* ಮುಸ್ಸಂಜೆ ಹೊತ್ತಲ್ಲಿ ಹರಿಯಿತು ನೆತ್ತರು
* ಸ್ನೇಹಿತರ ಮಧ್ಯೆ ನಡೆದ ಗಲಾಟೆ ಕೊನೆಯಲ್ಲಿ ಅಂತ್ಯ
* ಹಣಕಾಸಿನ ವಿಚಾರವೋ ಯುವತಿಯ ವಿಚಾರವೋ ಗೊತ್ತಿಲ್ಲ
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ವಿಜಯನಗರ
ವಿಜಯನಗರ(ಮಾ. 30) ಇಳಿ ಸಂಜೆ ಹೊತ್ತು ಇನ್ನೂ ಸೂರ್ಯ ತನ್ನ ಮನೆಗೆ ಹೋಗೋ ಮುನ್ನವೇ ವಿಜಯನಗರ (Vijayanagara) ಜಿಲ್ಲೆಯ ಹೊಸಪೇಟೆಯಲ್ಲಿ (Hospet)ಬರ್ಬರವಾಗಿ ಕೊಲೆ (Murder) ನಡೆದಿದೆ..ಬಾರ್ ವೊಂದರಲ್ಲಿ ಯುವಕನಿಗೆ ಚೂರಿ ಮತ್ತು ಬಿಯರ್ ಬಾಟಲಿನಿಂದ ಇರಿದು ಕೊಲೆ ಮಾಡಲಾಗಿದೆ..ಹೊಸಪೇಟೆಯ ಬಳ್ಳಾರಿ ರಸ್ತೆಯಲ್ಲಿರೋ ಯಶ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ನಡೆದ ಘಟನೆಯಿಂದ ಇಡೀ ಬಾರ್ ನಲ್ಲಿದ್ದ ಜನರೆಲ್ಲರೂ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.
undefined
ಮೂವರು ಸ್ನೇಹಿತರು ಕುಳಿತು ಪಾರ್ಟಿ ಮಾಡ್ತ ಕುಳಿತಿದ್ರಂತೆ ಇದ್ದಕ್ಕಿದ್ದಂತೆ ಗಂಗಾಧರ ಎನ್ನುವ ವ್ಯಕ್ತಿಯ ಮೇಲೆ ಇನ್ನಿಬ್ಬರು ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ..
ರಕ್ತಸಿಕ್ತವಾಗಿ ಬಿದ್ದಿದ್ರು ಸಹಾಯ ಮಾಡದ ಜನರು: ಇನ್ನೂ ಬಾರ್ ನಲ್ಲಿ ಕೊಲೆ ನಡೆದ ಬಳಿಕ ಬಾರ್ ಹೊರ ಭಾಗದಲ್ಲಿ ಬಂದು ಗಂಗಾಧರ ಬಿದ್ದಿದ್ದಾರೆ. ಆದ್ರೇ ರಕ್ತಸಿಕ್ತವಾಗಿ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲು ಬಹುತೇಕ ಜನರು ಮುಂದೆ ಬಾರಲೇ ಇಲ್ಲ. ಕೇವ ಹೋಟೆಲ್ ಸಿಬ್ಬಂದಿ ಒಂದಷ್ಟು ಪರದಾಡಿ ಆಟೋ ತರಲು ಮುಂದಾದದರೂ ಆಟೋದವರಾರು ಬರಲಿಲ್ಲಿ. ಕೊನೆಗೆ ಆ್ಯಂಬುಲೈನ್ಸ್ ಬಂದು ಕರೆದು ಕೊಂಡು ಹೋಯಿತಾದ್ರೂ ಮಾರ್ಗ ಮಧ್ಯೆ ಗಂಗಾಧರ ಸಾವನ್ನಪ್ಪಿದ್ದಾನೆ.
Illegal Mining : ಚಾಮರಾಜನಗರದಲ್ಲಿ ಎಗ್ಗಿಲ್ಲದ ಗಣಿಗಾರಿಕೆ.. ಕೇಳೋರು ಯಾರೂ ಇಲ್ಲ!
ಇನ್ನೂ ಘಟನೆ ಬಗ್ಗೆ ಪೂರ್ಣ ವಿವರವನ್ನು ಪೊಲೀಸರು ಕಲೆ ಹಾಕುತ್ತಿದ್ದು ಮೇಲ್ನೋಟಕ್ಕೆ ಇದು ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ನಡೆದ ಜಗಳದಲ್ಲಿ ಇರಿದಿದ್ದಾರೆ ಎನ್ನಲಾಗಿದೆ . ಘಟನೆ ಬಗ್ಗೆ ತಿಳಿಯುತ್ತಲೇ ಹೊಸಪೇಟೆಯ ಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಗಂಗಾಧರ ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದನು. ಕೊಲೆಯಾದ ಗಂಗಾಧರ ಅವರ ತಂದೆ ಜಡಿಯಪ್ಪ ಅವರಿಂದ ದೂರು ದಾಖಲಿಸಲಾಗಿದೆ. ಗಂಗಾಧರ ಗೋವಾದ ಕಸೀನೋದಲ್ಲಿ ಕೆಲಸ ಮಾಡುತ್ತಿದ್ದನಂತೆ. ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ನಡೆಯುತ್ತಿದೆ ಎಂದು ವಿಜಯನಗರ ಎಸ್ಪಿ ಅರುಣ್ ಮಾಹಿತಿ ನೀಡಿದ್ದಾರೆ.
ಕಾರು ಡಿಕ್ಕಿ- ದ್ವಿಚಕ್ರವಾಹನ ಸವಾರ ದುರ್ಮರಣ: ಬೀದರ್ ನಗರದ ಹೊರವಲದಲ್ಲಿರುವ ಏರ್ಫೋರ್ ಬಳಿ ನಡೆದ ಅಪಘಾತದಲ್ಲಿ ಸಾವನ ಕುಮಾರ್(26) ಮೃತಪಟ್ಟಿದ್ದಾರೆ.
ಬೀದರ್ ನಿಂದ ಕೆಲಸ ಮುಗಿಸಿಕೊಂಡು ಊರಿಗೆ ವಾಪಸಾಗುತ್ತಿದ್ದ ಕುಮಾರ್ ವಾಹನಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಗಂಭಿರ ಗಾಯಗೊಂಡಿದ್ದ ಸಾವನಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಬೀದರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಸವಾರ ಬಸ್ ಕೆಳಗೆ ಬಿದ್ದು ಸಾವು: ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಗಂಗಾವತಿ ರಸ್ತೆಯಲ್ಲಿನ ಅಪಘಾತದಲ್ಲಿ ಬೈಕ್ ಸವಾರ ಉದಯ(25) ಮೃತಪಟ್ಟಿದ್ದಾರೆ. ಎರಡು ಬೈಕ್‌ಗಳ ನಡುವೆ ಡಿಕ್ಕಿಯಾಗಿದ್ದು ಮುಂದೆ ಇದ್ದ ಬಸ್ ನ ಚಕ್ರಕ್ಕೆ ಯುವಕ ಸಿಲುಕಿದ್ದಾರೆ. ಇನ್ನೋರ್ವ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪತ್ನಿ ತವರುಮನೆ ಕೊಪ್ಪಳದ ಕಾರಟಗಿಗೆ ಹೊರಟಿದ್ದ ಯುವಕ ಸಾವಿನ ಮನೆ ಸೇರಿದ್ದಾನೆ.
ಏಳು ತಿಂಗಳ ಕೆಳಗೆ ಮದುವೆಯಾಗಿದ್ದ ನವವಿವಾಹಿತ ದುರ್ಮರಣಕ್ಕೆ ಈಡಾಗಿದ್ದಾರೆ. ಅಪಘಾತದ ದೃಶ್ಯ ಪಕ್ಕದ ಪೆಟ್ರೋಲ್ ಬಂಕ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಂಧನೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ.
ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕ ಸಾವು: ಸ್ನೇಹಿತರ ಜೊತೆಯಲ್ಲಿ ಕೆರೆಯಲ್ಲಿ ಈಜಾಡಲು ತೆರಳಿದ್ದ ಬಾಲಕ ದುರ್ಮರಣಕ್ಕೆ ಈಡಾಗಿದ್ದಾನೆ. ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸಮೀಪದ ಬಳ್ಳೂರು ಗ್ರಾಮದ ಕೆರೆಯಲ್ಲಿ ದುರ್ಘಟನೆ ಸಂಭವಿಸಿದೆ. ಅಭಿಷೇಕ್(13) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಬಾಲಕ. ಅತ್ತಿಬೆಲೆ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಬಾಲಕ ಏಳು ಜನ ಸ್ನೇಹಿತರ ಜೊತೆಗೂಡಿ ಕೆರೆಯಲ್ಲಿ ಈಜಲು ತೆರಳಿದ್ದ. ಈತ ಮುಳುಗಿದ್ದರಿಂದ ಭಯಗೊಂಡ ಉಳಿದವರು ವಿಷಯ ತಿಳಿಸದೆ ಮನೆಗೆ ತೆರಳಿದ್ದರು.
ರಾತ್ರಿ 10 ಗಂಟೆಯಾದ್ರು ಮಗ ಮನೆಗೆ ಬರದಿದ್ದಾಗ ಹುಡುಕಾಡಿದ್ದಾರೆ.
ಬಾಲಕ ಎಲ್ಲಿಯೂ ಕಾಣದೆ ಇದ್ದಾಗ ಅತ್ತಿಬೆಲೆ ಪೋಲೀಸ್ ಠಾಣೆಗೆಬ ಪೋಷಕರು ದೂರು ನೀಡಿದಾಗ ಈಜಲು ತೆರಳಿದ್ದ ವಿಚಾರ ಗೊತ್ತಾಗಿದೆ. ಅಗ್ನಿ ಶಾಮಕ ದಳ ಮೃತದೇಹ ಪತ್ತೆ ಮಾಡಿದೆ.
ಅವಧಿಗೂ ಮುನ್ನ ಹೋಟೆಲ್ ಖಾಲಿ ಮಾಡುವಂತೆ ಧಮ್ಕಿ: ಹೋಟಲ್ ಜಾಗ ಗುತ್ತಿಗೆಗೆ ನೀಡಿದ್ದ ಮಾಲೀಕ ಧಮ್ಕಿ ಹಾಕಿರುವ ಆರೋಪ ಬಂದಿದೆ. ಧಮ್ಕಿ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಯ್ಯದ್ ರಿಯಾಜ್ ಅವರಿಂದ ಧಮ್ಕಿ ಹಾಕಿದ್ದಾರೆ ಎಂದು ಕೃತಿಕಾ.ಎಂ.ಗೌಡ ಆರೋಪ ಮಾಡಿದ್ದಾರೆ. ಬನ್ನಿಮಂಟಪದ ಕೇಸರಿ ರೆಸ್ಟೋರೆಂಟ್ ಜಾಗವನ್ನು ಕೃತಿಕಾ ಗುತ್ತಿಗೆ ಪಡೆದುಕೊಂಡಿದ್ದರು ಹ್ಯಾರಿಸ್ ಪುತ್ರ ನಲಪಾಡ್‌ಗೆ ಸೇರಿದ ಜಾಗ ಇದು ಎಂದು ಹೇಳಲಾಗಿದೆ.
ನಳಪಾಡ್‌ರಿಂದ ಲೀಸ್ ಪಡೆದಿದ್ದ ಸಯ್ಯದ್ ರಿಯಾಜ್ ನಂತರ ಕೃತಿಕಾಗೆ ಲೀಸ್ ನೀಡಿದ್ದ. 20 ಲಕ್ಷ ಪಡೆದು 3 ವರ್ಷಕ್ಕೆ ಗುತ್ತಿಗೆ ನೀಡಿದ್ದ. ಇನ್ನು ಎರಡು ವರ್ಷ ಬಾಕಿ ಇದ್ದರು ಖಾಲಿ ಮಾಡುವಂತೆ ಒತ್ತಾಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಕೃತಿಕಾ ಯಾವುದೇ ದೂರು ದಾಖಲಿಸಿಲ್ಲ.