ಉಪನಗರ ಠಾಣೆಯ ಪೊಲೀಸರು ಆರೋಪಿ ಮೊಹ್ಮದ್‌ನನ್ನು ಠಾಣೆಗೆ ಕರೆದುಕೊಂಡು ಹೋಗಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿ (ಮೇ 26): ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (Hubli- Dharwad) ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿದ ಪರಿಣಾಮ ಕಚೇರಿ ಕಿಡಕಿಯ ಗಾಜು ಹಾಗೂ ವಾಹನಗಳು ಜಖಂಗೊಂಡ ಘಟನೆ ಬೆಳ್ಳಂಬೆಳಿಗ್ಗೆ ಹುಬ್ಬಳ್ಳಿಯ ಮಹಾನಗರ ಪಾಲಿಕೆ ಆವರಣದಲ್ಲಿ ನಡೆದಿದ್ದು, ಈತನ ಹುಚ್ಚಾಟಕ್ಕೆ ಹಳೇ ಹುಬ್ಬಳ್ಳಿ ಗಲಭೆಯೇ ಪ್ರಚೋದನೆಯಂತೆ. ಹುಬ್ಬಳ್ಳಿಯ ಗಣೇಶ ಪೇಟ್ ನಿವಾಸಿ ಮೊಹ್ಮದ್ ಎಂಬಾತ ಇಂದು ಬೆಳಿಗ್ಗೆ ಮಹಾನಗರ ಪಾಲಿಕೆ ಕಚೇರಿಗೆ ಬಂದವನೇ, ಕಲ್ಲುಗಳಿಂದ ಕಚೇರಿ ಕಿಡಕಿ ಹಾಗೂ ಎರಡು ಕಾರು, ಒಂದು ಕಸ ಸಾಗಿಸುವ ಟಿಪ್ಪರ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ.
ಕಲ್ಲು ತೂರಾಟದ ದೃಶ್ಯ ಕಚೇರಿ ಆವರಣದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಕೈಯಲ್ಲಿ ದೊಡ್ಡ ಗಾತ್ರದ ಕಲ್ಲು ಹಿಡಿದುಕೊಂಡು ಬಂದಿದ್ದ ಆರೋಪಿ, ಮೊದಲು ಸ್ವೀಪ್ಟ್ ಡಿಝೈರ್ ಕಾರಿನ ಮೇಲೆ ದಾಳಿ ನಡೆಸಿ ಗಾಜು ಪುಡಿಪುಡಿ ಮಾಡಿದ್ದು,ಬಳಿಕ ಕಚೇರಿ ಆವರಣದಲ್ಲಿ ನಿಂತಿದ್ದ ಕಸ ಸಾಗಿಸುವ ಟಿಪ್ಪರ್ ವಾಹನದ ಮೇಲೆ ದಾಳಿ ನಡೆಸಿದ್ದಾನೆ. ಇದಾದ ಬಳಿಕ ನೇರವಾಗಿ ಸಿಬ್ಬಂದಿ ಕೆಲಸ ಮಾಡುವ ಕಚೇರಿ ಮೇಲೆ ಕಲ್ಲಿ ತೂರಾಟ ನಡೆಸಿದ್ದು, ಕಚೇರಿಯ ಕಿಟಕಿ ಗಾಜು ಪುಡಿಪುಡಿಯಾಗಿವೆ.
undefined
ಹಳೆ ಹುಬ್ಬಳ್ಳಿ ಗಲಭೆಯಿಂದ ಪ್ರಚೋದನೆ?: ಇತ್ತೀಚೆಗಷ್ಟೇ ಹಳೇ ಹುಬ್ಬಳ್ಳಿಯಲ್ಲಿ (Hubli Riots) ಪೊಲೀಸ್ ಠಾಣೆ ಹಾಗೂ ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ದಾಂದಲೇ ಎಬ್ಬಿಸಲಾಗಿತ್ತು. ಈ ಗಲಭೆಯಿಂದ ಪ್ರಚೋದನೆ ಪಡೆದು ಮೊಹಮ್ಮದ್ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಹಳೇ ಹುಬ್ಬಳ್ಳಿ ಗಲಭೆಕೋರರಿಗೆ ಜಾಮೀನು ಸಿಕ್ಕಿದೆ. ಕಲ್ಲು ತೂರಿದ್ರೆ ಫೇಮಸ್ ಆಗಬಹುದು ಎಂಬ ಕಾರಣಕ್ಕೆ ಕಲ್ಲಿ ತೂರಾಟ ನಡೆಸಿದ್ದಾನೆ ಎನ್ನಲಾಗಿದೆ. ರಾಜರೋಷವಾಗಿ ಕಚೇರಿ ಆವರಣದಲ್ಲಿ ಕಲ್ಲು ತೂರಾಟ ನಡೆಸಿದ್ರು ಯಾರೋಬ್ಬರು ಆತನನ್ನು ತಡೆಯಲು ಯತ್ನಿಸಿಲ್ಲ.
ಮೊಹಮ್ಮದ್ ಪುಂಡಾಟ ಹೆಚ್ಚಾಗುತ್ತಿದ್ದಂತೆ ಸೆಕ್ಯೂರಿಟಿ ಸಿಬ್ಬಂದಿ ಉಪನಗರ ಪೊಲೀಸ್ ಠಾಣೆಗೆ ಮಾಹಿತಿಯನ್ನು ರವಾನಿಸಿದ್ದು, ಸ್ಥಳಕ್ಕೆ ಆಗಮಿಸಿದ ಉಪನಗರ ಠಾಣೆಯ ಪೊಲೀಸರು ಆರೋಪಿ ಮೊಹ್ಮದ್ ನನ್ನು ಠಾಣೆಗೆ ಕರೆದುಕೊಂಡು ಹೋಗಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಹುಡುಗಿ ಪ್ರೀತಿಸಿದ್ದಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ದಲಿತ ಯುವಕನ ಬರ್ಬರ ಹತ್ಯೆ
ಇದನ್ನೂ ಓದಿ: MBBS ಸೀಟು ಕೊಡಿಸೋದಾಗಿ ವೈದ್ಯನಿಗೆ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿದ ವಂಚಕರ ಬಂಧನ