ಬಿಜೆಪಿ ನಾಯಕನ ಜತೆಯ ರಾಸಲೀಲೆ ಫೋಟೋ ವೈರಲ್‌: ಕೇಸರಿ ಪಕ್ಷದ ನಾಯಕಿ ಸೂಸೈಡ್‌!

By BK Ashwin  |  First Published Aug 12, 2023, 3:27 PM IST

ಬಿಜೆಪಿ ಹಿರಿಯ ನಾಯಕರೊಬ್ಬರ ಜತೆಗಿನ ಆತ್ಮೀಯ ಫೋಟೋಗಳು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆದ ಬೆನ್ನಲ್ಲೇ ಇಂದ್ರಾಣಿ ತಹಬಿಲ್ದಾರ್ ಸೂಸೈಡ್‌ ಮಾಡ್ಕೊಂಡಿದ್ದಾರೆ ಎಂದು ತಿಳಿದುಬಂದಿದೆ.


ಗುವಾಹಟಿ (ಆಗಸ್ಟ್‌ 12, 2023): ಅಸ್ಸಾಂ ಬಿಜೆಪಿಯ ನಾಯಕಿ ಇಂದ್ರಾಣಿ ತಹಬಿಲ್ದಾರ್ ಎಂಬುವರು ಶುಕ್ರವಾರ ಗುವಾಹಟಿಯ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪಕ್ಷದೊಳಗೆ ಕಿಸಾನ್ ಮೋರ್ಚಾ ಕಾರ್ಯದರ್ಶಿ ಸ್ಥಾನವನ್ನು ಹೊಂದಿದ್ದ 48 ವರ್ಷ ವಯಸ್ಸಿನ ನಾಯಕಿ, ಬಿಜೆಪಿಯ ಹಿರಿಯ ನಾಯಕರೊಂದಿಗಿನ ಆತ್ಮೀಯ ಫೋಟೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. 

ಬಿಜೆಪಿ ಹಿರಿಯ ನಾಯಕರೊಬ್ಬರ ಜತೆಗಿನ ಆತ್ಮೀಯ ಫೋಟೋಗಳು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆದ ಬೆನ್ನಲ್ಲೇ ಇಂದ್ರಾಣಿ ತಹಬಿಲ್ದಾರ್ ಸೂಸೈಡ್‌ ಮಾಡ್ಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಖಾಸಗಿ ಕ್ಷಣದ ಫೋಟೋಗಳು ಬಹಿರಂಗವಾದ ಹಿನ್ನೆಲೆ ಇದರಿಂದ ಮನನೊಂದ ಬಿಜೆಪಿ ನಾಯಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. 

Tap to resize

Latest Videos

ಇದನ್ನು ಓದಿ: ಅಯ್ಯೋ ಪಾಪಿ: ಬಾಲಕನ ಕೊಂದು ಶವವನ್ನು ಮನೆಯಲ್ಲೇ ಮಂಚದ ಕೆಳಗಿನ ಬಾಕ್ಸ್‌ನಲ್ಲಿ ಬಚ್ಚಿಟ್ಟ ಮಹಿಳೆ!

ಗೋಲಾಘಾಟ್‌ ಜಿಲ್ಲೆಯ ಬಿಜೆಪಿ ಹಿರಿಯ ನಾಯಕರೊಬ್ಬರೊಂದಿಗೆ ಖಾಸಗಿ ಕ್ಷಣದ ಫೋಟೋಗಳು ವೈರಲ್‌ ಆಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ, ಆಗಸ್ಟ್‌ 11, ಶುಕ್ರವಾರ ಡ್ರಗ್‌ ಓವರ್‌ಡೋಸ್‌ನಿಂದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದೂ ಹೇಳಲಾಗಿದೆ. ಆ ಬಿಜೆಪಿ ನಾಯಕ, ಇಂದ್ರಾಣಿ ತಹಬಿಲ್ದಾರ್ ಅವರ ಮನೆಯಲ್ಲಿ ಬಾಡಿಗೆದಾರರಾಗಿದ್ದರು ಎಂದೂ ವರದಿಯಾಗಿದೆ.
 
ಇನ್ನು, ಇಂದ್ರಾಣಿ ತಹಬಿಲ್ದಾರ್ ಅವರ ಅಕಾಲಿಕ ನಿಧನ ಅಸ್ಸಾಂ ಬಿಜೆಪಿಯಲ್ಲಿ ಹಲವರಿಗೆ ಶಾಕ್‌ವುಂಟಾಗಿದೆ. ಪಕ್ಷದೊಳಗೆ ಸುಪ್ರಸಿದ್ಧ ಮತ್ತು ಪ್ರಭಾವಿ ಅಸ್ತಿತ್ವವನ್ನು ಸ್ಥಾಪಿಸಿಕೊಂಡಿದ್ದ ಅವರು, ವಾಣಿಜ್ಯ ಮಂಡಳಿಯ ಉಪಾಧ್ಯಕ್ಷೆ ಮತ್ತು ಕಿಸಾನ್ ಮೋರ್ಚಾದ ಖಜಾಂಚಿಗಳಂತಹ ನಿರ್ಣಾಯಕ ಪಾತ್ರಗಳನ್ನು ನಿರ್ವಹಿಸಿದರು. ಅಲ್ಲದೆ, ವೈರಲ್‌ ಆದ ಫೋಟೋಗಳಲ್ಲಿ ಚಿತ್ರಿಸಲಾದ ಬಿಜೆಪಿಯ ಹಿರಿಯ ನಾಯಕನೊಂದಿಗೆ ಅವರು ನಿಕಟ ಸಂಬಂಧ ಹೊಂದಿದ್ದಾರೆಂದು ವರದಿಯಾಗಿದೆ.

ಇದನ್ನೂ ಓದಿ: ಅಯ್ಯೋ ಇದೆಂತ ದುರಂತ: ತಾಯಿ ಅಂತ್ಯಸಂಸ್ಕಾರಕ್ಕೆ ಹೋಗ್ತಿದ್ದ ಪುತ್ರ ರಸ್ತೆಯಲ್ಲಿ ಹೆಣವಾದ!

ತನಿಖೆ ನಡೆಯುತ್ತಿದೆ
ಕಾನೂನು ಜಾರಿ ಅಧಿಕಾರಿಗಳು ಈ ಪ್ರಕರಣ ಸಂಬಂಧ ತ್ವರಿತ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ, ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ಘಟನೆಯ ಸುತ್ತಲಿನ ಪರಿಸ್ಥಿತಿಗಳ ಬಗ್ಗೆ ಸಂಪೂರ್ಣ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈ ದುರದೃಷ್ಟಕರ ಫಲಿತಾಂಶಕ್ಕೆ ಕಾರಣವಾದ ಖಾಸಗಿ ಚಿತ್ರಗಳನ್ನು ಸೋರಿಕೆ ಮಾಡಲು ಕಾರಣವಾದ ವ್ಯಕ್ತಿಗಳನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ಪೊಲೀಸರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದೂ ತಿಳಿದುಬಂದಿದೆ.

ತನಿಖೆ ಆರಂಭವಾಗ್ತಿದ್ದಂತೆ, ಸ್ಥಳೀಯ ಅಧಿಕಾರಿಗಳು ಫೋಟೋದಲ್ಲಿರುವ ಬಿಜೆಪಿ ನಾಯಕನ ಹುಡುಕಾಟದಲ್ಲಿದ್ದು, ಅವರು ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇಂದ್ರಾಣಿ ತಹಬಿಲ್ದಾರ್ ಮರಣದ ನಂತರ, ಆಕೆಯನ್ನು ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (GMCH) ಕಳುಹಿಸಲಾಗಿದ್ದು, ಪರೀಕ್ಷೆ ನಡೆಸಲಾಗ್ತಿದೆ. 

ಇದನ್ನೂ ಓದಿ: ಮಗಳನ್ನು ಕೊಂದು ಮೃತದೇಹ ಬೈಕ್‌ಗೆ ಕಟ್ಟಿ, ರಸ್ತೆಯಲ್ಲಿ ಎಳೆದೊಯ್ದ: ಕೊನೆಗೆ ರೈಲ್ವೆ ಹಳಿ ಮೇಲೆ ಎಸೆದ ಪಾಪಿ ತಂದೆ

ಆದರೆ, ಯಾವುದೇ ವ್ಯಕ್ತಿ ಜತೆಗೆ ಫೋಟೋ ಲೀಕ್‌ ಆಗಿರುವ ಬಗ್ಗೆ ನಮಗೆ ಯಾವುದೂ ದೂರು ಬಂದಿಲ್ಲ ಎಂದು ಗುವಾಹಟಿ ಡಿಸಿಪಿ ದೀಪಕ್‌ ಚೌಧರಿ ತಿಳಿಸಿದ್ದಾರೆ. ಅಲ್ಲದೆ, ಅಸಹಜ ಪ್ರಕರಣ ಕೈಗೆತ್ತಿಕೊಂಡಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದೂ ಅವರು ಹೇಳಿದ್ದಾರೆ. 

ಇದನ್ನೂ ಓದಿ: ಸಲಿಂಗಿ ಎಂದು ಹೀಯಾಳಿಸ್ತಿದ್ದ ಸೀನಿಯರ್ಸ್‌: ಹಾಸ್ಟೆಲ್‌ ಬಾಲ್ಕನಿಯಿಂದ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ

click me!