ಮಹಿಳೆ ಮುಂದೆ ಅಸಭ್ಯ ವರ್ತನೆ ತೋರಿದ ಮಾನಸಿಕ ರೋಗಿ ಹಿಡಿದು ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿದ ಜನ!

By Suvarna News  |  First Published Aug 9, 2022, 10:49 AM IST

ಮಹಿಳೆಯರ ಮುಂದೆ ಪದೆ ಪದೆ ಬಟ್ಟೆ ಬಿಚ್ಚಿ ಅಶ್ಲೀಲ ವರ್ತನೆ ತೋರುತ್ತಿದ್ದ ಮಾನಸಿಕ ರೋಗಿಯನ್ನು ಹಿಡಿದ ಗ್ರಾಮಸ್ಥರು ಆತನ ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.
 


ಮಧ್ಯಪ್ರದೇಶ(ಆ.09):  ಮಹಿಳೆಯರ ಮುಂದೆ ಖಾಸಗಿ ವರ್ತನೆ ತೋರುತ್ತಿದ್ದ ಮಾನಸಿಕ ರೋಗಿಗೆ ಗ್ರಾಮಸ್ಥರು ಕೆಲವು ಬಾರಿ ಎಚ್ಚರಿಕೆ ನೀಡಿದ್ದಾರೆ. ಮಹಿಳೆಯರ ಮುಂದೆ ಅಶ್ಲೀಲ ವರ್ತನೆ ತೋರುತ್ತಿದ್ದ ಮಾನಸಿಕ ಅಸ್ವಸ್ಥ ಮತ್ತೆ ಹುಟ್ಟಾಟ ಆರಂಭಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮಾನಸಿಕ ರೋಗಿಯ ಹಿಡಿದು ಖಾಸಗಿ ಅಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.  ಸುಟ್ಟ ಗಾಯ ಹಾಗೂ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಮಾನಸಿಕ ಅಸ್ವಸ್ಥನ ಆಸ್ಪತ್ರೆ ದಾಖಲಿಸಲಾಗಿದೆ. ಇತ್ತ ರೋಗಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಮಧ್ಯ ಪ್ರದೇಶದ ಬೆತುಲ್‌ನಲ್ಲಿ ನಡೆದಿದೆ.

ಕಜ್ಲಿ ಗ್ರಾಮದ ವಯಸ್ಕ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥನಾಗಿದ್ದ. ಈತ ಯಾರೇ ಮಹಿಳೆಯರನ್ನು ನೋಡಿದ ತಕ್ಷಣ ಅವರ ಮುಂದೆ ಬಟ್ಟೆ ಬಿಚ್ಚಿ ಬೆತ್ತಲಾಗುತ್ತಿದ್ದ. ಇದರಿಂದ ಮಹಿಳೆಯರು, ಯುವತಿಯರು ಮಜುಗರಕ್ಕೊಳಗಾಗುತ್ತಿದ್ದರು. ಇಷ್ಟೇ ಅಲ್ಲ ಕಿರುಕುಳ ಅನುಭವಿಸುತ್ತಿದ್ದರು. ಮಾನಸಿಕ ಅಸ್ವಸ್ಥನಿಗೆ ಗ್ರಾಮಸ್ತರು ಹಲವು ಭಾರಿ ಎಚ್ಚರಿಕೆ ನೀಡಿದ್ದಾರೆ. ಈ ರೀತಿಯ ಮಾಡದಂತೆ ತಾಕೀತು ಮಾಡಿದ್ದಾರೆ. ಆದರೆ ಮಾನಸಿಕ ಅಸ್ವಸ್ಥನಾಗಿರುವ ಕಾರಣ ಗ್ರಾಮಸ್ತರ ಎಚ್ಚರಿಕೆಗೆ ಸೊಪ್ಪು ಹಾಕಿಲ್ಲ. ಸೋಮವಾರ(ಆಗಸ್ಟ್ 08) ಮಾನಸಿಕ ರೋಗಿ ಮತ್ತೆ ಮಹಿಳೆಯರ ಮುಂದೆ ಬೆತ್ತಲಾಗಿ ಅಂಗಾಗ ಪ್ರದರ್ಶಿಸಿದ್ದಾನೆ. 

Tap to resize

Latest Videos

ವಿಮಾನದಲ್ಲಿ ಮಹಿಳೆಯ ಎದೆಗೆ ಕೈಹಾಕಿ ಕಾಮಚೇಷ್ಟೆ: ಕಾಮುಕನ ಬಂಧನ

ಪದೇ ಪದೇ ಮಾನಸಿಕ ಅಸ್ವಸ್ಥನಿಂದ ಕಿರುಕುಳಕ್ಕೆ ಒಳಗಾಗುತ್ತಿದ್ದ ಮಹಿಳೆಯರು ಗ್ರಾಮಸ್ಥರಲ್ಲಿ ಮತ್ತೆ ಅಳಲು ತೋಡಿಕೊಂಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮಾನಸಿಕ ರೋಗಿಯನ್ನು ಹಿಡಿದು ಥಳಿಸಿದ್ದಾರೆ. ಇಷ್ಟೇ ಅಲ್ಲ ಖಾಸಗಿ ಅಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಒಂದೆಡೆ ತೀವ್ರವಾಗಿ ಥಳಿಸಿದ ಕಾರಣ ಮಾನಸಿಕ ರೋಗಿ ನೆಲದಲ್ಲೇ ಬಿದ್ದು ಹೊರಳಾಡಿದ್ದಾನೆ. ಬೆಂಕಿ ಹಚ್ಚಿದ ಕಾರಣ ತೀವ್ರ ಸುಟ್ಟಗಾಯದಿಂದ ನರಳಾಡಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಾನಸಿಕ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ತೀವ್ರಗಾಯಗೊಂಡಿರುವ ಮಾನಸಿಕ ಅಸ್ವಸ್ಥ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇಷ್ಟೇ ಅಲ್ಲ ಮಹಿಳೆಯರನ್ನು ಕರೆಸಿ ವಾರ್ನಿಂಗ್ ನೀಡಿದ್ದಾರೆ. ಮಾನಸಿಕ ಅಸ್ವಸ್ಥನ ಕಿರುಕುಳ ಎದುರಾಗಿದ್ದರೆ ಮೊದಲು ಪೊಲೀಸರಿಗೆ ಮಾಹಿತಿ ನೀಡಬೇಕು. ಇದರ ಬದಲು ಗ್ರಾಮಸ್ಥರ ಕೈಯಿಂದ ಹಲ್ಲೆ ಮಾಡಿಸುವ, ಅಥವಾ ಕಾನೂನು ಕೈಗೆತ್ತಿಕೊಳ್ಳುವ ಕೆಲಸಕ್ಕೆ ಹೋಗಬಾರದು ಎಂದು ಮಹಿಳೆಯರಿಗೆ ಎಚ್ಚರಿಕೆ ನೀಡಿದ್ದಾರೆ. 

 

Misbehave With Woman: ಪತ್ನಿಗೆ ಕೆಟ್ಟ ಮೆಸೇಜ್‌ ಕಳಿಸಿದ ವ್ಯಕ್ತಿಯ ಅರೆಬೆತ್ತಲೆಗೊಳಿಸಿ ಹಲ್ಲೆ

ಅಸಭ್ಯ ವರ್ತನೆ : ಯುವಕನ ಬಂಧನ
ಯುವತಿಯ ಜೊತೆ ಅಸಭ್ಯ ವರ್ತಿಸಿದ ಯುವಕನನ್ನು ದಾಬಸ್‌ಪೇಟೆ ಪೊಲೀಸರು ಬಂಧಿಸಿರುವ ಘಟನೆ ಸೋಂಪುರ ಹೋಬಳಿಯ ಶಾರದಾ ಕ್ರಾಸ್‌ ಬಳಿ ನಡೆದಿದೆ. ನೆಲಮಂಗಲ ತಾಲೂಕಿನ ಕಸಬಾ ಹೋಬಳಿಯ ತೊರೆಕೆಂಪೋಹಳ್ಳಿ ಗ್ರಾಮದ ಸುದರ್ಶನ್‌ (22) ಬಂಧಿತ ಆರೋಪಿ. ಸೋಂಪುರ ಹೋಬಳಿಯ ನಾರಾಯಣಪುರ ಗ್ರಾಮದ ಶಶಿಕಲಾ, ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಈಕೆ ದಿನನಿತ್ಯ ಅನುಶ್‌ ಎಂಬುವವರ ಆಟೋದಲ್ಲಿ ಮನೆಗೆ ಹೋಗಬೇಕಾದರೆ ಶಾರದಾ ಕ್ರಾಸ್‌ ಬಳಿ, ಸುದರ್ಶನ್‌ ಆಟೋವನ್ನು ತಡೆದು ನಿಲ್ಲಿಸಿ ಶಶಿಕಲಾರವರ ತಲೆಯ ಜುಟ್ಟನ್ನು ಹಿಡಿದು ಅವಾಚ್ಯ ಶಬ್ದಗಳಿಂದ ಬೈದು ಅಸಭ್ಯವಾಗಿ ವರ್ತಿಸಿದ್ದಾನೆ.ನಂತರ ಯುವತಿ ಶಶಿಕಲಾ ದಾಬಸ್‌ಪೇಟೆ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದು, ಅಸಭ್ಯವಾಗಿ ವರ್ತನೆ ಮಾಡಿದ ಸುದರ್ಶನ್‌ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
 

click me!