ವದ  ಗ್ರ್ಯಾಂಡ್ ಓಮ್ಯಾಕ್ಸ್ ಕಾಂಪ್ಲೆಕ್ಸ್‌ ಅಕ್ರಮವಾಗಿದ್ದು, ಈ ಹಿನ್ನೆಲೆ ಅಧಿಕಾರಿಗಳು ಬುಲ್ಡೋಜರ್ ಬಳಸಿ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ವೇಳೆ ಅಧಿಕಾರಿಗಳು ಹಾಗೂ ತ್ಯಾಗಿ ಬೆಂಬಲಿಗರಿಂದ ತೀವ್ರ ವಾಗ್ವಾದ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ. ನೋಯ್ಡಾದ ಸೆಕ್ಟರ್ 93 ಬಿ ನಲ್ಲಿರುವ ಗ್ರ್ಯಾಂಡ್ ಓಮ್ಯಾಕ್ಸ್ ಕಾಂಪ್ಲೆಕ್ಸ್‌ ಅತಿಕ್ರಮ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು 2019ರಲ್ಲಿ ನೋಟಿಸ್ ನೀಡಿದ್ದರು. ಅಕ್ರಮ ಒತ್ತುವರಿ ಕುರಿತು ನೋಟಿಸ್ ನೀಡಲಾಗಿತ್ತು. ಆದರೆ ಶ್ರೀಕಾಂತ್ ತ್ಯಾಗಿ ತಮ್ಮ ಪ್ರಭಾವ ಬಳಸಿ ಕಟ್ಟಡ ತೆರವುಗೊಳಿಸಲು ಅಡ್ಡಿಯಾಗಿದ್ದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಇದರಿಂದ ಬುಲ್ಡೋಜರ್, ಪಿಕಾಸಿ ಸೇರಿದಂತೆ ಎಲ್ಲಾ ಸಲಕರಣೆ ಹಾಗೂ ಭದ್ರತೆಯೊಂದಿಗೆ ಆಗಮಿಸಿದ ಅಧಿಕಾರಿಗಳು ಸುಸಜ್ಜಿತ ಕಾಂಪ್ಲೆಕ್ಸ್ ಕೆಡವಿದ್ದಾರೆ.

ಯುಪಿಯಲ್ಲಿ ಬಿಜೆಪಿ ನಾಯಕನ ಮನೆಗೆ ನುಗ್ಗಿದ ಬುಲ್ಡೋಜರ್..!

ಅಧಿಕಾರಿಗಳು ಬುಲ್ಡೋಜರ್ ಜೊತೆ ಆಗಮಿಸಿ ಗ್ರ್ಯಾಂಡ್ ಓಮ್ಯಾಕ್ಸ್ ಕಾಂಪ್ಲೆಕ್ಸ್‌ ಕಟ್ಟಡ ಕೆಡವುತ್ತಿದ್ದಂತೆ ವಸತಿ ಸಮುಚ್ಚಯ ನಿವಾಸಿಗಳು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದಾರೆ. ಈ ಮೂಲಕ ತ್ಯಾಗಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾನುವಾರ ರಾತ್ರಿ ವಸತಿ ಸಮುಚ್ಚಯಕ್ಕೆ ಶ್ರೀಕಾಂತ್ ತ್ಯಾಗಿ ಕಳುಹಿಸಿದ ಗೂಂಡಾಗಳು ಆಗಮಿಸಿ ನಿವಾಸಿಗಳಿಗೆ ಕಿರುಕುಳ ನೀಡಲು ಮುಂದಾಗಿದ್ದಾರೆ.  ಈ ವೇಳೆ ವಾಗ್ವಾದಕ್ಕೆ ನಿಂತ ಮಹಿಳೆಗೆ ಕಿರುಕುಳ ನೀಡಿ, ಹಲ್ಲೆ ಮಾಡಿದ್ದರು. ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂಡ ಪೊಲೀಸರು ನಿನ್ನೆ 6 ಗೂಂಡಾಗಳನ್ನು ಬಂಧಿಸಿದ್ದರು. ಆದರೆ, ಶ್ರೀಕಾಂತ್ ತ್ಯಾಗಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಶ್ರೀಕಾಂತ್ ತ್ಯಾಗಿ ನಾಪತ್ತೆಯಾಗಿದ್ದರು. 

click me!