
ಶಿವಮೊಗ್ಗ (ಸೆ.6}: ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಬಳಿಕ ಹೆದರಿ ಶರಾವತಿ ನದಿ ಸೇತುವೆ ಮೇಲಿಂದ ಹಾರಿ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸುರುಳಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ಸದಾನಂದ ಭಟ್, ಮೃತ ವ್ಯಕ್ತಿ. ಪತಿಯ ಹಲ್ಲೆಯಿಂದ ಗಾಯಗೊಂಡ ಪತ್ನಿ ಸಬೀತಾ. ಸುರುಳಿಕೊಪ್ಪದಲ್ಲಿ ವಾಸಿಸುತ್ತಿದ್ದ ದಂಪತಿಗಳು. ಕಳೆದ 12 ವರ್ಷಗಳಿಂದ ಪ್ರತಿನಿತ್ಯ ಜಗಳ ಮಾಡಿಕೊಂಡಿದ್ದ ದಂಪತಿ. ಕಳೆದ ನಾಲ್ಕು ವರ್ಷಗಳಿಂದ ಒಂದೇ ಮನೆಯಲ್ಲಿದ್ದರೂ ಇಬ್ಬರು ಬೇರೆ ಬೇರೆ ಅಡುಗೆ ಮಾಡಿಕೊಂಡು ಜೀವನ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಪತಿಗೆ ಅನೈತಿಕ ಸಂಬಂಧ ಇರುವುದು ಪತ್ನಿಯ ಗಮನಕ್ಕೆ ಬಂದಿದೆ. ಈ ವಿಚಾರವಾಗಿ ಗಂಡನೊಂದಿಗೆ ಜಗಳಕ್ಕೆ ಬಿದ್ದಿದ್ದ ಪತ್ನಿ. ದಿನನಿತ್ಯ ಇದೇ ವಿಚಾರವಾಗಿ ಜಗಳವಾಡುತ್ತಿದ್ದ ಪತ್ನಿ. ಇದರಿಂದ ಬೇಸತ್ತು. ಪತ್ನಿ ಸಬಿತಾ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಸದಾನಂದ ಭಟ್. ಪತಿಯ ಹಲ್ಲೆಯಿಂದ ತೀವ್ರ ಪೆಟ್ಟಾಗಿ ಮೂರ್ಚೆ ಹೋದ ಪತ್ನಿ. ಸ್ವಲ್ಪ ಹೊತ್ತಿನ ನಂತರ ಸಬೀತಾ ಚಿಕ್ಕಪ್ಪನ ಮಗ ಬಂದು ಸಬೀತಾರನ್ನ ರಿಪ್ಪನ್ ಪೇಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಶಿವಮೊಗ್ಗದ ನಾರಾಯಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಣೇಶ ಹಬ್ಬಕ್ಕೆ ಪೂಜೆ ಸಾಮಗ್ರಿ ತರಲು ಬಂದಿದ್ದ ಪೊಲೀಸ್ ಪೇದೆ ಲಾರಿ ಚಕ್ರಕ್ಕೆ ಸಿಲುಕಿ ದಾರುಣ ಸಾವು!
ಪತ್ನಿಯ ಮೇಲಿನ ಹಲ್ಲೆ ಘಟನೆಯಿಂದ ಹೆದರಿಕೊಂಡಿದ್ದ ಪತಿ ಸದಾನಂದ ಭಟ್. ಹೊಸನಗರ ತಾಲೂಕಿನ ಪಟಗುಪ್ಪ ಶರಾವತಿ ನದಿ ಸೇತುವೆ ಬಳಿ ಹೋಗಿ ಸೇತುವೆ ಬಳಿ ಕಾರು ನಿಲ್ಲಿಸಿ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಪತಿ. ಸೇತುವೆ ಬಳಿ ಪತಿ ಮೃತದೇಹ ಪತ್ತೆಯಾದ ಹಿನ್ನೆಲೆ ಘಟನೆ ಸಂಬಂಧ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡ ಹೊಸನಗರ ಠಾಣೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ