Shivamoggaದಲ್ಲಿ ಹಳೆ ದ್ವೇಷಕ್ಕೆ ಸ್ನೇಹಿತನನ್ನೇ ಮಗಿಸಲು ಸ್ಕೆಚ್!

Published : Jun 08, 2022, 01:55 AM IST
Shivamoggaದಲ್ಲಿ ಹಳೆ ದ್ವೇಷಕ್ಕೆ ಸ್ನೇಹಿತನನ್ನೇ ಮಗಿಸಲು ಸ್ಕೆಚ್!

ಸಾರಾಂಶ

ಸಿಸಿ ಕ್ಯಾಮರಾ ಬಂದ್ ಮಾಡಿ ಆ್ಯಟಾಕ್! ಚೋರ್ ಬಜಾರ್ ನಲ್ಲಿ ನಡೆದ ಚಾಕು ಇರಿತಕ್ಕೆ ಇಡಿ ಗಾಂಧಿ ಬಜಾರ್ ಬಂದ್! ಶಿವಮೊಗ್ಗದಲ್ಲಿ ಸೆಂದಿಲ್ ಹತ್ಯೆಗೆ ಯತ್ನಿಸಿದ್ದ ಜೋಗಿ ಸಂತು!

ವರದಿ : ರಾಜೇಶ್ ಕಾಮತ್, ಏಷ್ಯಾನೆಟ್ ಸುವರ್ಣನ್ಯೂಸ್

ಶಿವಮೊಗ್ಗ (ಜೂ.8): ಹಳೇ ದ್ವೇಷದ ಹಿನ್ನೆಲೆಯಲ್ಲಿ ಶಿವಮೊಗ್ಗದ ಗಾಂಧಿ ಬಜಾರ್ ನ ಚೋರ್ ಬಜಾರ್ ನಲ್ಲಿ ಅಂಗಡಿಗೆ ನುಗ್ಗಿ ವ್ಯಕ್ತಿಯೋರ್ವನನ್ನ ಚಾಕುವಿನಿಂದ ಇರಿಯಲಾಗಿದೆ. ಸೆಂದಿಲ್ (45)  ಚಾಕು ಇರಿತಕ್ಕೆ ಒಳಗಾದವನಾಗಿದ್ದಾನೆ. ಸಂತೋಷ್ ಅಲಿಯಾಸ್ ಜೋಗಿ ಸಂತೋಷ ಎಂಬಾತ ಚಾಕುವಿನಿಂದ ಇರಿದವನಾಗಿದ್ದಾನೆ. 

ಈ ಹಿಂದೆ ಸಂತೋಷ್ ಮತ್ತು ಸೆಂದಿಲ್ ನಡುವೆ ಜಗಳ ಉಂಟಾಗಿ ಸೆಂದಿಲ್ ಚಾಕುವಿನಿಂದ ಇರಿದಿದ್ದ ಎನ್ನಲಾಗಿದೆ.  ಈ ದ್ವೇಷದ‌ ಹಿನ್ನಲೆಯಲ್ಲಿ  ಸಂತೋಷ್ ಅಲಿಯಾಸ್ ಜೋಗಿ  ನಿನ್ನೆ ಸೆಂದಿಲ್ ಗೆ ನುಗ್ಗಿ ಚಾಕುವಿನಿಂದ ಇರಿದಿದ್ದಾನೆ. ಸೆಂದಿಲ್ ಚೋರ್ ಬಜಾರ್ ನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದು, ಸಂತೋಷ್ ಈ ಹಿಂದೆ ಚೋರ್ ಬಜಾರ್ ನಲ್ಲಿ ಅಂಗಡಿ ನಡೆಸುತ್ತಿದ್ದನು ಎನ್ನಲಾಗಿದೆ. 

PANCHAMASALI RESERVATION; ಬೊಮ್ಮಾಯಿ ಮುಂದೆ 3 ಆಯ್ಕೆಯಿಟ್ಟ ಜಯ ಮೃತ್ಯುಂಜಯ ಸ್ವಾಮೀಜಿ

 ಮತ್ತೊಂದು ಮೂಲದ ಪ್ರಕಾರ ಸೆಂದಿಲ್ ಹಣವನ್ನ ಸಂತೋಷ್ ಗೆ ಕೊಡಬೇಕಿತ್ತು ಎನ್ನಲಾಗಿದ್ದು ಸದ್ಯಕ್ಕೆ ಸೆಂದಿಲ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.‌ ಚೋರ್ ಬಜಾರ್ ನಲ್ಲಿ ಕೊಲೆ ಎಂಬ ಸುದ್ದಿ ಬಿರುಗಾಳಿಯಂತೆ ಹರಡುತ್ತಿದ್ದಂತೆ ಗಾಂಧಿ  ಬಜಾರ್ ಸಂಪೂರ್ಣ ಬಂದ್ ಆಗಿತ್ತು.  ಪ್ರಕರಣಕ್ಕೆ ಸಂಬಂಧಿಸಿ  ಸೆಂದಿಲ್ ಕುಟುಂಬ  ಸಿಸಿ ಟಿವಿ ಕ್ಯಾಮೆರಾ ಸ್ವಿಚ್ ಆಫ್ ಮಾಡಿ ಅಂಗಡಿಗೆ ನುಗ್ಗಿ ಚಾಕುವಿನಿಂದ ಇರಿಯಲಾಗಿದೆ ಎಂದು ಅನುಮಾನ ವ್ಯಕ್ತಪಡಿಸುತ್ತಾರೆ.

ಇದರಿಂದಾಗಿ ಚೋರ್ ಬಜಾರ್ ನಲ್ಲಿಯೇ ಸೆಂದಿಲ್  ಕೊಲೆಗೆ ಸಂಚು  ನಡೆದಿತ್ತಾ ಎಂಬ ಆನುಮಾನದ ಹೊಗೆಯಾಡುತ್ತಿದೆ. ಸೆಂದಿಲ್ ಮತ್ತು ಸಂತೋಷ್ ಈ ಹಿಂದೆ ಒಟ್ಟಿಗೆ ಇದ್ದವರು ಇದೀಗ ಸೆಂದಿಲ್ ಹೊಟ್ಟೆಪಾಡಿಗಾಗಿ ಬಟ್ಟೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಎಂದು ಕುಟುಂಬ ತಿಳಿಸಿದೆ. 

ದೆಹಲಿ, ಮುಂಬೈ, ಯುಪಿ, ಗುಜರಾತ್‌ ಸೇರಿ ಹಲವೆಡೆ AL-QAEDA ಆತ್ಮಹತ್ಯಾ ದಾಳಿಯ ಬೆದರಿಕೆ

ಆದರೆ ಸಂತೋಷ್ ಈ ಹೊಡೆದಾಟವನ್ನ ಮುಂದುವರೆಸಿಕೊಂಡು ಹೋದ ಪರಿಣಾಮ ಇವತ್ತು ಸೆಂದಿಲ್ ಗೆ ಚಾಕುವಿನಿಂದ ಚುಚ್ಚಲಾಗಿದೆ ಎಂಬ ಆರೋಪವನ್ನ ಕುಟುಂಬ ಮಾಡಿದೆ. ಪೊಲೀಸ್ ಠಾಣೆಗೆ ಹೋದರು ನೀವೆ ಮುಗಿಸಿಕೊಳ್ಳಿ ಎಂದು ಹೇಳುತ್ತಾರೆ. ನಾವು ಮುಗಿಸಿಕೊಳ್ಳುವುದಾದರೆ ಪೊಲೀಸ್ ಠಾಣೆಗೆ ಯಾಕೆ ಹೋಗೋಣವೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸೆಂದಿಲ್ ಅಂಗಡಿಯಲ್ಲಿದ್ದಾಗ ಸುಮಾರು ರಾತ್ರಿ 7-15 ರ ಸಮಯದಲ್ಲಿ ನುಗ್ಗಿದ ಸಂತೋಷ್ ನಾಲ್ವರೊಂದಿಗೆ ಬಂದು ಚಾಕುವಿನಿಂದ ಇರಿದಿದ್ದಾನೆ ಎಂದು ಕುಟುಂಬ ಆರೋಪಿಸಿದೆ. ಇದೀಗ ದೊಡ್ಡಪೇಟೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಜೋಗಿ ಸಂತೋಷ ನ ಪತ್ತೆಗೆ ಬಲೆ ಬೀಸಿದ್ದಾರೆ. ಒಟ್ಟಿನಲ್ಲಿ ಶಿವಮೊಗ್ಗದಲ್ಲಿ ಹರ್ಷನ ಕೊಲೆಯ ನಂತರ ಒಂದು ಸಣ್ಣ ಘಟನೆ ನಡೆದರೂ ಜನ ಬೆಚ್ಚಿ ಬೀಳುವ ಪರಿಸ್ಥಿತಿ ಬಂದೊದಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ