ಹೆದ್ದಾರಿ ಬಳಿ ಒಂಟಿ ಮನೆಗೆ ಹಗಲಲ್ಲೇ ನುಗ್ತಾರೆ ಖದೀಮರು! ಮೇಯಲು ಕಟ್ಟಿದ ಗೋವುಗಳನ್ನ ಕದೀತಾರೆ!

By Kannadaprabha News  |  First Published Mar 20, 2023, 2:17 PM IST

ರಾ.ಹೆ. 169ರ ಅಂಚಿನಲ್ಲಿರುವ ಅಲಂಗಾರು ಈಶ್ವರ ದೇವಸ್ಥಾನದ ಬಳಿ ಎರಡು ಮನೆಗಳಿಗೆ ಹಾಡಹಗಲೇ ನುಗ್ಗಿರುವ ಕಳ್ಳರು, ಒಟ್ಟು 27.5 ಪವನ್‌ ಚಿನ್ನ, ಬೆಳ್ಳಿಯ ಸೊತ್ತುಗಳ ಸಹಿತ 20 ಸಾವಿರ ರು. ನಗದು ಕಳ್ಳತನ ಮಾಡಿರುವ ಘಟನೆ ಭಾನುವಾರ ನಡೆದಿದೆ.


ಮೂಡುಬಿದಿರೆ (ಮಾ.20): ರಾ.ಹೆ. 169ರ ಅಂಚಿನಲ್ಲಿರುವ ಅಲಂಗಾರು ಈಶ್ವರ ದೇವಸ್ಥಾನದ ಬಳಿ ಎರಡು ಮನೆಗಳಿಗೆ ಹಾಡಹಗಲೇ ನುಗ್ಗಿರುವ ಕಳ್ಳರು, ಒಟ್ಟು 27.5 ಪವನ್‌ ಚಿನ್ನ, ಬೆಳ್ಳಿಯ ಸೊತ್ತುಗಳ ಸಹಿತ 20 ಸಾವಿರ ರು. ನಗದು ಕಳ್ಳತನ ಮಾಡಿರುವ ಘಟನೆ ಭಾನುವಾರ ನಡೆದಿದೆ.

ಬ್ಯಾಂಕಿನ ನಿವೃತ್ತ ಉದ್ಯೋಗಿಗಳಾಗಿರುವ ಕ್ಷೇಮ ನಿವಾಸದ ರತ್ನಾಕರ ಜೈನ್‌, ಸ್ನೇಹ ಮನೆಯ ಧೀರೇಂದ್ರ ಹೆಗ್ಡೆ ಅವರ ಮನೆಗಳಲ್ಲಿ ಈ ಕಳ್ಳತನ ನಡೆದಿದೆ.

Tap to resize

Latest Videos

ಬೆಳಗ್ಗೆ 8 ಗಂಟೆ ವೇಳೆಗೆ ಎರಡೂ ಮನೆಯ ಸದಸ್ಯರು ಬಸದಿಗೆ ಪೂಜೆ ಸಲ್ಲಿಸಲು ಹೋಗಿದ್ದ ವೇಳೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಸಂದರ್ಭ ಕಳ್ಳರು ರತ್ನಾಕರ ಜೈನ್‌ ಅವರ ಮನೆಯ ಹಿಂಬಾಗಿಲಿನ ಚಿಲಕನ್ನು ಮುರಿದು ಒಳ ಪ್ರವೇಶಿಸಿ 25 ಪವನ್‌ ಚಿನ್ನ ಮತ್ತು 20 ಸಾವಿರ ನಗದು ಅಪಹರಿಸಿದ್ದಾರೆ. ಧಿರೇಂದ್ರ ಹೆಗ್ಡೆ ಅವರ ಮುಂಬಾಗಿಲಿನ ಚಿಲಕ ಮುರಿದು 20 ಗ್ರಾಂ ಚಿನ್ನ ಹಾಗೂ 60 ಸಾವಿರ ನಗದನ್ನು ದೋಚಿದ್ದಾರೆ.

 

Mysuru ಶ್ರೀರಾಂಪುರದಲ್ಲಿ ಸರಣಿ ಕಳ್ಳತನ

ಘಟನೆ ನಡೆದ ಸ್ಥಳಕ್ಕೆ ಪಣಂಬೂರು ಎಸಿಪಿ ಮನೋಜ್‌ ಕುಮಾರ್‌ ಪರಿಶೀಲನೆ ನಡೆಸಿದ್ದಾರೆ. ಮೂಡುಬಿದಿರೆ ಪೊಲೀಸ್‌ ನಿರೀಕ್ಷಕ ನಿರಂಜನ್‌ ಕುಮಾರ್‌ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೇಯಲು ಕಟ್ಟಿದ್ದ ಗೋವುಗಳ ಕಳವು: ಆರೋಪಿಗಳ ಬಂಧನ

ಮಂಗಳೂರು: ಬಜ್ಪೆ ಪೊಲೀಸ್‌ ಠಾಣಾ ವ್ಯಾಪ್ತಿಯ ತೆಂಕ ಎಕ್ಕಾರು ಎಂಬಲ್ಲಿ ಮೇಯಲು ಕಟ್ಟಿಹಾಕಿದ್ದ ಗೋವುಗಳನ್ನು ಕಳವು ಮಾಡಿದ್ದ ಖತರ್ನಾಕ್‌ ಕಳ್ಳರನ್ನು ಬಜ್ಪೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಜ್ಪೆ ಭಟ್ರಕೆರೆಯ ನಿವಾಸಿ ಮೊಹಮ್ಮದ್‌ ಸೈಪುದ್ದೀನ್‌ (19) ಹಾಗೂ ಬಜಪೆ ಪೊರ್ಕೋಡಿಯ ಅಬ್ದುಲ್‌ ರಜಾಕ್‌ ಯಾನೆ ಫಾಜಿಲ್‌ (19) ಬಂಧಿತರು.

ಆರೋಪಿಗಳು ಮೇಯಲು ಕಟ್ಟಿಹಾಕುವ ಗೋವುಗಳನ್ನು ಕಳವುಗೈದು ಮಾರಾಟ ಮಾಡುವ ಕಾಯಕ ಮಾಡುತ್ತಿದ್ದು, ಅಂತೆಯೇ ಶುಕ್ರವಾರ ಎರಡು ಗೋವುಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಾರ್ಯಾಚರಣೆ ಆರಂಭಿಸಿದ ಬಜ್ಪೆ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಪ್ರಕಾಶ್‌ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳ ಬಳಿ ಇದ್ದ ಎರಡು ಗೋವುಗಳನ್ನು ರಕ್ಷಿಸಲಾಗಿದೆ.

Udupi: ಮಂಗಳೂರು-ಮುಂಬೈ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಳ್ಳತನ: ಇಬ್ಬರು ಕುಖ್ಯಾತ ಕಳ್ಳಿಯರ ಬಂಧನ

click me!