ಹೆಂಡ್ತಿಗೆ ಗೊತ್ತಾಯ್ತು ಅಂತ ಇಟ್ಟುಕೊಂಡವಳ ಕತೆ ಮುಗಿಸಿದ ಪಾಪಿ ಗಂಡ!

Published : May 28, 2024, 10:06 AM ISTUpdated : May 28, 2024, 12:12 PM IST
ಹೆಂಡ್ತಿಗೆ ಗೊತ್ತಾಯ್ತು ಅಂತ ಇಟ್ಟುಕೊಂಡವಳ ಕತೆ ಮುಗಿಸಿದ ಪಾಪಿ ಗಂಡ!

ಸಾರಾಂಶ

ಅನೈತಿಕ ಸಂಬಂಧಕ್ಕೆ ಹೆಣ ಬೀಳೋದು ಇತ್ತೀಚಿಗೆ ಸಾಮಾನ್ಯವಾಗಿದೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ಪತ್ನಿಯ ಮುಂದೆ ತನ್ನ ಅನೈತಿಕ ಸಂಬಂಧದ  ರಹಸ್ಯ ಬಯಲಾಯ್ತೆಂದು ತಾನು ಸಂಬಂಧ ಇಟ್ಟುಕೊಂಡಿದ್ದ ಮಹಿಳೆ ಹಾಗೂ ಆತನ ಮಗನನ್ನೇ ಕೊಲೆ ಮಾಡಿದ್ದಾನೆ.

ಪತ್ನಿಯ ಮುಂದೆ ತನ್ನ ಅನೈತಿಕ ಸಂಬಂಧದ  ರಹಸ್ಯ ಬಯಲಾಯ್ತೆಂದು ಗಂಡ ತಾನು ಸಂಬಂಧ ಇಟ್ಟುಕೊಂಡಿದ್ದ ಮಹಿಳೆ ಹಾಗೂ ಆತನ ಮಗನನ್ನು ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ. ಉದಯಪುರದ ಫಲಾಸಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯನ್ನು ಕೊಂದ ವ್ಯಕ್ತಿಯನ್ನು ಉದಯಪುರ ಬಂಧಿಸಿದ್ದಾರೆ. ತಾನು ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆ ಸೀತಾಳನ್ನು ಕತ್ತು ಸೀಳಿ ಹೇಗೆ ಕೊಲೆ ಮಾಡಿದೆ ಎಂದು ಆರೋಪಿ ದೇವಿಲಾಲ್ ಪರ್ಮಾರ್ ಪೊಲೀಸರಿಗೆ ತಿಳಿಸಿದ್ದಾನೆ. 

ಆರೋಪಿಯನ್ನು ಬಂಧಿಸಿದ ನಂತರ ಮತ್ತೊಂದು ಆಘಾತಕಾರಿ ವಿವರ ಬೆಳಕಿಗೆ ಬಂದಿದೆ. ಆರೋಪಿ ದೇವಿಲಾಲ್‌ ಕಳೆದ ವರ್ಷ ತಾನು ಸಂಬಂಧ ಇಟ್ಟುಕೊಂಡಿದ್ದ ಮಹಿಳೆ ಸೀತಾಳ 4 ವರ್ಷದ ಮಗನನ್ನು ಸಹ ಕೊಂದಿರುವುದು ಬೆಳಕಿಗೆ ಬಂದಿದೆ. ಆದರೆ, ಸೀತಾ, ದೇವಿಲಾಲ್ ಪರ್ಮಾರ್ ತನ್ನ ಮಗನನ್ನು ಕೊಂದಿದ್ದಾನೆ ಎಂದು ತಿಳಿದಿದ್ದರೂ, ಈ ಬಗ್ಗೆ ಪೊಲೀಸರಿಗೆ ತಿಳಿಸದೆ ಮೌನವಾಗಿದ್ದಳು.

ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೇ ಶವವನ್ನು ರಸ್ತೆಗೆ ಎಸೆದ ಪ್ರಿಯಕರ

ದೇವಿಲಾಲ್ ಪರ್ಮಾರ್‌ನ್ನು ಭೇಟಿಯಾದಾಗ ಸೀತಾ ಕೂಡ ಮದುವೆಯಾಗಿದ್ದಳು ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದಳು. ಆದರೆ, ಸೀತಾಳ ಗಂಡ ಬಿಟ್ಟು ಹೋಗಿದ್ದ.  4 ವರ್ಷದ ಮಗನನ್ನು ಸೀತಾ ನೋಡಿಕೊಳ್ಳುತ್ತಿದ್ದಳು. ದೇವಿಲಾಲ್‌ ಆ ಮಗನನ್ನು ಹೊಡೆದು ಕೊಂದಿದ್ದಾನೆ.

ವರದಿಗಳ ಪ್ರಕಾರ, ದೇವಿಲಾಲ್‌ನ ಹೆಂಡತಿಗೆ ಸಂಬಂಧದ ಬಗ್ಗೆ ತಿಳಿದಾಗ ದೇವಿಲಾಲ್ ಪರ್ಮಾರ್ ತನ್ನ ಹೆಂಡತಿಯೊಂದಿಗೆ ಸಮಾಲೋಚಿಸಿದ ನಂತರ ಈ ವರ್ಷದ ಏಪ್ರಿಲ್‌ನಲ್ಲಿ ಸೀತಳನ್ನು ಕೊಲ್ಲುವ ಯೋಜನೆಯನ್ನು ರೂಪಿಸಿದ್ದ. ದೇವಿಲಾಲ್ ಸೀತಾಳನ್ನು ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಬೇಕೆಂದು ಹೇಳಿ ಕರೆದುಕೊಂಡು ಹೋಗಿದ್ದ. ಬೈಕ್‌ನಲ್ಲಿ ಸ್ವಲ್ಪ ಸಮಯ ಪ್ರಯಾಣಿಸಿದ ನಂತರ, ದೇವಿಲಾಲ್ ಮತ್ತು ಸೀತಾ ರಸ್ತೆ ಬದಿಯ ಅಂಗಡಿಯೊಂದರಲ್ಲಿ ನಿಲ್ಲಿಸಿದರು. ಅಲ್ಲಿ ಇಬ್ಬರೂ ಒಟ್ಟಿಗೆ ಮದ್ಯಪಾನ ಮಾಡಿದರು.

ಇದಾದ ಬಳಿಕ ದೇವಿಲಾಲ್ ಪರ್ಮಾರ್ ಆಕೆಯನ್ನು ಕಾಡಿಗೆ ಕರೆದುಕೊಂಡು ಹೋಗಿ ವಿಶ್ರಾಂತಿ ಪಡೆಯುವ ನೆಪದಲ್ಲಿ ನಿದ್ದೆ ಮಾಡುತ್ತಿರುವಂತೆ ನಟಿಸಿದ್ದಾನೆ.ನಂತರ ಸೀತಾಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕತ್ತು ಸೀಳಿ ಕೊಂದಿದ್ದಾನೆ. ಸೀತಾ ಕೈ ಮೇಲೆ ದೇವಿಲಾಲನ ಹೆಸರಿನ ಹಚ್ಚೆಯನ್ನೂ ಹಾಕಿಕೊಂಡಿದ್ದ ಕಾರಣ ದೇವಿಲಾಲ್‌ ಇದನ್ನು ಕೆತ್ತಿ ತೆಗೆದಿದ್ದಾನೆ. ಕಾಡಿನಲ್ಲಿ ಶವ ಪತ್ತೆಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಜಮೀನು ವಿವಾದ ಪರಸ್ಪರ ದೊಣ್ಣೆಗಳಿಂದ ಬಡಿದಾಡಿಕೊಂಡ ಕುಟುಂಬ!

ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ಏನನ್ನೂ ಕಂಡುಹಿಡಿಯಲಾಗಲಿಲ್ಲವಾದರೂ. ನಂತರ ಒಬ್ಬ ಕಾನ್‌ಸ್ಟೆಬಲ್‌ಗೆ ದೇವಿಲಾಲ್ ಬಗ್ಗೆ ಅವನ ಮೂಲವೊಂದರಿಂದ ತಿಳಿದು ಬಂದಿದೆ. ಪೊಲೀಸರು ದೇವಿಲಾಲ್ ಅವರನ್ನು ವಿಚಾರಣೆಗೆ ಕರೆದ ನಂತರ, ಆತ ಅಪರಾಧವನ್ನು ಒಪ್ಪಿಕೊಂಡಿದ್ದು, ಪೊಲೀಸರು ತಕ್ಷಣ ಆತನನ್ನು ಬಂಧಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ