* ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೆ ಅಕ್ರಮ ಗಣಿಗಾರಿಕೆ ಸದ್ದು
* ಗಣಿ ಕುಸಿತದ ನಂತರ ಸ್ಥಗಿತಗೊಳಿಸಲಾಗಿದ್ದ ಗಣಿಗಾರಿಕೆ
* ಅಫಿಡವಿಟ್ ಸಲ್ಲಿಸಿದವರಿಗೆ ಮಾತ್ರ ಗಣಿಗಾರಿಕೆಗೆ ಅವಕಾಶ ಎಂದಿದ್ದ ಉಸ್ತುವಾರಿ ಸಚಿವ ಸೋಮಣ್ಣ
* ಉಸ್ತುವಾರಿ ಸಚಿವರ ಸೂಚನೆಗೂ ಕಿಮ್ಮತ್ತಿಲ್ಲ
* ಅಫಿಡವಿಟ್ ಸಲ್ಲಿಸದೆ ಎಗ್ಗಿಲ್ಲದೆ ಅಕ್ರಮವಾಗಿ ಗ್ರಾನೈಟ್ ಗಣಿಗಾರಿಕೆ
* 61 ಬ್ಲಾಕ್ ಗ್ರಾನೈಟ್ ಗಣಿ ಮಾಲೀಕರ ಪೈಕಿ ಕೇವಲ ಒಬ್ಬರಿಂದ ಮಾತ್ರ ಅಫಿಡವಿಟ್ ಸಲ್ಲಿಕೆ
ವರದಿ - ಪುಟ್ಟರಾಜು. ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ(ಮಾ. 29) ಜಿಲ್ಲೆಯಲ್ಲಿ (Chamarajnagar) ಮತ್ತೆ ಅಕ್ರಮ ಗಣಿಗಾರಿಕೆ ಶುರುವಾಗಿದೆ. ಬಹುತೇಕ ಗಣಿಮಾಲೀಕರು ನಿಗದಿತ ಅಫಿಡವಿಟ್ ಸಲ್ಲಿಸದೆ ಅಕ್ರಮವಾಗಿ ಗಣಿಗಾರಿಕೆ ಪುನರಾರಂಭಿಸಿದ್ದಾರೆ. ಇದರಿಂದ ಸರ್ಕಾರಕ್ಕೆ (Karnataka Govt) ನಿತ್ಯ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ..
ಚಾಮರಾಜನಗರ ಜಿಲ್ಲೆ ಅಕ್ರಮ ಗಣಿಗಾರಿಕೆಯ ತಾಣವಾಗಿದೆ. ಭೂ ತಾಯಿಯ ಒಡಲನ್ನು ಬಗೆದು ಲೂಟಿ ಮಾಡಲಾಗುತ್ತಿದ್ದರು ಹೇಳೋರು ಕೇಳೋರು ಯಾರು ಇಲ್ಲವಾಗಿದ್ದಾರೆ ಜಿಲ್ಲೆಯ ಗುಮ್ಮಕಲ್ಲು ಗುಡ್ಡ ಕುಸಿತ ಗೊಂಡು ಮೂವರು ಸಾವನ್ನಪ್ಪಿದ ದುರಂತ ನಡೆದ ನಂತರ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಗೆ ಕಡಿವಾಣ ಹಾಕಲು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮುಂದಾಗಿದ್ದರು. ಎಲ್ಲಾ ಗಣಿಗಳನ್ನು ಒಂದು ತಿಂಗಳ ಕಾಲ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದರು.
undefined
Chamarajanagar: ಮಹದೇಶ್ವರನ ಹುಂಡಿಗೆ 2.8 ಕೋಟಿ ರೂ, ಕೋಟ್ಯಾಧೀಶನಾದ ಮಲೆ ಮಾದಪ್ಪ!
ನಿಬಂಧನೆಗಳನ್ನು ಪಾಲಿಸಲು ಬದ್ದರಾಗಿರುವುದಾಗಿ ಅಫಿಡವಿಟ್ ಸಲ್ಲಿಸಿದವರಿಗೆ ಅನುಮತಿ ನೀಡಲಾಗುವುದು ಎಂದು ಅವರು ತಿಳಿಸಿದ್ದರು. ಆದರೆ ಸಚಿವರ ಮಾತಿಗು ಕಿಮ್ಮತ್ತು ನೀಡದ ಗಣಿಮಾಲೀಕರು ಅಫಿಡವಿಟ್ ಸಲ್ಲಿಸದೆ ಗಣಿಗಾರಿಕೆ ಶುರು ಮಾಡಿದ್ದಾರೆ ಕಗ್ಗಲಿಪುರ, ರೇಚಂಬಳ್ಳಿ, ಗುಂಬಳ್ಳಿ, ತೆಕಣಾಂಬಿ, ಹಿರಿಕಾಟಿ ಮೊದಲಾದ ಕಡೆ ಅಕ್ರಮವಾಗಿ ಬ್ಲಾಕ್ ಗ್ರಾನೈಟ್ ಹಾಗು ಬಿಳಿಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ 61 ಬ್ಲಾಕ್ ಗ್ರಾನೈಟ್ ಗಣಿಗಾರಿಕೆ ಇದ್ದು ಈ ಪೈಕಿ ಕೇವಲ ಒಬ್ಬರು ಮಾತ್ರ ಅಫಿಡವಿಟ್ ಸಲ್ಲಿಸಿದ್ದಾರೆ. ಅಫಿಡವಿಟ್ ಸಲ್ಲಿಸದೆ ಬಹುತೇಕ ಕಡೆ ಗಣಿಗಾರಿಕೆ ಪುನರಾರಂಭಿಸಲಾಗಿದೆ
ಗಣಿಯಲ್ಲಿ ವೇಬ್ರಿಡ್ಜ್ ಮತ್ತು ಸಿಸಿ ಕ್ಯಾಮೆರಾ ಅಳವಡಿಸಿಕೊಂಡು ಖನಿಜ ಸಾಗಾಣಿಕೆ ಮಾಡುವುದು, ಒತ್ತುವರಿಯಾಗಿದ್ದರೆ ಕೂಡಲೇ ಸ್ಥಗಿತಗೊಳಿಸಿ ಒತ್ತುವರಿ ಪ್ರದೇಶಕ್ಕೆ ಸಂಬಂಧಿಸಿದಂತೆ ದಂಡ ಹಾಗು ರಾಜಧನ ಪಾವತಿ ಮಾಡುವುದು, ಗಣಿ ಸುತ್ತಲು ತಂತಿ ಬೇಲಿ ಅಥವಾ ತಡೆಗೋಡೆ ನಿರ್ಮಿಸುವುದು, ಗಣಿ ಕೆಲಸಕ್ಕೆ ಜೀತದಾಳುಗು ಹಾಗು ಬಾಲ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳದಿರುವುದು, ಪರಿಸರ ಮಾಲಿನ್ಯವಾಗದಂತೆ ಧೂಳು ನಿಯಂತ್ರಣ, ಸುತ್ತಮುತ್ತ ಗಿಡಮರ ನೆಡುವುದು ಗಣಿ ತ್ಯಾಜ್ಯ ಸೂಕ್ತ ವಿಲೇವಾರಿ, ನಿಯಮಾನುಸಾರ ಸ್ಫೋಟಕ ಬಳಕೆಗೆ ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆಯುವುದು" ಸೇರಿದಂತೆ ಹದಿಮೂರು ನಿಬಂಧನೆಗಳನ್ನು ಈ ಅಫಿಡವಿಟ್ ಒಳಗೊಂಡಿದೆ ಆದರೆ ಉಸ್ತುವಾರಿ ಸಚಿವರ ಸೂಚನೆಗೂ ಕಿಮ್ಮತ್ತಿಲ್ಲ ಎಂಬಂತೆ ಯಾವುದೇ ಅಫಿಡವಿಟ್ ಸಲ್ಲಿಸದೆ ಗಣಿಗಾರಿಕೆ ಆರಂಭಿಸಲಾಗಿದೆ ರಾಜಾರೋಷವಾಗಿ ಗಣಿಗಾರಿಕೆ ನಡೆಯುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎನ್ನುತ್ತಾರೆ ಪರಿಸರವಾದಿ ಪುಣಜನೂರು ದೊರೆಸ್ವಾಮಿ..
ತಮ್ಮ ಮೂಗಿನಡಿಯೇ ಅಕ್ರಮ ನಡೆಯುತ್ತಿದ್ದರೂ ಅಧಿಕಾರಿಗಳು ಜಾಣ ಕುರುಡರಾಗಿದ್ದಾರೆ. ಅಫಿಡವಿಟ್ ಸಲ್ಲಿಸಬೇಕೆಂಬುದು ಕೇವಲ ಕಣ್ಣೊರೆಸುವ ತಂತ್ರವಷ್ಟೆ. ಸಾಕಷ್ಟು ಕಡೆ ಪರಿಸರಕ್ಕೆ ಹಾನಿಯಾಗುತ್ತಿದೆ, ಪರಿಸರ ಇಲಾಖೆಯಿಂದ ಅನುಮತಿ ಪಡೆಯದೆ ಗಣಿಗಾರಿಕೆ ನಡೆಸಲಾಗುತ್ತಿದೆ, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆ ನಡೆಸಬೇಕು, ಪೊಲೀಸ್ ಇಲಾಖೆಯ ನೆರವು ಪಡೆದು ಅಕ್ರಮ ಗಣಿಗಳನ್ನು ಸ್ಥಗಿತಗೊಳಿಸಿ ಲೈಸೆನ್ಸ್ ರದ್ದುಪಡಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಬೆಂಗಳೂರಿನ ಬನ್ನೆರುಘಟ್ಟ ರಾಷ್ಟ್ರೀಯ ಉದ್ಯಾನದ ಸಮೀಪವೂ ಅಕ್ರಮ ಗಣಿಕಾರಿಕೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಬೆಂಗಳೂರು ಜಿಲ್ಲಾಧಿಕಾರಿಗೆ ದೂರು ಸಹ ದಾಖಲಾಗಿತ್ತು.