ಅಪರಿಚಿತ ವ್ಯಕ್ತಿಯೊಬ್ಬನು ಕಾಲೋನಿಯಲ್ಲಿ ನಾಯಿಯೊಂದಿಗೆ ಅಸಹಜ ಕೃತ್ಯವನ್ನು ಬಹಿರಂಗವಾಗಿ ನಡೆಸಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಇದರ ನಂತರ, ಫುಲ್ವಾರಿ ಷರೀಫ್ ಪೊಲೀಸ್ ಠಾಣೆಯಲ್ಲಿ ಎನ್‌ಜಿಒ ಒಂದು ಈ ವಿಷಯದ ಬಗ್ಗೆ ದೂರು ಸಲ್ಲಿಸಿದೆ.
ಪಾಟ್ನಾ (ಮಾರ್ಚ್ 20, 2023): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೆಲ ದಿನಗಳ ಹಿಂದೆ ಬೀದಿ ನಾಯಿಯ ಮೇಲೆ ಅತ್ಯಾಚಾರವಾಗಿರುವ ಬಗ್ಗೆ ದೂರು ಕೇಳಿಬಂದಿತ್ತು. ಈ ಘಟನೆ ಸಂಬಂಧ ವಿಡಿಯೋ ಸಹ ವೈರಲ್ ಆಗಿತ್ತು. ಬಳಿಕ ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡಿದ್ದರು. ಈಗ ಬಿಹಾರದಲ್ಲಿ ಸಹ ಅಂತದ್ದೇ ಪ್ರಕರಣ ವರದಿಯಾಗಿದೆ. ಬಿಹಾರದ ರಾಜಧಾನಿ ಪಾಟ್ನಾದಲ್ಲಿ ವ್ಯಕ್ತಿಯೊಬ್ಬ ಬೀದಿನಾಯಿಯ ಮೇಲೆ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.ಮಾರ್ಚ್ 8 ರಂದು ಹೋಳಿ ಹಬ್ಬದ ದಿನದಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈ ಭೀಕರ ಕೃತ್ಯದ ವಿಡಿಯೋ ಸಹ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಬಿಹಾರ ರಾಜಧಾನಿ ಪಾಟ್ನಾದ ಫುಲ್ವಾರಿ ಶರೀಫ್‌ನ ಫೈಸಲ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಪ್ರಿಯಾ ಧೋತ್ರೆ ಎಂಬ ಪ್ರಾಣಿ ಪ್ರೇಮಿ ಈ ಆಘಾತಕಾರಿ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಹೋಳಿ ಹಬ್ಬದ ದಿನದಂದು ರೆಕಾರ್ಡ್ ಮಾಡಲಾಗಿದೆ ಎಂದು ಹೇಳಿರುವ ಪ್ರಿಯಾ, ವ್ಯಕ್ತಿಯೊಬ್ಬ ಬೀದಿನಾಯಿಯೊಂದಿಗೆ ಅಸಹಜ ಸಂಭೋಗ ನಡೆಸಿದ್ದಾರೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದಲ್ಲದೆ, ಈ ಬಗ್ಗೆ ಪಾಟ್ನಾದ ಫುಲ್ವಾರಿ ಶರೀಫ್ ಠಾಣೆಗೆ ದೂರು ನೀಡಲಾಗಿದೆ ಎಂದು ಅವರು ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.
ಇದನ್ನು ಓದಿ: Delhi Crime: ಬೀದಿ ನಾಯಿ ಮೇಲೆ ಅತ್ಯಾಚಾರವೆಸಗಿದ ಕಾಮುಕ; ಪ್ರಾಣಿ ಪ್ರಿಯರಿಂದ ತೀವ್ರ ಆಕ್ರೋಶ
ಪಾಟ್ನಾದ ಫುಲ್ವಾರಿ ಷರೀಫ್ ಠಾಣೆಗೆ ದೂರು ನೀಡಿರುವುದನ್ನು ನಾವು ಪ್ರಶಂಸಿಸುತ್ತೇವೆ ಮತ್ತು ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕೆಂದು ನಾವು ಒತ್ತಾಯಿಸುತ್ತೇವೆ. ಇಂತಹ ಭೀಕರ ಅಪರಾಧ ಎಸಗಿರುವ ತಪ್ಪಿತಸ್ಥರನ್ನು ಗುರುತಿಸಿ ಸೂಕ್ತ ಶಿಕ್ಷೆ ವಿಧಿಸಲಾಗುವುದು ಎಂದು ನಾವು ಭಾವಿಸುತ್ತೇವೆ ಎಂದೂ ಇನ್ಸ್ಟಾಗ್ರಾಮ್ ಪೋಸ್ಟ್ ಹೇಳುತ್ತದೆ. ಜವಾಬ್ದಾರಿಯುತ ಮತ್ತು ಕಾಳಜಿಯುಳ್ಳ ಸಮುದಾಯವಾಗಿ, ಪ್ರಾಣಿಗಳು ಸೇರಿದಂತೆ ಎಲ್ಲಾ ಜೀವಿಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದೂ ಅವರು ಹೇಳಿದರು.
ಅಪರಿಚಿತ ವ್ಯಕ್ತಿಯೊಬ್ಬನು ಕಾಲೋನಿಯಲ್ಲಿ ನಾಯಿಯೊಂದಿಗೆ ಅಸಹಜ ಕೃತ್ಯವನ್ನು ಬಹಿರಂಗವಾಗಿ ನಡೆಸಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಇದರ ನಂತರ, ಫುಲ್ವಾರಿ ಷರೀಫ್ ಪೊಲೀಸ್ ಠಾಣೆಯಲ್ಲಿ ಎನ್‌ಜಿಒ ಒಂದು ಈ ವಿಷಯದ ಬಗ್ಗೆ ದೂರು ಸಲ್ಲಿಸಿದೆ. ಇದಾದ ಬಳಿಕ ಪಾಟ್ನಾ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಸಮಬಂಧ ಪ್ರತಿಕ್ರಿಯೆ ನೀಡಿದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ, ಫುಲ್ವಾರಿ ಷರೀಫ್ ಮನೀಶ್ ಕುಮಾರ್, "ಅರ್ಜಿ ಬಂದಿದೆ ಮತ್ತು ದಾಖಲೆಯೊಂದಿಗೆ ಕರೆ ಮಾಡಲಾಗಿದೆ, ಐಪಿಸಿ ಮತ್ತು ಪ್ರಾಣಿಗಳ ಕಾಯಿದೆಯಡಿ ಕ್ರಮ ಕೈಗೊಳ್ಳಲಾಗುವುದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ" ಎಂದು ಹೇಳಿದರು.
ಇದನ್ನೂ ಓದಿ: ಅಯ್ಯೋ.. ಕಂದಮ್ಮ! ಆಸ್ಪತ್ರೆಯಲ್ಲಿ ತಾಯಿ ಪಕ್ಕ ಮಲಗಿದ್ದ ಶಿಶು ಕೊಂದ ಬೀದಿ ನಾಯಿಗಳು
ದೆಹಲಿಯ ಹರಿನಗರ ಪ್ರದೇಶದಲ್ಲಿ ಫೆಬ್ರವರಿ ತಿಂಗಳಲ್ಲಿ ಸಹ ಇಂತದ್ದೇ ಘಟನೆ ವರದಿಯಾಗಿತ್ತು. ಈ ಘಟನೆಗೆ ಪ್ರಾಣಿ ಪ್ರಿಯರು ಹಾಗೂ ಪ್ರಾಣಿ ದಯಾ ಸಂಘಟನೆಯವ್ರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ದೆಹಲಿ ಪೊಲೀಸರು ತನಿಖೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದೂ ಆರೋಪಿಸಿದ್ದರು.
ಇದನ್ನೂ ಓದಿ: ಎಮ್ಮೆ ಕರುವಿನ ಮೇಲೆ ದಾಳಿ; ಕಿವಿ, ಬಾಯಿ, ಹೊಟ್ಟೆಕಚ್ಚಿ ತಿಂದ ಬೀದಿ ನಾಯಿಗಳ ಗುಂಪು!