ಚಿಂತಾಮಣಿ; ಲಾರಿ-ಜೀಪು ಮುಖಾಮುಖಿ ಡಿಕ್ಕಿ.. 7 ಮಂದಿ ದುರ್ಮರಣ

Published : Sep 12, 2021, 06:19 PM ISTUpdated : Sep 12, 2021, 06:21 PM IST
ಚಿಂತಾಮಣಿ; ಲಾರಿ-ಜೀಪು ಮುಖಾಮುಖಿ ಡಿಕ್ಕಿ.. 7 ಮಂದಿ ದುರ್ಮರಣ

ಸಾರಾಂಶ

* ಲಾರಿ- ಜೀಪು‌ ನಡುವೆ ಮುಖಾ ಮುಖಿ ಡಿಕ್ಕಿ * ಸ್ಥಳದಲ್ಲೆ 6 ಮಂದಿ‌ ಸಾವು ಹಲವರ ಸ್ಥಿತಿ ಗಂಭೀರ * ಚಿಂತಾಮಣಿ ತಾಲೂಕು ಮರಿನಾಯಕನಹಳ್ಳಿ ಗ್ರಾಮದ ಬಳಿ ಅಪಘಾತ * ಜೀಪಿನಲ್ಲಿದ್ದ 7 ಮಂದಿ‌ ಸಾವು, 7 ಜನರ ಸ್ಥಿತಿ ಗಂಭೀರ * ಗಾಯಾಳುಗಳು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆ ಗೆ ದಾಖಲು 

ಕೋಲಾರ/ ಚಿಕ್ಕಬಳ್ಳಾಪುರ(ಸೆ. 12) ಲಾರಿ- ಜೀಪು‌ ನಡುವೆ ಮುಖಾ ಮುಖಿ ಡಿಕ್ಕಿಯಾಗಿದ್ದು  ಸ್ಥಳದಲ್ಲೆ 7 ಮಂದಿ‌ ಸಾವನ್ನಪ್ಪಿದ್ದಾರೆ.  ಹಲವರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.  ಚಿಂತಾಮಣಿ ತಾಲೂಕು ಮರಿನಾಯಕನಹಳ್ಳಿ ಗ್ರಾಮದ ಬಳಿ ಭೀಕರ ಅಪಘಾತವಾಗಿದೆ. 7 ಜನರ ಸ್ಥಿತಿ ಗಂಭೀರವಾಗಿದೆ.

ಗಾಯಾಳುಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆ ಗೆ ದಾಖಲಿಸಲಾಗಿದೆ. ಚಿಂತಾಮಣಿ- ಮದನಪಲ್ಲಿ ರಸ್ತೆಯಲ್ಲಿ  ಭೀಕರ ಅಪಘಾತವಾಗಿದೆ. ಸ್ಥಳಕ್ಕೆ ಚಿಂತಾಮಣಿ ಪೊಲೀಸರು ‌ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. 

ಕೋರಮಂಗಲ ಆಡಿ ಭೀಕರ ಅಪಘಾಥಕ್ಕೆ ಏನು ಕಾರಣ?

ಅಪಘಾತ ಸ್ಥಳದಲ್ಲಿಯೇ ಇದ್ದ ಮಾಲೂರು ಶಾಸಕ ‌ನಂಜೇಗೌಡ ಗಾಯಾಳುಗಳ ನೆರವಿಗೆ ಬಂದಿದ್ದಾರೆ ಎಲ್ಲರನ್ನೂ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ.  ಆಂಬ್ಯುಲನ್ಸ್, ಪೊಲೀಸರಿಗೆ ಕರೆ ಮಾಡಿದ ಶಾಸಕರು ತಕ್ಷಣದ ಪರಿಹಾರ ಕ್ರಮ ತೆಗೆದುಕೊಂಡಿದ್ದಾರೆ. 

ಮೃತರೆಲ್ಲರೂ ಕೋಲಾರ ಜಿಲ್ಲೆ ‌ಶ್ರೀನಿವಾಸಪುರ ತಾಲೂಕಿಗೆ ಸೇರಿದವರು. ಘಟನಾ ಸ್ಥಳಕ್ಕೆ ಶಾಸಕ ಜೆ. ಕೆ. ಕೃಷ್ಣಾ ರೆಡ್ಡಿ ಭೇಟಿ‌ ನೀಡಿದ್ದಾರೆ. ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ಸಹ ಭೇಟಿ ನೀಡಿದ್ದು ತಕ್ಷಣದ ಪರಿಹಾರ ಕ್ರಮ ತಿಳಿಸಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?