
ತನ್ನ ಜೊತೆ ಓಡಿ ಹೋಗಲು ನಿರಾಕರಿಸಿದ ಪ್ರೇಯಸಿಯ ಮನೆಗೆ ಲೆಹಂಗಾ ಧರಿಸಿ ನುಗ್ಗಿದ 28 ವರ್ಷದ ಯುವಕನೊಬ್ಬ,ಆಕೆಗೆ ಬೆಂಕಿ ಹಚ್ಚಿ ಕೊಲ್ಲಲು ಪ್ರಯತ್ನಿಸುವ ಭಯಾನಕ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. ಕೋಹ್ ಗ್ರಾಮದ ನಿವಾಸಿ ರೇಖಾ ಕುಮಾರಿಗೆ (30) ಶೇಕಡಾ 70ರಷ್ಟು ಸುಟ್ಟಗಾಯಗಳಾಗಿದ್ದು, ಅವರು ಸಾವು ಬದುಕಿನ ನಡುವೆ ಆಸ್ಪತ್ರೆಗೆ ಹೋರಾಡುತ್ತಿದ್ದಾರೆ! ರೇಖಾ ಅವರಿಗೆ ಇದಾಗಲೇ ಮದುವಾಗಿ ಮಕ್ಕಳೂ ಇದ್ದಾರೆ. ಆಕೆ ಪತಿ ಕೆಲಸಕ್ಕೆ ಹಾಗೂ ಮಕ್ಕಳು ಶಾಲೆಗೆ ಹೋಗಿದ್ದ ಸಂದರ್ಭದಲ್ಲಿ ಟಿ.ವಿ.ನೋಡುತ್ತಾ ಕುಳಿತಿದ್ದರು. ಆ ಸಮಯದಲ್ಲಿ ಬಂದ ಆರೋಪಿ ಬಾಟಲಿಯಲ್ಲಿ ಪೆಟ್ರೋಲ್ ಹಾಕಿಕೊಂಡು ಬಂದಿದ್ದ.
ಏಕಾಏಕಿ ರೇಖಾ ಅವರ ಮೇಲೆ ಅದನ್ನು ಚೆಲ್ಲಿ ಬೆಂಕಿ ಹಚ್ಚಿದ್ದಾನೆ. ಹರಿಯಾಣದ ಪಲ್ವಾಲ್ ಜಿಲ್ಲೆಯ ಕಾರ್ಮಿಕ ಉಮೇಶ್ ಸಿಂಗ್ ಈ ಕುಕೃತ್ಯ ಮಾಡಿದ್ದಾನೆ. ಉಮೇಶ್ ಟೆರೇಸ್‌ನಿಂದ ಮನೆ ಪ್ರವೇಶಿಸಿದ್ದಾನೆ, ಬಳಿಕ ಆಕೆಯ ಕೋಣೆಗೆ ಹೋಗಿ ತನ್ನೊಂದಿಗೆ ಓಡಿಹೋಗುವಂತೆ ಒತ್ತಡ ಹೇರಿದ್ದಾನೆ. ಆಕೆ ನಿರಾಕರಿಸಿದಾಗ, ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ಟೆರೇಸ್‌ನಿಂದ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಗಾಯಗೊಂಡಿದ್ದಾನೆ ಎಂದು ರೇಖಾ ಪತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಐನ್‌ಸ್ಟೈನ್ ಮಿದುಳು ಕದ್ದು 240 ಪೀಸ್ ಮಾಡಿ ಮೊಮ್ಮಗಳಿಗೆ ಗಿಫ್ಟ್ ಕೊಟ್ಟಿದ್ದ ವೈದ್ಯ! ವಿಜ್ಞಾನಿಯ ರೋಚಕ ಕಥೆ ಇಲ್ಲಿದೆ...
ರೇಖಾ ಅವರ ಕಿರುಚಾಟ ಕೇಳಿ ನೆರೆಹೊರೆಯವರು ಆಕೆಯ ಸಹಾಯಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು ಮತ್ತು ನಂತರ ಆಗ್ರಾದ ಎಸ್ಎನ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಆಕೆಗೆ ಶೇ. 70 ರಷ್ಟು ಸುಟ್ಟ ಗಾಯಗಳಾಗಿವೆ" ಎಂದು ಫರಾಹ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸಂಜಯ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಕೆಲ ವರ್ಷಗಳಿಂದ ಇಬ್ಬರೂ ಸಂಬಂಧದಲ್ಲಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆಗಾಗ್ಗೆ ಆರೋಪಿ ಈಕೆಯ ಮನೆಗೆ ಬರುತ್ತಿದ್ದ. ಹಿಂದೆ ಕೂಡ ಓಡಿಹೋಗಿದ್ದರು. ಆದರೆ ರೇಖಾ ಮನೆಯವರು ದೂರು ದಾಖಲಿಸಿದ್ದರಿಂದ ಇಬ್ಬರೂ ಹಿಮಾಚಲ ಪ್ರದೇಶದಿಂದ ವಾಪಸ್ ಬಂದಿದ್ದರು. ಇದಾದ ಬಳಿಕ ರೇಖಾ ಆತನಿಂದ ದೂರ ಕಾಪಾಡಿಕೊಳ್ಳಲು ಶುರು ಮಾಡಿದ್ದಳು. ಇದರಿಂದ ರೊಚ್ಚಿಗೆದ್ದಿರುವ ಆರೋಪಿ ಹೀಗೆ ಮಾಡಿರುವುದಾಗಿ ತಿಳಿಸಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿಮ್ಮ ಕನಸಿನ ಮಗು ಹುಟ್ಟಿಸುವ ಹೊಸ ಆವಿಷ್ಕಾರವಿದು! ಮಕ್ಕಳಿಲ್ಲದವರಿಗೂ ಭರವಸೆ- ಏನಿದು ಸಂಶೋಧನೆ? ಮಾಹಿತಿ ಇಲ್ಲಿದೆ...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ