ಬೆಂಗಳೂರು, ಡೇಟಿಂಗ್ ಆಪ್..ತಡರಾತ್ರಿ ಪಾರ್ಟಿ ನಂತರ  ಯುವತಿ ಮೇಲೆರಗಿದ್ದ ಕಾಮುಕರ ಬಂಧನ

Published : Mar 29, 2022, 09:59 PM ISTUpdated : Mar 30, 2022, 10:27 AM IST
ಬೆಂಗಳೂರು, ಡೇಟಿಂಗ್ ಆಪ್..ತಡರಾತ್ರಿ ಪಾರ್ಟಿ ನಂತರ  ಯುವತಿ ಮೇಲೆರಗಿದ್ದ ಕಾಮುಕರ ಬಂಧನ

ಸಾರಾಂಶ

* ಉತ್ತರ ಭಾರತ ಮೂಲದ ಯುವತಿ ಮೇಲೆ ಗ್ಯಾಂಗ್ ರೇಪ  * ನಾಲ್ವರು ಆರೋಪಿಗಳ ಬಂಧನ *  ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಎರಗಿದ್ದರು * ದೆಹಲಿ  ಮೂಲದ ಆರೋಪಿಗಳ ಬಂಧನ

ವರದಿ: ಪ್ರದೀಪ್ ಕಗ್ಗೆ

ಬೆಂಗಳೂರು (ಮಾ. 29) ರಾಜಧಾನಿಯಲ್ಲಿ (Bengaluru) ಪಶ್ಚಿಮ ಬಂಗಾಳ‌ (West Bengal) ಮೂಲದ ಯುವತಿ ಮೇಲೆ ಸಾಮೂಹಿಕ ಆತ್ಯಾಚಾರ (Gang Rape) ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ಈ ಸಂ ಈ ಸಂಬಂಧ‌‌ ದೆಹಲಿ (New Delhi) ಮೂಲದ ನಾಲ್ವರು ಆರೋಪಿಗಳನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.

ನಗರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿ (Woman) ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ರಜತ್, ಶಿವರಾಣ್, ದೇವ್ ಸರೋಯಿ ಹಾಗೂ ಯೊಗೇಶ್ ಕುಮಾರ್ ಎಂಬುವರನ್ನು ಬಂಧಿಸಿದ್ದಾರೆ.

"

ಬಂಧಿತ ಆರೋಪಿಗಳು ದೆಹಲಿ ಮೂಲದವರಾಗಿದ್ದು ರಾಷ್ಟ್ರೀಯ ಮಟ್ಟದಲ್ಲಿ ಸಿಮ್ಮರ್ (ಈಜುಗಾರರು) ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ. ಆರೋಪಿಗಳ‌ ಪೈಕಿ ರಜತ್  ಡೇಟಿಂಗ್ ಆ್ಯಪ್ ಮೂಲಕ ಯುವತಿಯನ್ನ ಪರಿಚಯಿಸಿಕೊಂಡಿದ್ದ.‌ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಇಬ್ಬರು ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದರು‌‌.‌ ಸಲುಗೆ ಹೆಚ್ಚಾದ ಹಿನ್ನೆಲೆ ಇದೇ‌ ತಿಂಗಳು 24ರಂದು  ಯುವತಿಯನ್ನ ರಜತ್ ಮನೆಗೆ ಆಹ್ವಾನಿಸಿದ್ದ. ಆರೋಪಿಯ ಸ್ನೇಹಿತರೆಲ್ಲರೂ ಯುವತಿಯೊಂದಿಗೆ ಪಾರ್ಟಿ ಮಾಡಿದ್ದಾರೆ. ತಡರಾತ್ರಿಯಾಗಿದ್ದ ರಜತ್ ರೂಮಿನಲ್ಲಿ ಯುವತಿ ಉಳಿದುಕೊಂಡಿದ್ದಳು. ಈ ವೇಳೆ‌ ಇಚ್ಚೆಗೆ ವಿರುದ್ಧವಾಗಿ ತನ್ನೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾರೆ‌. ಈ ಸಂಬಂಧ ಯುವತಿ ನೀಡಿದ ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿದೆ.

ರಾಯಚೂರಿನ ನಗರಸಭಾ ಸದಸ್ಯೆ ಕಿಡ್ನ್ಯಾಪ್ ಆರೋಪ ಶಾಸಕ ಶಿವರಾಜ್ ಪಾಟೀಲ್ ವಿರುದ್ಧ ದೂರು:  ರಾಯಚೂರಿನ ಸ್ಥಳೀಯ ಸಂಸ್ಥೆಯ ಚುನಾವಣೆ ಹಿನ್ನಲೆ ಮತ ಚಲಾಯಿಸದೆ ಗೈರು ಹಾಜರಾಗುವಂತೆ ಮಾಡಲು ನಗರಸಭಾ ಸದಸ್ಯೆಯಾಗಿರುವ ಶೈನಾಜ್ ಬೇಗಂ ಅವರನ್ನು ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಅಪಹರಿಸಿದ್ದಾರೆ ಎಂದು ಆರೋಪಿಸಿ ನಗರ ಪೊಲೀಸ್ ಆಯುಕ್ತರಿಗೆ ಬೇಗಂ ಪುತ್ರ  ಎಂಡಿ ಆಲಿ ಎಂಬುವರು ದೂರು ನೀಡಿದ್ದಾರೆ.

ಶಂಕರಣ್ಣ ಸಾವಿನ ಕಾರಣ ಬಿಚ್ಚಿಟ್ಟ ತಾಯಿ.. ಮದುವೆ ಆದ ಮೇಲೆ ಏನಾಗಿತ್ತು?

ರಾಯಚೂರಿನ ನಗರ ಸಭಾ ಅಧ್ಯಕ್ಷರ ಚುನಾವಣೆ ನಾಳೆ ನಿಗದಿಯಾಗಿದೆ. ನನ್ನ ತಾಯಿ ಶೈನಾಜ್ ಬೇಗಂ ನಗರ ಸಭಾ ಸದಸ್ಯೆಯಾಗಿದ್ದಾರೆ. ‌ಅನಾರೋಗ್ಯ ಹಿನ್ನೆಲೆಯಲ್ಲಿ ಇನ್ ಫೆಂಟ್ರಿ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆ ಚಿಕಿತ್ಸೆ ದಾಖಲಾಗಿದ್ದರು‌. ಈ ವೇಳೆ ಶಾಸಕರ ಕಾರಿನಲ್ಲಿ ಬೆಂಬಲಿಗರು ಬಂದು ನನ್ನ ತಾಯಿ, ತಮ್ಮ ಹಾಗೂ ಅತ್ತೆಯನ್ನ ಕಿಡ್ನ್ಯಾಪ್ ಮಾಡಿದ್ದಾರೆ. ಸತತವಾಗಿ ಪೋನ್ ಮಾಡಿದರು ಸ್ವಿಚ್ ಆಫ್ ಬರುತ್ತಿದೆ. ಅಪಹರಣದ ಹಿಂದೆ ಶಿವರಾಜ್ ಪಾಟೀಲ್ ಅವರ ಕೈವಾಡವಿದೆ‌. ನಾಳೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸದಂತೆ ಮಾಡಲು ಕಿಡ್ನ್ಯಾಪ್ ಮಾಡಿದ್ದಾರೆ‌. 

ರಾಜಕೀಯ ಮಾಡುವ ನೆಪದಲ್ಲಿ ಕುಟುಂಬ ಸದಸ್ಯರನ್ನು ಅಪಹರಿಸಿರುವುದು ಸರಿಯಲ್ಲ.. ದಯವಿಟ್ಟು ನಮ್ಮ ಕುಟುಂಬದ ಸದಸ್ಯರನ್ನ ಬಿಡುವಂತೆ ಶಾಸಕರಲ್ಲಿ ಆಲಿ ಮನವಿ ಮಾಡಿದ್ದಾರೆ.

ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಸೂರ್ಯ ಮುಕುಂದರಾಜ್ ಮಾತನಾಡಿ ನಗರಸಭಾ ಸದಸ್ಯೆ ಶೈನಾಜ್ ಬೇಗಂ ಅವರನ್ನ‌ ಕಿಡ್ನ್ಯಾಪ್ ಮಾಡಿದ ಆರೋಪದಡಿ ಇಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ಅವರಿಗೆ ದೂರು ನೀಡಿದ್ದೇವೆ. ಸಕಾರಾತ್ಮಕವಾಗಿ ಸ್ಪಂದಿಸಿರುವ ಆಯುಕ್ತರು ವಿಧಾನಸೌಧ ಪೊಲೀಸರಿಗೆ ದೂರನ್ನ ಹಸ್ತಾಂತರಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿರುವುದಾಗಿ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು