ಭಾನುವಾರ ವಿಶ್ವೇಶ್ವರಯ್ಯ ಲೇಔಟ್‌ನ ನಿರ್ಜನ ಪ್ರದೇಶದ ಮರವೊಂದರಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಜ್ಞಾನಭಾರತಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ನಾಗೇಶ್ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರು (ಫೆಬ್ರವರಿ 20, 2023): ಇತ್ತೀಚೆಗೆ ಪತ್ನಿಯನ್ನು ತೊರೆದು ಪ್ರೇಯಸಿ ಜತೆಗೆ ಪರಾರಿಯಾಗಿದ್ದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೊಮ್ಮಘಟ್ಟದ ವೀರಭದ್ರ ನಗರ ನಿವಾಸಿ ನಾಗೇಶ್ (30) ಮೃತ ವ್ಯಕ್ತಿ. ಭಾನುವಾರ ವಿಶ್ವೇಶ್ವರಯ್ಯ ಲೇಔಟ್‌ನ ನಿರ್ಜನ ಪ್ರದೇಶದ ಮರವೊಂದರಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಜ್ಞಾನಭಾರತಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ನಾಗೇಶ್ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ಮೃತ ನಾಗೇಶ್ ಆರು ವರ್ಷದ ಹಿಂದೆ ಮಧುಶ್ರೀ ಎಂಬಾಕೆಯನ್ನು ವಿವಾಹವಾಗಿದ್ದ. ದಂಪತಿ ಕೊಮ್ಮಘಟ್ಟದ ವೀರಭದ್ರ ನಗರದಲ್ಲಿ ನೆಲೆಸಿದ್ದರು. ಈ ನಡುವೆ ನಾಗೇಶ್‌ಗೆ ಸಹನಾ ಎಂಬಾಕೆ ಪರಿಚಿತಳಾಗಿ ಇಬ್ಬರು ಆತ್ಮೀಯರಾಗಿದ್ದರು. ದಿನ ಕಳೆದಂತೆ ಆತ್ಮೀಯತೆ ಅಕ್ರಮ ಸಂಬಂಧಕ್ಕೆ ಕಾರಣವಾಗಿತ್ತು. ಈ ವಿಚಾರ ಪತ್ನಿ ಮಧುಶ್ರೀಗೆ ಗೊತ್ತಾಗಿ ಮನೆಯಲ್ಲಿ ಆಗಾಗ ದಂಪತಿ ನಡುವೆ ಜಗಳವಾಗುತ್ತಿತ್ತು ಎನ್ನಲಾಗಿದೆ.
ಇದನ್ನು ಓದಿ: ಹಿಟ್ ಆ್ಯಂಡ್ ರನ್: ಹಿಂಬದಿಯಿಂದ ಬೈಕ್‌ಗೆ ಗುದ್ದಿದ ಬಿಎಂಟಿಸಿ ಬಸ್; ಫುಡ್ ಡೆಲಿವರಿ ಬಾಯ್ ಸ್ಥಳದಲ್ಲೇ ಸಾವು
ಫೆಬ್ರವರಿ 10ರಂದು ನಾಗೇಶ್, ಪ್ರೇಯಸಿ ಸಹನಾ ಜತೆಗೆ ಪರಾರಿಯಾಗಿದ್ದ. ಈ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಸಹನಾ ತಂದೆ ನಾಪತ್ತೆ ದೂರು ನೀಡಿದ್ದರು. ಈ ನಡುವೆ ನಾಗೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಗೇಶ್‌ನನ್ನು ಕೊಲೆ ಮಾಡಲಾಗಿದೆ ಎಂದು ತಂದೆ ಆರೋಪ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕೊಡಗು: ಹಣದ ವಿಚಾರಕ್ಕೆ ಮಗನನ್ನೇ ಗುಂಡಿಕ್ಕಿ ಕೊಂದ ತಂದೆ