Telangana Crime: ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಾಳೆ ಅಂತ 15 ವರ್ಷದ ಮಗಳನ್ನೇ ಕೊಂದ ತಂದೆ

By BK Ashwin  |  First Published Oct 27, 2022, 12:29 PM IST

ಕಳೆದ ಕೆಲವು ದಿನಗಳಿಂದ, ಆರೋಪಿ 10 ನೇ ತರಗತಿ ಓದುತ್ತಿರುವ ತನ್ನ ಕಿರಿಯ ಮಗಳು, ಅದೇ ಗ್ರಾಮದ ಬೇರೆ ಜಾತಿಯ ಯುವಕನೊಂದಿಗೆ ಕ್ಲೋಸ್‌ ಆಗಿರುವುದನ್ನು ಗಮನಿಸಿದ ತಂದೆ, ತನ್ನ ಮಗಳು ಅವನನ್ನು ಪ್ರೀತಿಸುತ್ತಿರಬಹುದೆಂದು ಶಂಕಿಸಿದ್ದಾರೆ ಎಂದು ತಿಳಿದುಬಂದಿದೆ.


15 ವರ್ಷದ ಮಗಳನ್ನು ಅದೇ ಗ್ರಾಮದ 20 ವರ್ಷದ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂಬ ಅನುಮಾನದ ಮೇಲೆ 45 ವರ್ಷದ ತಂದೆ ಕೊಲೆ ಮಾಡಿರುವ ಅರೋಪ ಕೇಳಿಬಂದಿದೆ. ಈ ಸಂಬಂಧ ತೆಲಂಗಾಣದ (Telangana) ವನಪರ್ತಿ (Wanaparthy) ಜಿಲ್ಲೆಯ ಪೊಲೀಸರು 45 ವರ್ಷದ ವ್ಯಕ್ತಿಯನ್ನು ಮಂಗಳವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಮಂಗಳವಾರ ಬೆಳಗ್ಗೆ ಪೆಬ್ಬೈರ್ ಬ್ಲಾಕ್‌ನ ಪಾತಪಲ್ಲಿ (Pathapalli) ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬುಧವಾರ ಸ್ಥಳೀಯ ನ್ಯಾಯಾಲಯಕ್ಕೆ (Local Court) ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಮಾಹಿತಿ ನೀಡಿದ ವನಪರ್ತಿ ಪೊಲೀಸ್ ಉಪ ಅಧೀಕ್ಷಕ (Deputy Superintendent of Police) ಆನಂದ್ ರೆಡ್ಡಿ, ಕೃಷಿಕರಾಗಿರುವ ಆರೋಪಿಗೆ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾರೆ. ಕಳೆದ ಕೆಲವು ದಿನಗಳಿಂದ, ಆರೋಪಿ 10 ನೇ ತರಗತಿ ಓದುತ್ತಿರುವ ತನ್ನ ಕಿರಿಯ ಮಗಳು, ಅದೇ ಗ್ರಾಮದ ಬೇರೆ ಜಾತಿಯ ಯುವಕನೊಂದಿಗೆ ಕ್ಲೋಸ್‌ ಆಗಿರುವುದನ್ನು ಗಮನಿಸಿದ ತಂದೆ, ತನ್ನ ಮಗಳು ಅವನನ್ನು ಪ್ರೀತಿಸುತ್ತಿರಬಹುದೆಂದು ಶಂಕಿಸಿದ್ದಾರೆ" ಎಂದು ತಿಳಿದುಬಂದಿದೆ.

Tap to resize

Latest Videos

ಇದನ್ನು ಓದಿ: ಬೆಂಗಳೂರು: ಪತ್ನಿ ಕೊಲೆಗೈದು ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟು ಪರಾರಿಯಾದ ಪತಿ?

ಇನ್ನು, ಈ ಬಗ್ಗೆ ಮಗಳನ್ನು ತಂದೆ ಪ್ರಶ್ನೆ ಮಾಡಿದಾಗ, ಯುವಕನೊಂದಿಗಿನ ಯಾವುದೇ ಸಂಬಂಧವನ್ನು ನಿರಾಕರಿಸಿದಳು ಮತ್ತು ಅದು ಕೇವಲ ಸ್ನೇಹ ಎಂದು ತಿಳಿಸಿದ್ದಳು. ಆದರೂ, ತಂದೆ ತನ್ನ ಕಿರಿಯ ಮಗಳನ್ನು ಅನುಮಾನಿಸುವುದನ್ನು ಮುಂದುವರೆಸಿದರು ಮತ್ತು ಯುವಕನೊಂದಿಗೆ ಬೆರೆಯುವುದನ್ನು ಮುಂದುವರಿಸದಂತೆ ಎಚ್ಚರಿಕೆ ನೀಡಿದ್ದರು.
ಆದರೆ, ಮಂಗಳವಾರ ಬೆಳಗ್ಗೆ ತಂದೆ ಮತ್ತು ಮಗಳ ನಡುವೆ ತೀವ್ರ ಜಗಳ ನಡೆದಿದೆ. ಕೋಪದ ಭರದಲ್ಲಿ, ತಂದೆ ಕೊಡಲಿಯನ್ನು ಎತ್ತಿಕೊಂಡು ಮಗಳನ್ನು ಕತ್ತರಿಸಿದ್ದಾನೆ. ತಕ್ಷಣ ಹುಡುಗಿಯ ಸಾವಿಗೆ ಕಾರಣವಾಯಿತು’’ ಎಂದು ವನಪರ್ತಿ ಪೊಲೀಸ್ ಉಪಾಧೀಕ್ಷಕ ಆನಂದ್ ರೆಡ್ಡಿ ಹೇಳಿದರು.

ಇನ್ನು, ಕೃತ್ಯ ಎಸಗಿದ ಬಳಿಕ ವ್ಯಕ್ತಿ ಆತ್ಮಕೂರು ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ. ಕೂಡಲೇ ಡಿಎಸ್ಪಿ ಆತ್ಮಕೂರಿನ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಎಸ್. ರತ್ನಂ, ಉಪನಿರೀಕ್ಷಕರಾದ ರಾಮಸ್ವಾಮಿ ಮತ್ತು ವಾಹಿದ್ ಅಲಿ ಬೇಗ್ ಅವರೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದರು.

ಇದನ್ನೂ ಓದಿ: 12 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ, ಆರೋಪಿ ವಿರುದ್ಧ ಕೇಸ್‌ ದಾಖಲು

ಇನ್ನೊಂದೆಡೆ, ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವನಪರ್ತಿ ಆಸ್ಪತ್ರೆಗೆ ರವಾನಿಸಲಾಗಿದೆ. ಅವರ ತಪ್ಪೊಪ್ಪಿಗೆಯ ಆಧಾರದ ಮೇಲೆ ನಾವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿದ್ದೇವೆ ಮತ್ತು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದು ತೆಲಂಗಾಣದ ವನಪರ್ತಿ ಪೊಲೀಸ್ ಉಪಾಧೀಕ್ಷಕ ಆನಂದ್ ರೆಡ್ಡಿ ಹೇಳಿದರು.

ಇದನ್ನೂ ಓದಿ: ಹೆಸರಿಗೆ ಪೊಲೀಸ್ ಇನ್ಫಾರ್ಮರ್, ಮಾಡ್ತಿದ್ದು ಮನೆ ಕಳ್ಳತನ: ಖತರ್ನಾಕ್‌ ಖದೀಮ ಅರೆಸ್ಟ್‌

click me!