
ನವದೆಹಲಿ (ಜೂನ್ 20, 2023): ಸೋಮವಾರ ಮಧ್ಯರಾತ್ರಿ ದೆಹಲಿ ಪೊಲೀಸರು ಸಿಕ್ಕಾಪಟ್ಟೆ ತಲೆಬಿಸಿಗೊಳಗಾಗಿದ್ದರು. ಇದಕ್ಕೆ ಕಾರಣ ಕಾರಿನಲ್ಲಿದ್ದ ಮಹಿಳೆಯೊಬ್ರು ಕೂಗಿಕೊಳ್ಳುತ್ತಿದ್ದಾರೆ ಎಂದು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆಬಂದಿದೆ. ಈ ಹಿನ್ನೆಲೆ ಆ ಕಾರನ್ನು ಚೇಸ್ ಮಾಡಲು ಹಲವು ಪೊಲೀಸ್ ವಾಹನಗಳು ಪ್ರಯತ್ನ ಪಟ್ಟರೂ, ಆ ಕಾರು ಯಾವುದು ಎಲ್ಲಿ ಹೋಯಿತು, ಆ ಕಾರಿನಲ್ಲಿದ್ದವರು ಯಾರು ಎಂಬುದನ್ನು ದೆಹಲಿ ಪೊಲೀಸರು ಪತ್ತೆ ಮಾಡಲೇ ಇಲ್ಲ. ಈ ಹಿನ್ನೆಲೆ ಅದರಲ್ಲಿದ್ದವರು ಯಾರು,ಮಹಿಳೆ ಕಿರುಚಿಕೊಂಡಿದ್ದು ಯಾಕೆ ಎಂಬುದನ್ನು ದೇವರೇ ಬಲ್ಲ.
ದಕ್ಷಿಣ ದೆಹಲಿಯಲ್ಲಿ ಬೂದು ಬಣ್ಣದ ಹ್ಯುಂಡೈ ಐ20 ಕಾರಿನಿಂದ ಹುಡುಗಿಯೊಬ್ಬಳು ಸಹಾಯಕ್ಕಾಗಿ ಕೂಗುತ್ತಿದ್ದಾಳೆ ಎಂದು ಪೊಲೀಸ್ ನಿಯಂತ್ರಣ ಕೊಠಡಿಗೆ ಮಧ್ಯರಾತ್ರಿ ಕರೆ ಬಂದಿದೆ. ಬಳಿಕ ಹಲವು ಪಿಸಿಆರ್ ವ್ಯಾನ್‌ಗಳು ದೆಹಲಿಯ ಬೀದಿಗಳಲ್ಲಿ ಹೆಚ್ಚಿನ ವೇಗದಲ್ಲಿದ್ದ ಕಾರನ್ನು ಚೇಸ್ ಮಾಡಿತು. ಆದರೂ, ದೆಹಲಿ ಪೊಲೀಸರ ಕಣ್ಗಾವಲಿನಿಂದ ಆ ಕಾರು ತಪ್ಪಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ಇದಪ್ಪಾ ಶಿಕ್ಷೆ ಅಂದ್ರೆ! ಅಪ್ರಾಪ್ತ ಸೋದರ ಸಂಬಂಧಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ಪಾಪಿಗೆ 135 ವರ್ಷ ಸೆರೆವಾಸ
ಸೋಮವಾರ ಮಧ್ಯರಾತ್ರಿ 12.35 ರ ಸುಮಾರಿಗೆ ರಾಷ್ಟ್ರ ರಾಜಧಾನಿಯ ಸೌತ್ ಎಕ್ಸ್‌ಟೆನ್ಶನ್ ಭಾಗ 1 ರಲ್ಲಿ ನಾಟಕೀಯ ಘಟನೆ ನಡೆದಿದೆ. NEET ಆಕಾಂಕ್ಷಿಗಳ ಗುಂಪು ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರೊಂದಿಗೆ ಬೂದು ಬಣ್ಣದ ಹುಂಡೈ i20 ಕಾರನ್ನು ಗುರುತಿಸಿದ್ದಾರೆ. ಕಾರನ್ನು ಪುರುಷರೊಬ್ಬರು ಚಲಾಯಿಸುತ್ತಿದ್ದರು ಮತ್ತು ಅವರ ಪಕ್ಕದಲ್ಲಿ ಅಂದ್ರೆ ಮುಂದಿನ ಸೀಟಲ್ಲೇ) ಮಹಿಳೆಯೊಬ್ಬರು ಕೂತಿದ್ದರು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಅಲ್ಲದೆ, ಹಿಂದಿನ ಸೀಟಲ್ಲೂ ಮತ್ತೊಬ್ಬ ಪುರುಷ ಮತ್ತು ಮಹಿಳೆ ಇದ್ದರು ಎಂದೂ ಅಧಿಕಾರಿಗಳು ವಿದ್ಯಾರ್ಥಿಗಳ ಹೇಳಿಕೆ ಉಲ್ಲೇಖಿಸಿದ್ದಾರೆ.
ಹಿಂಬದಿಯಲ್ಲಿದ್ದ ಮಹಿಳೆ ಕಾರಿನಿಂದ ಇಳಿಯಲು ಪ್ರಯತ್ನಿಸುತ್ತಿದ್ದಳು, ಆದರೆ ಆಕೆಯ ಪಕ್ಕದಲ್ಲಿದ್ದ ವ್ಯಕ್ತಿ ಆಕೆಯನ್ನು ಕಾರಿನಿಂದ ಇಳಿಯದಂತೆ ತಡೆಯುತ್ತಿದ್ದನು ಮತ್ತು ಮುಂಭಾಗದಲ್ಲಿದ್ದ ಮಹಿಳೆ ಸಹಾಯಕ್ಕಾಗಿ ಕೂಗುತ್ತಿದ್ದಳು ಎಂದೂ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತ ಬಾಲಕಿ ರೇಪ್ ಮಾಡಿ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಾಕಿದ ಗಾಯಕನ ಬಂಧನ
ಇನ್ನು, ವಿದ್ಯಾರ್ಥಿಗಳ ಹೇಳಿಕೆ ಆಧರಿಸಿ ಕೋಟ್ಲಾ ಮುಬಾರಕ್‌ಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿ ಗಮನಿಸಿದ್ದು, ಅವರು ಹೇಳಿದ್ದು ನಿಜವೆಂಬುದನ್ನೂ ಕಂಡುಕೊಂಡಿದ್ದಾರೆ. "ಕ್ಯಾಮೆರಾವು 12.35 ರ ಸುಮಾರಿಗೆ ಸ್ಥಳದಲ್ಲಿ ಕಾರು, ಬಹುಶಃ ಮಾರುತಿ ಸೆಲೆರಿಯೋ ಅಥವಾ ಹ್ಯುಂಡೈ i10 ಅನ್ನು ತೋರಿಸಿದೆ. ಕಾರಿನ ಮುಂಭಾಗದ ಬಾಗಿಲು ತೆರೆದಿತ್ತು ಮತ್ತು ಮಹಿಳೆಯೊಬ್ಬರು ಸಹಾಯಕ್ಕಾಗಿ ಕೂಗುತ್ತಿರುವಂತೆ ತೋರುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಆದರೆ, ಕಾರಿನ ನಂಬರ್ ಪ್ಲೇಟ್ ಅನ್ನು ಸೆರೆ ಹಿಡಿಯಲು ಸಿಸಿ ಕ್ಯಾಮೆರಾ ವಿಫಲವಾಗಿತ್ತು. ಆದರೂ, ದೆಹಲಿ ಪೊಲೀಸರ ಕಾರೊಂದು ಹರಿಯಾಣ ನೋಂದಣಿ ಸಂಖ್ಯೆ ಹೊಂದಿರುವ ಅದೇ ರೀತಿಯ ಕಾರಿನ ಸಂಖ್ಯೆಯನ್ನು ನೋಟ್ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ, ಆ ಪ್ರದೇಶದಲ್ಲಿ ಮೂರು ಪಿಸಿಆರ್ ವ್ಯಾನ್‌ಗಳು ಇದೇ ರೀತಿಯ ವಿವರಣೆಯನ್ನು ಹೊಂದಿರುವ ಕಾರನ್ನು ಗುರುತಿಸಿದವು ಮತ್ತು ಐಎನ್‌ಎಯಿಂದ ಸಫ್ದರ್‌ಜಂಗ್ ಕಡೆಗೆ ಸುಮಾರು 1 ಗಂಟೆಗೆ ಆ ಕಾರು ಚೇಸ್ ಮಾಡಲು ಪ್ರಾರಂಭಿಸಿದವು. ಆದರೂ, ಆ ಕಾರು ಬಾರಾಪುಲ್ಲಾ ಫ್ಲೈಓವರ್ ದಾಟಿದ್ದು, ಪೊಲೀಸರು ಆ ಕಾರು ಹಿಡಿಯಲು ಮಿಸ್ ಆಗಿದ್ದಾರೆ ಎಂದೂ ವರದಿಯಾಗಿದೆ.
ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ ಹಲವು ಬಾರಿ ಗ್ಯಾಂಗ್ ರೇಪ್: ಕೃತ್ಯ ಸೆರೆ ಹಿಡಿದು ಕಾಮುಕರ ಬ್ಲ್ಯಾಕ್‌ಮೇಲ್
ಆದರೆ, ದೆಹಲಿ ಪೊಲೀಸ್ ಕಾರೊಂದು ಶೇರ್ ಮಾಡಿಕೊಂಡ ಸಂಖ್ಯೆಯನ್ನು ದ್ವಿಚಕ್ರ ವಾಹನವೊಂದಕ್ಕೆ ನೋಂದಾಯಿಸಲಾಗಿದೆ ಎಂದು ಪೊಲೀಸರು ನಂತರ ಕಂಡುಕೊಂಡರು. ಹೀಗಾಗಿ ಕಾರು ಹಾದು ಹೋಗಿರಬಹುದಾದ ಮಾರ್ಗದಲ್ಲಿನ ಸಿಸಿಟಿವಿಗಳತ್ತ ಪೊಲೀಸರು ಗಮನ ಹರಿಸಿದ್ದಾರೆ. ಆದರೂ, ಸೇವಾನಗರದ ಬಾರಾಪುಲ್ಲಾ ಮೇಲ್ಸೇತುವೆ ಮತ್ತು ಡಿಎನ್‌ಡಿ ಫ್ಲೈಓವರ್‌ನಲ್ಲಿರುವ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ಎಎನ್‌ಪಿಆರ್) ಕ್ಯಾಮೆರಾಗಳು ಆ ಕಾರನ್ನು ಸೆರೆಹಿಡಿಯಲಿಲ್ಲ ಎಂದೂ ವರದಿಯಾಗಿದೆ.
ಇನ್ನೊಂದೆಡೆ, ಆ ಕಾರು ನೋಯ್ಡಾ ಕಡೆಗೆ ಹೋಗಿರಬಹುದೆಂದು, ನೋಯ್ಡಾ ಪೊಲೀಸರಿಗೆ ಸಹ ಎಚ್ಚರಿಕೆ ನೀಡಿದರೂ ಅವರೂ ಸಹ ಆ ಕಾರನ್ನು ಪತ್ತೆಹಚ್ಚಲಾಗಲಿಲ್ಲ ಎಂದೂ ತಿಳಿದುಬಂದಿದೆ. ಇನ್ನು, ಯಾವುದೇ ಮಹಿಳೆ ನಾಪತ್ತೆಯಾಗಿದ್ದಾರೆಯೇ ಎಂದು ತಿಳಿಯಲು ಪೊಲೀಸರು ಆ ಪ್ರದೇಶದಲ್ಲಿರುವ ಹಾಸ್ಟೆಲ್‌ಗಳು ಮತ್ತು ಪೇಯಿಂಗ್ ಗೆಸ್ಟ್ ರೂಂಗಳಿಗೆ ಹೋದರೂ ಬೆಳಕಿಗೆ ಬರಲಿಲ್ಲ. ಈ ಹಿನ್ನೆಲೆ ಇದು ಅಪಹರಣ ಪ್ರಕರಣವಾಗಿರುವ ಸಾಧ್ಯತೆಯನ್ನೂ ಪೊಲೀಸರು ತಳ್ಳಿ ಹಾಕಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಸೋದರರ ಬಲೆಯಲ್ಲಿ ಬಿದ್ದ ಇಬ್ಬರು ಹಿಂದೂ ಸೋದರಿಯರು: ಪೋಷಕರ ವಿರೋಧಕ್ಕೆ ಬೇಸತ್ತು ಯುವತಿಯರ ಆತ್ಮಹತ್ಯೆ!
ಹಾಗೆ, ಇದು "ಪರಿಚಿತರ ನಡುವಿನ ವಿವಾದ" ದ ಪ್ರಕರಣವಾಗಿರಬಹುದು ಎಂದು ದೆಹಲಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಂಗಾತಿ ಮೃತದೇಹ ತುಂಡು ತುಂಡು ಮಾಡಿ ಬೀದಿ ನಾಯಿಗೆ ಹಾಕ್ದ: ಶ್ರದ್ಧಾ ವಾಕರ್ ಹಂತಕನೇ ಇವನಿಗೆ ಸ್ಪೂರ್ತಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ