ಚಾಲಕನ ನಿಯಂತ್ರಣ ತಪ್ಪಿ ಇನೋವಾ ಕಾರು 20 ಅಡಿಯ ಕಂದಕಕ್ಕೆ ಪಲ್ಟಿಯಾದ ಘಟನೆ ನಡೆದಿದೆ. ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಮಾರ್ಗದ ಬಿದಿರುತಳದ ಬಳಿ ನಡೆದಿದೆ. ಕಾರಿನಲ್ಲಿದ್ದ ಐವರು ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಿಕ್ಕಮಗಳೂರು (ಜೂ.7): ಅದು ರಾಷ್ಟ್ರೀಯ ಹೆದ್ದಾರಿ! ರಸ್ತೆ ಪಕ್ಕದಲ್ಲೇ ಕಾಣ ಸಿಗುವ ಸ್ವರ್ಗದಂತ್ತ ಪರಿಸರವನ್ನು ಕಣ್ ತುಂಬಿಕೊಳ್ಳಲು ಪ್ರವಾಸಿಗರು ವರ್ಷಪೂರ್ತಿ ಬರುತ್ತಾರೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಅಪಾಯಕಾರಿ ತಿರುವಿನ ರಸ್ತೆ ಇದಾಗಿದೆ. ಇದೇ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಇನೋವಾ ಕಾರು 20 ಅಡಿಯ ಕಂದಕಕ್ಕೆ ಪಲ್ಟಿಯಾದ ಘಟನೆ ನಡೆದಿದೆ.
ಐವರು ಪ್ರಾಣಾಪಾಯದಿಂದ ಪಾರು: ಸ್ವಚ್ಛಂದವಾಗಿ ಹರಿಯುತ್ತಿರುವ ಝರಿ. ಎತ್ತ ನೋಡಿದರೂ ಹಚ್ಚ ಹಸಿರು. ಮುಗಿಲೆತ್ತರಕ್ಕೆ ನಿಂತಿರುವ ಬೆಟ್ಟಗುಡ್ಡ, ಗಿಡ ಮರಗಳು. ಅಂದಹಾಗೆ ಇದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಪ್ರದೇಶ. ಸದಾ ಹಚ್ಚ ಹಸಿರಿನಿಂದ ಕಂಗೊಳಿಸುವ ಈ ತಾಣವನ್ನು ಕಣ್ತುಂಬಿ ಪ್ರತಿದಿನ ನೂರಾರು ಪ್ರವಾಸಿಗರು ಆಗಮಿಸುತ್ತಾರೆ.
ನಿಮ್ಮ ಸೈಕಲ್ ಜೊತೆಗೆ ಮೆಟ್ರೋ ಪ್ರಯಾಣ ಮಾಡಲು BMRCL ಅವಕಾಶ
ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಅಪಾಯಕಾರಿ ತಿರುವಿನ ರಸ್ತೆ ಇದಾಗಿದೆ. ಇದೇ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಇನೋವಾ ಕಾರು 20 ಅಡಿಯ ಕಂದಕಕ್ಕೆ ಪಲ್ಟಿಯಾದ ಘಟನೆ ನಡೆದಿದೆ. ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಮಾರ್ಗದ ಬಿದಿರುತಳದ ಬಳೀ ನಡೆದಿದೆ. ಕಾರಿನಲ್ಲಿದ್ದ ಐವರು ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಿಗಂಧೂರಿನಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಪಾಯಕಾರಿ ತಿರುವಿನ ಈ ಮಾರ್ಗದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಪಲ್ಟಿಯಾಗಿದೆ. ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಕೂಡಲೇ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಮರಾಜಪೇಟೆ ಜುಗುರಾಜ್ ಹತ್ಯೆ ಪ್ರಕರಣ: ನಾಲ್ವರ ಬಂಧನ, 8.75 ಕೆ.ಜಿ ಚಿನ್ನಾಭರಣ ವಶ!
ಕಾರು ಸಂಪೂರ್ಣ ಪಲ್ಟಿಯಾಗಿ ಬಿದ್ದಿದ್ದು ಕಾರಿನ ನಾಲ್ಕು ಚಕ್ರಗಳು ಆಕಾಶ ನೋಡುತ್ತಿವೆ. ಆ ಪ್ರಮಾಣದಲ್ಲಿ ಕಾರು ಪಲ್ಟಿಯಾಗಿದೆ. ಕಾರು ಪಲ್ಟಿಯಾಗಿರೋ ದೃಶ್ಯವನ್ನ ಗಮನಿಸಿದ ಸ್ಥಳಿಯರು ಇವರ ಹಣೆಬರಹ ಚೆನ್ನಾಗಿದೆ ಎಂದು ಭಾವಿಸಿದ್ದಾರೆ. ಕಾರು ಕಂದಕಕ್ಕೆ ಪಲ್ಟಿಯಾಗುತ್ತಿದ್ದಂತೆ ಸ್ಥಳಿಯರು ಕಾರಿನಲ್ಲಿದ್ದವನ್ನ ರಕ್ಷಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆ ದಿಬ್ಬಣದ ವಾಹನಕ್ಕೆ ಟ್ರಕ್ ಡಿಕ್ಕಿ, ಎಂಟು ಜನರ ದುರ್ಮರಣ: ರಾಜಸ್ಥಾನದ ಬರ್ಮೆರ್‌ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಎಂಟು ಜನ ಸಾವಿಗೀಡಾಗಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬರ್ಮೆರ್‌ನ ಗುಡಮಲಾನಿ ಬ್ಲಾಕ್‌ನ ಆಲಪುರ ಗ್ರಾಮದ ಬಳಿ ಮಧ್ಯರಾತ್ರಿ ಈ ಅಪಘಾತ ಸಂಭವಿಸಿದೆ. SUV ಗಾಡಿಯಲ್ಲಿ ಪ್ರಯಾಣಿಸುತ್ತಿದ್ದ ಒಂಭತ್ತು ಜನರು ಮದುವೆ ದಿಬ್ಬಣದ ಭಾಗವಾಗಿದ್ದರು. ಇವರು ಪ್ರಯಾಣಿಸುತ್ತಿದ್ದ ವಾಹನ ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ.
ಜಲೋರ್ ಜಿಲ್ಲೆಯ (Jalore district) ಸೇಡಿಯಾ ಗ್ರಾಮದಿಂದ (Sediya village) ಗುಡಮಲನಿಯ (Gudamalani) ಕಂಧಿ ಕಿ ಧನಿಗೆ (Kandhi Ki Dhani)ಮದುವೆ ದಿಬ್ಬಣ ತೆರಳುತ್ತಿತ್ತು. ಇನ್ನೇನು ಮದುವೆ ಮನೆ ತಲುಪಲು ಕೇವಲ ಎಂಟು ಕಿಲೋಮೀಟರ್ ದೂರವಿದ್ದಾಗ, ವೇಗವಾಗಿ ಸಾಗಿಸುತ್ತಿದ್ದ ಅವರ ವಾಹನವು ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಗುಡಮಲಾನಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಮುಲಾರಾಮ್ ಚೌಧರಿ (Mularam Choudhary) ಹೇಳಿದರು. ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಇಬ್ಬರು ಗಾಯಗೊಂಡು ಸಂಚೋರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ, ಆಸ್ಪತ್ರೆಗೆ ಆಗಮಿಸುವ ವೇಳೆಯೇ ಅವರಿಬ್ಬರ ಸ್ಥಿತಿ ಗಂಭಿರವಾಗಿತ್ತು ಎಂದು ವೈದ್ಯರು ಹೇಳಿದ್ದಾರೆ.