ಬೆಂಗಳೂರು: ಪತ್ನಿ ಕೊಲೆಗೈದು ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟು ಪರಾರಿಯಾದ ಪತಿ?

By Girish Goudar  |  First Published Oct 27, 2022, 12:19 PM IST

ಬೆಂಗಳೂರಿನ ಹೆಬ್ಬಗೋಡಿಯ ವಿನಾಯಕನಗರದಲ್ಲಿ ನಡೆದ ಭೀಕರ ಕೊಲೆ 


ಬೆಂಗಳೂರು(ಅ.27): ಮಹಿಳೆಯನ್ನ ಬರ್ಬರವಾಗಿ ಕೊಲೆ ಮಾಡಿ ಬೆಡ್ ಶೀಟ್‌ನಲ್ಲಿ ಸುತ್ತಿಟ್ಟ ಘಟನೆ ಬೆಂಗಳೂರು ಹೊರವಲಯದ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ತಿರುಪಾಳ್ಯದ ವಿನಾಯಕ ನಗರದಲ್ಲಿ ನಡೆದಿದೆ. ಕೊಲೆಯಾದವಳನ್ನ ಪವಿತ್ರ ಉರುಫ್‌ ಶ್ರುತಿ(24) ಅಂತ ಗುರುತಿಸಲಾಗಿದೆ. ಬಿಲ್ಡಿಂಗ್ ಒಂದರ ಮೂರನೇ ಮಹಡಿಯಲ್ಲಿ ಪತಿ ಅರವಿಂದ್ ಹಾಗೂ ಪವಿತ್ರ ಇಬ್ಬರೂ ಕೂಡ ವಾಸವಾಗಿದ್ದರು ಅಂತ ಹೇಳಲಾಗುತ್ತಿದೆ. ಇಬ್ಬರೂ ಕೂಡ ಪ್ರೀತಿಸಿ ಮದುವೆಯಾಗಿದ್ದರು, ಮೂಲತಃ ವಿಜಯಪುರ ಜಿಲ್ಲೆಯ ಇವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಇವರ ಮನೆಯಯಿಂದ ದುರ್ವಾಸನೆ ಬರುತ್ತಿರುವುದನ್ನು ನೋಡಿದ ಅಕ್ಕ ಪಕ್ಕದವರು ಮನೆ ಮಾಲೀಕರಿಗೆ ತಿಳಿಸಿದ್ದು ಮನೆಯ ಬಳಿ ಬಂದು ಬಾಗಿಲು ತೆರೆದು ನೋಡಿದಾಗ ಯುವತಿ ಪವಿತ್ರಳನ್ನು ಕೊಲೆ ಮಾಡಿ ಬೆಡ್ ಶೀಟ್‌ನಲ್ಲಿ ಸುತ್ತಿಟ್ಟಿರುವುದು ಗೊತ್ತಾಗಿದೆ. ಕೂಡಲೇ ಹೆಬ್ಬಗೋಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಐದಾರು ದಿನಗಳ ಹಿಂದೆ ಕೊಲೆ ಮಾಡಿರುವುದು ಬೆಳಕಿಗೆ ಬಂದಿದ್ದು, ನಾಲ್ಕೈದು ದಿನಗಳ ಹಿಂದೆ ಕೊಲೆ ಮಾಡಿದ್ದರಿಂದ ದೇಹ ಗುರುತು ಸಿಗದಷ್ಟು ಕೊಳೆತು ಹೋಗಿತ್ತು.

Tap to resize

Latest Videos

ಜೊತೆಯಲ್ಲಿ ಕೆಲಸ ಮಾಡುತ್ತಿದ್ದವನನ್ನೇ ಕೊಂದ್ರು: ರೈಲ್ವೆ ಹಳಿ ಮೇಲೆ ಶವ ಎಸೆಯಲು ಬಂದು ತಗ್ಲಾಕೊಂಡ್ರು!

ಇನ್ನು ಪತಿ ಪತ್ನಿ ನಡುವೆ ಗಲಾಟೆ ನಡೆದು ಬಳಿಕ ಕೊಲೆ ಮಾಡಿ ಬೆಡ್ ಶೀಟ್‌ನಲ್ಲಿ ಸುತ್ತಿಟ್ಟು ಪವಿತ್ರ ಪತಿ ಅರವಿಂದ್ ಮನೆಯಿಂದ ಎಸ್ಕೇಪ್ ಆಗಿದ್ದು ಈತನೇ ಕೊಲೆ ಮಾಡಿ ಪರಾರಿಯಾಗಿರುವ ಸಾಧ್ಯತೆ ಹೆಚ್ಚಾಗಿದ್ದು, ಕೊಲೆ ನಡೆದು ಐದಾರು ದಿನ ಕಳೆದರೂ ಸಹ ಯಾರೊಬ್ಬರಿಗೂ ಗೊತ್ತಾಗಿರಲಿಲ್ಲ.

ಘಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಪರಿಶೀಲನೆ ನಡೆಸಿದ್ದು ಪತಿಯೇ ಕೊಲೆ ಮಾಡಿ ಮಾಡಿದ್ದಾನಾ ಅಥವಾ ಬೇರೆ ಏನಾದರೂ ಆಗಿರಬಹುದಾ ಎನ್ನುವ ಕುರಿತು ತನಿಖೆಗೆ ಮುಂದಾಗಿದ್ದು, ಹೆಬ್ಬಗೊಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಒಟ್ಟಿನಲ್ಲಿ ಪತಿ ಅರವಿಂದ್ ಪರಾರಿಯಾಗಿದ್ದು ಆತನ ಬಂಧನದ ಬಳಿಕ ಕೊಲೆಯ ಇನ್ನಷ್ಟು ರಹಸ್ಯ ಬಯಲಾಗಲಿದೆ. 
 

click me!