* ಡೇಟಿಂಗ್ ಆಪ್ ನಲ್ಲಿ ಯುವತಿಯರ ಪರಿಚಯ ಮಾಡಿಕೊಳ್ಳುವ ಕಿಲಾಡಿ
* ಯಾರೂ ಇಲ್ಲದ ಸಮಯಕ್ಕೆ ಕಾದು ಅವರ ಮನೆಗೆ ಹೋಗುತ್ತಿದ್ದ
* ಗೆಳೆತನ ಬೆಳಸಿ ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್
ಬೆಂಗಳೂರು(ಫೆ. 05) ಡೇಟಿಂಗ್ (Dating App) ಆಪ್ ಟಿಂಡರ್ ನಲ್ಲಿ ಗೆಳೆತನ ಮಾಡಿಕೊಂಡು ಯುವತಿಯರ ಜೊತೆ ವಿಕೃತಿ ಮೆರೆದಿದ್ದ ಆರೋಪಿಯನ್ನು (Arrest) ಬಂಧಿಸಲಾಗಿದೆ. ಅಭಿಷೇಕ್ ಅಲಿಯಾಸ್ ಸುಶಾಂತ್ ಜೈನ್ ಬಂಧಿತ ಆರೋಪಿ. ಟಿಂಡರ್ ಡೇಟಿಂಗ್ ಆಪ್ ನಲ್ಲಿ ಯುವತಿಯರ (Woman) ಪರಿಚಯ ಮಾಡಿಕೊಳ್ತಿದ್ದ. ಬಳಿಕ ಭೇಟಿ ಮಾಡಿ ಸ್ನೇಹ ಬೆಳೆಸುತಿದ್ದ. ಹಲವು ಬಾರಿ ಯುವತಿಯರ ಮನೆಗೂ ಹೋಗಿದ್ದ ಯಾರು ಇಲ್ಲದ ಸಮಯದಲ್ಲಿ ಮನೆಗೆ ಹೋಗುತ್ತಿದ್ದ.
ಬಳಿಕ ಯುವತಿಯರ ಜೊತೆ ರೊಮ್ಯಾಂಟಿಕ್ ಅಗಿ ವರ್ತನೆ ಮಾಡ್ತಿದ್ದ. ಖಾಸಗಿ ಸಮಯ ಕಳೆಯುವಂತೆ ಬಲವಂತವಾಗಿ ಬಟ್ಟೆಗಳನ್ನು ಬಿಚ್ಚಿಸುತಿದ್ದ. ಯುವತಿಯರ ಅನುಮತಿ ಇಲ್ಲದೆ ಅವರ ಖಾಸಗಿ ಫೋಟೋ ವಿಡಿಯೋ ತೆಗೆದುಕೊಳ್ಳುತಿದ್ದ. ಬಳಿಕ ಪೋನ್ ಮಾಡಿ ಹಣಕ್ಕೆ ಬೇಡಿಕೆಯಿಡುತ್ತ ಬ್ಲಾಕ್ ಮೇಲ್ ಮಾಡುವುದನ್ನೇ ವಾಡಿಕೆ ಮಾಡಿಕೊಂಡಿದ್ದ.
ಫೆಬ್ರವರಿ ಒಂದರಂದು ಕೊಡಿಹಳ್ಳಿಯಲ್ಲಿ ಇದೇ ರೀತಿ ಕೃತ್ಯ ಎಸಗಿದ್ದ. ಘಟನೆ ಸಂಭಂಧ ಯುವತಿ ಪೊಲೀಸರಿಗೆ ದೂರು ನೀಡಿದ್ದರು ದೂರಿನ ಅನ್ವಯ ಕಾರ್ಯಚರಣೆ ನಡೆಸಿ ಎಚ್ ಎಸ್ ಆರ್ ಲೇಔಟ್ ನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
Breakup Story : ಪ್ರೀತಿಯ ಗುಂಗಲ್ಲಿ ಗರ್ಲ್ ಫ್ರೆಂಡ್ ಜೊತೆ ಕಿಡ್ನಿಯನ್ನೂ ಕಳಕೊಂಡ ಹುಡುಗ!
ಹಣ ಕಳೆದುಕೊಂಡಿದ್ದ ಅಂಕಲ್: 65 ವರ್ಷದ ಅಂಕಲ್ ಒಬ್ಬರು ನಕಲಿ ಡೇಟಿಂಗ್ ಆ್ಯಪ್ ಅಹವಾಸಕ್ಕೆ ಬಿದ್ದು, 73 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಮುಂಬೈನಿಂದ ವರದಿಯಾಗಿತ್ತು. ನವೀ ಮುಂಬೈನಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ನಕಲಿ ಕಾಲ್ ಸೆಂಟರ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಓರ್ವ ಮಹಿಳೆ ಹಾಗೂ ಮಂಗಳಮುಖಿಯೂ ಭಾಗಿಯಾಗಿದ್ದರು. ಈ ಮೂವರು ಮೋಸ ಮಾಡಿ 73.5 ಲಕ್ಷ ರೂಪಾಯಿ ಲಪಟಾಯಿಸಿದ್ದರು.
2018ರಲ್ಲಿ ಸ್ನೇಹ ಹೆಸರಿನ ಯುವತಿ ಈ 65 ವರ್ಷದ ವ್ಯಕ್ತಿಯನ್ನು ಸಂಪರ್ಕಿಸಿದ್ದಾಳೆ. ಆಕೆ ಆ ವ್ಯಕ್ತಿಗೆ ಡೇಟಿಂಗ್ ಆ್ಯಪ್ ಸೇವೆ ಕುರಿತು ಮಾಹಿತಿ ನೀಡಿದ್ದಾಳೆ. ಅಲ್ಲದೇ ಬಣ್ಣ ಬಣ್ಣದ ಮಾತುಗಳಿಂದಲೇ ಸದಸ್ಯತ್ವ ಹಾಗೂ ನೋಂದಣಿಗೆಂದು ಬಹುದೊಡ್ಡ ಮೊತ್ತವನ್ನೇ ಪಡೆದುಕೊಂಡಿದ್ದಾರೆ. ಡೇಟಿಂಗ್ ಮಾಡಲು ಯುವತಿ ಆ್ಯಪ್ ನಲ್ಲಿ ತಿಳಿಸಿದ ಸ್ಥಳಕ್ಕೆ ಬರುತ್ತಾಳೆ ಎಂದೂ ನಂಬಿಸಿದ್ದಾರೆ. ಆದರೆ ವ್ಯಕ್ತಿ ಮಾತ್ರ ಅನಾಮಿಕ ಕರೆಯನ್ನು ನಂಬಿ ಕೆಟ್ಟಿದ್ದಾರೆ.
ಆದರೆ ತಾನು ಮೋಸ ಹೋದ ವಿಚಾರ ತಿಳಿದ ವ್ಯಕ್ತಿ ತನ್ನ ಸದಸ್ಯತ್ವ ತೆಗೆದು ಹಾಕುವಂತೆ ಯುವತಿ ಬಳಿ ಕೇಳಿಕೊಂಡಿದ್ದಾನೆ. ಈ ಅವಕಾಶವನ್ನೇ ಬಳಸಿಕೊಂಡ ಯುವತಿ ಸದಸ್ಯತ್ವ ಕ್ಯಾನ್ಸಲ್ ಮಾಡಲು ಮತ್ತೆ ಹಣದ ಬೇಡಿಕೆ ಇಟ್ಟಿದ್ದಾಳೆ. ಅಲ್ಲದೇ ಹೆಣ್ಮಕ್ಕಳನ್ನು ಕಳುಹಿಸಿಕೊಡುವಂತೆ ಡಿಮ್ಯಾಂಡ್ ಮಾಡುತ್ತಾರೆ ಎಂದು ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದ ಯುವತಿ, ನಕಲಿ ಲೀಗಲ್ ನೋಟಿಸ್ ಕೂಡಾ ಕಳುಹಿಸಿದ್ದಳು.
ಮ್ಯಾಟ್ರಿಮೋನಿ ಫ್ರಾಡ್: ಬ್ಯಾಂಕ್ (Bank) ಮಹಿಳಾ ಉದ್ಯೋಗಿಯೊಬ್ಬರಿಗೆ ವೈವಾಹಿಕ ಜಾಲತಾಣದಲ್ಲಿ(matrimonial site) ಪರಿಚಯವಾದ ವ್ಯಕ್ತಿಯೊಬ್ಬ ಮದುವೆ (Marriage)ಆಗುವುದಾಗಿ ನಂಬಿಸಿ .7.55 ಲಕ್ಷ ಪಡೆದು ವಂಚಿಸಿದ್ದ. ಸುಧಾಮನಗರದ 29 ವರ್ಷದ ಯುವತಿ ಮೋಸ ಹೋಗಿದ್ದು, ಈ ಕೃತ್ಯ ಎಸಗಿದ ರಾಜೇಶ್ ಕುಮಾರ್ ಎಂಬಾತನ ಪತ್ತೆಗೆ ಕೇಂದ್ರ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಲೆ ಬೀಸಿದ್ದರು.
ಯುವತಿ ಕೆಲ ದಿನಗಳ ಹಿಂದೆ ಮ್ಯಾಟ್ರಿಮೋನಿಯಲ್‌ನಲ್ಲಿ ಸ್ವ-ವಿವರ ಅಪ್‌ಲೋಡ್ ಮಾಡಿದ್ದರು. 2021ರ ಡಿಸೆಂಬರ್ 30ರಂದು ಯುವತಿಗೆ ಕರೆ ಮಾಡಿದ ರಾಜೇಶ್, ತಾನು ಅಮೆರಿಕದಲ್ಲಿ ನೆಲೆಸಿರುವ ಬೆಂಗಳೂರು ಮೂಲದ ಯುವಕ ಎಂದು ಪರಿಚಯಿಸಿಕೊಂಡಿದ್ದಾನೆ. ನೀವು ಒಪ್ಪಿದರೆ ಮದುವೆ ಆಗುವುದಾಗಿ ಸಹ ಹೇಳಿದ್ದಾನೆ. ತಾನು ಅಮೆರಿಕದಿಂದ ಮರಳಬೇಕಾದರೆ ಮದುವೆ ಪ್ರಮಾಣ ಪತ್ರ ಸಲ್ಲಿಸಬೇಕಿದೆ. ಇದಕ್ಕಾಗಿ ಬ್ಯಾಂಕ್ ಸಿಬಿಲ್ ಸ್ಕೋರ್ ಹೆಚ್ಚಿಸಿಕೊಳ್ಳಬೇಕಿದ್ದು, ತುರ್ತು ಹಣದ ಅವಶ್ಯಕತೆ ಇದೆ ಎಂದಿದ್ದಾನೆ. ಆರೋಪಿ ನೀಡಿದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ .7.55 ಲಕ್ಷ ವರ್ಗಾವಣೆ ಮಾಡಿದ್ದು ಸಂಕಷ್ಟಕ್ಕೆ ಸಿಲುಕಿದ್ದರು.