ಗಂಡನ ಕಾರಿಗೆ ಜಿಪಿಎಸ್‌... ಪತ್ನಿ ಆಧಾರ್ ಕಾರ್ಡ್‌ ಕೊಟ್ಟು ಗೆಳತಿಯೊಂದಿಗೆ ಹೋಟೆಲ್ ಸೇರಿದ್ದ ಉದ್ಯಮಿ ಎಸ್ಕೇಪ್!

Published : Feb 05, 2022, 02:35 AM IST
ಗಂಡನ ಕಾರಿಗೆ ಜಿಪಿಎಸ್‌... ಪತ್ನಿ ಆಧಾರ್ ಕಾರ್ಡ್‌ ಕೊಟ್ಟು ಗೆಳತಿಯೊಂದಿಗೆ ಹೋಟೆಲ್ ಸೇರಿದ್ದ ಉದ್ಯಮಿ ಎಸ್ಕೇಪ್!

ಸಾರಾಂಶ

* ಪತ್ನಿಗೆ ಮಹಾಮೋಸ ಮಾಡುತ್ತಿದ್ದ ಕಿರಾತಕ ಉದ್ಯಮಿ * ಪತ್ನಿಯ ಆಧಾರ್ ಕಾರ್ಡ್ ಮೂಲಕ ಪ್ರಿಯತಮೆಯೊಂದಿಗೆ ಹೋಟೆಲ್  ಪ್ರವೇಶ * ರೆಡ್ ಹ್ಯಾಂಡ್ ಆಗಿ ಗಂಡನ ಹಿಡಿಯಲು ಯತ್ನ * ಮಾಹಿತಿ ತಿಳಿದು ಗೆಳತಿಯೊಂದಿಗೆ ಪರಾರಿ

ಪುಣೆ(ಫೆ. 05)  ಈತ ಬಹುದೊಡ್ಡ ಕಿರಾತಕ. ಮನೆಯಲ್ಲಿ ಪತ್ನಿ (Wife) ಇದ್ದರೂ ಪ್ರಿಯತಮೆ (Girl Friend)  ಜತೆ ಹೋಟೆಲ್ ಸೇರಿಕೊಂಡಿದ್ದ. ಮಾಡಿದ್ದ ಒಂದು ಸಣ್ಣ ಎಡವಟ್ಟಿನಿಂದ ಈಗ ಸಿಕ್ಕಿಹಾಕಿಕೊಂಡಿದ್ದಾನೆ.    ಹೋಟೆಲ್‌ ನಲ್ಲಿ ತಪಾಸಣೆ ವೇಳೆ ಪತ್ನಿಯ ಆಧಾರ್ ಕಾರ್ಡ್ (Aadhaar card) ಬಳಸಿದ ಆರೋಪದ ಮೇಲೆ 41 ವರ್ಷದ ವ್ಯಕ್ತಿ ಮತ್ತು ಆತನ ಪ್ರಿಯತಮೆಯ ವಿರುದ್ಧ ಕೇಸ್ ದಾಖಲಾಗಿದೆ.

ವ್ಯಕ್ತಿ ಹಾಗೂ ಆತನ ಗರ್ಲ್ ಫ್ರೆಂಡ್ ಇಬ್ಬರ ವಿರುದ್ಧ ಹಿಂಜೆವಾಡಿ ಪೊಲೀಸ್ ಠಾಣೆಯಲ್ಲಿ (Police) ಪ್ರಕರಣ ದಾಖಲಾಗಿದೆ.  ಗುಜರಾತ್ ಮೂಲದ ಉದ್ಯಮಿ ಪ್ರಿಯತಮೆಯೊಂದಿಗೆ ಹೋಟೆಲ್ ಸೇರಿದ್ದ. ಉದ್ಯಮಿ  ಪತ್ನಿ ಕಂಪನಿಯಲ್ಲಿ ನಿರ್ದೇಶಕರಾಗಿದ್ದಾರೆ. ಪತಿ ತನಗೆ ಸುಳ್ಳು ಹೇಳಿ ಹೊರಗೆ ಹೋಗುತ್ತಿದ್ದರಿಂದ ಅನುಮಾನಗೊಂಡ ಮಹಿಳೆ ತನ್ನ ಗಂಡನ ಕಾರಿಗೆ ಜಿಪಿಎಸ್ (GPS) ಅಳವಡಿಕೆ ಮಾಡಿದ್ದರು. ಗಂಡ ಮೋಸ ಮಾಡುತ್ತಿರುವುದು ಪಕ್ಕಾ ಆದಂತೆ ಪೊಲೀಸರಿಗೆ ದೂರು ನೀಡಿದ್ದಳು.

Suvarna FIR : ತುಂಡು ಆಸ್ತಿಗೆ ಇಬ್ಬರ ಹೆಂಡಿರ ಮುದ್ದಿನ ಗಂಡನಿಗೆ ಎಂಥಾ ಸ್ಥಿತಿ ತಂದ್ರು..!

ಮಹಿಳೆ ತನ್ನ ಪತಿಯ ಎಸ್ ಯುವಿ ಕಾರಿನಲ್ಲಿ ಜಿಪಿಎಸ್ ಟ್ರ್ಯಾಕರ್ ಅಳವಡಿಸಿ ಎಲ್ಲ ಮಾಹಿತಿ ಕಲೆಹಾಕಿಕೊಂಡಿದ್ದಳು.  ಕಳೆದ ವರ್ಷ ನವೆಂಬರ್‌ನಲ್ಲಿ ಪತಿ ವ್ಯಾಪಾರದ ಮೇಲೆ ಬೆಂಗಳೂರಿಗೆ ಹೋಗುವುದಾಗಿ ಹೇಳಿ ಹೋಗಿದ್ದರು. ಆದರೆ ಅವರ ಕಾರಿನ ಸ್ಥಳವನ್ನು ಪರಿಶೀಲಿಸಿದಾಗ ಕಾರು ಪುಣೆಯಲ್ಲಿರುವುದು ಪತ್ತೆಯಾಗಿತ್ತು. ರೆಡ್ ಹ್ಯಾಂಡ್ ಆಗಿ ಪತಿಯನ್ನು ಹಿಡಿಯಲು ಸಮಯ ಕಾದಿದ್ದಳು.

ಜಿಪಿಎಸ್ ಆಧಾರದಲ್ಲಿ ಪೊಲೀಸರು ದಾಳಿ ಮಾಡಿದಾಗ ಉದ್ಯಮಿ ಬೇರೆ ಒಬ್ಬಳ ಜತೆ ಹೋಟೆಲ್ ನಲ್ಲಿ ಇರುವುದು ಗೊತ್ತಾಯಿತು. ಆದರೆ ಪ್ರಕರಣ ಇಲ್ಲಿಗೆ ನಿಲ್ಲಲ್ಲ.  ಪತ್ನಿಯ ಆಧಾರ್ ಕಾರ್ಡ ಇಟ್ಟುಕೊಂಡು ಪ್ರಿಯತಮೆಯನ್ನೇ ಹೆಂಡತಿ ಎಂದು ಹೋಟೆಲ್ ಗೆ ಪ್ರವೇಶ ಪಡೆದುಕೊಂಡಿದ್ದ. ಸಿಸಿಟಿವಿ ದೃಶ್ಯಾವಳಿ ನೋಡಿದಾಗ ಈತನ ಕಿರಾತಕತನವೆಲ್ಲ ಬಯಲಾಗಿದೆ. 

ದೂರುದಾರರು ಹೋಟೆಲ್ ಅನ್ನು ಸಂಪರ್ಕಿಸಿದಾಗ, ವ್ಯಕ್ತಿ ತನ್ನ ಹೆಂಡತಿಯೊಂದಿಗೆ ಚೆಕ್ ಇನ್ ಮಾಡಿದ್ದಾನೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ಮಹಿಳೆ ತನ್ನ ಪತಿ ತನ್ನ ಆಧಾರ್ ಕಾರ್ಡ್ ಬಳಸಿ ಬೇರೊಬ್ಬ ಮಹಿಳೆಯೊಂದಿಗೆ ಹೋಟೆಲ್‌ಗೆ ಚೆಕ್ ಇನ್ ಮಾಡಿರುವುದು ಪತ್ತೆಯಾಗಿದೆ . ತಲೆಮರೆಸಿಕೊಂಡಿರುವ ವ್ಯಕ್ತಿ ಮತ್ತು ಆತನ ಗೆಳತಿಯ ವಿರುದ್ಧ ಐಪಿಸಿಯ ಸೆಕ್ಷನ್ 419 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಟ್ರಾವೆಲ್ ಬ್ಯಾಗ್ ನಲ್ಲಿ ಗೆಳತಿ ತುಂಬಿ ತಂದಿದ್ದ: ಸುರಸುಂದರಾಂಗನ ಕರಾಮತ್ತು ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ. ಗೆಳತಿಯನ್ನು ಹಾಸ್ಟೇಲ್ (Hostal) ಒಳಕ್ಕೆ ಕರೆದೊಯ್ಯಲು ಈತ ಮಾಡಿದ ಮಾಸ್ಟರ್ ಪ್ಲಾನ್ ನೋಡಿದ್ರೆ.. ಉಡುಪಿ (Udupi) ಜಿಲ್ಲೆಯಿಂದ ಘಟನೆ ವರದಿಯಾಗಿತ್ತು

ಸದ್ಯ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.. ಟ್ರಾವೆಲ್ ಬ್ಯಾಗ್ ತೆಗೆದುಕೊಂಡು ಯುವಕ ಓಡಲು  ಮುಂದಾಗಿದ್ದ  ವೇಳೆ ಅನುಮಾನಗೊಂಡು ಚೆಕ್ ಮಾಡಿದಾಗ ಒಳಗಿನಿಂದ ಯುವತಿ ಎದ್ದು ಬಂದಿದ್ದಳು.

ಡೇಟಿಂಗ್ ಆಪ್ ವಂಚಕ:  ಡೇಟಿಂಗ್ (Dating App) ಆಪ್ ಟಿಂಡರ್ ನಲ್ಲಿ ಗೆಳೆತನ ಮಾಡಿಕೊಂಡು ಯುವತಿಯರ ಜೊತೆ ವಿಕೃತಿ ಮೆರೆದಿದ್ದ ಆರೋಪಿಯನ್ನು (Arrest) ಬಂಧಿಸಲಾಗಿದೆ. ಅಭಿಷೇಕ್ ಅಲಿಯಾಸ್ ಸುಶಾಂತ್ ಜೈನ್ ಬಂಧಿತ ಆರೋಪಿ. ಟಿಂಡರ್ ಡೇಟಿಂಗ್ ಆಪ್ ನಲ್ಲಿ ಯುವತಿಯರ (Woman) ಪರಿಚಯ ಮಾಡಿಕೊಳ್ತಿದ್ದ. ಬಳಿಕ ಭೇಟಿ ಮಾಡಿ ಸ್ನೇಹ ಬೆಳೆಸುತಿದ್ದ. ಹಲವು ಬಾರಿ ಯುವತಿಯರ ಮನೆಗೂ ಹೋಗಿದ್ದ ಯಾರು ಇಲ್ಲದ ಸಮಯದಲ್ಲಿ ಮನೆಗೆ ಹೋಗುತ್ತಿದ್ದ ಕಿರಾತಕನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹಣ ಸುಲಿಗೆ ಮಾಡ್ತಿದ್ದ ನಕಲಿ ಪಿಎಸ್ಐ ಬಂಧನ: ಪೊಲೀಸ್‌ ಕನಸು ಈಡೇರದಾಗ ಸುಲಿಗೆ ಕೃತ್ಯ
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!