ಬೆಂಗಳೂರು: ತಾಯಿಗೆ ನಿತ್ಯ ಹಿಂಸೆ ನೀಡುತ್ತಿದ್ದ ತಮ್ಮನ ಕೊಂದ ಅಣ್ಣ!

By Kannadaprabha News  |  First Published Jan 11, 2025, 6:30 AM IST

ಕುಡಿತದ ಚಟಕ್ಕೆ ಬಿದ್ದಿದ್ದ ಅಕ್ರಂ ಬೇಗ್ ನಿತ್ಯ ಮದ್ಯ ಸೇವಿಸಿ ಮನೆಗೆ ಬರುತ್ತಿದ್ದ. ಇತ್ತೀಚೆಗೆ ಅತಿಯಾಗಿ ಮದ್ಯ ಸೇವಿಸಿ ಮನೆಗೆ ಬಂದು ತಾಯಿ ಅಮೀನ್ ಬೇಗಂ ಜತೆಗೆ ಜಗಳ ತೆಗೆದು ಹಲ್ಲೆ ಮಾಡುತ್ತಿದ್ದ.


ಬೆಂಗಳೂರು(ಜ.11):  ನಿತ್ಯ ಮದ್ಯ ಸೇವಿಸಿ ಮನೆಗೆ ಬಂದು ತಾಯಿ ಜತೆಗೆ ಜಗಳವಾಡುತ್ತಿದ್ದ ತಮ್ಮನನ್ನು ಅಣ್ಣನೇ ಚಾಕುವಿನಿಂದ ಮನಬಂದಂತೆ ಇರಿದು ಹತ್ಯೆ ಮಾಡಿರುವ ಘಟನೆ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆ.ಜಿ.ಹಳ್ಳಿ ಅನ್ವರ್ ಲೇಔಟ್ ನಿವಾಸಿ ಅಕ್ರಂ ಬೇಗ್ (28) ಕೊಲೆಯಾದ ದುರ್ದೈವಿ. ಜ.8ರ ಮಧ್ಯರಾತ್ರಿ ಈ ಘಟನೆ ನಡೆದಿದೆ.  ಮೃತನ ತಾಯಿ ಅಮೀನ್ ಬೇಗಂ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿ, ಆರೋಪಿ ಅಕ್ಟ‌ರ್ ಬೇಗ್‌ನನ್ನು (30) ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ರಾತ್ರಿ ಜಗಳದ ವೇಳೆ ಹಲ್ಲೆ: 

Tap to resize

Latest Videos

ಜ.8ರಂದು ರಾತ್ರಿ ಸುಮಾರು 9.30ಕ್ಕೆ ಅಕ್ರಂ ಬೇಗ್ ಕಂಠಪೂರ್ತಿ ಮದ್ಯ ಸೇವಿಸಿ ಮನೆಗೆ ಬಂದು ತಾಯಿ ಅಮೀನ್ ಬೇಗಂ ಜತೆಗೆ ಜಗಳ ಮಾಡುತ್ತಿದ್ದ. ರಾತ್ರಿ ಸುಮಾರು 10.30ಕ್ಕೆ ಸಹೋದರ ಆಕ್ಟರ್ ಬೇಗ್ ಮನೆಗೆ ಬಂದಿದ್ದು, ಸುಮ್ಮನಿರುವಂತೆ ಅಕ್ರಂ ಬೇಗ್‌ಗೆ ಹೇಳಿದ್ದಾನೆ. ಆದರೂ ಆಕ್ರಂ ಬೇಗ್ ತಾಯಿ ಜತೆಗೆ ಜಗಳ ಮುಂದುವರೆಸಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ರೊಚ್ಚಿಗೆದ್ದ ಆಕ್ಟರ್ ಬೇಗ್ ಅಡುಗೆ ಮನೆಯಲ್ಲಿದ್ದ ಚಾಕು ತೆಗೆದು ಅಕ್ರಂ ಬೇಗ್ ಮೇಲೆ ಮನಬಂದಂತೆ ಇರಿದಿದ್ದಾನೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಅಕ್ರಂ ಬೇಗ್ ಕುಸಿದು ಬಿದ್ದಿದ್ದಾನೆ. 

Kolar: ಚೀಲದಲ್ಲಿ ಪತ್ತೆಯಾಯ್ತು ಅಪರಿಚಿತ ಮಹಿಳೆ ಶವ, ಮೃತದೇಹದ ಮುಖ ಕಚ್ಚಿ ತಿಂದ ನಾಯಿಗಳು!

ತಡರಾತ್ರಿ ಆಸ್ಪತ್ರೆಯಲ್ಲಿ ಸಾವು: 

ಈ ವೇಳೆ ತಾಯಿ ಅಮ್ಮಿನ್ ಬೇಗಂ ಆಸ್ಪತ್ರೆಗೆ ದಾಖಲಿಸುವಂತೆ ಕೇಳಿಕೊಂಡರೂ ಆಕ್ಟರ್ ಬೇಗ್ ಸುಮ್ಮನಾಗಿದ್ದಾನೆ. ಬಳಿಕ ಅಮೀನ್ ಬೇಗಂ ತನ್ನ ಪುತ್ರಿ ಹಾಗೂ ಸಂಬಂಧಿಕರಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡು ತಡರಾತ್ರಿ 1.30ಕ್ಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಕಿರಿಯ ಪುತ್ರ ಅಕ್ರಂ ಬೇಗ್‌ನನ್ನು ಅಂಬೇಡ್ಕರ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಅಕ್ರಂ ಬೇಗ್ ಮೃತಪಟ್ಟಿದ್ದಾನೆ. ಈ ಸಂಬಂಧ ಅಮ್ಮಿನ್ ಬೇಗಂ ನೀಡಿದ ದೂರಿನ ಮೇರೆಗೆ ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಅಕ್ಟ‌ರ್ ಬೇಗ್‌ನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ? 

ಅನ್ವರ್ ಲೇಔಟ್ ನಿವಾಸಿ ಅಮೀನ್ ಬೇಗಂ ಮತ್ತು ಆಮಾನುಲ್ಲಾ ಬೇಗ್ ದಂಪತಿಗೆ ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಕಳೆದ ನಾಲ್ಕ ವರ್ಷಗಳ ಹಿಂದೆ ಅಮಾನುಲ್ಲಾ ಬೇಗ್ ಮೃತಪಟ್ಟಿದ್ದಾರೆ. 
ಪುತ್ರಿ ಮತ್ತು ಮೊದಲ ಮಗ ಆಕ್ಟರ್ ಬೇಗ್ ಮದುವೆಯಾಗಿದ್ದು, ಪ್ರತ್ಯೇಕವಾಗಿ ನೆಲೆಸಿದ್ದಾರೆ. ಕಿರಿಯ ಪುತ್ರ ಅಕ್ರಂ ಬೇಗ್ ಜತೆಗೆ ಅಮೀನ್ ಬೇಗಂ ನೆಲೆಸಿದರು. ಕುಡಿತದ ಚಟಕ್ಕೆ ಬಿದ್ದಿದ್ದ ಅಕ್ರಂ ಬೇಗ್ ನಿತ್ಯ ಮದ್ಯ ಸೇವಿಸಿ ಮನೆಗೆ ಬರುತ್ತಿದ್ದ. ಇತ್ತೀಚೆಗೆ ಅತಿಯಾಗಿ ಮದ್ಯ ಸೇವಿಸಿ ಮನೆಗೆ ಬಂದು ತಾಯಿ ಅಮೀನ್ ಬೇಗಂ ಜತೆಗೆ ಜಗಳ ತೆಗೆದು ಹಲ್ಲೆ ಮಾಡುತ್ತಿದ್ದ.

click me!