ಮದ್ದೂರಿನಲ್ಲಿ ನಡೆದ ಜೆಡಿಎಸ್ ಮುಖಂಡ ಅಪ್ಪುಗೌಡನ ಕೊಲೆ ಮಾಡುವುದಕ್ಕೆ ಸ್ವತಃ ಆತನ ಸ್ನೇಹಿತನೇ ಸುಪಾರಿ ಕೊಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಮಂಡ್ಯ (ಆ.12): ಸಕ್ಕರೆನಾಡು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದ ಜೆಡಿಎಸ್ ಮುಖಂಡ ಅಪ್ಪುಗೌಡನ ಕೊಲೆ ಮಾಡುವುದಕ್ಕೆ ಸ್ವತಃ ಆತನ ಸ್ನೇಹಿತನೇ ಸುಪಾರಿ ಕೊಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು, ಮಂಡ್ಯಜಿಲ್ಲೆಯ ಮದ್ದೂರಿನ ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ನಡೆದ ಜೆಡಿಎಸ್ ಮುಖಂಡ ಅಪ್ಪುಗೌಡ ಕೊಲೆಯತ್ನ ಪ್ರಕರಣದ ಸತ್ಯ ಹೊರಬಿದ್ದಿದೆ. ಅಪ್ಪುಗೌಡನ ಕೊಲೆಗೆ ಸ್ನೇಹಿತನಿಂದಲೇ ಸುಫಾರಿ ಕೊಡಲಾಗಿದೆ ಎಂಬ ಸತ್ಯಾಂಶವನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ. ಸುಪಾರಿ ನೀಡಿದ ವ್ಯಕ್ತಿಯನ್ನು ಮಧು ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಕುಖ್ಯಾತ ರೌಡಿಯೊಬ್ಬನಿಗೆ ಅಪ್ಪುಗೌಡನನ್ನು ಕೊಲೆ ಮಾಡುವಂತೆ ಮಧು ಸುಫಾರಿ ನೀಡಿದ್ದನು. ಕಳೆದ ಆರು ತಿಂಗಳಿಂದ ಈ ವೈಷಮ್ಯ ಆರಂಭವಾಗಿತ್ತು. ಮನಸ್ತಾಪ ತಾರಕಕ್ಕೆ ಏರಿದ್ದು, ಈಗ ಸುಪಾರಿ ಕೊಟ್ಟು ಕೊಲೆ ಮಾಡಲು ತಿಳಿಸಿದ್ದಾನೆ ಎಂದು ತಿಳಿದುಬಂದಿದೆ.
ಮದ್ದೂರಿನಲ್ಲಿ ಹಾಡಹಗಲೇ ಜೆಡಿಎಸ್ ಮುಖಂಡನ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು
ಮಧುಗೌಡನ ಮೇಲೆ ಚೆಕ್‌ಬೌನ್ಸ್ ಕೇಸ್ ಹಾಕಿದ್ದ ಅಪ್ಪುಗೌಡ: ಕೊಲೆಗೆ ಸುಪಾರಿ ಕೊಟ್ಟ ಮಧುಗೌಡ ಹಾಗೂ ಮಾರಣಾಂತಿಕ ಹಲ್ಲೆಗೆ ಒಳಗಾಗಿರುವ ಅಪ್ಪುಗೌಡ ಇಬ್ಬರೂ ಸ್ನೇಹಿತರು. ಜೊತೆಗೆ, ಹಲವು ವ್ಯವಹಾರಗಳಲ್ಲಿ ಉದ್ಯಮ ಪಾಲುದಾರರೂ (Business partner) ಆಗಿದ್ದರು. ಆದರೆ, ಇತ್ತೀಚೆಗೆ ವ್ಯವಹಾರದಲ್ಲಿ ಮನಸ್ತಾಪ ಉಂಟಾಗಿದ್ದರಿಂದ ಇಬ್ಬರೂ ದೋಸ್ತಿಗಳು ಪರಸ್ಪರ ದೂರವಾಗಿದ್ದರು. ಅಷ್ಟೇ ಅಲ್ಲದೇ ಅಪ್ಪುಗೌಡ, ತನ್ನ ದೂರಾದ ಸ್ನೇಹಿತ ಮಧು ವಿರುದ್ದ ಚೆಕ್ ಬೌನ್ಸ್ ಕೇಸ್ ಹಾಕಿದ್ದನು. ಈ ಎಲ್ಲ ಬೆಳವಣಿಗೆಯಿಂದ ಅವಮಾನ ತಾಳಲಾರದೇ ಸ್ವತಃ ಮಧುಗೌಡ, ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದ ಜಗದೀಶ್ ಎಂಬ ರೌಡಿಗೆ ಅಪ್ಪುಗೌಡನ ಕೊಲೆಗೆ ಸುಪಾರಿ ಕೊಡುತ್ತಾನೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ರೌಡಿಗೆ ಸುಪಾರಿ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಕುಳಿತು ಅಪ್ಪುಗೌಡನ ಕೊಲೆಗೆ ಜಗದೀಶ್ ಸ್ಕೆಚ್ ಹಾಕಿದ್ದನು. ಇಂದು ಜಗದೀಶ್ ಸಹಚರರಿಂದ ಅಪ್ಪುಗೌಡ ಮೇಲೆ ಮಾರಾಕಾಸ್ತ್ರಗಳಿಂದ ಅಟ್ಯಾಕ್ ಆಗಿದೆ. ಅದೃಷ್ಟವಶಾತ್ ಅಪ್ಪುಗೌಡ ಬದುಕುಳಿದಿದ್ದಾರೆ. ಸದ್ಯ ಮಧು ಸೇರಿದಂತೆ ಏಳು ಮಂದಿ ದುಷ್ಕರ್ಮಿಗಳನ್ನ ಮದ್ದೂರು ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಇನ್ನು ತೀವ್ರವಾಗಿ ಗಾಯಗೊಂಡಿರುವ ಅಪ್ಪುಗೌಡನನ್ನು ಮಂಡ್ಯದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು ಪೆಟ್ರೋಲ್ ಬಂಕ್ ಯುವತಿ ಎಳೆದೊಯ್ದ ಕಾಮುಕ, ಕೊಲೆ ಮಾಡಿ ಮನೆಮುಂದೆ ಎಸೆದ
ದೇವಸ್ಥಾನದಲ್ಲಿ ಕೈಮುಗಿದು ನಿಂತಾಗ ಅಟ್ಯಾಕ್: ಇಂದು ಬೆಳಗ್ಗೆ ಜೆಡಿಎಸ್ ಮುಖಂಡ ಅಪ್ಪುಗೌಡ ಮೇಲೆ ಮರ್ಡರ್ ಅಟ್ಯಾಕ್ ಮಾಡಲಾಗಿದೆ. ಅಪ್ಪುಗೌಡ, ಜೆಡಿಎಸ್ ಮುಖಂಡ ಹಾಗೂ ಮಾಜಿ ರೌಡಿ ಶೀಟರ್ ಆಗಿದ್ದನು. ಪ್ರತಿ ಶನಿವಾರ ಮಂಡ್ಯ ಜಿಲ್ಲೆ ಮದ್ದೂರಿನ ಪ್ರಸಿದ್ದ ಹೊಳೆ ಆಂಜನೇಯಸ್ವಾಮಿ ದೇಗುಲಕ್ಕೆ ಬರುವುದರ ಬಗ್ಗೆ ಖಚಿತ ಮಾಹಿತಿ ಇಟ್ಟುಕೊಂಡು ಹತ್ಯೆಗೆ ಅಟ್ಯಾಕ್ ಮಾಡಲಾಗಿದೆ. ದೇವಸ್ಥಾನದಲ್ಲಿ ತಾವು ಕೂಡ ಭಕ್ತರಂತೆ ದೇವಸ್ಥಾನದಲ್ಲಿ ಹಾಗೂ ಆವರಣದಲ್ಲಿ ಹೊಂಚು ಹಾಕಿ ನಿಂತಿದ್ದಾರೆ. ಈ ವೇಳೆ ದೇವಸ್ಥಾನಕ್ಕೆ ಬಂದು ದೇವರಿಗೆ ಕೈಮುಗಿಯುವಾಗ ಎಲ್ಲ ದುಷ್ಕರ್ಮಿಗಳು ಏಕಾಏಕಿ ಚಾಕು ಹಾಗೂ ಡ್ರ್ಯಾಗರ್ ಹಿಡಿದು ಮನಸೋ ಇಚ್ಛೆ ಚುಚ್ಚಿದ್ದಾರೆ.
ದುಷ್ಕರ್ಮಿಗಳನ್ನು ಅಟ್ಟಾಡಿಸಿ ಹಿಡಿದ ಪೊಲೀಸರು: ಜೆಡಿಎಸ್ ಮುಖಂಡ ಅಪ್ಪುಗೌಡ ಕೊಲೆಗೆ ಯತ್ನಿಸಿ ಪರಾರಿ ಆಗಿದ್ದ ಹಂತಕರನ್ನು ಮದ್ದೂರು ಪೊಲೀಸರು ಕೂಡ ಸಿನಿಮೀಯ ರೀತಿಯಲ್ಲಿ ಅಟ್ಟಾಡಿಸಿ (ಛೇಸಿಂಗ್) ಬಂಧಿಸಿದ್ದಾರೆ. ಟಾಟಾ ಸುಮೊನಲ್ಲಿ ಪರಾರಿಯಾಗುತ್ತಿದ್ದ ದುಷ್ಕರ್ಮಿಗಳು. ಟಾಟಾ ಸುಮೋ ಹಿಂಬಾಲಿಸಿ ಹಲಗೂರು ಪೊಲೀಸರ ಸಹಕಾರ ಪಡೆದು ದುಷ್ಕರ್ಮಿಗಳು ಅರೆಸ್ಟ್ ಮಾಡಿದ್ಆರೆ. ಹಲಗೂರು ಸಮೀಪ ದುಷ್ಕರ್ಮಿಗಳನ್ನ ಹಿಡಿದ ಖಾಕಿಪಡೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಬಳಿ ಬಂಧನ ಮಾಡಲಾಗಿದೆ.