
ಶಿವಮೊಗ್ಗ, (ಸೆ.12): ಜಿಲ್ಲೆಯ ಹುಣಸೋಡು ಗಣಿ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟ 6ನೇ ವ್ಯಕ್ತಿಯ ಗುರುತನ್ನು ಇದೀಗ ಪತ್ತೆ ಹಚ್ಚಲಾಗಿದ್ದು, ಈ ವ್ಯಕ್ತಿ ಭದ್ರಾವತಿಯ ಕೆ. ಹೆಚ್. ನಗರದ ಶಶಿ ಎಂದು ಗುರುತಿಸಲಾಗಿದೆ.
ಮೃತ ಶಶಿ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಎಂದು ತಿಳಿದು ಬಂದಿದೆ. ಜ. 21 ರಂದು ರಾತ್ರಿ 10.30 ರ ಸುಮಾರಿಗೆ ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದಲ್ಲಿ ಭಾರೀ ಸ್ಫೋಟ ಸಂಭವಿಸಿತ್ತು. ಎಸ್. ಎಸ್. ಕ್ರಷರ್ ಆವರಣದಲ್ಲಿ ನಡೆದ ಈ ಸ್ಫೋಟದಲ್ಲಿ ಹಲವರು ಸಾವಿಗೀಡಾಗಿದ್ದು, ಮೃತ ದೇಹಗಳು ಛಿದ್ರ ಛಿದ್ರಗೊಂಡಿದ್ದವು. ತನಿಖೆಯಲ್ಲಿ ಐದು ಜನರ ಮೃತ ದೇಹವನ್ನು ಪತ್ತೆ ಮಾಡಿ ವಾರಸುದಾರರಿಗೆ ಒಪ್ಪಿಸಲಾಗಿತ್ತು.
ಶಿವಮೊಗ್ಗ ಸ್ಫೋಟ: ಪೊಲೀಸರ ಮೇಲೆ ಒತ್ತಡ ಹಾಕಿ ಆರೋಪಿಯನ್ನು ಬಿಡಿಸಲಾಯ್ತಾ.?
ಇತರೆ ಮೃತದೇಹಗಳ ಪತ್ತೆಗಾಗಿ ಅಲ್ಲಿ ಬಿದ್ದಿದ್ದ ಮೃತ ದೇಹಗಳ ತುಣುಕನ್ನು ಸಂಗ್ರಹಿಸಿ ಬೆಂಗಳೂರು ಮಡಿವಾಳದ ಎಫ್. ಎಸ್. ಎಲ್. ಗೆ ಡಿಎನ್‌ಎ ಪರೀಕ್ಷೆ ಕಳುಹಿಸಲಾಗಿತ್ತು.
ಈ ವರದಿ ಸೆ. 10 ರಂದು ಬಂದಿದ್ದು, ಈ ವರದಿಯನ್ನು ಪರಿಶೀಲಿಸಿದಾಗ ಈ ಮೃತದೇಹದ ತುಂಡು ಭದ್ರಾವತಿಯ ಕೆ. ಎಚ್. ನಗರ ವಾಸಿಯಾಗಿರುವ ಬೋರೇಗೌಡರ ಪುತ್ರ 32 ವರ್ಷದ ಆಟೋ ಚಾಲಕ ವೃತ್ತಿಯ ಶಶಿ ಯಾನೆ ದೇವೇಂದ್ರ ಎಂದು ಗುರುತಿಸಲಾಗಿದೆ. ಇದರೊಂದಿಗೆ ಘಟನೆಯಲ್ಲಿ ಆರು ಜನ ಮೃತಪಟ್ಟಿರುವುದು ದೃಢಪಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ