ವಿದ್ಯುತ್ ಬಿಲ್‌ ಜಾಸ್ತಿ ಬಂದಿದ್ದಕ್ಕೆ ಕಲೆಕ್ಟರ್‌ಗೆ ಚಾಕು ಹಾಕಿದ ಭೂಪ: ಕಾಂಗ್ರೆಸ್‌ ಸರ್ಕಾರಕ್ಕೆ ಜನರ ಹಿಡಿಶಾಪ..!

Published : Jul 14, 2023, 12:30 AM IST
ವಿದ್ಯುತ್ ಬಿಲ್‌ ಜಾಸ್ತಿ ಬಂದಿದ್ದಕ್ಕೆ ಕಲೆಕ್ಟರ್‌ಗೆ ಚಾಕು ಹಾಕಿದ ಭೂಪ: ಕಾಂಗ್ರೆಸ್‌ ಸರ್ಕಾರಕ್ಕೆ ಜನರ ಹಿಡಿಶಾಪ..!

ಸಾರಾಂಶ

ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಪ್ರಶಾಂತ್‌ಗೆ ಮಾದಪುರ ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮಡಿಕೇರಿಯಲ್ಲಿ ಇರುವ ಜಿಲ್ಲಾಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಕೊಡಲಾಗುತ್ತಿದೆ. ತೀವ್ರ ರಕ್ತಸ್ರಾವವಾಗಿರುವುದರಿಂದ ಪ್ರಶಾಂತ್ ಅಸ್ವಸ್ಥಗೊಂಡಿದ್ದು, ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಜು.14): ವಿದ್ಯುತ್ ಬಿಲ್‌ ಜಾಸ್ತಿ ಕೊಟ್ಟಿದ್ದಾರೆ ಎಂಬ ವಿಷಯಕ್ಕೆ ಜಗಳ ತೆಗೆದ ವ್ಯಕ್ತಿಯೊಬ್ಬ ವಿದ್ಯುತ್ ಬಿಲ್‌ ಕಲೆಕ್ಟರ್‌ಗೆ ಚಾಕುವಿನಿಂದ ಇರಿದ ಘಟನೆ ಕೊಡಗು ಜಿಲ್ಲೆಯ ಸೋಮವಾಪೇಟೆ ತಾಲ್ಲೂಕಿನ ಜಂಬೂರು ಬಾಣೆಯಲ್ಲಿ ನಿನ್ನೆ(ಗುರುವಾರ) ನಡೆದಿದೆ. 

ಮಾದಾಪುರದ ನಿವಾಸಿ ವಿದ್ಯುತ್ ಬಿಲ್‌ ಕಲೆಕ್ಟರ್ ಪ್ರಶಾಂತ್ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ. ರತೀಶ್ ಚಾಕುವಿನಿಂದ ಇರಿದ ಆರೋಪಿ. ಪ್ರಶಾಂತ್‌ನ ಹೊಟ್ಟೆಯ ಎಡಭಾಗಕ್ಕೆ ಚಾಕು ಇರಿತವಾಗಿದ್ದು ಚಾಕು ನಾಲ್ಕು ಇಂಚಿನಷ್ಟು ಹೊಟ್ಟೆ ಒಳಕ್ಕೆ ತೂರಿದೆ ಎಂದು ವೈದ್ಯರು ಹೇಳಿದ್ದಾರೆ. 

ವಿದ್ಯುತ್‌ ದರ ಏರಿಕೆಗೆ ಕಾರಣ ಯಾರು?: ವಿಧಾನಸಭೆಯಲ್ಲಿ ವಾಗ್ವಾದ

ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಪ್ರಶಾಂತ್‌ಗೆ ಮಾದಪುರ ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮಡಿಕೇರಿಯಲ್ಲಿ ಇರುವ ಜಿಲ್ಲಾಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಕೊಡಲಾಗುತ್ತಿದೆ. ತೀವ್ರ ರಕ್ತಸ್ರಾವವಾಗಿರುವುದರಿಂದ ಪ್ರಶಾಂತ್ ಅಸ್ವಸ್ಥಗೊಂಡಿದ್ದು, ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

ಗುರುವಾರ ಸಂಜೆ ಐದು ಗಂಟೆ ವೇಳೆಗೆ ವಿದ್ಯುತ್ ಬಿಲ್‌ ಕೊಡಲು ಕಲೆಕ್ಟರ್ ಪ್ರಶಾಂತ್ ಜಂಬೂರಿಗೆ ಹೋಗಿದ್ದರು. ಆರೋಪಿ ರತೀಶ್ ಮನೆಗೆ ವಿದ್ಯುತ್ ಮೀಟರ್ ರೀಡಿಂಗ್ ಮಾಡಿ ಬಿಲ್ಲ್‌ ಕೊಟ್ಟಿದ್ದಾರೆ. ಈ ವೇಳೆ ವಿದ್ಯುತ್ ಬಿಲ್‌ 1400 ರೂಪಾಯಿ ಬಂದಿದ್ದು, ರಶೀದಿಯನ್ನು ಕೊಟ್ಟಿದ್ದಾರೆ. ಆದರೆ ಆರೋಪಿ ರತೀಶ್ ಇಷ್ಟೊಂದು ವಿದ್ಯುತ್ ಬಿಲ್‌ ಹೇಗೆ ಬಂತು ಎಂದು ಅವಾಚ್ಯ ಶಬ್ದಗಳಿಂದ ಕಲೆಕ್ಟರ್ ಪ್ರಶಾಂತ್‌ಗೆ ನಿಂದಿಸಿದ್ದಾನೆ ಎನ್ನಲಾಗಿದೆ. ಇದನ್ನು ಪ್ರಶಾಂತ್ ಕೆಇಬಿ ಜೆಇಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಜೆಇ ಮೀಟರ್ ರೀಡಿಂಗ್ ಫೋಟೋ ತೆಗೆದು ಕಳುಹಿಸಿ ನೋಡೋಣ ಎಂದು ಹೇಳಿದ್ದಾರೆ. ಹೀಗಾಗಿ ಪ್ರಶಾಂತ್ ಮೀಟರ್ ರೀಡಿಂಗ್ ಫೋಟೋ ತೆಗೆಯಲು ಹೋದಾಗ ಆರೋಪಿ ರತೀಶ್ ಮನೆಯೊಳಗಿನಿಂದ ಚಾಕು ತಂದು ಇರಿದಿದ್ದಾನೆ ಎನ್ನಲಾಗಿದೆ. ಸದ್ಯ ಘಟನೆ ಸಂಬಂಧ ಮಾದಾಪುರ ಹೊರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. 

ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಪ್ರಶಾಂತ್ ಅವರ ಭಾವ ಸುರೇಶ್ ವಿದ್ಯುತ್  ಬಿಲ್ಲು ಜಾಸ್ತಿ ಬಂದಿರುವುದು ಯಾಕೆ ಎಂದು ರತೀಶ್ ಪ್ರಶಾಂತ್ನನ್ನು ನಿಂದಿಸಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ಚಾಕುವಿನಿಂದ ಇರಿದಿದ್ದಾನೆ. ಘಟನೆ ನಡೆಯುತ್ತಿರುವುದು ಗೊತ್ತಾಗುತ್ತಿದ್ದಂತೆ ಕೂಡಲೇ ನಾನು ಕೂಡ ಧಾವಿಸಿ ಚಿಕಿತ್ಸೆ ಕೊಡಿಸುತ್ತಿದ್ದೇನೆ. ಇಂತಹ ಹೀನ ಕೃತ್ಯ ನಡೆಸಿರುವ ವ್ಯಕ್ತಿಗೆ ಸರಿಯಾದ ಶಿಕ್ಷೆ ನೀಡಬೇಕು ಎಂದು ಸುರೇಶ್ ಒತ್ತಾಯಿಸಿದ್ದಾರೆ. 

ಇನ್ಮುಂದೆ ಗ್ರಾಹಕರಿದ್ದಲ್ಲಿಗೆ ತೆರಳಿ ಗೃಹಜ್ಯೋತಿಗೆ ನೋಂದಣಿ ಮಾಡಲಿವೆ ಎಸ್ಕಾಂಗಳು

ಇನ್ನು ವಿದ್ಯುತ್ ಬಿಲ್‌ ಕಲೆಕ್ಟ್ ಏಜೆನ್ಸಿಯ ಮ್ಯಾನೇಜರ್ ಶ್ರೀಕಾಂತ್ ಮಾತನಾಡಿ ವಿದ್ಯುತ್ ಬಿಲ್ಲು ಜಾಸ್ತಿ ಬಂದಿರುವ ಬಗ್ಗೆ ಗ್ರಾಹಕ ಪ್ರಶ್ನಿಸಿದ್ದಾನೆ. ವಿದ್ಯುತ್ ಬಿಲ್‌ ಜಾಸ್ತಿ ಬಂದಿರುವ ಬಗ್ಗೆ ಅಧಿಕಾರಿಗಳನ್ನು ಕೇಳುವಂತೆ ಹೇಳಿದರೂ ಗಲಾಟೆ ಮಾಡಿ ಚಾಕು ಇರಿದಿದ್ದಾನೆ. ಸದ್ಯ ಪ್ರಶಾಂತ್ ತೀವ್ರ ರಕ್ತಸ್ರಾವದಿಂದ ಬಳಲಿದ್ದಾರೆ. ವಿದ್ಯುತ್ ಬಿಲ್‌ ಜಾಸ್ತಿಯಾದ ನಂತರ ಕೆಲಸ ಮಾಡುವುದು ಕಷ್ಟವಾಗಿದೆ ಎಂದಿದ್ದಾರೆ. ಸದ್ಯ ಕೆಇಬಿ ಜೆಇ ರತೀಶ್ ವಿರುದ್ಧ ದೂರು ನೀಡಿದ್ದರೆ, ಇತ್ತ ಏಜೆನ್ಸಿಯಿಂದಲೂ ದೂರು ನೀಡಲಾಗಿದೆ. 

ಒಟ್ಟಿನಲ್ಲಿ ಒಂದೆಡೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಗೃಹ ಜ್ಯೋತಿ ಯೋಜನೆ ಜಾರಿಗೆ ತಂದು 200 ಯುನಿಟ್ ವರೆಗೆ ವಿದ್ಯುತ್ ಫ್ರೀ ಎಂದು ಘೋಷಿಸಿದೆ. ಬಿಲ್‌ ಜಾಸ್ತಿ ಯಾರೇ ಮಾಡಲಿ, ಆದರೆ ವಿದ್ಯುತ್ ಬಿಲ್‌ ಜಾಸ್ತಿಯಾಗಿರುವುದು ಇಂತಹ ಘಟನೆಗಳು ನಡೆಯುವುದಕ್ಕೆ ಕಾರಣ ಎಂದು ಜನರು ಸರ್ಕಾರವನ್ನು ಶಪಿಸುತ್ತಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!