ತುಮಕೂರು: ಬಿಜೆಪಿ ಕಾರ್ಯಕರ್ತೆ ಶಕುಂತಲಾರ 7ನೇ ತರಗತಿಯ ಮಗ ಆತ್ಮಹತ್ಯೆ

By Kannadaprabha News  |  First Published Jan 11, 2025, 9:50 AM IST

ಪಾರಿವಾಳ ರೇಸ್ ಬೆಟ್ಟಿಂಗ್ ವಿಚಾರವಾಗಿ ಸ್ನೇಹಿತರ ಜೊತೆ ಗಲಾಟೆ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರು(ಜ.11):  ಪಾರಿವಾಳ ರೇಸ್ ಬೆಟ್ಟಿಂಗ್ ವಿಚಾರವಾಗಿ ಬೇಸತ್ತು ತುಮಕೂರಿನ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅವರ ಪುತ್ರ ಡೆತ್ ನೋಟ್ ಬರೆದಿಟ್ಟು ಶಾಲಾ ಸಮವಸ್ತ್ರದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಶುಕ್ರವಾರ ತುಮಕೂರಿನಲ್ಲಿ ನಡೆದಿದೆ. ತ್ರಿಶಾಲ್ (13) ನೇಣಿಗೆ ಶರಣಾದ ವಿದ್ಯಾರ್ಥಿ. 

ತ್ರಿಶಾಲ್ ತುಮಕೂರಿನ ಸರ್ವೋದಯ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ಶಾಲಾ ಸಮವಸ್ತ್ರದಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Tap to resize

Latest Videos

ಬಳ್ಳಾರಿ: ಪ್ರೇಯಸಿ ಸೇರಿ ಕುಟುಂಬದವರ ಮೇಲೆ ಹಲ್ಲೆ ಬಳಿಕ ಭಗ್ನ ಪ್ರೇಮಿ ಅತ್ಮಹತ್ಯೆ

ಪಾರಿವಾಳ ರೇಸ್ ಬೆಟ್ಟಿಂಗ್ ವಿಚಾರವಾಗಿ ಸ್ನೇಹಿತರ ಜೊತೆ ಗಲಾಟೆ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!