2,000 ರೂ. ಪಾಕೆಟ್‌ ಮನಿ ಕೊಡ್ಲಿಲ್ಲ ಅಂತ ಅಪ್ಪನ ತಲೆ ಮೇಲೆ ಕಲ್ಲು ಎತ್ತಿಹಾಕಿ ಜಜ್ಜಿ ಕೊಲೆ ಮಾಡ್ದ!

By BK AshwinFirst Published Jun 20, 2023, 8:10 PM IST
Highlights

ಜೂನ್ 15 ರ ರಾತ್ರಿ, ಸೋಹನ್ ತನ್ನ ತಂದೆಗೆ ಪಾಕೆಟ್ ಮನಿಯಾಗಿ 2,000 ರೂ. ನೀಡುವಂತೆ ವಿನಂತಿಸಿದನು. ಆದರೆ ಅವನ ತಂದೆ ಹಣ ಕೊಡಲು ನಿರಾಕರಿಸಿದರು. ಇದರಿಂದ ಕೋಪಗೊಂಡ ಸೋಹನ್ ತಂದೆಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. 

ಇಂದೋರ್‌ (ಮಧ್ಯ ಪ್ರದೇಶ) ಜೂನ್ 20: ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ 25 ವರ್ಷದ ಯುವಕನೊಬ್ಬ ತಂದೆ 2,000 ರೂಪಾಯಿ ಹಣವನ್ನು ಪಾಕೆಟ್‌ ಮನಿಯಾಗಿ ಕೊಡ್ಲಿಲ್ಲ ಅಂತ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಈ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ 50 ವರ್ಷದ ರೈತ ಬಾಬು ಚೌಧರಿ ಎಂಬುವರು ಮೃತಪಟ್ಟಿದ್ದಾರೆ.

ಜೂನ್ 15 ರ ರಾತ್ರಿ ಮಧ್ಯ ಪ್ರದೇಶದ ಇಂದೋರ್‌ ಜಿಲ್ಲೆಯ  ದೇಪಾಲ್‌ಪುರ ಪ್ರದೇಶದ ಹೊಲವೊಂದರಲ್ಲಿ ಸಂತ್ರಸ್ತ ಬಾಬು ಚೌಧರಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಹಿತಿಕಾ ವಾಸಲ್ ಖಚಿತಪಡಿಸಿದ್ದಾರೆ. ಇನ್ನು, ಸಂಪೂರ್ಣ ತನಿಖೆಯ ನಂತರ ಮತ್ತು ಅಪರಾಧದ ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸಿದ ನಂತರ, ಪೊಲೀಸರು ಮೃತ ರೈತನ ಮಗ ಸೋಹನ್‌ನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Latest Videos

ಇದನ್ನು ಓದಿ: ಮಗಳ ಬಳಿ ಫೋನ್ ಕಿತ್ತುಕೊಂಡ ತಾಯಿ ಕೊಲ್ಲಲು ಪದೇ ಪದೇ ಸಂಚು ಮಾಡಿದ 13 ವರ್ಷದ ಮೊಬೈಲ್ ವ್ಯಸನಿ!

ಘಟನೆ ನಡೆದದ್ದು ಹೇಗೆ..?
25 ವರ್ಷ ವಯಸ್ಸಿನ ಆರೋಪಿ ಸೋಹನ್‌ ಮಾದಕ ವ್ಯಸನಿಯಾಗಿದ್ದು, ಕೊಲೆಯಾದ ದಿನ ತನ್ನ ತಂದೆಗೆ ತಮ್ಮ ಜಮೀನಲ್ಲಿ ಸಹಾಯ ಮಾಡುತ್ತಿದ್ದ ಎಂದು ಪೊಲೀಸ್‌ ಅಧಿಕಾರಿ ಹಿತಿಕಾ ವಾಸಲ್‌ ಘಟನೆಯನ್ನು ವಿವರಿಸುವಾಗ ಮಾಹಿತಿ ನೀಡಿದ್ದಾರೆ. “ಜೂನ್ 15 ರ ರಾತ್ರಿ, ಸೋಹನ್ ತನ್ನ ತಂದೆಗೆ ಪಾಕೆಟ್ ಮನಿಯಾಗಿ 2,000 ರೂ. ನೀಡುವಂತೆ ವಿನಂತಿಸಿದನು. ಆದರೆ ಅವನ ತಂದೆ ಹಣ ಕೊಡಲು ನಿರಾಕರಿಸಿದರು. ಈ ನಿರಾಕರಣೆಯಿಂದ ಕೋಪಗೊಂಡ ಸೋಹನ್, ಹೊಲದಲ್ಲಿ ಕಲ್ಲೊಂದನ್ನು ಎತ್ತಿಹಿಡಿದು ತನ್ನ ತಂದೆಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾನೆ. ತಲೆಗೆ ಜಜ್ಜಿ ಕೊಲೆ ಮಾಡಿದ್ದಾರೆ. ಇದರ ಪರಿಣಾಮವಾಗಿ ತಲೆಗೆ ಮಾರಣಾಂತಿಕ ಗಾಯಗಳಾಗಿತ್ತು ಎಂದು ಪೊಲೀಸ್‌ ಅಧಿಕಾರಿ ಹಿತಿಕಾ ವಾಸಲ್ ಹೇಳಿದ್ದಾರೆ.

ಇನ್ನು, ಈ ಪ್ರಕರಣದ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಸಮಗ್ರ ತನಿಖೆ ನಡೆಯುತ್ತಿದೆ ಎಂದೂ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

ಇದನ್ನೂ ಓದಿ: Crime: ಗರ್ಲ್‌ಫ್ರೆಂಡ್‌ ಜತೆ ಜಗಳವಾಡಿ ಆಟೋದಲ್ಲೇ ಕತ್ತು ಸೀಳಿ ಕೊಂದ ಪಾಪಿ!

ಇದು ಅಪ್ಪನನ್ನೇ ತಂದೆ ಕೊಲೆ ಮಾಡಿದ ಘಟನೆಯಾದ್ರೆ, ತಾಯಿಯನ್ನೇ ಮಗಳು ಹಲವು ಬಾರಿ ಕೊಲೆಗೆ ಸ್ಕೆಚ್‌ ಹಾಕಿರುವ ಪ್ರಕರಣವೊಂದೂ ಗುಜರಾತ್‌ನಲ್ಲಿ ಬೆಳಕಿಗೆ ಬಂದಿದೆ. ಹೌದು, ಗುಜರಾತ್‌ನ ಪಶ್ಚಿಮ ಅಹಮದಾಬಾದ್‌ನಲ್ಲಿ ನೆಲೆಸಿರುವ 45 ವರ್ಷದ ಮಹಿಳೆಯೊಬ್ಬರು  ತಮ್ಮ ಮನೆಯಲ್ಲಿ ಸಕ್ಕರೆ ಪಾತ್ರೆಯಲ್ಲಿ ಕೀಟನಾಶಕ ಪುಡಿ ಮತ್ತು ಬಾತ್‌ರೂಮಿನಲ್ಲಿ ಫೀನೈಲ್‌ನಂತಹ ದ್ರವವನ್ನು ಆಗಾಗ್ಗೆ ಕಂಡು ಆಘಾತಕ್ಕೊಳಗಾಗಿದ್ದಾರೆ. ಇನ್ನು, ಸೂಕ್ಷ್ಮವಾಗಿ ಗಮನಿಸಿದಾಗ ತನ್ನ 13 ವರ್ಷದ ಮಗಳು ತನ್ನನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದಾಳೆ ಎಂಬುದು ತಾಯಿಯ ಅರಿವಿಗೆ ಬಂದಿದೆ. ಇಂತಹ ಘಟನೆಗಳು ಮುಂದುವರಿದಾಗ, ಪರಿಹಾರವನ್ನು ಕೋರಿ ಸಹಾಯವಾಣಿಗೆ ಕರೆ ಮಾಡಿದ್ದಾರೆ ಎಂದು ವರದಿಯಾಗಿದೆ.

"ನಮ್ಮ ಮಾತುಕತೆಯಲ್ಲಿ ಹದಿಹರೆಯದ ಹುಡುಗಿಯು ಪೋಷಕರಿಗೆ ಹಾನಿ ಮಾಡಲು ಬಯಸಿದ್ದಾಳೆಂದು ತಿಳಿದುಬಂದಿದೆ. ಅವರು ಕೀಟನಾಶಕಗಳನ್ನು ಬೆರೆಸಿದ ಸಕ್ಕರೆಯನ್ನು ಸೇವಿಸಲು ಅಥವಾ ನೆಲದ ಮೇಲೆ ಜಾರಿ ಬಿದ್ದು ತಲೆಗೆ ಗಾಯ ಮಾಡಿಕೊಳ್ಳಲು ಬಯಸಿದ್ದರು. ಕೆಲವು ದಿನಗಳ ಹಿಂದೆ ತಾಯಿ ಮಗಳ ಬಳಿ ಇದ್ದ ಫೋನ್ ಅನ್ನು ಕಸಿದುಕೊಂಡಿದ್ದಾರೆ ಹಾಗೂ  ಅದನ್ನು ಹಿಂತಿರುಗಿಸಲು ನಿರಾಕರಿಸಿದರು ಎಂದೂ ನಮಗೆ ತಿಳಿದುಬಂತು. ಅಂದಿನಿಂದ, ಮಗಳು ಈ ರೀತಿ ಹಿಂಸಾಚಾರ ಪ್ರವೃತ್ತಿ ಹೊಂದುತ್ತಿದ್ದಾಳೆ" ಎಂದು ಅಭಯಂ 181 ಮಹಿಳಾ ಸಹಾಯವಾಣಿಯ ಸಲಹೆಗಾರರೊಬ್ಬರು ಹೇಳಿದರು.

ಇದನ್ನೂ ಓದಿ: ಆಶ್ರಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಸ್ವಾಮೀಜಿ ಅರೆಸ್ಟ್‌

"ಹುಡುಗಿ ಇಡೀ ರಾತ್ರಿ ಫೋನ್‌ನಲ್ಲಿ ಕಳೆಯುತ್ತಿದ್ದಳು, ಆನ್‌ಲೈನ್ ಸ್ನೇಹಿತರೊಂದಿಗೆ ಚಾಟ್ ಮಾಡುತ್ತಿದ್ದಳು ಅಥವಾ ರೀಲ್ಸ್‌ ಹಾಗೂ ಪೋಸ್ಟ್‌ಗಳನ್ನು ವೀಕ್ಷಿಸುತ್ತಾ ಸಾಮಾಜಿಕ ಮಾಧ್ಯಮದಲ್ಲಿ ಸಮಯ ಕಳೆಯುತ್ತಿದ್ದಳು ಎಂದು ಪೋಷಕರು ನಮಗೆ ತಿಳಿಸಿದ್ದಾರೆ. ಇದು ಅವಳ ಅಧ್ಯಯನ ಮತ್ತು ಸಾಮಾಜಿಕ ಜೀವನವನ್ನು ಬಹಳವಾಗಿ ಅಡ್ಡಿಪಡಿಸಿತ್ತು’’ ಎಂದೂ ಸಲಹೆಗಾರರು ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಮತ್ತೊಂದು ನಿರ್ಭಯಾ ಕೇಸ್‌ ಆತಂಕ: ಕಾರಿನಲ್ಲಿ ಮಧ್ಯರಾತ್ರಿ ಕೂಗಿಕೊಂಡ ಮಹಿಳೆ; ಚೇಸ್‌ ಮಾಡಿದ್ರೂ ಸಿಗದೆ ಪರಾರಿ!

click me!