ಹಾಲು ತಗೊಂಡೋಗು ಅಂದ್ರೆ, ಮಗಳ ಪ್ರಾಣನೇ ಹೊತ್ತೊಯ್ದ ಹಾಲಿನ ವಾಹನ

By Sathish Kumar KHFirst Published Jun 20, 2023, 5:57 PM IST
Highlights

ರೈತರು ಹಾಕುವ ಹಾಲನ್ನು ತೆಗೆದುಕೊಂಡು ಹೋಗಲು ಮಂದಿದ್ದ ವಾಹನ ಮೂರು ವರ್ಷದ ಬಾಲಕಿಯ ಪ್ರಾಣವನ್ನೇ ಹೊತ್ತೊಯ್ದ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯ (ಜೂ.20): ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಂಘಟನೆ (ಮನ್‌ಮುಲ್‌) ಗ್ರಾಮೀಣ ಪ್ರದೇಶದಲ್ಲಿದ್ದ ಡೇರಿಯಿಂದ ರೈತರು ಹಾಕುವ ಹಾಲನ್ನು ತೆಗೆದುಕೊಂಡು ಹೋಗಲು ಮಂದಿದ್ದ ವಾಹನ ಮೂರು ವರ್ಷದ ಬಾಲಕಿಯ ಪ್ರಾಣವನ್ನೇ ಹೊತ್ತೊಯ್ದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಡಿ.ಹೊಸೂರಿನಲ್ಲಿ ನಡೆದಿದೆ.

ಹಾಲಿನ ಗೂಡ್ಸ್ ವಾಹನದ ಚಕ್ರಕ್ಕೆ ಸಿಲುಕಿ ಪುಟ್ಟ ಬಾಲಕಿ ಸಾವನ್ನಪ್ಪಿದ ದುರ್ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಡಿ.ಹೊಸೂರು ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಸಾವಿನ ಬೆಳಗಾಗಿತ್ತು. ಗ್ರಾಮದಲ್ಲೆಲ್ಲ ನೀರವ ಮೌನ ಆವರಿಸಿತ್ತು. ಇದಕ್ಕೆ ಕಾರಣ ಬಾಲಕಿಯ ಮರಣ. ಗ್ರಾಮಗಳಲ್ಲಿ ವಾಹನ ಚಾಲನೆ ಮಾಡುವಾಗ ಎಷ್ಟೇ ಎಚ್ಚರವಹಿಸಿದರೂ ಕಡಿಮೆ. ಮಕ್ಕಳು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುವುದು, ಹಸುಗಳು, ನಾಯಿ ಹೀಗೆ ಹಲವು ಪ್ರಾಣಿಗಳು ರಸ್ತೆ ದಾಟುವುದು ಸರ್ವೇ ಸಾಮಾನ್ಯವಾಗಿರುತ್ತದೆ. ಆದರೆ, ಪ್ರತಿನಿತ್ಯ ಗ್ರಾಮದ ಡೇರಿಯಿಂದ ಹಾಲನ್ನು ಕೊಂಡೊಯ್ಯುತ್ತಿದ್ದ ವಾಹನ ಚಾಲಕನೇ ಬಾಲಕಿಯ ಮೇಲೆ ವಾಹನ ಚಲಾಯಿಸಿ ಸಾವಿಗೆ ಕಾರಣವಾಗಿದ್ದಾರೆ.

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರುಗಳ ಡಿಕ್ಕಿ: ನಜ್ಜುಗುಜ್ಜಾದ ಕಾರು, ಅಪ್ಪಚ್ಚಿಯಾದ ಮೂವರ ದೇಹ

ಡಿ. ಹೊಸೂರು ಗ್ರಾಮದ ರಿಫಾ (3 ವರ್ಷ) ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಹಾಲಿನ ವಾಹನದ ಗಾಲಿಗೆ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಸರ್ವಖಾನ್ ಎಂಬುವವರ ಪುತ್ರಿ ಮೃತ ರಿಫಾ. ಬೆಳಿಗ್ಗೆ ಹಾಲನ್ನು ತೆಗೆದುಕೊಂಡು ಹೋಗುವ ವೇಳೆ ವಾಹನ ರಿವರ್ಸ್ ತೆಗೆಯುವ ವೇಳೆ ಹಿಂದಿನ ಚಕ್ರಕ್ಕೆ ಸಿಲುಕಿದ ಪುಟ್ಟ ಬಾಲಕಿ ಮೃತಪಟ್ಟಿದ್ದಾಳೆ. ಸ್ಥಳದಲ್ಲಿಯೇ ಬಾಲಕಿ ಸಾವಿನಿಂದ ಪೋಷಕರ ಆಕ್ರಂದನ ಮುಟ್ಟಿತ್ತು. ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಆಗಿದೆ.

ಬೆಂಗಳೂರು ಮೈಸೂರು ಹೆದ್ದಾರಿ ಭೀಕರ ಅಪಘಾತದಲ್ಲಿ ಮೂವರ ಸಾವು:  ಮಂಡ್ಯ (ಜೂ.20): ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಎರಡು ಕಾರುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರುಗಳು ಅಪ್ಪಚ್ಚಿಯಾಗಿದ್ದು, ಸ್ಥಳದಲ್ಲಿಯೇ ಮೂವರ ದೇಹ ಛಿದ್ರಗೊಂಡು ಸಾವನ್ನಪ್ಪಿದ್ದಾರೆ. ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ನಡೆದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮೃತ ದುರ್ದೈವಿಗಳ ಪೈಕಿ ಓರ್ವನ ಹೆಸರು ನೀರಜ್‌ ಎಂದು ತಿಳಿದುಬಂದಿದ್ದು, ಮತ್ತಿಬ್ಬರ ಹೆಸರು ತಿಳಿದುಬಂದಿಲ್ಲ. ಕಾರಿನಲ್ಲಿದ್ದ ಮತ್ತೊಬ್ಬನ ಸ್ಥಿತಿಯು ಗಂಭೀರವಾಗಿದ್ದು, ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಕಾರು ಅತಿವೇಗ ಇದ್ದರಿಂದ ನಿಯಂತ್ರಣ ತಪ್ಪಿ ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ. ಮುಂಬದಿ ಕಾರಿನಲ್ಲಿದ್ದವರಿಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

2022ರಲ್ಲಿ ಬೆಂಗಳೂರಲ್ಲಿ ಅಪಘಾತಕ್ಕೆ 772 ಬಲಿ..!

ಸಾವಿನ ಹೆದ್ದಾರಿಯಾಯಿತೇ ಬೆಂ-ಮೈ ಹೈವೇ:  ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗಜ್ಜಲೆಗೆರೆ ಬಳಿ ಘಟನೆ ನಡೆದಿದೆ. ಬೆಂಗಳೂರಿಂದ ಮೈಸೂರಿಗೆ ತೆರಳುತ್ತಿದ್ದ ಕಾರುಗಳು. ಮುಂದೆ ಹೋಗುತ್ತಿದ್ದ ಟಾಟಾ ಎಕ್ಸ್ ಕಾರಿಗೆ ಸ್ವಿಫ್ಟ್ ಡಿಸೈರ್ ಕಾರು ಡಿಕ್ಕಿ ಹೊಡೆದಿದೆ. ಕಾರುಗಳ ನಡುವಿನ ಡಿಕ್ಕಿ ರಭಸಕ್ಕೆ ಡಿಸೈರ್ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತರ ಪೈಕಿ ಓರ್ವನ ಹೆಸರು ನೀರಜ್ ಕುಮಾರ್, ಮತ್ತಿಬ್ಬರ ಹೆಸರು ತಿಳಿದುಬಂದಿಲ್ಲ.  ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದರೆ ಸಾವು ಖಚಿತ ಎನ್ನುವಂತಾಗಿದೆ. ಆದ್ದರಿಂದ ಬೆಂಗಳೂರು ಮೈಸೂರು ಎಕಸ್‌ಪ್ರೆಸ್‌ವೇ ಸಾವಿನ ಹೆದ್ದಾರಿ ಆಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. 

click me!