ಸ್ಫೂರ್ತಿಯಾಯ್ತಾ ಶ್ರದ್ಧಾ ಕೇಸ್? 8 ತಿಂಗಳ ಹಿಂದೆ ಪಾರ್ಟ್ನರ್ ಹತ್ಯೆಗೈದು ಫ್ರಿಡ್ಜ್‌ನಲ್ಲಿಟ್ಟ ಕಿರಾತಕ ಅರೆಸ್ಟ್

By Chethan Kumar  |  First Published Jan 11, 2025, 2:34 PM IST

ಶ್ರದ್ಧಾ ವಾಕರ್ ಕೇಸ್ ಪ್ರತಿಯೊಬ್ಬರಿಗೂ ಪಾಠವಾಗಬೇಕಿತ್ತು. ಆದರೆ ಈ ಪ್ರಕರಣದಿಂದ ಹಲವರು ಸ್ಪೂರ್ತಿ ಪಡೆದಿದ್ದಾರಾ ಅನ್ನೋ ಅನುಮಾನ ಹೆಚ್ಚಾಗ ತೊಡಗಿದೆ. ಕಾರಣ ಇದೀಗ 8 ತಿಂಗಳ ಹಿಂದೆ ಲೀವ್ ಇನ್ ಪಾರ್ಟ್ನರ್ ಕೊಂದು ಫ್ರಿಡ್ಜ್‌ನಲ್ಲಿಟ್ಟ ಪ್ರಕರಣ ಬೆಳಕಿಗೆ ಬಂದಿದೆ.
 


ಇಂದೋರ್(ಜ.11)  ಲೀವ್ ಇನ್ ಪಾರ್ಟ್ನರ್ ಹತ್ಯೆಗೈದು ಫ್ರಿಡ್ಜ್‌ನಲ್ಲಿಡುತ್ತಿರುವ ಪ್ರಕರಣ ಇತ್ತೀಚಗೆ ಹೆಚ್ಚಾಗುತ್ತಿದೆ. ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣ ಎಲ್ಲರಿಗೂ ಪಾಠ ವಾಗಬೇಕಿತ್ತು. ಆದರೆ ಆರೋಪಿಗಳು ಇದೀಗ ಇದೇ ಮಾದರಿ ಅನುಸರಿಸುತ್ತಿರುವುದು ದುರಂತ. ಇದೀಗ ಬರೋಬ್ಬರಿ 8 ತಿಂಗಳ ಹಿಂದೆ ಲೀವ್ ಇನ್ ಪಾರ್ಟ್ನರ್ ಮಹಿಳೆಯನ್ನು ಹತ್ಯೆಗೈದು ಫ್ರಿಡ್ಜ್‌ನಲ್ಲಿಟ್ಟ ಪ್ರಕರಣ ಒಂದು ಮಧ್ಯಪ್ರದೇಶದ ದೇವಾಸ್ ನಗರದಲ್ಲಿ ನಡೆದಿದೆ. ಮಹಿಳೆಯ ದೇಹದ ಬಹುತೇಕ ಭಾಗಗಳು ಫ್ರಿಡ್ಜ್‌ನಲ್ಲಿ ಪತ್ತೆಯಾಗಿದೆ. 

ಆರೋಪಿ ಹೆಸರು ಸಂಜಯ್ ಪಾಟೀದಾರ್. ಈತನಿಗೆ ಈಗಾಗಲೇ ಮದುವೆಯಾಗಿದೆ. ಪತ್ನಿ ಮನೆಯಲ್ಲಿ, ಆದರೆ ಹೊರಗಡೆ ಈತನ ಬ್ಯಾಚ್ಯುಲರ್ ಅಂತಾ ಹೇಳಿಕೊಂಡು ತಿರುಗಾಡುತ್ತಿದ್ದ. ಮದುವೆಯಾಗಿರುವ ವಿಚಾರ ಮುಚ್ಚಿಟ್ಟು 30 ವರ್ಷದ ಪಿಂಕಿ ಪ್ರಜಾಪತಿ ಅನ್ನೋ ಯುವತಿಯನ್ನು ಪ್ರೀತಿಸಿದ್ದ. ಒಂದಷ್ಟು ಕಿಮಿಟ್‌ಮೆಂಟ್ ಇದೆ. ಮುಗಿಸಿ ಮದುವೆಯಾಗುತ್ತೇನೆ ಎಂದು ಮಾತು ಕೊಟ್ಟಿದ್ದು. ಹೀಗಾಗಿ ಪಿಂಕಿ ತನ್ನ ಪ್ರಿಯಕರ ಸಂಜಯ್ ಪಾಟೀದಾರ್‌ಗೆ ತನು ಮನ ಧನ ಅರ್ಪಿಸಿದ್ದಳು. 

Tap to resize

Latest Videos

ಶೂಟಿಂಗ್ ಮುಗಿಸಿ ತಡವಾಗಿ ಮನೆಗೆ ಮರಳಿದ ಜೋಡಿ, 7ನೇ ಮಹಡಿಯಿಂದ ಜಿಗಿದು ದುರಂತ ಅಂತ್ಯ!

ಮನೆಯಲ್ಲಿ ಒಂದು ಸಂಸಾರ. ಹೊರಗಡೆ ಇನ್ನೊಂದು ಸಂಸಾರ. ಇದು ಸಂಜಯ್ ಪಾಟೀದಾರ್ ಪ್ಲಾನ್ ಆಗಿತ್ತು. ಹೊರಗಿನ ಸಂಸಾರ ಒಂದಷ್ಟ ದಿನಕ್ಕೆ ಇರಲಿ, ಬೋರ್ ಆದರೆ ಬದಲಾಯಿಸುವ ಆಲೋಚನೆ ಮಾಡಿದ್ದ. ಕಳೆದ 5 ವರ್ಷದಿಂದ ಪಿಂಕಿ ಜೊತೆ ಪ್ರೀತಿ ಮುಂದುವರಿದಿತ್ತು. ಆದರೆ ಮದುವೆ ದಿನಾಂಕ ಮುಂದೂಡುತ್ತಲೇ ಇದ್ದ ಕಾರಣ ಪಿಂಕಿ ಆತಂಕಗೊಂಡಿದ್ದಳು. ಮದುವಗೆ ಒತ್ತಾಯಿಸಲು ಆರಂಭಸಿದ್ದಳು. ಹೀಗಾಗಿ ಸಂಜಯ್ ಇಕ್ಕಟ್ಟಿಗೆ ಸಿಲುಕಿದ್ದ. ಮದುವೆಯಾದರೆ ಸಮಸ್ಯೆ. ಆದರೆ ಮತ್ತೆ ದಿನಾಂಕ ಮುಂದೂಡಲು ಸಾಧ್ಯವಿಲ್ಲ. ಸತ್ಯ ಹೇಳಿದರೇ ಪ್ರಕರಣ ದಾಖಲಾಗುವ ಭಯ. 

ಇತ್ತ ಯುವತಿ ತನ್ನ ಮನೆಯಲ್ಲಿ ಹೇಳಲು ಆಗದೇ ಸಂಕಷ್ಟ ಅನುಭವಿಸಿದ್ದಾಳೆ. ಇತ್ತ ಸಂಜಯ್ ಮದುವೆಯಾಗುತ್ತಿಲ್ಲ. ಎಲ್ಲವನ್ನೂ ಕಳೆದುಕೊಂಡಾಗಿದೆ. ಮುಂದೇನು ಅನ್ನೋ ಯೋಚನೆ ಕಾಡುತ್ತಲೇ ಇತ್ತು. ಆದರೂ ಸಂಜಯ್‌ನ ಒತ್ತಾಯಿಸುವುದು ನಿಲ್ಲಿಸಲಿಲ್ಲ. ಹೀಗಾಗಿ ಮದುವೆಯಾಗುವುದಾಗಿ ಹೇಳಿ ದೇವಾಸ್ ನಗರದಲ್ಲಿ ಬಾಡಿಗೆ ಮನೆ ಪಡೆದಿದ್ದ. ಜೂನ್ 2023ರಲ್ಲಿ ಈ ಮನೆ ಬಾಡಿಗೆ ಪಡೆದು ಯುವತಿಯನ್ನು ಕರೆದೆಕೊಂಡು ಈ ಮನೆಗೆ ಬಂದಿದ್ದ. ಶೀಘ್ರದಲ್ಲೇ ಮದುವೆಯಾಗೋಣ ಎಂದಿದ್ದ.

ಸಂಜಯ್ ಪಾಟೀದಾರ್ ಮಾತು ನಂಬಿ ಬಾಡಿಗೆ ಮನೆಗೆ ಬಂದ ಪಿಂಕಿಗೆ ಮತ್ತ ನಿರಾಸೆ. ಇದೇ ವಿಚಾರಕ್ಕೆ ಜಗಳ ಶುರುವಾಗಿದೆ. ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದ್ದಾಳೆ. ಕುಟುಂಬಸ್ಥರು, ಪೋಷಕರಿಗೆ ಹೇಳುವುದಾಗಿ ಬೆದರಿಸಿದ್ದಾಳೆ. ಅಷ್ಟೊತ್ತಿಗೆ ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದು ಅರಿತ ಸಂಜಯ್ ಪಾಟೀದಾರ್. ಪ್ಲಾನ್ ಮಾಡಿದ್ದಾನೆ. ಪಿಂಕಿ ಕಾಟ ಮುಂದೆ ಇರಬಾರದು. ಹೀಗಾಗಬೇಕಾದರೆ ಹತ್ಯೆಯೊಂದೇ ಮಾರ್ಗ. ಸುಮ್ಮನಿದ್ದರೂ ಸಿಕ್ಕಿ ಬೀಳುತ್ತೇನೆ. ಹೀಗಾಗಿ ತನ್ನ ಕ್ಲೀನ್ ಇಮೇಜ್ ಹಾಗೇ ಇರಲಿ ಎಂದು ಲೀವ್ ಇನ್ ಪಾರ್ಟ್ನರ್ ಪಿಂಕಿಯನ್ನು ಹತ್ಯೆ ಮಾಡಿದ್ದ. 

ಹತ್ಯೆ ಬಳಿಕ ಶ್ರದ್ಧವಾಕಾರ್ ಪ್ರಕರಣದ ರೀತಿಯಲ್ಲೇ ಮೃತದೇಹವನ್ನು ಫ್ರಿಡ್ಜ್‌ಗೆ ತುರುಕಿದ್ದ. ಇದಕ್ಕಾಗಿ ಫ್ರಿಡ್ಜ್ ಒಳಗಿನ ಎಲ್ಲಾ ಕಂಪಾರ್ಟ್‌ಮೆಂಟ್ ತೆಗೆದಿದ್ದ. ಫ್ರೀಜರ್‌ನಿಂದ ಹಿಡಿದು ಕೊನೆಯ ತರಕಾರಿ ಇಡುವ ಜಾಗದ ವರೆಗೆ ಒಂದೇ ಕಂಪಾರ್ಟ್‌ಮೆಂಂಟ್ ರೀತಿ ಮಾಡಿ ಮೃತದೇಹವನ್ನು ಫ್ರಿಡ್ಜ್‌ನಲ್ಲಿ ತುರುಕಿದ್ದ. ಫ್ರಿಡ್ಜ್ ಸೇರಿದಂತೆ ಬಳಿಕ ತನ್ನ ಎಲ್ಲಾ ವಸ್ತುಗಳನ್ನು ಒಂದು ಕೊಠಡಿಯಲ್ಲಿಟ್ಟು ಬೀಗ ಹಾಕಿದ್ದ. ಇತ್ತ ಮನೆ ಮಾಲೀಕರಿಗೆ ತಾನು ಕೆಲಸದ ನಿಮಿಮತ್ತ ಬೇರೆ ರಾಜ್ಯಕ್ಕೆ ಹೋಗುತ್ತಿದ್ದೇನೆ. ಆದಷ್ಟು ಬೇಗ ಬಂದು ವಸ್ತುಗಳನ್ನು ಖಾಲಿ ಮಾಡುತ್ತೇನೆ ಎಂದಿದ್ದ. ಇತ್ತ ಎರಡು ಬೆಡ್ ರೂಂ ಮನೆಯ ಒಂದು ಬೆಡ್ ರೂಂನಲ್ಲಿ ಸಂಜಯ್ ವಸ್ತುಗಳಿತ್ತು. ಹೀಗಾಗಿ ಮಾಲೀಕರು 1 ಬೆಡ್ ರೂಂ ಹೊರತುಪಡಿಸಿ ಇತರ ಭಾಗವನ್ನು ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ.

ಇತ್ತ ಒಂದು ದಿನ ಕರೆಂಟ್ ಹೋಗಿದೆ. ಬಳಿಕ ಕರೆಂಟ್ ಬಂದರೂ ಫ್ರಿಡ್ಜ್ ಕೆಟ್ಟು ಹೋಗಿದೆ. ಇದರ ಪರಿಣಾಮ ಕಳೆದ ಕೆಲ ತಿಂಗಳಿಂದ ಗಾಳಿ ಬೀಸುವಾಗ ಕೆಟ್ಟ ವಾಸನೆ ಬರುತ್ತಿರುವುದನ್ನು ಮನೆಯವರು ಗಮನಿಸಿದ್ದಾರೆ. ಹೀಗಾಗಿ ಮಾಲೀಕರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮನೆ ಮಾಲೀಕ ಬಾಗಿಲು     ಒಡೆದಿದ್ದಾರೆ. ಪರಿಶೀಲನೆ ವೇಳೆ ಫ್ರಿಡ್ಜ್‌ನಲ್ಲಿ ಮೃತದೇಹ ಪತ್ತೆಯಾಗಿದೆ. ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಸಂಜಯ್ ಪಾಟೀದಾರ್‌ನನ್ನು ಅರೆಸ್ಟ್ ಮಾಡಿದ್ದಾರೆ.

ಭಾರತದಂಥ ಸುಸಂಸ್ಕೃತ ದೇಶದಲ್ಲೂ Live In Relationships ಶುರುವಾಗಿದ್ದು ಹೇಗೆ?
 

click me!