ಬಳ್ಳಾರಿಯ ಯುವಕನ್ನು ಪ್ರೀತಿ ಮಾಡುತ್ತಿದ್ದ ಮಂಗಳೂರಿನ ಯುವತಿ ಡೆತ್ ನೋಟ್ ಬರೆದಿಟ್ಟು ಬೆಂಗಳೂರಿನ ಪೊಲೀಸ್ ಕ್ವಾಟ್ರಸ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬೆಂಗಳೂರು (ಮೇ 1): ಪ್ರೀತಿ ಯಾವಾಗ ಯಾರ ಮೇಲೆ ಎಲ್ಲಿ ಆಗುತ್ತೆ ಎನ್ನೋದೇ ಗೊತ್ತಾಗೊಲ್ಲ. ಮಂಗಳೂರಿನ ಯುವತಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲ ಹೋದಾಗ ಬಳ್ಳಾರಿಯ ಯುವಕನ ಪರಿಚಯವಾಗಿ ನಂತರ ಪ್ರೀತಿಯೂ ಬೆಳೆದಿತ್ತು. ಇಬ್ಬರೂ ತಂದೆ ತಾಯಿಯನ್ನು ಬಿಟ್ಟುಬಂದು ಬೆಂಗಳೂರಲ್ಲಿ ಪ್ರೀತಿ ಮಾಡುತ್ತಿದ್ದರು. ಆದರೆ, ಇಬ್ಬರ ನಡುವೆ ವೈಮನಸ್ಸು ಮೂಡಿ ಬಂದಿದ್ದು, ಯುವತಿ ಪೊಲೀಸ್ ಕ್ವಾಟ್ರಸ್ ಮೇಲಿಂದ ಬಿದ್ದು ದುರಂತ ಸಾವನ್ನಪ್ಪಿರುವ ಘಟನೆ ಬೆಂಗಳೂರಲ್ಲಿ ನಿನ್ನೆ ಮಧ್ಯಾಹ್ನ ನಡೆದಿದೆ.
ಇಡೀ ರಾಜ್ಯದಲ್ಲಿ ಚುನಾವಣಾ ಗುಂಗು ತುಂಬಿಕೊಂಡಿದೆ. ಆದರೆ, ಇದ್ದಕ್ಕಿಂದಂತೆ ನಿನ್ನೆ (ಭಾನುವಾರ) ಮಧ್ಯಾಹ್ನ ಬಿನ್ನಿಪೇಟೆ ಬಳಿಯಿರುವ ಪೊಲೀಸ್ ಕ್ವಾಟ್ರಸ್‌ನ ಮೇಲಿಂದ ಜಿಗಿದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆದರೆ, ಆಕೆ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ತನ್ನ ಸಾವಿಗೆ ಯಾರೋ ಕಾರಣವಲ್ಲ. ತನ್ನ ಪ್ರಿಯತಮ ಭೀಮೇಶ್ ನಾಯಕ್ ತುಂಬಾ ಒಳ್ಳೆಯವ ನಿನ್ನ ಮೇಲೆ ಸುಮ್ಮನೇ ಆರೋಪ ಮಾಡಿದ್ದೆ ಎಂದೆಲ್ಲಾ ಬರೆದುಕೊಂಡು ಪ್ರಾಣ ಬಿಟ್ಟಿದ್ದಳು. ಇಂದು ಯುವತಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಆಕೆಯ ಮನೆಯವರಿಗೆ ಹಸ್ತಾಂತರ ಮಾಡಲಾಗಿದೆ.
undefined
ಇದನ್ನೂ ಓದಿ: ಲವ್ ಫೇಲ್ಯೂರ್: ಪೊಲೀಸ್ ಕ್ವಾಟ್ರಸ್ ಮೇಲಿಂದ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ!
ಮಗಳ ಸಾವಿನಲ್ಲಿ ಅನುಮಾನವಿಲ್ಲ ಎಂದ ತಂದೆ: ಇನ್ನು ಬಿನ್ನಿಪೇಟೆ ಬಳಿಯಿರುವ ಪೊಲೀಸ್ ಕ್ವಾರ್ಟರ್ಸ್ ಕಟ್ಟಡದ ಮೇಲಿಂದ ಯುವತಿ ಬಿದ್ದು ಸಾವನ್ನಪ್ಪಿದ ಯುವತಿಯನ್ನು ಆಯೇಶ (21) ಎಂದು ಗುರುತಿಸಲಾಗಿದೆ. ಈ ಘಟನೆ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಯುವತಿ ತಂದೆ ರೆಹಮತ್ ಖಾನ್ ಅವರು ಬಂದು ದೂರು ದಾಖಲಿಸಿದ್ದಾರೆ. ತನ್ನ ಮಗಳ ಸಾವಿನಲ್ಲಿ ಯಾವುದೇ ಅನುಮಾನ ಇಲ್ಲ ಎಂದು ದೂರು ದಾಖಲಿಸಿದ್ದಾರೆ. ಮೃತದೇಹವನ್ನು ಕೊಟ್ಟರೆ ನಾವು ಅಂತ್ಯಕ್ರಿಯೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. ಆದರೆ, ಮಗಳನ್ನು ಕಳೆದುಕೊಂಡ ಅವರ ಆಕ್ರಂದನ ಮಾತ್ರ ಮೌನದಲ್ಲಿಯೇ ಮಡುಗಟ್ಟಿತ್ತು.
ಅನ್ಯಧರ್ಮೀಯರ ದುರಂತ ಪ್ರೀತಿ ಹುಟ್ಟಿದ್ದೆಲ್ಲಿಂದ?
ಬಳ್ಳಾರಿಯಲ್ಲಿ ಹಿಂದೂ ಧರ್ಮದ ಭೀಮೇಶ್ ನಾಯಕ್ ಮತ್ತು ಮುಸ್ಲಿಂ ಧರ್ಮದ ಆಯೇಶ ನಡುವೆ ಪರೀಕ್ಷೆಗೆ ಹೋದಾಗ ಪರಿಚಯವಾಗಿತ್ತು. ಇಬ್ಬರ ಮಧ್ಯೆ ಸ್ನೇಹ ಶುರುವಾಗಿತ್ತು. ಅದೇ ಸ್ನೇಹ ನಂತರ ಪ್ರೀತಿಗೆ ತಿರುಗಿ ದೈಹಿಕ ಸಂಬಂಧದವರೆಗೆ ಬಂದಿತ್ತು. ಆದರೆ, ಭೀಮೇಶ್ ರಾಜ್ಯದಲ್ಲಿ ಧರ್ಮದಂಗಲ್ ನಡೆಯುತ್ತಿದ್ದು, ಇಬ್ಬರ ಧರ್ಮ ಬೇರೆ ಬೇರೆ ಆಗಿರುವುದರಿಂದ ಪ್ರೀತಿಯನ್ನು ನಿಲ್ಲಿಸಲು ಪ್ರಯತ್ನ ಮಾಡಿದ್ದಾನೆ. ಆದರೆ, ಇದಕ್ಕೊಪ್ಪದ ಆಯಿಶಾ ತನ್ನ ಪ್ರಿಯಕರ ಭೀಮೇಶ್ ಅತ್ಯಾಚಾರ ಮಾಡಿದ್ದಾನೆ ಎಂದು 2021 ರಲ್ಲಿ ಬಸವನಗುಡಿಯಲ್ಲಿ ಪೋಕ್ಸೊ ಕೇಸ್ ದಾಖಲಿಸಿದ್ದಳು. ನಂತರ ಭೀಮೇಶ್‌ನನ್ನು ಬಂಧಿಸಿದ್ದ ಪೊಲೀಸರು ಮೂರು ತಿಂಗಳು ಜೈಲಿನಲ್ಲಿಟ್ಟಿದ್ದರು.
ಭೀಮೇಶ್ ಮನೆಯಲ್ಲಿ ಉಳಿದುಕೊಳ್ತಿದ್ದ ಆಯಿಶಾ:
ಆದರೆ, ಯುವತಿ ತನ್ನ ಮೇಲೆ ಯಾವುದೇ ಅತ್ಯಾಚಾರ ನಡೆದಿಲ್ಲ ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಹೈಕೋರ್ಟ್ ನಲ್ಲಿ ಭೀಮೇಶ್ ಅತ್ಯಾಚಾರ ಪ್ರಕರಣ ಸ್ಕ್ವಾಶ್ ಆಗಿತ್ತು. ಇದಾದ ಬಳಿಕವೂ ಇಬ್ಬರ ಮಧ್ಯೆ ಸಂಬಂಧ ಮುಂದುವರೆದಿದೆ. ಇನ್ನು ಸದ್ಯ ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಬಿ.ಆರ್. ಆಯಿಶಾ ಬಿ.ಎಸ್‌ಸಿ ಅಭ್ಯಾಸ ಮಾಡುತ್ತಿದ್ದಳು. ಆದರೆ, ಆಗಿಂದಾಗ್ಗೆ ಆಯಿಶಾ ಮಂಗಳೂರಿನಿಂದ ಬಂದು ಬೆಂಗಳೂರಿನಲ್ಲಿರುವ ಭೀಮೇಶ್ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದಳು. ಆದರೆ, ನಿನ್ನೆ ಇಬ್ಬರಲ್ಲೂ ಸ್ವಲ್ಪ ವೈಮನಸ್ಸು ಬಂದಿರಬಹುದು. ಭೀಮೇಶ್ ಮತ್ತು ಆಯಿಶಾ ಪರಿಸ್ಪರ ತಮ್ಮ ಊರಿಗೆ ಹೋಗಲು ರೆಡಿಯಾಗಿದ್ದಾರೆ. ಈ ವೇಳೆ ಆಯಿಶಾ ಮೆಜೆಸ್ಟಿಕ್ ಬಸ್ ನಿಲ್ದಾಣದವರೆಗೂ ಹೋಗಿ, ಅಲ್ಲಿಂದ ವಾಪಸ್ ಬಂದು ಪೊಲೀಸ್ ಕ್ವಾಟ್ರಸ್ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬೆಂಗಳೂರು: ರೇವಾ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯ ಭೀಕರ ಕೊಲೆ!
ಆತ್ಮಹತ್ಯೆ ಪತ್ರದ ಎಫ್‌ಎಸ್‌ಎಲ್ ಪರೀಕ್ಷೆ: ನಿನ್ನೆ ಆಯಿಶಾ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಆಕೆಯ ಬಳಿ ಡೆತ್ ನೋಟ್ ಕೂಡ ಲಭ್ಯವಾಗಿತ್ತು. ನನ್ನ ಸಾವಿಗೆ ನಾನೆ ಕಾರಣ ಎಂದು ಬರೆದುಕೊಂಡಿದ್ದಾಳೆ. ಡೆತ್ ನೋಟ್ ಎಫ್ಎಸ್ಎಲ್ ಗೆ ಕಳುಹಿಸಿರುವ ಕಾಟನ್ ಪೇಟೆ ಪೊಲೀಸರು, ಡೆತ್ ನೋಟ್‌ನಲ್ಲಿರುವ ಹ್ಯಾಂಡ್ ರೈಟಿಂಗ್ (ಕೈ ಬರಹ) ಆಯೇಶಳದ್ದೇನಾ ಅನ್ನೋದು ಪರಿಶೀಲನೆ ಮಾಡುತ್ತಿದ್ದಾರೆ. ಇನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಯುವತಿ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದೆ. ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆ ಪೂರ್ಣಗೊಂಡ ನಂತರ ಮೃತದೇಹವನ್ನು ಪೊಲೀಸರು ಯುವತಿಯ ಪೋಷಕರಿಗೆ ಹಸ್ತಾಂತರಿಸಿದ್ದಾರೆ.
ಕರಾವಳಿ ತೀರ, ಬಯಲು ಸೀಮೆಯ ಪ್ರೀತಿ ಬೆಂಗಳೂರಲ್ಲಿ ಅಂತ್ಯ: ಬೆಂಗಳೂರು ಎಂದಾಕ್ಷಣ ಜನರ ಸಾಗರ ಎಂದು ಹೇಳಬಹುದು. ಇಲ್ಲಿ ಜಾತಿ, ಭಾಷೆ, ಲಿಂಗ, ಜಿಲ್ಲೆ, ರಾಜ್ಯ ಹಾಗೂ ದೇಶದ ಬೇಧಭಾವವಿಲ್ಲದೇ ಎಲ್ಲರೂ ಒಂದು ಕಡೆ ನೆಲೆಸಿರುವ ತಾಣವಾಗಿದೆ. ಇಲ್ಲಿ ಯಾರನ್ನೂ, ಯಾರೊಬ್ಬರು ಯಾಕೆ ಇಲ್ಲಿಗೆ ಬಂದಿದ್ದೀರಿ ಎಂದು ಕೇಳುವವರೇ ಇರುವುದಿಲ್ಲ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಅನೇಕರು ಪ್ರೀತಿ, ಪ್ರೇಮ ಹಾಗೂ ಅನೈತಿಕ ಸಂಬಂಧದೊಂದಿಗೆ ಮನೆಯನ್ನು ಬಿಟ್ಟುಬಂದು ಬೆಂಗಳೂರಿನಲ್ಲಿ ನೆಲೆಸುತ್ತಿದ್ದಾರೆ. ಅಂತಹ ಲಕ್ಷಾಂತರ ಜೋಡಿಗಳ ಮಧ್ಯೆ ಪ್ರೀತಿ ಮಾಡಿದ ಇಲ್ಲೊಂದು ಜೋಡಿ ಬೆಂಗಳೂರಿನಲ್ಲಿ ವಾಸವಿದ್ದು, ಒಬ್ಬರ ದುರಂತ ಅಂತ್ಯದಲ್ಲಿ ಪ್ರೀತಿ ಕೊನೆಯಾಗಿದೆ.