ಫ್ರೆಂಡ್‌ ಹೆಂಡ್ತಿ ಜತೆ ಅನೈತಿಕ ಸಂಬಂಧ: ಮಾರಕಾಸ್ತ್ರಗಳಿಂದ ಕೊಚ್ಚಿ ಸ್ನೇಹಿತನನ್ನೇ ಕೊಂದರು..!

Kannadaprabha News   | Asianet News
Published : Oct 24, 2021, 07:47 AM ISTUpdated : Oct 24, 2021, 08:00 AM IST
ಫ್ರೆಂಡ್‌ ಹೆಂಡ್ತಿ ಜತೆ ಅನೈತಿಕ ಸಂಬಂಧ:  ಮಾರಕಾಸ್ತ್ರಗಳಿಂದ ಕೊಚ್ಚಿ ಸ್ನೇಹಿತನನ್ನೇ ಕೊಂದರು..!

ಸಾರಾಂಶ

*   ಮಾತುಕತೆ ನೆಪದಲ್ಲಿ ಕರೆಸಿ ಸ್ನೇಹಿತನ ಕೊಚ್ಚಿ ಕೊಲೆ *   ಹತ್ಯೆಗೆ ಅನೈತಿಕ ಸಂಬಂಧದ ಶಂಕೆ ಹಣಕಾಸಿನ ವ್ಯವಹಾರದ ಮನಸ್ತಾಪ ಕಾರಣ? *   ಚಂದ್ರಶೇಖರ್‌ ಅಲಿಯಾಸ್‌ ಶೇಖರ್‌ ಕೊಲೆಯಾದ ದುರ್ದೈವಿ  

ಬೆಂಗಳೂರು(ಅ.24):  ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ವಾಹನ ಚಾಲಕನೊಬ್ಬನನ್ನು ಆತನ ಪರಿಚಯದವರೇ ಮಾರಕಾಸ್ತ್ರಗಳಿಂದ ಹಲ್ಲೆ(Assault) ನಡೆಸಿ ಭೀಕರವಾಗಿ ಕೊಂದಿರುವ ಘಟನೆ ಹೊಸಕೆರೆ ಹಳ್ಳಿ ಮುಖ್ಯರಸ್ತೆ ಸಮೀಪ ನಡೆದಿದೆ.

ರಾಜರಾಜೇಶ್ವರಿ ನಗರದ ನಿವಾಸಿ ಚಂದ್ರಶೇಖರ್‌ ಅಲಿಯಾಸ್‌ ಶೇಖರ್‌(43) ಕೊಲೆಯಾದ(Murder) ದುರ್ದೈವಿ. ಈ ಕೃತ್ಯ ಎಸಗಿದ ಆರೋಪಿಗಳು(Accused) ತಮಿಳುನಾಡಿಗೆ(Tami Nadu) ಪರಾರಿಯಾಗಿದ್ದು, ಅವರ ಪತ್ತೆಗೆ ತನಿಖೆ(Investigation) ಮುಂದುವರೆದಿದೆ. ಹೊಸಕೆರೆಹಳ್ಳಿಗೆ ಶೇಖರ್‌ ಶುಕ್ರವಾರ ರಾತ್ರಿ 9 ಗಂಟೆಗೆ ಸುಮಾರಿಗೆ ಬಂದಿದ್ದಾಗ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

3 ತಿಂಗಳ ವಯಸ್ಸಿನ ತನ್ನ ಮೊಮ್ಮಗನ್ನೇ ಕೊಂದು ಪರಾರಿಯಾದ ಅಜ್ಜಿ!

ಹತ್ಯೆಗೆ ಅನೈತಿಕ ಸಂಬಂಧ ಶಂಕೆ?

ಹತ್ತು ವರ್ಷಗಳ ಹಿಂದೆ ಮಂಡ್ಯ ಜಿಲ್ಲೆ ಚಂದ್ರಶೇಖರ್‌ ಹಾಗೂ ಶೈಲಜಾ ವಿವಾಹವಾಗಿದ್ದರು. ಮೊದಲು ಶ್ರೀನಗರದ ಕಾಳಿದಾಸ ಲೇಔಟ್‌ನಲ್ಲಿ ನೆಲೆಸಿದ್ದ ದಂಪತಿ, ಕೊರೋನಾ ಸೋಂಕು ಬಳಿಕ ಆರ್‌.ಆರ್‌.ನಗರಕ್ಕೆ ತಮ್ಮ ವಾಸ್ತವ್ಯ ಬದಲಾಯಿಸಿದ್ದರು. ಕೊರೋನಾ(Coronavirus) ಸೋಂಕಿನ ಹಾವಳಿ ಆರಂಭಕ್ಕೂ ಮುನ್ನ ಹೂ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಶೇಖರ್‌, ಇತ್ತೀಚಿಗೆ ಹೂ ಮಾರಾಟದಲ್ಲಿ ನಷ್ಟ ಉಂಟಾದ ಕಾರಣಕ್ಕೆ ತನ್ನ ಸೋದರನ ಟೆಂಪೋ ಟ್ರಾವೆಲರ್‌ ಓಡಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕೆಲ ದಿನಗಳಿಂದ ಶೇಖರ್‌ ಹಾಗೂ ಆತನ ಸ್ನೇಹಿತನ ಮಧ್ಯೆ ಹಣಕಾಸು ವಿಚಾರವಾಗಿ ಮನಸ್ತಾಪ ಮೂಡಿತ್ತು. ಅಲ್ಲದೆ ಆ ಸ್ನೇಹಿತನ ಪತ್ನಿ ಜತೆ ಶೇಖರ್‌ ಅನೈತಿಕ ಸಂಬಂಧ(Immoral Relationship) ಹೊಂದಿದ್ದ ಎಂಬ ಅನುಮಾನ ಸಹ ವ್ಯಕ್ತವಾಗಿತ್ತು. ಹೀಗಾಗಿ ಈ ಗೆಳೆಯರ ಮಧ್ಯೆ ವಿವಾದ ತಾರಕ್ಕೇರಿ ಐದು ದಿನಗಳ ಹಿಂದೆ ಹನುಮಂತನಗರ ಪೊಲೀಸ್‌(Police) ಠಾಣೆಗೂ ಮೆಟ್ಟಿಲೇರಿತ್ತು. ಈ ಜಿದ್ದಿನಲ್ಲೇ ಶೇಖರ್‌ನನ್ನು ಆತನ ಸ್ನೇಹಿತರು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಹೊಸಕೆರೆಹಳ್ಳಿ ಮುಖ್ಯರಸ್ತೆಗೆ ಮಾತುಕತೆ ನೆಪದಲ್ಲಿ ರಾತ್ರಿ 9 ಗಂಟೆಗೆ ಕರೆಸಿಕೊಂಡು ಶೇಖರ್‌ನನ್ನು ಆರೋಪಿಗಳು ಹತ್ಯೆ ಮಾಡಿರುವ ಸಾಧ್ಯತೆಗಳು ಕಂಡು ಬಂದಿದೆ. ಅಲ್ಲದೆ ಸಂಜೆ 4.45ರ ನಂತರ ಶೇಖರ್‌ ಮೊಬೈಲ್‌(Mobile) ಸಹ ಸ್ವಿಚ್ಡ್‌ಆಫ್‌ ಆಗಿತ್ತು. ಹೀಗಾಗಿ ಕೊಲೆ ಪೂರ್ವನಿಯೋಜಿತವಾಗಿದೆ ಎಂದು ಪೊಲೀಸರು ಗುಮಾನಿಪಟ್ಟಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ