ಜೀವನದಲ್ಲಿ ಜಿಗುಪ್ಸೆಗೊಂಡು ಸಾಗರದ ಕೋರ್ಟ್ ಮುಂದೆ ಬೆರಳಚ್ಚುಗಾರ ಕೆಲಸ ಮಾಡಿಕೊಂಡಿದ್ದ ನಿತ್ಯಾನಂದ ಎನ್ನುವವರು ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಳದಿ ಗ್ರಾಮದಲ್ಲಿ ನಡೆದಿದೆ.
ಶಿವಮೊಗ್ಗ (ಮಾ.20): ಜೀವನದಲ್ಲಿ ಜಿಗುಪ್ಸೆಗೊಂಡು ಸಾಗರದ ಕೋರ್ಟ್ ಮುಂದೆ ಬೆರಳಚ್ಚುಗಾರ ಕೆಲಸ ಮಾಡಿಕೊಂಡಿದ್ದ ನಿತ್ಯಾನಂದ ಎನ್ನುವವರು ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಳದಿ ಗ್ರಾಮದಲ್ಲಿ ನಡೆದಿದೆ.
ಸಾಗರದ ಕೋರ್ಟ್ ಮುಂಬಾಗ ಕಾರ್ಯ ನಿರ್ವಹಿಸುತ್ತಿದ್ದ ಬೆರಳಚ್ಚುಗಾರ ನಿತ್ಯಾನಂದ (56) ಸಾವನ್ನಪ್ಪಿದ ಮೃತ ದುರ್ದೈವಿ ಆಗಿದ್ದಾರೆ. ನಿನ್ನ ರಾತ್ರಿ ವೇಳೆ ಕೆಳದಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಸಾಗರ ತಾಲೂಕಿನ ಕೆಳದಿ ಗ್ರಾಮದ ಕೆರೆ ಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಬೆಳಗ್ಗೆ ಕೆರೆಯ ಬಳಿ ಮೃತದೇಹ ಪತ್ತೆಯಾಗಿದ್ದು, ದೇಹದೊಂದಿಗೆ ಡೆತ್‌ನೋಟ್ ಕೂಡ ಪೊಲೀಸರಿಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಶಿವಮೊಗ್ಗ ಡಿಸಿ ಕಚೇರಿ ಎದುರು ನಿಂತು ಅಜಾನ್ ಕೂಗಿದ ಯುವಕ: ವಿಡಿಯೋ ವೈರಲ್
40 ವರ್ಷಗಳಿಂದ ಸಾಗರ ಕೋರ್ಟ್‌ಮುಂದೆ ಕೆಲಸ: ಶಿವಮೊಗ್ಗ ಜಿಲ್ಲೆಯ ಸಾಗರದ ಪಟ್ಟಣದ ಕೋರ್ಟ್ ಮುಂಭಾಗದಲ್ಲಿ ಕುಳಿತು ಕಳೆದ 40 ವರ್ಷಗಳಿಂದ ಬೆರಳಚ್ಚುಗಾರನಾಗಿ ಕೆಲಸ ಮಾಡಿಕೊಂಡಿದ್ದರು. ಆದರೆ, ಕೆಲಸ ಮಾಡುತ್ತಲೇ ಅವರ ಎರಡೂ ಕಿವಿಗಳು ನಿಶ್ಚಲಗೊಂಡು ಕಿವಿ ಕೇಳಿಸುತ್ತಿರಲ್ಲಿಲ್ಲ. ಕಿವಿಗೆ ಚಿಕಿತ್ಸೆ ಪಡೆದರೂ ಮಿಷನ್ ಹಾಕಿದರೂ ಒಂದು ಕಿವಿ ಸಂಪೂರ್ಣ ಕೇಳಿಸದೇ ಡೆಡ್ ಆಗಿತ್ತು. ಜೊತೆಗೆ, ಇನ್ನೊಂದು ಬದಿಯ ಕಿವಿಯೂ ಕೂಡ ಮಿಷನ್ ಹಾಕಿಕೊಂಡಿದ್ದರೂ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಕೇಳಿಸುತ್ತಿತ್ತು ಎಂದು ತಿಳಿದುಬಂದಿತ್ತು.
ಡೆತ್ ನೋಟ್‌ನಲ್ಲಿ ಏನಿದೆ? ನನಗೆ ಕಿವಿ ಕೇಳಿಸುತ್ತಿಲ್ಲ. ಒಂದು ಕಿವಿ ಸಂಪೂರ್ಣ ಡೆಡ್ ಆಗಿದ್ದು, ಇನ್ನೊಂದು ಕಿವಿ ಈಗ ಸ್ವಲ್ಪ ಪ್ರಮಾಣದಲ್ಲಿ ಕೇಳುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೊಂದು ಕಿವಿಯೂ ಕೂಡ ನಿಶ್ಚಲವಾಗಲಿದೆ. ಆದ್ದರಿಂದ ನನಗೆ ನನ್ನ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಈ ಸಮಾಜದಲ್ಲಿ ನಾನು ಎಂದಿಗೂ ಪ್ರಯೋಜನವಿಲ್ಲದ ವ್ಯಕ್ತಿಯಾಗಿ ಬದುಕಲು ಇಷ್ಟವಿಲ್ಲ. ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಬೇರೆ ಯಾರೂ ಹೊಣೆಗಾರರಲ್ಲ. ಈ ಡೆತ್‌ನೋಟ್ ಅನ್ನು ನಾನು ನನ್ನ ಸ್ವ ಹಸ್ತಾಕ್ಷರದಿಂದ ಸಹಿ ಮಾಡಿರುತ್ತೇನೆ. ನಾನು ಮಾನಸಿಕ ಮಾತ್ರೆ ಸಹ ತೆಗೆದು ಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ.
ಶಿವಮೊಗ್ಗದಲ್ಲಿ ಮತ್ತೆ 'ಧರ್ಮ ದಂಗಲ್ ', ವಿಎಚ್‌ಪಿಯಿಂದ ಇಂದು ಭಜನಾ ಪ್ರತಿಭಟನೆ
ಕುಟುಂಬಕ್ಕೆ ಆಸರೆಯಾಗಿದ್ದ ವ್ಯಕ್ತಿಯೇ ಸಾವು: ಇನ್ನು ಕೆಳದಿ ಗ್ರಾಮದಲ್ಲಿ ಬೆರಳಚ್ಚುಗಾರ ನಿತ್ಯಾನಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣವು ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಮೃತದೇಹ ಮತ್ತು ಡೆತ್ ನೋಟ್ ಪರಿಶೀಲನೆ ಮಾಡಿದ ನಂತರ ಮೃತದೇಹ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು ಕೆಲಸ ಮಾಡುತ್ತಾ ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.