Delhi Crime: ಬೀದಿ ನಾಯಿ ಮೇಲೆ ಅತ್ಯಾಚಾರವೆಸಗಿದ ಕಾಮುಕ; ಪ್ರಾಣಿ ಪ್ರಿಯರಿಂದ ತೀವ್ರ ಆಕ್ರೋಶ
ಈ ಹಿನ್ನೆಲೆ ಬೀದಿ ನಾಯಿಯ ಮೇಲೆ ಇಂತಹ ಪೈಶಾಚಿಕ ಕೃತ್ಯ ಮತ್ತು ಅದಕ್ಕೆ ಪೊಲೀಸರ ಪ್ರತಿಕ್ರಿಯೆ ಎರಡನ್ನೂ ಇಂಟರ್ನೆಟ್ ಅಂತರ್ಜಾಲದಲ್ಲಿ ಖಂಡಿಸಲಾಗಿದೆ.
ಹೊಸ ದೆಹಲಿ (ಫೆಬ್ರವರಿ 27, 2023): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಪರಾಧಗಳ ಸರಣಿ ಮುಮದುವರಿದಿದ್ದು, ಅದರಲ್ಲೂ ವ್ಯಕ್ತಿಯೊಬ್ಬ ಬಿದಿನಾಯಿ ಮೇಲೆ ಅತ್ಯಾಚಾರವೆಸಗಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ವಿಡಿಯೋ ವೈರಲ್ ಆಗುತ್ತಿದೆ. ಈ ಕಾಮುಕನ ಅಸಹ್ಯ ಕೃತ್ಯಕ್ಕೆ ಪ್ರಾಣಿ ದಯಾ ಸಂಘಟನೆಯವ್ರು ಹಾಗೂ ಸಾಕು ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು, ಈ ಪ್ರಾಣಿ ಹಿಂಸೆಯ ಕೃತ್ಯವನ್ನು ಖಂಡಿಸಿದ ಅನೇಕ ಜನರು ಈ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು ದೆಹಲಿಯ ಹರಿ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
ಪ್ರಾಣಿಗಳಿಗೆ ಆಹಾರ ತಿನ್ನಿಸುವ ವ್ಯಕ್ತಿಯೊಬ್ಬ ಈ ಘಟನೆಯನ್ನು ಗುರುತಿಸಿ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾನೆ. ಬಳಿಕ, ಈ ಸಂಬಂಧ ಪ್ರಕರಣ ದಾಖಲಿಸಲು ಮತ್ತು ಅಪರಾಧವನ್ನು ವರದಿ ಮಾಡಲು ಪೊಲೀಸರನ್ನು ಸಂಪರ್ಕಿಸಿದರು. ಆದರೂ, ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದಾರೆ ಎಂದು ಹೇಳಲಾಗಿದ್ದು, ಇದಕ್ಕೂ ಸಹ ಪ್ರಾಣಿ ದಯಾ ಸಂಘಟನೆಯವ್ರು ಪೊಲೀಸರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹಾಗೂ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ರೇಪ್ ಶಿಕ್ಷೆಯಿಂದ ಬಚಾವ್ ಆಗಲು ಮದುವೆಯಾದ, ಅದರ ಬೆನ್ನಲ್ಲೇ 'ತಲಾಕ್' ಎಂದ!
ಈ ಹಿನ್ನೆಲೆ ಬೀದಿ ನಾಯಿಯ ಮೇಲೆ ಇಂತಹ ಪೈಶಾಚಿಕ ಕೃತ್ಯ ಮತ್ತು ಅದಕ್ಕೆ ಪೊಲೀಸರ ಪ್ರತಿಕ್ರಿಯೆ ಎರಡನ್ನೂ ಇಂಟರ್ನೆಟ್ ಖಂಡಿಸಿದೆ. ಕ್ರೌರ್ಯ ವಿರೋಧಿ ಅಧಿಕಾರಿ ತರುಣ್ ಅಗರ್ವಾಲ್ ಅವರು ಆನ್‌ಲೈನ್‌ನಲ್ಲಿ ಈ ಸಂಬಂಧದ ವಿಡಿಯೋವನ್ನು ಟ್ವೀಟ್ ಮಾಡಿದ ನಂತರ, ಅನೇಕ ಪ್ರಾಣಿ ದಯಾ ಸಂಘಟನೆಯ ಕಾರ್ಯಕರ್ತರು ನ್ಯಾಯಕ್ಕೆ ಮನವಿ ಮಾಡಿ ನಿಂತರು ಮತ್ತು ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.
ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸದಸ್ಯ ಪಂಖೂರಿ ಪಾಠಕ್ ಕೂಡ ಈ ಬಗ್ಗೆ ಧ್ವನಿ ಎತ್ತಿದ್ದು, ಪ್ರಕರಣ ದಾಖಲಿಸದ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ದೆಹಲಿ ಪೊಲೀಸರು ಮತ್ತು ಇತರ ಕೆಲವು ಅಧಿಕಾರಿಗಳನ್ನು ಟ್ಯಾಗ್ ಮಾಡಿದ ಅವರು, "ನಾವು ಸ್ಪಷ್ಟವಾಗಿ ಹೇಳೋಣ. ಎಫ್‌ಐಆರ್ ದಾಖಲಿಸಿ ಈ ರಾಕ್ಷಸನನ್ನು ಬಂಧಿಸದೆ, @ದೆಹಲಿ ಪೋಲೀಸ್ ಅತ್ಯಾಚಾರಿಯನ್ನು ರಕ್ಷಿಸುತ್ತಿದೆ ಮತ್ತು ಶಕ್ತಗೊಳಿಸುತ್ತಿದೆ. ಎಸ್‌ಎಚ್‌ಒ ಹರಿನಗರ ಅವರು ಕ್ರಮ ಕೈಗೊಳ್ಳದಂತೆ ತಡೆದಿರುವುದು ಏನು? "ಇದು ಅಪರಾಧವಲ್ಲವೇ?" ಎಂದು ಅವರು SHO ನ ಆಪಾದಿತ ನಡವಳಿಕೆಯನ್ನು ಟೀಕಿಸಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಕೇರಳದ ನರ್ಸಿಂಗ್ ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ಸ್ನೇಹಿತರಿಂದಲೇ ಅತ್ಯಾಚಾರ
ಅಲ್ಲದೆ, "ಹರಿನಗರ ಪೊಲೀಸ್ ಠಾಣೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ನಾಯಿ ಮೇಲೆ ಅತ್ಯಾಚಾರ ನಡೆಯುತ್ತಿದೆ ಎಂಬುದಕ್ಕೆ ವಿಡಿಯೋ ಪುರಾವೆಗಳಿದ್ದರೂ ಎಫ್‌ಐಆರ್ ದಾಖಲಿಸಲು ನಿರಾಕರಿಸಿದೆ. ಅಪರಾಧವನ್ನು ತಡೆಯಲು ಆಡಳಿತವು ಇದನ್ನೇ ಮಾಡುತ್ತಿದೆಯೇ?" ಎಂದು ತಮ್ಮ ಡಿಪಿಯಲ್ಲಿ ಪ್ರಾಣಿ ಅಪರಾಧ ನಿಯಂತ್ರಣ ವಿಭಾಗದ ಲೋಗೋವನ್ನು ಹೊಂದಿರುವ ಮಂಜುನಾಥ್ ಕಾಮತ್ ಎಂಬುವರು ಬರೆದಿದ್ದಾರೆ. ಫೆಬ್ರವರಿ 24 ರಂದು ಈ ಘಟನೆ ನಡೆದಿರುವುದನ್ನು ಅವರು ಗಮನಕ್ಕೆ ತಂದರು.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ನಂತರ, ದೆಹಲಿ ಪೊಲೀಸರು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಈ ವಿಷಯದ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ ಮತ್ತು ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ದೆಹಲಿ ಪೊಲೀಸರು ವಿಡಿಯೋ ಮತ್ತು ಅದಕ್ಕೆ ಸಂಬಂಧಪಟ್ಟ ಸ್ಕ್ರೀನ್‌ಶಾಟ್‌ಗಳನ್ನು ಒಪ್ಪಿಕೊಂಡಿದ್ದಾರೆ.
ವಿವರಗಳ ಪ್ರಕಾರ, ದೆಹಲಿಯ ಹರಿನಗರ ಪ್ರದೇಶದ ಉದ್ಯಾನವನದಲ್ಲಿ ನಾಯಿಯ ಮೇಲೆ ಅತ್ಯಾಚಾರ ನಡೆಸಲಾಯಿತು ಎಂದು ತಿಳಿದುಬಂದಿದೆ. ಘಟನೆಯ ವಿಡಿಯೋ ವೈರಲ್ ಆದ ನಂತರ ಹರಿನಗರದ ಸ್ಥಳೀಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.
ದೂರಿನ ನಂತರ, ಪೊಲೀಸರು ಕ್ರಮ ಕೈಗೊಂಡರು ಮತ್ತು ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಮತ್ತು ಪ್ರಾಣಿಗಳ ಕಾಯಿದೆಯ ಸೆಕ್ಷನ್ 377/11 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ವಿಡಿಯೋ ಆಧರಿಸಿ ಆರೋಪಿ ಪತ್ತೆಗೆ ತನಿಖೆ ಸಹ ನಡೆಯುತ್ತಿದೆ ಎಂದು ತಿಳಿದುಬಂದಿದೆ.